ಬಿಗ್ ಬಾಸ್ ಸೀಸನ್ 8ಗೆ ಕ್ಷಣಗಣನೆ ಶುರುವಾಗ್ತಿದೆ. ಈ ಸಂಡೆಯ ಸಂಜೆಯಿಂದ ಬಿಗ್ ಬಾಸ್ ಆಟ ಶುರು. ಪ್ರತೀ ಸೀಸನ್‌ಗೂ ಸ್ಪರ್ಧಿಗಳೇನೋ ಹೊಸ ಹೊಸಬರು ಬರ್ತಿದ್ದಾರೆ. ಆದರೆ ಹೋಸ್ಟ್ ಒನ್ ಆಂಡ್ ಓನ್ಲಿ ಕಿಚ್ಚ ಸುದೀಪ್. ಕಳೆದ ಏಳು ಸೀಸನ್ ಗಳನ್ನ ಅವರು ಹೋಸ್ಟ್ ಮಾಡಿದ್ದಾರೆ.

ಮೊದಲನೇ ಸೀಸನ್ ಅವರಿಗೆ ಬಹಳ ಇಷ್ಟವಾಗಿದೆ. ಸೀಸನ್ 6 ಅಂದ್ರೆ ಈಗಲೂ ಬೆಚ್ಚಿಬೀಳ್ತಾರೆ. ಅದಕ್ಕೆ ಕಾರಣ ಆಮೇಲೆ ನೋಡೋಣ. ಆದರೆ ಈವರೆಗಿನ ಬಿಗ್ ಬಾಸ್ ಸ್ಪರ್ಧಿಗಳಲ್ಲಿ ಸುದೀಪ್ ಲೆಕ್ಕಾಚಾರವನ್ನೇ ತಲೆಕೆಳಗಾಗಿಸಿದ ಸ್ಪರ್ಧಿ ಒಬ್ಬರಿದ್ದಾರೆ. ಇದೀಗ ಬಿಗ್ ಬಾಸ್ ಸೀಸನ್ ೮ ನ ಪ್ರಾರಂಭಕ್ಕೂ ಮೊದಲು ಅವರು ಈ ವ್ಯಕ್ತಿಯನ್ನ ನೆನಪಿಸಿಕೊಂಡು ತಲೆ ಕೊಡವಿದ್ದಾರೆ. ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಗೇ ಕಿಕ್ ಕೊಟ್ಟ ಆ ಅಪರೂಪದ ವ್ಯಕ್ತಿ ಯಾರಿರಬಹುದು.

ನ್ಯೂಯಾರ್ಕ್‌ನಲ್ಲಿ ಕನ್ನಡ ಭಾಷಾಭಿಮಾನ ಮೆರೆದ ಸುದೀಪ್ ಅಭಿಮಾನಿ ...

ಹಾಗೆ ನೋಡಿದರೆ ಸುದೀಪ್ ಬಿಗ್ ಬಾಸ್ ಸ್ಪರ್ಧಿಗಳಲ್ಲಿ ಭೇದ ಮಾಡಿದವರಲ್ಲ. ಪ್ರತಿಯೊಬ್ಬರನ್ನೂ ಪ್ರೀತಿಯಿಂದ, ತಮಾಷೆಯಾಗಿ ಮಾತನಾಡಿಸುತ್ತಾರೆ. ಬಿಗ್‌ಬಾಸ್ ಮನೆಯಲ್ಲಿರುವ ಅಷ್ಟೂ ಜನರೂ ಸುದೀಪ್‌ ಜೊತೆಗೆ ಮಾತನಾಡಲು ಹಪಹಪಿಸುತ್ತಿರುತ್ತಾರೆ. ಏಕೆಂದರೆ ಮನೆಯಲ್ಲಿರುವ ಸದಸ್ಯರನ್ನು ಬಿಟ್ರೆ ಸ್ಪರ್ಧಿಗಳಿಗೆ ಮಾತನಾಡಲು ಸಿಗುವ ಏಕೈಕ ವ್ಯಕ್ತಿ ಹೋಸ್ಟ್ ಸುದೀಪ್. ಇವರೊಂಥರ ಸ್ಪರ್ಧಿಗಳು ಹಾಗೂ ಹೊರ ಜಗತ್ತಿನ ನಡುವೆ ಕೊಂಡಿ ಇದ್ದ ಹಾಗೆ. ತಮ್ಮೆಲ್ಲ ಭಾವನೆಗಳನ್ನು ಅವರು ವ್ಯಕ್ತಪಡಿಸೋಕೆ ಸಾಧ್ಯವಾಗೋದು ಸುದೀಪ್ ಜೊತೆಗೆ ಮಾತ್ರ.

ಏಕೆಂದರೆ ಇತರ ಸ್ಪರ್ಧಿಗಳ ಜೊತೆಗೆ ಅವರು ಓಪನ್ಅಪ್ ಆಗಿ ಮಾತಾಡೋದು ಕಷ್ಟ. ಆದರೆ ಎಲ್ಲರನ್ನೂ ಸಮಾನವಾಗಿ ಪ್ರೀತಿಸುವ ಸುದೀಪ್ ಜೊತೆಗೆ ತಮ್ಮ ಮನದಿಂಗಿತ ಹೇಳ್ಕೊಳ್ಳೋದು ಅವರಿಗೆ ಕಷ್ಟ ಅಲ್ಲ. ಆದರೂ ಬಿಗ್ ಬಾಸ್ ಅನ್ನು ಒಂದು ಆಟವಾಗಿ ನೋಡೋದಾದ್ರೆ ಇದ್ರಲ್ಲಿ ಬೆಸ್ಟ್ ಪರ್ಪಾಮರ್ಸ್ ಅಂತ ಸುದೀಪ್ ಗೆ ಅನಿಸಿದ್ದು ಅರುಣ್ ಸಾಗರ್, ಹರೀಶ್ ರಾಜ್ ಮೊದಲಾದವರ ಆಟ. ಇನ್ನೊಬ್ಬ ಸ್ಪರ್ಧಿಯ ಬಗ್ಗೆ ಅವರಿಗೆ ಶಾಕ್ ಆಗಿದೆ. ಆ ಕಾರಣಕ್ಕೆ ಇವತ್ತಿಗೂ ಮರೆಯೋದಕ್ಕಾಗ್ತಿಲ್ಲ.

ಬಿಗ್‌ಬಾಸ್ ಸೀಸನ್ 8; ವಿಶೇಷ ಏನೇನು ಉಂಟು! ...

ಆ ಸ್ಪರ್ಧಿ ಮತ್ಯಾರೂ ಅಲ್ಲ ಹುಚ್ಚ ವೆಂಕಟ್! ಈ ವ್ಯಕ್ತಿ ಇತ್ತೀಚೆಗೆ ಅನೇಕ ಕಡೆ ಕಾಣಿಸಿಕೊಂಡು ಅಲ್ಲಿ ದಾಂಧೆಲೆ ಮಾಡಿಯೋ, ಸಾರ್ವಜನಿಕರಿಂದ ಧರ್ಮದೇಟು ಹಾಕಿಸಿಕೊಂಡೋ ಈಗ ಸುದ್ದಿಯಾಗ್ತಿದ್ದಾರೆ. ಅದು ಬಿಟ್ರೆ ಕೊರೋನಾ ಟೈಮ್ ನಲ್ಲಿ ಇವರು ಹಾಡಿದ - ಹುಟ್ಟಿದ ಊರನು ಬಿಟ್ಟು ಬಂದಾ ಮೇಲೆ ..  ಹಾಡು ಎಷ್ಟೋ ವರ್ಷಗಳ ನಂತರ ವೈರಲ್ ಆಯ್ತು. ಹೆಚ್ಚಿನವರಿಗೆ ಯೋಗರಾಜ್ ಭಟ್ ಬರೆದ ಈ ಹಾಡನ್ನು ಹುಚ್ಚ ವೆಂಕಟ್ ಹಾಡಿದ್ದು ಅಂತ ಗೊತ್ತಾಗಿದ್ದೇ ಆ ಟೈಮ್ ನಲ್ಲಿ. ಬಹಳ ಹಿಂದೆ ರಮ್ಯಾನ ಮದ್ವೆ ಆಗ್ತೀನಿ ಅಂತಲೋ, ವಿಚಿತ್ರ ಸ್ಟೇಟ್ ಮೆಂಟ್, ಅತಿಯಾದ ಉದ್ವೇಗಗಳಿಂದ ವೆಂಕಟ್ ಸುದ್ದಿಯಲ್ಲಿದ್ದರು. ಆದರೆ ಸೀಸನ್ 3 ನಲ್ಲಿ ಈ ವ್ಯಕ್ತಿ ಕಿಚ್ಚ ಸುದೀಪ್ ಅವರನ್ನೇ ಇಂಪ್ರೆಸ್ ಮಾಡಿದ್ದರು ಅಂದ್ರೆ ನಂಬ್ತೀರಾ!

ಸುದೀಪ್ ಈ ಬಾರಿ ಹುಚ್ಚ ವೆಂಕಟ್ ಬಗ್ಗೆ ಮಾತನಾಡಿದ್ದು ಸಾಂದರ್ಭಿಕವಾಗಿ. 'ನಾವು ಈ ಸ್ಪರ್ಧಿ ಹೀಗೇ ಆಡ್ತಾರೆ ಅಂತ ಖಂಡಿತಾ ಪ್ರೆಡಿಕ್ಟ್ ಮಾಡಕ್ಕಾಗಲ್ಲ. ಏಕೆಂದರೆ ಇವತ್ತು ಬಹಳ ಇಂಪ್ರೆಸ್ ಮಾಡಿದ ವ್ಯಕ್ತಿ ನಾಳೆಯಷ್ಟು ಹೊತ್ತಿಗೆ ಸಂಪೂರ್ಣ ಬದಲಾಗಿರ್ತಾನೆ. ನಿಮಗೊತ್ತಾ, ಸೀಸನ್ ೩ ಹೊತ್ತಿಗೆ ಬೆಳಗ್ಗೆ ಕಾರಿಂದಿಳೀತಾ ನಾನು ಕಲರ್ಸ್ ಕನ್ನಡದ ಮುಖ್ಯಸ್ಥ ಪರಮೇಶ್ವರ ಗುಂಡ್ಕಲ್ ಜೊತೆಗೆ ಮಾತಾಡ್ತಾ ಈ ಬಾರಿ ಬಹುಶಃ ವೆಂಕಟ್ ಗೆಲ್ತಾರೆ ಅನಿಸುತ್ತೆ ಅಂದಿದ್ದ.

ರಾಜಕಾರಣಿ ಇದ್ದಾರೆ ಈ ಸಲ, ಕುತೂಹಲ ಇದೆ; ಬಿಗ್‌ ಬಾಸ್‌ ಸುದೀಪ್‌ ಮಾತುಕತೆ! ...

ಆದರೆ ಅದೇ ದಿನ ಹುಚ್ಚ ವೆಂಕಟ್ ಮತ್ತೊಬ್ಬ ಸ್ಪರ್ಧಿ ಮೇಲೆ ಕೈ ಎತ್ತಿಬಿಟ್ಟರು. ಆ ಕಾರಣಕ್ಕೆ ಬಿಗ್ ಬಾಸ್ ಮನೆಯಿಂದಲೇ ಹೊರಹೋಗಬೇಕಾಯ್ತು. ಆಮೇಲೆ ಮತ್ತೆ ಎಂಟ್ರಿ ಕೊಟ್ಟರೂ ಹಿಂದಿನ ವಿಶ್ವಾಸ ಉಳಿದಿರಲಿಲ್ಲ. ಹಿಂದಾದ್ರೆ ಜನರಿಗೆಲ್ಲ ಅವರನ್ನು ಕಂಡರೆ ಬಹಳ ಇಷ್ಟ ಆಗ್ತಿತ್ತು. ಜನ ಅವರಿಗೆ ಹೈಯೆಸ್ಟ್ ಓಟು ಕೊಟ್ಟಿದ್ದರು. ಹೀಗೆ ನಾವು ಇವರೇ ವಿನ್ನಿಂಗ್ ಕ್ಯಾಂಡಿಡೇಟ್ ಅಂತ ಗೆಸ್ ಮಾಡೋಕೂ ಆಗಲ್ಲ' ಅಂದರು ಸುದೀಪ್. ಅಲ್ಲಿಗೆ ಸುದೀಪ್ ಲೆಕ್ಕಾಚಾರವನ್ನೂ ತಲೆ ಕೆಳಗು ಮಾಡಿದ ಕೀರ್ತಿ ನಮ್ ಹುಚ್ಚ ವೆಂಕಟ್‌ಗೇ ಸಲ್ಲಬೇಕು.