BBK9 ಸಾಲಸೋಲ ಮಾಡಿ ಅಣ್ಣನ ಮದ್ವೆ ಮಾಡಿದ್ದು ಎರಡನೇ ದಿನಕ್ಕೆ ಬಿಟ್ಟೋದ: ದೀಪಿಕಾ ದಾಸ್

ತಂದೆ ಕಳೆದುಕೊಂಡ ನಂತರ ಜೀವನ ಬದಲಾದ ರೀತಿ, ಅಣ್ಣ ಮದುವೆಗೆ ಮಾಡಿದ ಸಾಲ ಪ್ರತಿಯೊಂದರ ಬಗ್ಗೆ ಮಾತನಾಡಿದ ದೀಪಿಕಾ ದಾಸ್...

Colors Kannada Bigg boss 9 Deepika Das talks about financial struggling days vcs

ಕಲರ್ಸ್‌ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಬಿಗ್ ಬಾಸ್ ಸೀಸನ್ 9 ರಿಯಾಲಿಟಿ ಶೋ 60ನೇ ದಿನಕ್ಕೆ ಕಾಲಿಟ್ಟಿದೆ. ಮನೆಯಿಂದ ಹೊರ ನಡೆದ 7ನೇ ಸ್ಪರ್ಧಿ ದೀಪಿಕಾ ದಾಸ್ ಎರಡೇ ದಿನದಲ್ಲಿ ವೈಲ್ಡ್‌ ಕಾರ್ಡ್‌ ಸ್ಪರ್ಧಿಯಾಗಿ ಮತ್ತೊಮ್ಮೆ ಎಂಟ್ರಿ ಕೊಟ್ಟಿದ್ದಾರೆ. ಈಗ ದೀಪಿಕಾ ರಿಯಲ್ ಆಟ ಶುರು ಮಾಡಿದ್ದಾರೆ, ಅರಣ್ಯಕಾಂಡ ಟಾಸ್ಕ್‌ನಲ್ಲಿ ಜೀವನದ ಕಹಿ ಘಟನೆಯನ್ನು ಮೆಟ್ಟು ನಿಂತ ಕ್ಷಣದ ಬಗ್ಗೆ ದೀಪಿಕಾ ದಾಸ್ ಹಂಚಿಕೊಂಡಿದ್ದಾರೆ.

'6-7 ವರ್ಷಗಳ ಹಿಂದೆ ನಾನು ಅತಿ ಹೆಚ್ಚು ಪ್ರೀತಿಸುವ ತಂದೆ ಲಿವರ್ ಜಾಂಡೀಸ್‌ನಿಂದ ತೀರಿಕೊಂಡರು. ಆ ಒಂದು ವರ್ಷದಲ್ಲಿ ಯಾರಾದ್ದರೂ ಒಬ್ಬರು ಮದುವೆ ಆಗಬೇಕು ಅನ್ನೋದು ನಮ್ಮ ಕಡೆ ಇದೆ. ನನ್ನನ್ನು ಕೇಳಿದಾಗಿ ನಾನು ಚಿಕ್ಕವಳು ಮದುವೆ ಆಗುವುದಿಲ್ಲ ಅಂತ ಹೇಳಿದಕ್ಕೆ ಅಣ್ಣ ಮದುವೆಯಾಗಲು ಒಪ್ಪಿಕೊಂಡ. ನನ್ನ ತಾಯಿಗೆ ಹೇಗೆ ಅಂದ್ರೆ ಎಲ್ಲರ ಜೊತೆ ಸೇರ್ಕೊಂಡು ಅದ್ದೂರಿಯಾಗಿ ಮದ್ವೆ ಆಗಬೇಕು ಅಂತ ಆಸೆ ಇತ್ತು. ಅವರ ಆಸೆ ಈಡೇರಿಸಬೇಕು ಅಂತ ಎಷ್ಟು ಸಾಧ್ಯವೋ ಹಣ ಹೊಂದಿಸಿ ಸಾಲ ಮಾಡ್ಕೊಂಡು ಬಂದು ಮದ್ವೆ ಮಾಡಿಸಲಾಗಿತ್ತು. ಅಣ್ಣ ಮದುವೆಯಾದ ಎರಡೇ ದಿನಕ್ಕೆ ಶುರು ಮಾಡಿದ.... ನನ್ನ ಅಣ್ಣ ನಡುವೆ ಆದ ಮಾತುಕತೆಯಿಂದ ಫುಲ್ ಕೋಪ ಮಾಡ್ಕೊಂಡು ಹೊಸದಾಗಿ ಬಂದಿರುವ ಹೆಂಡತಿ ಮುಂದೆ ತಟ್ಟೆ ತೆಗೆದು ಎಸೆದ. ಆಗ ಮಾತನಾಡಲು ನನಗೆ ಏನೂ ಇರಲಿಲ್ಲ. ಮದುವೆ ನಾವು ಮಾಡಿ ಸಾಲ, ಕಷ್ಟ ಪಟ್ಟ ರೀತಿ ಏನೂ ಪ್ರಯೋಜನವಿಲ್ಲ ಅನಿಸಿತ್ತು. ಆ ಸಮಯದಲ್ಲಿ ಹೊಸದಾಗಿ ಬಂದವರ ಮುಂದೆ ನನ್ನನ್ನು ಬಿಟ್ಟುಕೊಟ್ಟ ಅವತ್ತಿನ ರಾತ್ರಿಯೇ ಬಟ್ಟೆ ಪ್ಯಾಕ್ ಮಾಡಿ ಮನೆ ಬಿಟ್ಟು ಹೋದರು.' ಎಂದು ಘಟನೆ ಬಗ್ಗೆ ದೀಪಿಕಾ ದಾಸ್ ಮಾತನಾಡುತ್ತಾರೆ.

Colors Kannada Bigg boss 9 Deepika Das talks about financial struggling days vcs

'ಆ ಕ್ಷಣ...ನಮಗೆ ಯಾರೂ ಇಲ್ಲ ಅನ್ನೋ ಭಾವನೆ ಬಂತು. ಅಪ್ಪನ ಕಡೆ ಹಣ ಹೋಗಿದೆ ಮದುವೆಯಿಂದ ಹಣ ಹೋಗಿದೆ ಎನು ಮಾಡ್ಬೇಕು ಅಂತ ಬಂದಾಗ ಎಲ್ಲೂ ಪ್ರಶ್ನೆಯಾಗಿತ್ತು. ಆ ಸಮಯದಲ್ಲಿ ನನ್ನ ಕಾರು ಮಾರಾಟ ಮಾಡಿದ್ದೆ ಓಡಾಡಲು ಒಂದು ಗಾಡಿ ಇಲ್ಲ ಇದೆಲ್ಲವೂ ಸಾಲದು ಅಂತ ಸಾಕಿದ್ದ ನನ್ನ ನಾಯಿ ಸತ್ತು ಹೋಯಿತ್ತು. ಹೇಗಿತ್ತು ಸಮಯ ಅಂದ್ರೆ ಎಲ್ಲರೂ ಒಬ್ಬೊಬ್ಬರಾಗಿ ನಮ್ಮನ್ನು ಬಿಟ್ಟು ಹೋಗುತ್ತಿದ್ದರು ಯಾರೂ ನಮ್ಮ ಹತ್ತಿರ ಬರುತ್ತಿರಲಿಲ್ಲ. ಆ ದಿನಗಳು ಮತ್ತೆ ಬರಬಾರದು ಎಂದು ದೇವರಿಗೆ ಪ್ರಾರ್ಥನೆ ಮಾಡುತ್ತೀನಿ. ಸಿನಿಮಾ ನನ್ನ ಫೋಕಸ್ ಆಗಿತ್ತು ಸೀರಿಯಲ್‌ಗೆ ಕೇಳುತ್ತಿದ್ದರು ಆದರೆ ಮಾಡಲು ಇಷ್ಟವಿರಲಿಲ್ಲ ಆ ಸಮಯದಲ್ಲಿ ನನಗೆ ಸಿಕ್ಕಿದ್ದು ನಾಗಿಣಿ ಧಾರಾವಾಹಿ. ದೇವರ ದಯೆ ನಾಗಿಣಿ ಧಾರಾವಾಹಿ ನನಗೆ ತುಂಬಾನೇ ಸಹಾಯ ಮಾಡಿತ್ತು ಅಲ್ಲಿಂದ ನನ್ನ ಜರ್ನಿ ಎಲ್ಲೂ ನಿಂತಿಲ್ಲ ಅದಾದ ಮೇಲೆ ಬಿಗ್ ಬಾಸ್ ಈಗ ಮತ್ತೆ ಬಿಗ್ ಬಾಸ್. ಈಗ ಎಲ್ಲವೂ ಚೆನ್ನಾಗಿದೆ ಅಣ್ಣ ಮತ್ತೆ ವಾಪಸ್ ಬಂದಿದ್ದಾನೆ. ಬಿಳಿ ಹಾಳೆ ಮೇಲೆ ಕಪ್ಪು ಚುಕ್ಕಿ ರೀತಿ ಆ ಒಂದು ಮಾರ್ಕ್‌ ನನ್ನ ಜೀವನದಲ್ಲಿ ಇರುತ್ತೆ. ಈಗ ಅವನ ಜೊತೆ ಮಾತನಾಡುವಾಗಲ್ಲೂ ಆ ವಿಚಾರ ಹೇಳುತ್ತೀನಿ ಬೇಸರ ಮಾಡಿಕೊಳ್ಳುತ್ತಾನೆ, ಎಂದೂ ಮರೆಯಲು ಆಗುವುದಿಲ್ಲ. ಎಲ್ಲರಿಗೂ ಅವರವರದ್ದೇ ಕಷ್ಟ ಇರುತ್ತೆ ಆ ಕಷ್ಟನ ಎದುರಿಸಿಕೊಂಡು ಬಂದ್ರೆನೇ ಸುಖಃದ ಬೆಲೆ ಗೊತ್ತಾಗುವುದು' ಎಂದು ದೀಪಿಕಾ ದಾಸ್ ಹೇಳಿದ್ದಾರೆ.

Latest Videos
Follow Us:
Download App:
  • android
  • ios