Asianet Suvarna News Asianet Suvarna News

ಟ್ರೋಲಿಗರು, ಕಾಮೆಂಟ್‌ ಮಾಡೋರು ಹುಚ್ಚನನ್ಮಕ್ಕಳು ಎಂದಿದ್ದ ದಿವ್ಯ ವಸಂತ!

ರಾಜ್ಯವೇ ಖುಷಿಕೊಡುವ ಸುದ್ದಿ ಎಂದು ಹೇಳಿ ವೈರಲ್‌ ಆಗಿದ್ದ ನಿರೂಪಕಿ ದಿವ್ಯ ವಸಂತ, ಅಸ್ಸಾಂ ಹುಡುಗಿಯನ್ನು ಬಳಸಿಕೊಂಡು ಸುಲಿಗೆ ಮಾಡಿರುವ ಆರೋಪವನ್ನು ಎದುರಿಸುತ್ತಿದ್ದಾರೆ. ಇನ್ನೊಂದೆಡೆ ಆಕೆ ಹೇಳಿರುವ ಒಂದೊಂದು ಮಾತುಗಳು ಕೂಡ ಮತ್ತೊಮ್ಮೆ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ.
 

Divya Vasantha on trollers and social media comments Viral Trending san
Author
First Published Jul 6, 2024, 6:07 PM IST

ಬೆಂಗಳೂರು (ಜು.6): ಸುಲಿಗೆ ಪ್ರಕರಣದಲ್ಲಿ ಖಾಸಗಿ ಟಿವಿ ವಾಹಿನಿಯ ನಿರೂಪಕಿ ದಿವ್ಯ ವಸಂತ ಅವರನ್ನ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಇನ್ನೊಂದೆಡೆ, ಟಿವಿ ಹೆಸರು ಹೇಳಿಕೊಂಡು ಆಕೆ ಮಾಡುತ್ತಿದ್ದ ಒಂದೊಂದೆ ದುಷ್ಕೃತ್ಯಗಳು ಕೂಡ ಬಯಲಾಗುತ್ತಿದೆ. ಈ ಪ್ರಕರಣಕ್ಕೂ ಮುನ್ನ ಆಕೆ ಹಲವು ಬಾರಿ ಇಂಥದ್ದೇ ಪ್ರಕರಣಗಳಲ್ಲಿ ಭಾಗಿಯಾಗಿದ್ದಳು ಎನ್ನುವ ವಿಚಾರಗಳು ಕೂಡ ಬಿತ್ತರವಾಗುತ್ತಿದೆ. ಬೆಂಗಳೂರಿನ ಇಂದಿರಾನಗರದಲ್ಲಿರುವ ಮಸಾಜ್‌ ಪಾರ್ಲರ್‌ & ಸ್ಪಾದ ವ್ಯವಸ್ಥಾಪಕನಿಗೆ ಬೆದರಿಗೆ 15 ಲಕ್ಷ ರೂಪಾಯಿ ಸುಲಿಗೆ ಮಾಡಲು ಯತ್ನಿಸಿದ ಪ್ರಕರಣದಲ್ಲಿ ನಿರೂಪಕಿ ಹಾಗೂ ಕಲರ್ಸ್‌ ಕನ್ನಡದ ಗಿಚ್ಚಿ ಗಿಲಿಗಿಲಿ ಶೋನಲ್ಲಿ ಭಾಗಿಯಾಗಿದ್ದ ದಿವ್ಯ ವಸಂತ ಕೂಡ ಆರೋಪಿಯಾಗಿದ್ದಾರೆ. ಆಕೆಯ ಸ್ನೇಹಿತ ಸಂದೇಶ್‌ ಈಗಾಗಲೇ ಬಂಧಿತನಾಗಿದ್ದಾನೆ. ಅದರೊಂದಿಗೆ ರಾಜ್‌ ನ್ಯೂಸ್‌ ಸುದ್ದಿವಾಹಿನಿಯ ಕಾರ್ಯನಿರ್ವಾಹಕ ಅಧಿಕಾರಿ  ರಾಜಾನುಕುಂಟೆ ವೆಂಕಟೇಶ್‌ನನ್ನು ಜೆಬಿ ನಗರ ಪೊಲೀಸರು ಬಂಧಿಸಿದ್ದಾರೆ. ಇದರ ನಡುವೆ ದಿವ್ಯಾ ವಸಂತ ಹಾಗೂ ರಾಜಾನುಕುಂಟೆ ವೆಂಕಟೇಶ್‌ ಆಪ್ತವಾಗಿರುವ ಕೆಲವೊಂದು ವಿಡಿಯೋಗಳು ಕೂಡ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ.

ಇನ್ನು ದಿವ್ಯ ವಸಂತ ಬೆಳೆದಿದ್ದೇ ಟ್ರೋಲರ್‌ಗಳಿಂದ ಎಂದರೆ ತಪ್ಪಲ್ಲ. ಅಮೂಲ್ಯ ಗರ್ಭಿಣಿಯಾಗಿದ್ದು ತಿಳಿದ ಬಳಿಕ ನ್ಯೂಸ್‌ ಓದುವ ವೇಳೆ ಈಕೆ ಹೇಳಿದ್ದ, 'ಇದು ಇಡೀ ರಾಜ್ಯವೇ ಖುಷಿ ಪಡುವ ಸುದ್ದಿ..' ಎನ್ನು ಲೈನ್‌ ಮೂಲಕವೇ ಎಂಟರ್‌ಟೇನ್‌ಮೆಂಟ್‌ ಜಗತ್ತಿಗೆ ಕಾಲಿಟ್ಟಾಕೆ ದಿವ್ಯ ವಸಂತ. ಆದರೆ, ಸಂದರ್ಶನವೊಂದರಲ್ಲಿ ತಮ್ಮ ಟ್ರೋಲ್‌ ಮಾಡೋರು, ನನ್ನ ಪೋಸ್ಟ್‌ಗೆ ಕಾಮೆಂಟ್‌ ಮಾಡೋರು ಹುಚ್ಚನನ್ಮಕ್ಕಳು ಎಂದು ಈಕೆ ಹೇಳಿದ್ದು ವೈರಲ್‌ ಆಗುತ್ತಿದೆ.

'ಆರಂಭದಲ್ಲಿ ನನ್ನನ್ನು ಟ್ರೋಲ್‌ ಮಾಡಲು ಆರಂಭಿಸಿದಾಗ ಖಂಡಿತವಾಗಿಯೂ ನೆಗೆಟಿವ್‌ ಥಾಟ್ಸ್‌ ಇದ್ದವು. ಏನ್‌ ಇವರೆಲ್ಲಾ ಹಿಂಗೆ ಟ್ರೋಲ್‌ ಮಾಡ್ತಾರೆ? ಅಂತಾ ಅನಿಸುತ್ತಿತ್ತು. ಇನ್ನು ಟ್ರೋಲ್‌ ಮಾಡೋರು ಬಿಡಿ, ಕಾಮೆಂಟ್‌ ಬಾಕ್ಸ್‌ನಲ್ಲಿ ಬಂದು ಕಾಮೆಂಟ್‌ ಮಾಡ್ತಾರಲ್ಲ. ಅವರಂಥ ಹುಚ್ಚನನ್ಮಕ್ಕಳು ಬೇರೆ ಯಾರೂ ಇಲ್ಲ ಅಂತಾ ನನಗೆ ಅನಿಸಿತ್ತು. ಯಾಕೆಂದರೆ, ಅವರೆಲ್ಲಾ ಬಾಯಿಗೆ ಬಂದ ಹಾಗೆ ಕಾಮೆಂಟ್‌ ಮಾಡ್ತಿದ್ರು.  ಅವರಿಗೆ ನಮ್ಮ ಬಗ್ಗೆ ಏನೂ ಗೊತ್ತಿರೋದಿಲ್ಲ. ನಾವು ಹೇಳಿರೋ ಒಂದು ಮಾತನ್ನೇ ಇಟ್ಟುಕೊಂಡು ಟ್ರೋಲ್‌ ಮಾಡೋಕೆ ಶುರು ಮಾಡ್ತಿದ್ರು. ಆನ್‌ ಏರ್‌ಅಲ್ಲಿ ಹೋಗಿರೋ ಏನೋ ವಿಚಾರ ಇಟ್ಟುಕೊಂಡು, ನಮ್ಮ ಕ್ಯಾರೆಕ್ಟರ್‌ ಡಿಸೈಡ್‌ ಮಾಡ್ತಿದ್ರು. ನಮ್ಮನ್ನಲ್ಲ, ನಮಗೆ ಸಂಬಂಧಿಸಿದ ಎಲ್ಲರ ಬಗ್ಗೆಯೋ ಟ್ರೋಲ್‌ ಮಾಡೋಕೆ ಶುರು ಮಾಡ್ತಿದ್ರು.  ಈ ರೈಟ್ಸ್‌ಅನ್ನು ಅವರಿಗೆ ಕೊಟ್ಟಿದ್ದು ಯಾರು? ಎಂದು ಹೇಳಿದ್ದಾರೆ.

'ಬಂಟಿ ನಿನ್ನ ಸಾಬೂನು ಸ್ಲೋ ನಾ..' ಎಂದಿದ್ದ ಹುಡುಗಿ ಇಂದು ಹಾಟ್‌ ಬ್ಯೂಟಿ!

ಟ್ರೋಲ್‌ ಮಾಡೋರು ಹಾಗೂ ಕಾಮೆಂಟ್‌ ಮಾಡೋರ ಬಗ್ಗೆ ನನಗೆ ಯಾವಾಗಲೂ ಕೋಪ ಇದ್ದೇ ಇರುತ್ತೆ. ಅದರಲ್ಲೂ ಕೆಟ್ಟದಾಗಿ ಕಾಮೆಂಟ್‌ ಮಾಡೋರ್ನ ಕಂಡರೆ ನನಗೆ ಆಗೋದಿಲ್ಲ. ಇವರಿಗೆ ಯಾರಿಗೂ ನೇರ ಮುಖ ಅನ್ನೋದೇ ಇರೋದಿಲ್ಲ. ಫೇಕ್‌ ಅಕೌಂಟ್‌ ಇಟ್ಕೊಂಡೇ ಇವರು ಕಾಮೆಂಟ್‌ ಮಾಡ್ತಾರೆ. ಟ್ರೋಲ್‌ ಮಾಡೋರು, ಕಾಮೆಂಟ್‌ ಮಾಡೋರೆ ದೊಡ್ಡ ಫೇಕ್‌ಗಳು. ಆದರೆ, ನಮ್ಮ ಬಗ್ಗೆ ಅವರು ಜಡ್ಜ್‌ ಮಾಡೋಕೆ ಬರ್ತಾರೆ. ಹಾಗಾಗಿ ಕಾಮೆಂಟ್‌ ಮಾಡೋರ್ನ ನಾನು ಯಾವಾಗಲೂ ಹೇಟ್‌ ಮಾಡ್ತೀನಿ. ಅದರೆ, ಹೇಟರ್ಸ್‌ಗಳಿಂದಲೂ ನಮಗೆ ಎನರ್ಜಿ ಬರುತ್ತೆ. ನಾವ್‌ ಬೆಳಿಬೇಕು ಅಷ್ಟೇ ಎಂದು ನಿರ್ಧಾರ ಮಾಡಿದಾಗ ಇವರೆಲ್ಲರನ್ನ ಇಗ್ನೋರ್‌ ಮಾಡಿದ್ದೀನಿ. ನಾನು ಹೇಳೀರೋ ಲೈನ್‌ ಎಷ್ಟು ಫೇಮಸ್‌ ಆಗಿತ್ತು ಎಂದರೆ, ಟಾಲಿವುಡ್‌, ಬಾಲಿವುಡ್‌ನಲ್ಲಿ ಯಾರಾದ್ರೂ ಪ್ರಗ್ನೆಂಟ್‌ ಆದ್ರೂ ಆಗ್ಲೂ ಇಡೀ ಕರ್ನಾಟಕವೇ ಖುಷಿ ಪಡೋ ಸುದ್ದಿ ಅಂತಾ ಹೇಳೋಕೆ ಶುರು ಮಾಡಿದ್ರು ಎಂದು ಹೇಳಿದ್ದಾರೆ.

15 ಸಾವಿರ ಸಂಬಳಕ್ಕೆ ಇಷ್ಟೋಂದು ಶೋಕಿ ನಾ; ದಿವ್ಯಾ ವಸಂತ ಅರೆ ಬಟ್ಟೆ ಲುಕ್‌ಗೆ ಕಾಲೆಳೆದ ನೆಟ್ಟಿಗರು

Latest Videos
Follow Us:
Download App:
  • android
  • ios