Asianet Suvarna News Asianet Suvarna News

ನಿಮಗಿಷ್ಟದ 'ಸಿಹಿ' ತಿಂಡಿಯ ಮೂಲಕ ಜೋಡಿಯ ವರ್ಣಿಸಿ: ಸೀತಾರಾಮ ತಂಡದಿಂದ ಹೀಗೊಂದು ಆಫರ್​

ನಿಮಗಿಷ್ಟದ 'ಸಿಹಿ' ತಿಂಡಿಯ ಮೂಲಕ ಸೀತಾರಾಮ ಜೋಡಿಯನ್ನು ವರ್ಣಿಸಿ... ಸೀತಾರಾಮ ತಂಡ ಹೀಗೊಂದು ಆಫರ್ ಕೊಟ್ಟಿದೆ. ನೀವು ಮಾಡಬೇಕಿರುವುದು ಏನು? ​

Describe the Seetarama pair with your favorite 'sweet' snack offer from serial team suc
Author
First Published Jun 29, 2024, 12:05 PM IST

ಸೀತಾ ಮತ್ತು ರಾಮದ ಮದುವೆ ಅದ್ಧೂರಿಯಾಗಿ ನಡೆಯುತ್ತಿದೆ. ಹಲವು ಅಡೆತಡೆಗಳನ್ನು ಮೀರಿ ಮದುವೆ ಮಂಟಪದವರೆಗೂ ಸೀತಾ-ರಾಮ ಜೋಡಿ ಬಂದು ನಿಂತಿದೆ. ಮದುವೆ ಕಾರ್ಯಗಳೂ ಆರಂಭವಾಗಿದೆ.  ಅದ್ಧೂರಿ ನಿಶ್ಚಿತಾರ್ಥದ ಬಳಿಕ, ಈಗ ಮದುವೆಯ ಶಾಸ್ತ್ರಗಳು ಶುರುವಾಗಿವೆ. ಸೀರಿಯಲ್​ ಮದ್ವೆ ಎಂದರೆ ಅದರಲ್ಲಿಯೂ ಆಗರ್ಭ ಶ್ರೀಮಂತರ ಮದುವೆ ಎಂದರೆ ರಿಯಲ್​ ಲೈಫ್​ ಮದುವೆಯ ಹಾಗೆಯೇ ಭರ್ಜರಿಯಾಗಿ ನಡೆಯುತ್ತದೆ. ಅದರಂತೆಯೇ ಸೀತಾ ರಾಮರ ಮದುವೆ ಕಾರ್ಯವನ್ನು ಇದಾಗಲೇ ಹಲವು ಎಪಿಸೋಡ್​ಗಳಲ್ಲಿ ವೀಕ್ಷಕರು ನೋಡಿದ್ದು, ಈಗ ರಾಮ ಸೀತಾಳ ಕುತ್ತಿಗೆಗೆ ಮಂಗಳಸೂತ್ರ ಕಟ್ಟುವುದೊಂದೇ ಬಾಕಿಯಾಗಿದೆ.

 
 
 
 
 
 
 
 
 
 
 
 
 
 
 

A post shared by @seetha_rama_serial_

ಇದರ ನಡುವೆಯೇ ಇದೀಗ ಜೀ ಕನ್ನಡ ವಾಹಿನಿ ಸೀತಾರಾಮ ಸೀರಿಯಲ್​ ವೀಕ್ಷಕರಿಗೆ ಭರ್ಜರಿ ಆಫರ್​ ನೀಡಿದೆ. ಸೀತಾ-ರಾಮ ಒಂದಾಗಿದ್ದು, ಮುದ್ದು ಸಿಹಿಯ ಮೂಲಕ. ಆದ್ದರಿಂದ ಈ ಸೀರಿಯಲ್​ಗೆ ಸಿಹಿಯೇ ನಾಯಕಿ. ಮದುವೆಯ ಸಂದರ್ಭದಲ್ಲಿಯೂ ಸಿಹಿಯ ಪಾತ್ರ ಬಹುದೊಡ್ಡದೇ ಇದೆ. ಆದ ಕಾರಣ ಇದೀಗ ಜೀ ಕನ್ನಡ ವಾಹಿನಿ ನಿಮಗಿಷ್ಟದ 'ಸಿಹಿ' ತಿಂಡಿಯ ಮೂಲಕ ಜೋಡಿಯ ವರ್ಣಿಸಿ, ಅದನ್ನು ಕಮೆಂಟ್​ ಮೂಲಕ ತಿಳಿಸಿ ಎಂದು ಹೇಳಿದೆ. ಸೋಷಿಯಲ್​ ಮೀಡಿಯಾದಲ್ಲಿ ಮದುವೆ ಸಂಭ್ರಮದ ಪ್ರೊಮೋ ಬಿಡುಗಡೆ ಮಾಡಲಾಗಿದ್ದು, ಅದನ್ನು ನೋಡಿ ಈಗ ಸಿಹಿಯ ಬಗ್ಗೆ ವರ್ಣಿಸುವ ಕೆಲಸ ಸೀರಿಯಲ್​ ಪ್ರೇಮಿಗಳದ್ದು.

ನಾಗಲೋಕದಲ್ಲಿ ಆ್ಯಂಕರ್​ ಅನುಶ್ರೀ: ಮಲಗಿದಾಗ ಮೆಲ್ಲಗೆ ಬಂದ ನಾಗರಾಜ... ಮದುವೆಗೆ ಹಾತೊರೆಯುತ್ತಿದ್ದಾನಂತೆ!

ಅಷ್ಟಕ್ಕೂ ರಾಮ ಸೀತಾಳ ಕುತ್ತಿಗೆಗೆ ಮಂಗಳಸೂತ್ರ ಕಟ್ಟಿ ಸಿಂಧೂರ ಹಚ್ಚುವವರೆಗೂ ಸೀರಿಯಲ್​ ಫ್ಯಾನ್ಸ್​ಗೆ ಆತಂಕ ಇದ್ದೇ ಇದೆ. ಇದಕ್ಕೆ ಕಾರಣ,  ಮದುವೆಗೆಂದು ಆಭರಣದ ಅಂಗಡಿಗೆ ಹೋದಾಗ  ಯುವತಿಯೊಬ್ಬಳನ್ನು ಸೀತಾ ಗಾಬರಿಯಾಗಿದ್ದಳು. ಇವಳು ಯಾರು ಎನ್ನುವುದು ಈಗಿರುವ ಪ್ರಶ್ನೆ.   ಅನಂತ ಲಕ್ಷ್ಮಿಯವರ ಕುರಿತು ರಾಮ್​ ಹತ್ರ ಹೇಳಬೇಕಾ ಎಂದು ಯುವತಿಯೊಬ್ಬಳು ತನ್ನಷ್ಟಕ್ಕೇ ತಾನು ಮಾತನಾಡಿಕೊಂಡಿದ್ದಾಳೆ. ಅವಳನ್ನು ನೋಡಿದ ಸೀತಾಳಿಗೆ ಶಾಕ್​ ಆಗಿತ್ತು. ಇವೆಲ್ಲಾ ಪ್ರಶ್ನೆಗಳು ಸದ್ಯ ಸೀರಿಯಲ್​ನಲ್ಲಿ ಬಾಕಿ ಇವೆ. ಈ ಮಧ್ಯೆ, ಗೋಡೆ ಬರಹ ನೋಡಿ ಫ್ಯಾನ್ಸ್​ ಸೀತಾರಾಮ ಕಲ್ಯಾಣ ಆಗುವುದು ಡೌಟ್​ ಎನ್ನುತ್ತಿದ್ದಾರೆ. ಅಷ್ಟಕ್ಕೂ ಸೀತಾ ತನ್ನ ಇತಿಹಾಸ ಹೇಗಾದರೂ ಮಾಡಿ ಹೇಳಬೇಕಿತ್ತು, ಇಲ್ಲದಿದ್ದರೆ ಮದ್ವೆಯಾದ್ಮೇಲೆ ಸುಮ್ಮನೇ ತೊಂದರೆ ಎನ್ನುವುದು ಬಹುತೇಕ ಮಂದಿಯ ಅಭಿಪ್ರಾಯ ಕೂಡ. 

ಒಂದು ಖುಷಿಯ ಸಂಗತಿ ಎಂದರೆ, ಆದರೆ ರುದ್ರಪ್ರತಾಪನನ್ನು ಇದಾಗಲೇ ಮಟ್ಟ ಹಾಕಲಾಗಿದೆ. ಭಾರ್ಗವಿಯ ಕುತಂತ್ರ ಬಯಲಾಗುವ ಭಯದಲ್ಲಿ ಇರುವ ಕಾರಣ ಸದ್ಯ ಅವಳೂ ಬಾಲ ಮುದುಡಿಕೊಂಡು ಇರುತ್ತಾಳೆ ಎನ್ನುವುದು ಸತ್ಯವಾದರೂ ಸಿಹಿ, ಸೀತಾಳ ಹಿನ್ನೆಲೆ ಮದುವೆಗೆ ವಿಘ್ನ ತರುತ್ತದೆ ಎನ್ನುವುದು ಹಲವರ ಅಭಿಪ್ರಾಯವಾದರೆ, ಮದುವೆ ನಡೆಯುತ್ತದೆ, ಆದರೆ ಇದೇ ಹಿನ್ನೆಲೆಯಿಂದಾಗಿಯೇ ಅವರಿಬ್ಬರ ಮದುವೆ ಲೈಫ್​ ಹಾಳಾಗುತ್ತದೆ ಎನ್ನುತ್ತಿದ್ದಾರೆ. ಒಟ್ಟಿನಲ್ಲಿ ಈ ಸೀರಿಯಲ್​  ಕುತೂಹಲದಿಂದ ಕೂಡಿದೆ ಎನ್ನುವುದು ಸೀರಿಯಲ್​ ಪ್ರೇಮಿಗಳ ಅಭಿಮತ. 
ಸೃಜನ್​ ಲೋಕೇಶ್​ @44: ಸ್ಟಾರ್​ ಕಿಡ್​ ಆದ್ರೂ ಕೈಹಿಡಿಯಲಿಲ್ಲ ಹಿರಿತೆರೆ- ಕಿರುತೆರೆಯ ಪಯಣವೇ ರೋಚಕ...

Latest Videos
Follow Us:
Download App:
  • android
  • ios