ಜನಪ್ರಿಯ ರಿಯಾಲಿಟಿ ಶೋ ವೀಕೆಂಡ್ ವಿತ್ ರಮೇಶ್ ಸೀಸನ್ 4 ಶುರುವಾಗಿದೆ. ಸೀಸನ್ 4 ನ ಮೊದಲ ಅತಿಥಿಯಾಗಿ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರು ಆಗಮಿಸಿದ್ದರು. ಅವರ ಮಗಳು ಶ್ರದ್ಧಾ ಅಪ್ಪನೊಂದಿಗಿನ ಬಾಲ್ಯದ ನೆನಪುಗಳನ್ನು ಮೆಲುಕು ಹಾಕಿದರು. 

ಅಪ್ಪ ಎಂದರೆ ನನಗೆ ಅವರು ಹೇಳುತ್ತಿದ್ದ ಕಥೆಗಳು ನೆನಪಾಗುತ್ತದೆ. ಸುಧಾ, ತರಂಗದ ಕಥೆಗಳನ್ನು ಹೇಳುತ್ತಿದ್ದರು. ಅದಕ್ಕಿಂತ ಹೆಚ್ಚಾಗಿ ಅವರೇ ಕಲ್ಪಿಸಿಕೊಂಡು ಹೇಳುವ ಕಥೆಗಳು ಇನ್ನೂ ಖುಷಿಯಾಗುತ್ತಿತ್ತು. ಯಾಕಂದ್ರೆ ಅದರಲ್ಲಿ ನಾನೇ ಹೀರೋಯಿನ್! ಎಂದು ಶ್ರದ್ಧಾ ಹೇಳಿದರು. 

 

ದೇವಲೋಕದಿಂದ ನಾರದ ಬರ್ತಾ ಇದ್ದ. ನಾನು ಕೆಳಗೆ ಆಟ ಆಡ್ತಾ ಇದ್ದೆ. ಬಂದು ಎತ್ತಿಕೊಂಡು ಹೋಗ್ತಾ ಇದ್ದ. ನಾವು ಮೋಡಗಳ ಮಧ್ಯೆ ಹೋಗುವಾಗ ಏನೇನೋ ಬದಲಾವಣೆಗಳಾಗುತ್ತಿದ್ದವು ಎಂದು ತಂದೆ ಹೇಳುತ್ತಿದ್ದ ಕಥೆಗಳನ್ನು ಮೆಲುಕು ಹಾಕಿದರು. ಈ ಕಥೆಗಳನ್ನು ಕೇಳುತ್ತಿದ್ದರೆ ನಾವು ಕಳೆದು ಹೋಗುವುದು ಖಚಿತ.