ಮಾಯಾಮೃಗ ಮಾಯಾಮೃಗ ಮಾಯಾಮೃಗವೆಲ್ಲಿ ||

ಬಲು ದೂರದಿ ಹೊಳೆಯುತ್ತಿದೆ ಬಾನೀಲಿಯ ಕೆಳಗೆ ||

ಹೊಳೆಯುತ್ತಿವೆ ಕಣ್ಣಂತು ಬಿಡಿವಜ್ರದ ಹಾಗೆ ||

ಶರವೇಗದಿ ಚಲಿಸುತ್ತಿದೆ ಮಾಯಾಮೃಗವೆಲ್ಲಿ ||

ಹೌದು ಹಾಡು ಅದೆಷ್ಟೋ ಜನರಲ್ಲಿ ರೋಮಾಂಚನ ಮಾಡುತ್ತದೆ. ಇಂದಿಗೂ ಖದರ್ ಹಾಗೆ ಉಳಿದುಕೊಂಡಿದೆ.  ಕೆ.ಎಸ್. ನರಸಿಂಹಸ್ವಾಮಿ ಸಾಹಿತ್ಯಕ್ಕೆ  ಸಿ ಅಶ್ವಥ್ ಅವರ ಸಂಗೀತ,  ಮಂಜುಳಾ ಗುರುರಾಜ್, ಎಂ ಡಿ ಪಲ್ಲವಿ,, ಅರ್ಚನಾ ಉಡುಪ ಅವರ ಸಿರಿಕಂಠ.

ಬೆಂಗಳೂರು(ಆ. 13)   ನಿರ್ದೇಶಕ ಟಿಎನ್ ಸೀತಾರಾಮ್ ಶುಭ ಸುದ್ದಿಯೊಂದನ್ನು ನೀಡಿದ್ದಾರೆ. ಮಗಳು ಜಾನಕಿ ಧಾರಾವಾಗಿ ಅನಿವಾರ್ಯ ಕಾರಣದಿಂದ ಅರ್ಧಕ್ಕೆ ನಿಂತಾಗ ನೊಂದುಕೊಂಡವರಿಗೆ ಈಗ  ಗುಡ್ ನ್ಯೂಸ್ ಸಿಕ್ಕಿದೆ.

1998ರಲ್ಲಿ ದೂರದರ್ಶನದಲ್ಲಿ ಪ್ರಸಾರವಾಗುತ್ತ ಮನೆ ಮಂಧಿಯನ್ನೆಲ್ಲ ಹಿಡಿದಿಟ್ಟಿದ್ದ 'ಮಾಯಾಮೃಗ' ಸಂಪೂರ್ಣ ಮರುಪ್ರಸಾರವಾಗಲಿದೆ ಎಂದು ತಿಳಿಸಿದ್ದಾರೆ. ಮಾಯಾಮೃಗ ಮೊದಲಿಂದ ಕಡೆಯವರೆಗೆ ಮತ್ತೊಮ್ಮೆ ಪ್ರಸಾರವಾಗುವ ಸಾಧ್ಯತೆ ಇದೆ....ನೀವು ಹೆಚ್ಚಿನ ಸಂಖ್ಯೆಯಲ್ಲಿ ನೋಡುವ ಹಾಗಿದ್ದರೆ..... ಎಂದು ತಮ್ಮ ಫೇಸ್ ಬುಕ್ ಮೂಲಕ ಕೇಳಿಕೊಂಡಿದ್ದು ಅಭಿಮಾನಿಗಳು ಭರ್ಜರಿ ಸ್ವಾಗತ ನೀಡಿದ್ದಾರೆ.

ಮಗಳು ಜಾನಕಿ ಈಗೇನು ಮಾಡುತ್ತಿದ್ದಾರೆ?

ಯಾವ ವಾಹಿನಿಯಲ್ಲಿ ಪ್ರಸಾರವಾಗಲಿದೆ ಎಂಬ ಮಾಹಿತಿಯನ್ನು ಸೀತಾರಾಮ್ ಹೇಳಿಲ್ಲ. ಮಾತುಕತೆ ನಡೆಯುತ್ತಿದ್ದು ಒಂದು ವಾರದಲ್ಲಿ ಅಂತಿಮವಾಗಲಿದೆ ಎಂದು ತಿಳಿಸಿದ್ದಾರೆ. 

1998ರಲ್ಲಿ ದೂರದರ್ಶನದಲ್ಲಿ ಮೊದಲ ಬಾರಿಗೆ ಈ ಸೀರಿಯಲ್‌ ಪ್ರಸಾರ ಆಗಿತ್ತು. ನಂತರ 2014ರಲ್ಲಿ ಜೀ ಕನ್ನಡ ವಾಹಿನಿಯಲ್ಲಿ ಮರು ಪ್ರಸಾರ ಆಗಿತ್ತು ಎಸ್. ಎನ್. ಸೇತುರಾಂ, ಲಕ್ಷ್ಮೀ ಚಂದ್ರಶೇಖರ್‌, ಮಾಳವಿಕಾ ಅವಿನಾಶ್‌, ಮಂಜು ಭಾಷಿಣಿ, ಎಂ.ಡಿ. ಪಲ್ಲವಿ, ಮುಖ್ಯಮಂತ್ರಿ ಚಂದ್ರು, ವೈಶಾಲಿ ಕಾಸರವಳ್ಳಿ, ಅವಿನಾಶ್   ಕಾಣಿಸಿಕೊಂಡಿದ್ದರು. ಕನ್ನಡ ಕಿರುತೆರೆ ಮತ್ತು ಹಿರಿತೆರೆಗೆ ಕಲಾವಿದರ ದಂಡನ್ನೇ ನೀಡಿದ್ದ ಧಾರಾವಾಹಿ ಮಾಯಾಮೃಗ. 'ಮಗಳು ಜಾನಕಿ' ನಿಂತ ಬೇಸರವನ್ನು 'ಮಾಯಾಮೃಗ' ನೋಡಿ ಕಳೆತಬಹುದು.