ಅಧಿಕಾರ ನಿನಗೇ ಸಿಗತ್ತಮ್ಮಾ... ಪ್ಲೀಸ್​ ಒಡವೆ ಹೇರ್ಕೊಬೇಡ ತಾಯಿ... ಭೂಮಿಕಾಗೆ ನೆಟ್ಟಿಗರ ಕಿವಿಮಾತು!

ಅಮೃತಧಾರೆಯಲ್ಲಿ ದಿವಾನ್​ ಕುಟುಂಬದ ಮುಂದಿನ ಯಜಮಾನಿ ಯಾರು ಎಂಬ ಬಗ್ಗೆ ಚರ್ಚೆ ಶುರುವಾಗಿದೆ. ಇದಕ್ಕೆ, ಭೂಮಿಕಾಗೆ ನೆಟ್ಟಿಗರು ಹೇಳ್ತಿರೋ ಕಿವಿ ಮಾತೇನು? 
 

discussion about next owner of the Diwan family in Amrutadhare fans advise to Bhoomika suc

ಭೂಮಿಕಾಗೆ ಈಗ ದಿವಾನ್​ ಕುಟುಂಬದ ಯಜಮಾನಿ ಪಟ್ಟದ ಚರ್ಚೆ ಶುರುವಾಗಿದೆ. ಅಜ್ಜಿಗೆ ತಾನು ಹೋದ ಮೇಲೆ ಯಜಮಾನಿ ಯಾರು ಎಂಬ ಬಗ್ಗೆ ಚಿಂತೆ. ಇದೇ ಕಾರಣಕ್ಕೆ ಮನೆಯವರನ್ನೆಲ್ಲಾ ಕರೆದಿದ್ದಾಳೆ. ಈಗಲೇ ಇದೆಲ್ಲಾ ಯಾಕೆ, ನನಗೆ ನೀವೇ ಯಜಮಾನಿ ಎಂದಿದ್ದಾನೆ ಗೌತಮ್​. ಆದರೆ ಅಜ್ಜಿ ತನಗೆ ವಯಸ್ಸಾಯಿತು, ತನ್ನ ನಂತರ ಯಾರು ಎಂಬ ಬಗ್ಗೆ ಈಗಲೇ ಯೋಚನೆ ಮಾಡಬೇಕಲ್ಲಾ ಎನ್ನುತ್ತಲೇ ಮುಂದಿನ ಯಜಮಾನಿ ಯಾರು ಎಂದು ಹೇಳಲು ರೆಡಿಯಾಗಿದ್ದಾಳೆ. ಸಹಜವಾಗಿ ಅಜ್ಜಿ ಹೋದ ಮೇಲೆ ಅವಳ ಸೊಸೆಗೆ ಯಜಮಾನಿಕೆ ಬರುತ್ತದೆ. ಇದರ ಅರ್ಥ ಶಕುಂತಲಾ ದೇವಿಗೆ ಯಜಮಾನಿಕೆ ಬರಬೇಕು. ಇದರಿಂದ ಶಕುಂತಲಾ ಮತ್ತು ಆಕೆಯ ಅಣ್ಣ ಖುಷಿಯಿಂದ ಬೀಗುತ್ತಿದ್ದಾರೆ. ಅಧಿಕೃತವಾಗಿ ಅಜ್ಜಿಯ ಬಾಯಿಯಿಂದ ಈ ಮಾತು ಬರಲಿ ಎಂದು ಕಾಯುತ್ತಿದ್ದಾರೆ.

ಆದರೆ ಅಜ್ಜಿ ಶಕುಂತಲಾ ದೇವಿಯಲ್ಲ, ಬದಲಿಗೆ ಭೂಮಿಕಾಳಿಗೆ ಈ ಯಜಮಾನಿಕೆ ಪಟ್ಟ ಕೊಡುತ್ತಾಳೆ ಎನ್ನುವುದು ಸೀರಿಯಲ್​ ಪ್ರೇಮಿಗಳ ಅಭಿಮತ. ಇಲ್ಲಿಯವರೆಗಿನ ಎಪಿಸೋಡ್​ ನೋಡಿರುವ ಅಮೃತಧಾರೆ ಫ್ಯಾನ್ಸ್​ ಆಸೆ ಕೂಡ ಇದೆ. ಇದಕ್ಕೆ ಕಾರಣ ದಿವಾನ್​ ಕುಟುಂಬವನ್ನು ಮುನ್ನಡೆಸಿಕೊಂಡು ಹೋಗುವ ತಾಕತ್ತು ಭೂಮಿಕಾಳಿಗೆ ಬಿಟ್ಟರೆ ಯಾರಿಗೂ ಇಲ್ಲ ಎನ್ನುವುದು ಅವರ ಅಭಿಮತ. ಇದು ನಿಜ ಕೂಡ ಆಗಬಹುದು. ಅಜ್ಜಿಗೂ ಭೂಮಿಕಾಳ ತಾಕತ್ತು ಗೊತ್ತಿರುವ ಕಾರಣ ಹಾಗೂ ಇದು ಸೀರಿಯಲ್​ ಆಗಿರುವ ಹಿನ್ನೆಲೆಯಲ್ಲಿ ಭೂಮಿಕಾಳಿಗೇ ಯಜಮಾನಿಕೆಯ ಪಟ್ಟವನ್ನು ಅಜ್ಜಿ ಕೊಡಬಹುದು.

500ರ ಸಂಭ್ರಮದಲ್ಲಿರೋ ಭಾಗ್ಯಳ ಕೈಗೆ ಬಂತು ಒಂದು ಲಕ್ಷ ರೂ. ಚೆಕ್​! ಗೃಹಿಣಿಯ ತಾಕತ್ತಿಗೆ ಶ್ಲಾಘನೆಗಳ ಮಹಾಪೂರ

ಇದು ತಿಳಿಯುತ್ತಲೇ ಸೀರಿಯಲ್ ಪ್ರೇಮಿಗಳು ಭೂಮಿಕಾಳಿಗೆ ಮನವಿ ಮಾಡಿಕೊಳ್ಳಲು ಶುರು ಮಾಡಿದ್ದಾರೆ. ಅದೇನೆಂದರೆ, ಬಹುತೇಕ ಎಲ್ಲಾ ಸೀರಿಯಲ್​ಗಳಲ್ಲಿ ಶ್ರೀಮಂತರ ಮನೆಯ ಹೆಣ್ಣುಮಕ್ಕಳು ಅದರಲ್ಲಿಯೂ ಯಜಮಾನಿಯರು ಮೈತುಂಬಾ ಆಭರಣ ಹೇರಿಕೊಂಡು ರೇಷ್ಮೆ ಸೀರೆ ಉಟ್ಟುಕೊಂಡು ಇರುತ್ತಾರೆ. ಸೀರಿಯಲ್​ಗಳಲ್ಲಂತೂ ಇದೊಂದು ರೀತಿಯಲ್ಲಿ ಅತಿರೇಕ ಎನ್ನಿಸುವುದೂ ಉಂಟು. ಊಟ ಮಾಡುವಾಗ, ವಾಷ್​ರೂಮ್​ಗೆ ಹೋಗುವಾಗ, ಮಲಗುವಾಗ... ಹೀಗೆ ಮೈತುಂಬಾ ಚಿನ್ನಾಭರಣ, ರೇಷ್ಮೆ ಸೀರೆ ಇರಲೇಬೇಕು. ಇಲ್ಲಿಯೂ ಶಕುಂತಲಾ ದೇವಿ ಮತ್ತು ಅಜ್ಜಿಯನ್ನು ಅದೇ ರೀತಿ ಬಿಂಬಿಸಲಾಗಿದೆ. ಸಾಲದು ಎಂಬುದಕ್ಕೆ ಗೌತಮ್​ ಕೂಡ ಸದಾ ಸೂಟು-ಬೂಟಿನಲ್ಲಿಯೇ ಇರುತ್ತಾನೆ. ಹನಿಮೂನ್​ಗೆ ಹೋದಾಗಲೂ ಇದೇ ಡ್ರೆಸ್ಸು, ಮಲಗುವಾಗಲೂ ಸೂಟು-ಬೂಟು.

ಇದನ್ನೇ ಹೇಳಿರುವ ಅಭಿಮಾನಿಗಳು, ಅಮ್ಮಾ ಭೂಮಿಕಾ ನಿನಗೆ ಯಜಮಾನಿಕೆ ಪಟ್ಟ ಸಿಕ್ಕರೆ ನಮಗೆ ಖುಷಿ, ಆದರೆ ದಯವಿಟ್ಟು ಈ ರೀತಿ ಬಂಗಾರ ಹೇರಿಕೊಂಡು ಇರಬೇಡಮ್ಮಾ, ಈಗಲೇ ನಮಗೆ ಇದನ್ನು ನೋಡಲು ಆಗ್ತಿಲ್ಲ. ನೀನು ಸಿಂಪಲ್​ ಆಗಿ ಹೇಗೆ ಇದ್ಯೋ ಹಾಗೆಯೇ ಇದ್ದುಬಿಡು ಎಂದು ಹೇಳುತ್ತಿದ್ದಾರೆ. ಇನ್ನು ಕೆಲವರು ಡೈರೆಕ್ಟರ್​ ಹೇಳಿದ್ರೂ ಈ ರೀತಿಯ ಡ್ರೆಸ್​ ಮಾಡ್ಕೊಬೇಡ ಎಂದೂ ಕಿವಿಮಾತು ಹೇಳುತ್ತಿದ್ದಾರೆ. ಅಷ್ಟಕ್ಕೂ ಸ್ವಾಭಿಮಾನಿ ಭೂಮಿಕಾಳಿಗೆ ಶ್ರೀಮಂತಿಕೆ ಎನ್ನುವುದು ಒಂದು ರೀತಿಯಲ್ಲಿ ಅಲರ್ಜಿ ಇದ್ದಂತೆಯೇ ಎನ್ನುವುದು ಇದಾಗಲೇ ಸಾಬೀತಾಗಿದೆ. ಆದರೂ ಹೀಗೆ ಮಾಡಬೇಡ ಎನ್ನುವುದು ಸೀರಿಯಲ್​ ಪ್ರೇಮಿಗಳ ಮಾತು.

ಸೀತಾರಾಮ ಸೀತಾ ವೈಷ್ಣವಿಯ ಅಮ್ಮ ವಕೀಲೆಯಾಗಿ ಒಂದು ವರ್ಷ! ಕುತೂಹಲದ ಮಾಹಿತಿ ಇಲ್ಲಿದೆ...

Latest Videos
Follow Us:
Download App:
  • android
  • ios