ಅತ್ತೆಯನ್ನು ಸಕತ್​ ಇಂಪ್ರೆಸ್​ ಮಾಡೋದು ಹೇಗೆ? ಶ್ರೀರಸ್ತು ಶುಭಮಸ್ತು ಸೊಸೆ ಸಿರಿ ಹೇಳಿದ್ದಾರೆ ಕೇಳಿ...

ಅತ್ತೆಯನ್ನು ಸಕತ್​ ಇಂಪ್ರೆಸ್​ ಮಾಡೋದು ಹೇಗೆ? ಶ್ರೀಮಸ್ತು ಶುಭಮಸ್ತು ಸೊಸೆ ಸಿರಿ ಕೊಟ್ಟ ಟಿಪ್ಸ್​ ಕೇಳಿ 
 

How to impress mother in law  Tips given by Srimastu Shubhamastu Siri suc

ಜೀ ಕುಟುಂಬ ಧಾರಾವಾಹಿಯ ನಟ-ನಟಿಯರಿಗೆ ಹಾಗೂ ಹಿನ್ನೆಲೆ ವರ್ಗದವರಿಗೆ ನೀಡುವ ಜೀ ಕುಟುಂಬ ಅವಾರ್ಡ್ಸ್​ ಕಾರ್ಯಕ್ರಮ ನಿನ್ನೆ ಅಂದರೆ ನವೆಂಬರ್​ 10ರಿಂದ  ಶುರುವಾಗಿದ್ದು, ಇವತ್ತೂ ನಡೆಯಲಿದೆ. ಇದಾಗಲೇ ಕೆಲವರಿಗೆ ಅವಾರ್ಡ್​ ನೀಡಲಾಗಿದೆ. ಭರ್ಜರಿಯಾಗಿ ನಡೆದಿರೋ ಈ ಕಾರ್ಯಕ್ರಮದಲ್ಲಿ ಜೀ ವಾಹಿನಿಯ ಎಲ್ಲಾ ಧಾರಾವಾಹಿಗಳ ಬಹುತೇಕ ಕಲಾವಿದರನ್ನು ಒಟ್ಟಿಗೇ ನೋಡುವ ಭಾಗ್ಯವನ್ನು ಧಾರಾವಾಹಿ ಪ್ರಿಯರು ಕಣ್ತುಂಬಿಸಿಕೊಳ್ಳುತ್ತಿದ್ದಾರೆ.  ಒಂದೆಡೆ ಅವಾರ್ಡ್​ ಫಂಕ್ಷನ್​ ಶುರುವಾಗಿದ್ದರೆ ಇನ್ನೊಂದೆಡೆ, ಕಲಾವಿದರ ಸಂದರ್ಶನ ನಡೆಸಲಾಗುತ್ತಿದೆ. ಜೀ ಕನ್ನಡದ ಶ್ರೀಮಸ್ತು ಶುಭರಸ್ತು ಧಾರಾವಾಹಿ ವಿಭಿನ್ನ ಕಥೆಯನ್ನು ಹೊಂದಿದ್ದು ವೀಕ್ಷಕರಿಗೆ ಇಷ್ಟವಾಗುತ್ತಿದೆ. ಬಹುತೇಕ ಸೀರಿಯಲ್​ಗಳಲ್ಲಿ ಅತ್ತೆ-ಸೊಸೆಯನ್ನು ಹಾವು-ಮುಂಗುಸಿಯಂತೆ ತೋರುತ್ತಿದ್ದರೆ, ಈ ಧಾರಾವಾಹಿಯಲ್ಲಿ ಸೊಸೆಯೇ ಖುದ್ದಾಗಿ ವಿಧವೆ ಅತ್ತೆಗೆ ಮತ್ತೊಂದು ಮದುವೆ ಮಾಡಿ ಮಗಳಾಗಿರುವ ವಿಭಿನ್ನ ಸ್ಟೋರಿ ಪ್ರೇಕ್ಷಕರ ಮನಸ್ಸನ್ನು ಗೆಲ್ಲುತ್ತಿದೆ. ಈ ಧಾರಾವಾಹಿಯಲ್ಲಿನ ಎಲ್ಲಾ ಪಾತ್ರಧಾರಿಗಳೂ ತಮ್ಮ ಪಾತ್ರಕ್ಕೆ ಜೀವ ತುಂಬಿದ್ದಾರೆ. ಆದರೆ ಎಲ್ಲರಿಗಿಂತಲೂ ವಿಭಿನ್ನವಾಗಿ ನಿಲ್ಲುವ ಪಾತ್ರ ಸೊಸೆಯದ್ದು. ಸಿರಿ ಪಾತ್ರದ ಮೂಲಕ ಎಲ್ಲರನ್ನೂ ಭಾವುಕರನ್ನಾಗಿ ಮಾಡುತ್ತಿರುವ ಈ ಸೊಸೆಯ ರಿಯಲ್​ ಹೆಸರು ಚಂದನಾ ರಾಘವೇಂದ್ರ.  ಅವರ ಗಂಡ ಸಮರ್ಥ್​. ಇವರ ಅಸಲಿ ಹೆಸರು ದರ್ಶಿತ್‌ ಗೌಡ. ಇವರಿಬ್ಬರೂ ಈಗ ಜೀ ಕುಟುಂಬ ಅವಾರ್ಡ್ಸ್​ ಸಂದರ್ಭದಲ್ಲಿ ಮಾತನಾಡಿದ್ದಾರೆ.

ಇದರಲ್ಲಿ ಒಂದು ಪಂಚಿಂಗ್​ ಡೈಲಾಗ್​ ಹೇಳುವಂತೆ ದರ್ಶಿತ್​ ಗೌಡ ಅಂದ್ರೆ ಸೀರಿಯಲ್​ನ ಸಮರ್ಥ್​ ಅವರಿಗೆ ಕೇಳಲಾಯಿತು. ಆಗ ಅವರು ಸಿರಿಯನ್ನು ಉದ್ದೇಶಿಸಿ ತುಂಬಾ ಸುಸ್ತಾಯ್ತಾ ಅಂತ ಕೇಳಿದ್ರು. ಅದಕ್ಕೆ ಸಿರಿ ಇಲ್ಲ ಯಾಕೆ ಅಂದಾಗ, ಆಗಿಂದಲಿಂದಲೂ ನೀನೇ ನನ್ನ ಮೈಂಡ್​ನಲ್ಲಿ ಓಡ್ತಾ ಇದ್ಯಾ ಎಂದಾಗ ಸಿರಿ ಈಗ ಸುಸ್ತಾಯ್ತು ಅಂದ್ರು. ಆಮೇಲ ಇನ್ನೊಂದು ಪಂಚಿಂಗ್​ ಡೈಲಾಗ್​ ಹೇಳಲು ಕೇಳಿದಾಗ ನಿಮ್​ ಡ್ಯಾಡಿ ಏನು ಟೆರರಿಸ್ಟಾ ಅಂತ ಸಿರಿಯನ್ನು ಕೇಳಿದ್ರು. ಅದಕ್ಕೆ ಯಾಕೆ ಅಂದಾಗ, ಅವ್ರು ಬಾಂಬ್​ ತಯಾರಿಸಿದ್ರಲ್ಲಾ ಅದಕ್ಕೆ ಅಂದ್ರು. 

ಅವಳ ಡ್ರೆಸ್ಸು, ಆಭರಣ ಇಷ್ಟ ಆಗಲ್ಲ: ಸೀತಾರಾಮದ ವಿಲನ್​ ಭಾರ್ಗವಿಯ ಅಮ್ಮ ಗಿರಿಜಾ ಲೋಕೇಶ್​ ಹೇಳಿದ್ದೇನು?
 

ನಂತರ ಸಿರಿಯ ರೀತಿಯಲ್ಲಿ ಅತ್ತೆಯನ್ನು ಇಂಪ್ರೆಸ್​ ಮಾಡುವುದು ಹೇಗೆ ಎಂದು ಸಿರಿಯನ್ನು ಕೇಳಿದಾಗ, ಅದೇನು ದೊಡ್ಡದಲ್ಲ. ಮಗ ಅಮ್ಮನನ್ನು ಸಪೋರ್ಟ್​ ಮಾಡದೇ ಇದ್ದಾಗ ಸೊಸೆಯಾದವಳು ಮಾಡಿದ್ರೆ ಮುಗಿದು ಹೋಯ್ತು. ಹೀರೋ ಆಗ್ತಾಳೆ ಎಂದರು. ಆಮೇಲೆ ಜೀ ಕುಟುಂಬದ ಅವಾರ್ಡ್​ ಬಗ್ಗೆ ಕೇಳಿದ ಪ್ರಶ್ನೆಗೆ, ಅವಾರ್ಡ್​ ಬಂದರೆ ತುಂಬಾ ಖುಷಿ ಎಂದರು ಇಬ್ಬರು. 

ಅವಾರ್ಡ್​ ಬಗ್ಗೆ ಮಾತನಾಡಿದ ಸಿರಿ, ಪ್ರಶಸ್ತಿ ಬಂದರೆ ತುಂಬಾನೇ ಖುಷಿ. ಆದರೆ ಇದಕ್ಕಿಂತಲೂ ದೊಡ್ಡ ಅವಾರ್ಡ್​ ನಟರಿಗೆ ಅಭಿಮಾನಿಗಳಿಂದ ಸಿಗುತ್ತದೆ. ನಿಮ್ಮ ಪಾತ್ರ ತುಂಬಾ ಚೆನ್ನಾಗಿದೆ. ಅತ್ತೆ-ಸೊಸೆ ಎಂದ್ರೆ ಹೀಗಿರಬೇಕು. ನಿಮ್ಮನ್ನು ನೋಡಿ ನಾವೂ ಕಲಿಯೋದು ಇದೆ ಎಂದೆಲ್ಲಾ ಹೇಳಿದಾಗ ಬದುಕು ಸಾರ್ಥಕವಾಯಿತು ಎನ್ನಿಸುತ್ತದೆ ಎಂದರೆ, ಸಾರ್ಥಕ್​ ಅವರು, ಇದು ನಿಜ. ಜನರ  ಮನಸ್ಸಿನಲ್ಲಿ ಒಂದು ಸ್ಥಾನ ಗಿಟ್ಟಿಸಿಕೊಳ್ಳೋದು ತುಂಬಾನೇ ಮುಖ್ಯ. ಅದು ಸಿಕ್ಕರೆ ಅದಕ್ಕಿಂತ ದೊಡ್ಡ ಖುಷಿ ಮತ್ತೊಂದಿಲ್ಲ ಎಂದರು. 

ಕಿಡ್ನಾಪ್‌ ಆಗಿರೋ 'ಸೀತಾ-ರಾಮ' ಪುಟಾಣಿ ಸಿಹಿ ಬಣ್ಣಬಣ್ಣದ ಹೆಲಿಕಾಪ್ಟರ್‌ನಲ್ಲಿ ಪ್ರತ್ಯಕ್ಷ!

 
 
 
 
 
 
 
 
 
 
 
 
 
 
 

A post shared by Zee Kannada (@zeekannada)

Latest Videos
Follow Us:
Download App:
  • android
  • ios