ನಾಗಲೋಕದಲ್ಲಿ ಆ್ಯಂಕರ್ ಅನುಶ್ರೀ: ಮಲಗಿದಾಗ ಮೆಲ್ಲಗೆ ಬಂದ ನಾಗರಾಜ... ಮದುವೆಗೆ ಹಾತೊರೆಯುತ್ತಿದ್ದಾನಂತೆ!
ಕಾಮಿಡಿ ಕಿಲಾಡಿಗಳು ಷೋನಲ್ಲಿ ನಾಗಲೋಕವನ್ನು ಚಿತ್ರಿಸಲಾಗಿದ್ದು, ನಾಗರಾಜನೊಬ್ಬ ಆ್ಯಂಕರ್ ಅನುಶ್ರೀ ಅವರನ್ನು ಮದುವೆಯಾಗಲು ಬಯಸಿರುವುದಾಗಿ ತೋರಿಸಲಾಗಿದೆ. ಇಲ್ಲಿದೆ ನೋಡಿ ವಿಡಿಯೋ...
ಆ್ಯಂಕರ್ ಅನುಶ್ರೀ ಎಂದಾಕ್ಷಣ, ಅವರ ಲಕ್ಷಾಂತರ ಅಭಿಮಾನಿಗಳು ಸದಾ ಕೇಳುವ ಪ್ರಶ್ನೆ ಒಂದೇ ಮೇಡಂ... ಮದ್ವೆ ಯಾವಾಗ ಎನ್ನುವುದು. ಇದಕ್ಕೆ ಉತ್ತರ ಕೊಟ್ಟೂ ಕೊಟ್ಟೂ ಅನುಶ್ರೀಯವರು ಸೋತು ಹೋಗಿದ್ದಾರೆ. ಒಂದೇ ಪ್ರಶ್ನೆಯನ್ನು ಎಷ್ಟೂ ಅಂತ ಕೇಳ್ತೀರಾ ಎಂದು ಬೇಸರ ವ್ಯಕ್ತಪಡಿಸಿದ್ದೂ ಇದೆ. ನಾನು ಮದ್ವೆಯಾಗದೇ ಇರುವುದಿಲ್ಲ, ಆಗೇ ಆಗ್ತೀನಿ. ನಿಮಗೆ ಹೇಳಿಯೇ ಆಗ್ತೀನಿ. ಅಲ್ಲಿಯವರೆಗೆ ಮದ್ವೆ ವಿಷಯ ಕೆದಕದೇ ನನ್ನ ಪಾಡಿಗೆ ನನ್ನನ್ನು ಬಿಟ್ಟುಬಿಡಿ ಎಂದು ಅನುಶ್ರೀ ಅವರು ಅಭಿಮಾನಿಗಳಲ್ಲಿ ಹೇಳಿಕೊಂಡಿದ್ದೂ ಆಗಿದೆ. ಆದರೆ ಅವರು ಸೋಷಿಯಲ್ ಮೀಡಿಯಾದಲ್ಲಿ ಫೋಟೋ, ವಿಡಿಯೋ ಶೇರ್ ಮಾಡಿದಾಗಲೆಲ್ಲಾ ತರ್ಲೆ ಫ್ಯಾನ್ಸ್ ಇದೇ ಪ್ರಶ್ನೆ ಕೇಳುತ್ತಾರೆ. ಗೂಗಲ್ ದಾಖಲೆ ಪ್ರಕಾರ, ನಟಿ 1988ರ ಜ.25ರಂದು ಹುಟ್ಟಿದ್ದು, ಕಳೆದ ಜನವರಿಯಲ್ಲಿ 36ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ವಯಸ್ಸು ಇಷ್ಟಾದರೂ ಮದುವೆ ಇನ್ನೂ ಆಗಿಲ್ಲ ಎನ್ನುವುದೇ ಅನುಶ್ರೀ ಅವರ ಅಭಿಮಾನಿಗಳಿಗೆ ಬೇಸರ ತಂದಿದೆ. ಆದ್ದರಿಂದ ಹೋದಲ್ಲಿ, ಬಂದಲ್ಲಿ ಮದ್ವೆ ಯಾವಾಗ ಎನ್ನುವ ಪ್ರಶ್ನೆಯೇ ಎದುರಾಗುತ್ತಿರುತ್ತದೆ. ಈಗಲೂ ಅದನ್ನೇ ಕೇಳುತ್ತಿದ್ದಾರೆ. ನಾನೂ ಮದ್ವೆಯಾಗುತ್ತೇನೆ. ಆದ್ರೆ ಕೇಳಿದ್ದನ್ನೇ ಎಷ್ಟೂ ಅಂತ ಕೇಳ್ತೀರಾ ಎಂದು ಪದೇ ಪದೇ ಅನುಶ್ರೀ ಕೇಳಿದರೂ ಅಭಿಮಾನಿಗಳಿಗೆ ಇವರನ್ನು ಮದುವೆ ಮಾಡಿಸಿದ ಹೊರತೂ ಸಮಾಧಾನ ಇಲ್ಲ ಎನ್ನಿಸುತ್ತದೆ.
ಇದೀಗ ಅವರ ಮದುವೆಯ ವಿಷಯವನ್ನೇ ಇಟ್ಟುಕೊಂಡು ಕಾಮಿಡಿ ಕಿಲಾಡಿಗಳು ಪ್ರೀಮಿಯರ್ ಲೀಗ್ನಲ್ಲಿ ತಮಾಷೆ ಮಾಡಲಾಗಿದೆ. ಈ ಬಾರಿಯ ವಿಶೇಷತೆ ನಾಗಲೋಕ. ಇದರಲ್ಲಿ ನಾಗರಹಾವಿನ ಕುರಿತು ಸ್ಪರ್ಧಿಗಳು ಕಾಮಿಡಿ ಷೋ ಮಾಡಿದ್ದಾರೆ. ಅಲ್ಲಿರುವ ನಾಗರಹಾವು ಒಂದಕ್ಕೆ ಅನುಶ್ರೀ ಅವರನ್ನು ನೋಡಿ ಅವರ ಮೇಲೆ ಮೋಹ ಆಗಿದೆಯಂತೆ. ಅವರನ್ನೇ ಮದ್ವೆಯಾಗೋದು ಅಂತ ಪಟ್ಟು ಹಿಡಿದಿದೆ ಎಂದು ಅದರಲ್ಲಿ ತೋರಿಸಲಾಗಿದೆ. ಅನುಶ್ರೀ ಅವರು ನಾಗಲೋಕದಲ್ಲಿ ಇರುವಂತೆ ಚಿತ್ರಿಸಲಾಗಿದ್ದು, ಅವರು ಮಲಗಿದಾಗ ನಾಗ ಮೆಲ್ಲನೆ ಅವರ ಬಳಿ ಬಂದಿರುವಂತೆ ತೋರಿಸಲಾಗಿದೆ. ಇದನ್ನು ನೋಡಿ ನೆಟ್ಟಿಗರು ಥರಹೇವಾರಿ ಕಮೆಂಟ್ ಮಾಡುತ್ತಿದ್ದಾರೆ. ಇದಕ್ಕೇನಾ ಇನ್ನೂ ಮದ್ವೆಯಾಗಿಲ್ಲ ಎಂದು ಕೆಲವರು ನಟಿಯ ಕಾಲೆಳೆಯುತ್ತಿದ್ದಾರೆ.
ಮದುಮಗಳಾದ ಆ್ಯಂಕರ್ ಅನುಶ್ರೀ ವಿಡಿಯೋ ವೈರಲ್! ಗುಟ್ಟಾಗಿ ಮದುವೆ ನಡೆದೋಯ್ತಾ ಕೇಳ್ತಿದ್ದಾರೆ ಫ್ಯಾನ್ಸ್...
ಅಷ್ಟಕ್ಕೂ, ಕನ್ನಡ ಕಿರುತೆರೆ ಜನಪ್ರಿಯ ನಿರೂಪಕಿ ಕಮ್ ಸ್ಯಾಂಡಲ್‌ವುಡ್ ನಟಿ (Sandalwood star) ಅನುಶ್ರೀ ಮನೆಮಾತಾಗಿರುವ ನಟಿ. ಆ್ಯಂಕರ್ ಅನುಶ್ರೀ ಎಂದರೆ ಅಲ್ಲಿ ನಗುವಿರಲೇ ಬೇಕು. ತಮ್ಮ ಹಾಸ್ಯದ ಧಾಟಿಯಿಂದ ಆ್ಯಂಕರಿಂಗ್ ಮಾಡುವಲ್ಲಿ ಅನುಶ್ರೀ ಸಕತ್ ಫೇಮಸ್. ಅದ್ಭುತವಾಗಿ ಕಾರ್ಯಕ್ರಮ ನಿರೂಪಣೆಯ ಜೊತೆಗೆ ಸಂಗೀತ, ನೃತ್ಯದಿಂದಲೂ ಮನರಂಜಿಸುವ ಅನುಶ್ರೀ ಸದ್ಯ ಕಾಮಿಡಿ ಕಿಲಾಡಿಗಳು ರಿಯಾಲಿಟಿ ಷೋನಲ್ಲಿ ಬಿಜಿಯಾಗಿದ್ದಾರೆ. ಇದರಲ್ಲಿ ಮೊದಲ ಬಾರಿಗೆ ತೀರ್ಪುಗಾರರಾಗಿದ್ದಾರೆ. ತಮ್ಮ ಚಟಪಟ ಮಾತಿನಿಂದಾಗಿ ಅನುಶ್ರೀ ಅವರು ಅಭಿಮಾನಿಗಳ ಮನ ಗೆದ್ದಿದ್ದಾರೆ. ಅವರು ಟಿವಿ ಶೋಗಳನ್ನು ನಡೆಸಿಕೊಡುವ ಶೈಲಿಗೆ ವೀಕ್ಷಕರು ಫಿದಾ ಆಗಿದ್ದಾರೆ. ಕಿರುತೆರೆಯಲ್ಲಿ ಅನುಶ್ರೀ ಅವರಿಗೆ ಹಲವು ವರ್ಷಗಳ ಅನುಭವ ಇದೆ. ಹಲವು ರಿಯಾಲಿಟಿ ಶೋಗಳನ್ನು ಯಶಸ್ವಿಯಾಗಿ ನಡೆಸಿಕೊಟ್ಟ ಖ್ಯಾತಿ ಅವರಿಗಿದೆ. ತಮ್ಮ ಅದ್ಭುತ ನಿರೂಪಣಾ ಶೈಲಿಯಿಂದ ಇದಾಗಲೇ ಹಲವಾರು ಪ್ರಶಸ್ತಿಗಳನ್ನು ಗೆದ್ದಿದ್ದಾರೆ.
ಮಂಗಳೂರು ಮೂಲದ ಅನುಶ್ರೀ, ನಮ್ಮ ಟಿವಿ ಚಾನೆಲ್ ನಲ್ಲಿ ಅಂತ್ಯಾಕ್ಷರಿ ಮ್ಯೂಸಿಕ್ ಶೋ ಮೂಲಕ ಟಿವಿ ಜರ್ನಿ ಶುರು ಮಾಡಿದರು. ETV ಯಲ್ಲಿ ಶುರು ಮಾಡಿದ ‘ಡಿಮ್ಯಾಂಡಪ್ಪೋ ಡಿಮ್ಯಾಂಡ್’ ಇವರಿಗೆ ಸಿಕ್ಕಾಪಟ್ಟೆ ಡಿಮ್ಯಾಂಡನ್ನು ತಂದು ಕೊಟ್ಟಿತು. ಸರಿಗಮಪ, ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್, ಕುಣಿಯೋಣು ಬಾರಾ, ಕಾಮಿಡಿ ಕಿಲಾಡಿಗಳು ಸೇರಿದಂತೆ ಸಾಕಷ್ಟು ರಿಯಾಲಿಟಿ ಶೋಗಳನ್ನು ನಡೆಸಿಕೊಟ್ಟಿದ್ದಾರೆ. ‘ಬೆಂಕಿಪೊಟ್ಣ’ ಸಿನಿಮಾ ಇವರ ಮೊದಲ ಸಿನಿಮಾ. ಈ ಚಿತ್ರದಲ್ಲಿ, NAK ಮೀಡಿಯಾದಿಂದ Best debut Actress ಅವಾರ್ಡ್ ಪಡೆದರು. ‘ಮುರಳಿ ಮೀಟ್ಸ್ ಮೀರಾ’ ಸಿನಿಮಾಗಾಗಿ ಕರ್ನಾಟಕ ಸ್ಟೇಟ್ ಫಿಲ್ಮ್ ಅವಾರ್ಡ್ ಪಡೆದಿದ್ದಾರೆ. ಅನುಶ್ರೀ ಆ್ಯಂಕರ್ ಎಂಬ ಯೂಟ್ಯೂಬ್ ಚಾನಲ್ ಆರಂಭಿಸಿರುವ ಅನುಶ್ರೀ ಇದರಲ್ಲಿ ಸಿನಿಮಾ ತಾರೆಯರ ಸಂದರ್ಶನ ಮಾಡುತ್ತಾರೆ.
ಅಕುಲ್- ಅನುಶ್ರೀ ರೊಮಾನ್ಸ್: ವಿಡಿಯೋ ನೋಡಿ ಒನ್ಸ್ ಮೋರ್ ಒನ್ಸ್ ಮೋರ್ ಅಂತಿರೋ ಅಭಿಮಾನಿಗಳು