ರಾಮ್‌ ಬಾಯಿಬಿಡಲ್ಲ, ಸೀತಾಗೆ ಅರ್ಥವಾಗಲ್ಲ ಎನ್ನುವಷ್ಟರಲ್ಲಿಯೇ ದೇವರ ಮುಂದೆ ನಡೆದೇ ಹೋಯ್ತು ಪವಾಡ

ಸೀತಾರಾಮ ಸೀರಿಯಲ್​ನಲ್ಲಿ ದೇವಸ್ಥಾನದಲ್ಲಿ ದೇವರ ಎದುರು ಪವಾಡ ನಡೆದಿದೆ. ಇಷ್ಟು ದಿನ ಮನಸ್ಸಿನಲ್ಲಿ ಇಟ್ಟುಕೊಂಡಿದ್ದನ್ನೆಲ್ಲಾ ರಾಮ್​ ಹೇಳಿಬಿಟ್ಟಿದ್ದಾನೆ. ಮುಂದೇನು?
 

In Seetharama serial a miracle of love story happened in front of God in the temple suc

 ರಾಮ್‌ ಬಾಯಿಬಿಟ್ಟು ಹೇಳಲ್ಲ, ಸೀತಾ ಅರ್ಥ ಮಾಡಿಕೊಳ್ಳಲ್ಲ... ಇದು ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗ್ತಿರೋ, ಹಲವರ ನೆಚ್ಚಿನ ಸೀರಿಯಲ್​ ಸೀತಾರಾಮ ಕಥೆ. ಇವತ್ತು ಏನಾದ್ರೂ ಆಗ್ಲೇ ಹೋಗಲಿ, ಸೀತಾಳ ಮುಂದೆ ಪ್ರೀತಿ ಹೇಳಿಕೋ ಎಂದು ರಾಮ್​ಗೆ ಅಶೋಕ್​ ಹುರಿದುಂಬಿಸಿದ್ದ. ಹೌದು, ಇನ್ನು ಕಾದು ಕುಳಿತರೆ ಪ್ರಯೋಜನ ಇಲ್ಲ ಎಂದುಕೊಂಡ ರಾಮ್​ ಸೀತಾಳಲ್ಲಿ ಪ್ರೀತಿ ನಿವೇದನೆ ಮಾಡಿಕೊಳ್ಳಲು ಗುಲಾಬಿ ಹೂವು ಖರೀದಿಸಿದ್ದ. ಒಂದೆಡೆ ರಾಮ್​ ಗುಲಾಬಿ ಹಿಡಿದು ಸೀತಾಳಿಗಾಗಿ ಬರುತ್ತಿದ್ದರೆ, ಇತ್ತ ರಾಮ್​ನ ಬಗ್ಗೆ ಪ್ರೀತಿ ಹುಟ್ಟಿರೋ ಸೀತಾ ಕೂಡ ಕೆಂಪು ಗುಲಾಬಿ ಹಿಡಿದು ರಾಮ್​ಗೋಸ್ಕರ ಬಂದಿದ್ದಳು. ಇನ್ನೇನು ಇಬ್ಬರೂ ಪ್ರೀತಿ ನಿವೇದನೆ ಮಾಡಿಕೊಳ್ಳಬೇಕು ಎನ್ನುವಷ್ಟರದಲ್ಲಿಯೇ ಚಾಂದನಿ ಹಿಂದಿನಿಂದ ಬಂದು ರಾಮ್​ನನ್ನು ತಬ್ಬಿದ್ದಳು. ಇವಳೇ ರಾಮ್​ನ ಮಾಜಿ ಪ್ರೇಯಸಿ ಎನ್ನುವ ಸತ್ಯ ಗೊತ್ತಾಗಿ ಸೀತಾ ಹಿಂದಕ್ಕೆ ಸರಿದಿದ್ದಳು.  ಹೀಗೆ, ಸೀತಾಳ ಬಳಿ ಪ್ರೀತಿ ಹೇಳಿಕೊಳ್ಳುವಷ್ಟರಲ್ಲಿ ಚಾಂದಿನಿ ಮತ್ತೆ ನನ್ನ ಲೈಫ್‌ಗೆ ಎಂಟ್ರಿಕೊಟ್ಟುನಿಟ್ಟಿದ್ದಾಳೆ. 

ಇದು ಮುಗಿದು ಹೋದ ಅಧ್ಯಾಯ ಎಂದು ಹೇಗೆ ಹೇಳುವುದು ಎಂದು ರಾಮ್​ ಯೋಚನೆ ಮಾಡುತ್ತಿದ್ದಾನೆ.  ಸೀತಾ ಮತ್ತು ರಾಮನನ್ನು ಒಂದಾಗಿಸಬೇಕು ಅನ್ನೋ ನಿಟ್ಟಿನಲ್ಲಿ ಅಶೋಕ ಶತ ಪ್ರಯತ್ನಪಡುತ್ತಿದ್ದಾನೆ.  ಆದರೆ ಅತ್ತೆ ಭಾರ್ಗವಿಯ ಮಾತಿನಂತೆ ಸೀತಾಳನ್ನು ತನ್ನ ಬುಟ್ಟಿಗೆ ಹಾಕಿಕೊಳ್ಳುವ ಪ್ಲಾನ್‌ ಮಾಡಿದ್ದಾಳೆ ಚಾಂದಿನಿ. ಸೀತಾಳ ಎದುರು ಅತ್ತು ಕರೆದು ಎಮೋಷನಲ್‌  ಬ್ಲಾಕ್​ಮೇಲ್‌  ಮಾಡಿದ್ದಾಳೆ.  ಅವನೇ ನನ್ನ ಪ್ರಪಂಚವಾಗಿದ್ದ, ಅವನೇ ನನ್ನ ಜೀವವಾಗಿದ್ದ. ಇದೀಗ ನಾನು ನನ್ನ ಸ್ಟೇಟಸ್‌, ಪೊಸಿಷನ್‌ ಎಲ್ಲವನ್ನು ಬಿಟ್ಟು ಈ ಮಾತು ಹೇಳುತ್ತಿದ್ದೇನೆ. ರಾಮ್‌ ನನಗೆ ಬೇಕು ಸೀತಾ ಎಂದಿದ್ದಳು ಚಾಂದಿನಿ. ಇದನ್ನು ಕೇಳಿ   ಸೀತಾ  ಕರಗಿ ಹೋಗಿದ್ದಾಳೆ. ಇಬ್ಬರೂ ಒಟ್ಟಾಗಬೇಕು ಎಂದುಕೊಂಡಿದ್ದಾಳೆ.

ಮತ್ತೊಮ್ಮೆ ರಶ್ಮಿಕಾ ಡೀಪ್​ಫೇಕ್​ ವಿಡಿಯೋ: ವಿರೋಧಿಸೋ ಬದ್ಲು ನೆಟ್ಟಿಗರು ಹೀಗೆಲ್ಲಾ ಹೇಳೋದಾ?
 
ಆದರೆ ರಾಮ್​ಗೆ ಈಗ ಚಾಂದನಿ ಬೇಡ. ಅವಳು ಎಂಟ್ರಿ ಕೊಡುತ್ತಿದ್ದಂತೆಯೇ, ಅಮ್ಮನ ನೆನಪಿನಲ್ಲಿ ಕಣ್ಣೀರಿಡುತ್ತಿದ್ದಾನೆ ರಾಮ.  ಚಾಂದಿನಿಗೆ ರಾಮ್‌ ಪ್ರೀತಿ ಬೇಕಿಲ್ಲ, ಅವನ ಆಸ್ತಿ ಬೇಕು ಅಷ್ಟೇ. ಇದೇ ಕಾರಣಕ್ಕೆ ಅವಳು ಅಂದು ರಾಮ್ ಜೊತೆ ಪ್ರೀತಿ ನಾಟಕ ಮಾಡಿ, ಬ್ರೇಕಪ್ ಮಾಡಿಕೊಂಡು ಸಿಕ್ಕಾಪಟ್ಟೆ ನೋವು ಕೊಟ್ಟು, ಈಗ ಮತ್ತೆ ಅವನ ಬಳಿ ಬಂದಿದ್ದಾಳೆ. ಆದರೆ ಸೀತಾಗೆ ಇದೆಲ್ಲಾ ಗೊತ್ತಾಗಬೇಕಲ್ಲ. ರಾಮ್​ನನ್ನು ಚಾಂದಿನಿ ಹುಚ್ಚಿಯಂತೆ ಪ್ರೀತಿಸ್ತಾ ಇದ್ದಾಳೆ. ಅವರಿಬ್ಬರೂ ಒಂದಾಗಬೇಕು ಎನ್ನುವುದು ಅವಳ ಆಸೆ.

ಆದರೆ ಕೊನೆಗೂ ರಾಮ್​ ಮೌನ ಮುರಿದಿದ್ದಾನೆ. ಅಮ್ಮನ ನೆನಪಿನಲ್ಲಿ ಕಣ್ಣೀರು ಹಾಕುತ್ತಾ ಸಿಹಿಗೆ ಕಾಲ್​ ಮಾಡಿದಾಗ, ಅವಳು ಅಮ್ಮ ದೇವಸ್ಥಾನಕ್ಕೆ ಹೋಗಿರುವ ವಿಷಯ ತಿಳಿಸಿದ್ದಳು. ಆಗ ರಾಮ್​ ದೇವಸ್ಥಾನಕ್ಕೆ ಹೋಗಿದ್ದಾನೆ. ಅಲ್ಲಿ ಸೀತಾಳನ್ನು ಕಂಡು ಕೊನೆಗೂ ಪ್ರೀತಿಯ ವಿಷಯ ಹೇಳಿದ್ದಾನೆ. ನಾನು ನಿಮ್ಮನ್ನು ಪ್ರೀತಿಸುತ್ತಿದ್ದೇನೆ ಎಂದಿದ್ದಾನೆ. ಇದನ್ನು ಕೇಳಿ ಸೀತಾ ಶಾಕ್​ ಆಗಿದ್ದಾಳೆ. ಅವಳ ಬಾಯಿಯಿಂದ ಯಾವ ಮಾತೂ ಹೊರಡುತ್ತಿಲ್ಲ. ಏನು ಮಾಡಬೇಕು ಎಂದು ತಿಳಿಯುತ್ತಿಲ್ಲ. ಮುಂದೇನು? ಇದರ ಪ್ರೊಮೋ ಬಿಡುಗಡೆಯಾಗಿದ್ದು, ದಯವಿಟ್ಟು ಇಬ್ಬರನ್ನೂ ಬೇಗ ಒಂದು ಮಾಡಿ, ಚಾಂದನಿ ಮತ್ತು ಚಿಕ್ಕಮ್ಮನ ಕುತಂತ್ರ ಇಬ್ಬರಿಗೂ ತಿಳಿಯುವ ಹಾಗೆ ಮಾಡಿ ಎಂದು ಸೀತಾರಾಮ ಫ್ಯಾನ್ಸ್ ನಿರ್ದೇಶಕರನ್ನು ಕೇಳಿಕೊಳ್ಳುತ್ತಿದ್ದಾರೆ. 

ಪಾರ್ಟಿಯಲ್ಲಿ ಡ್ಯಾನ್ಸ್​ ಮಾಡ್ತಿದ್ದಾಗ್ಲೇ ರಣವೀರ್​ ಪ್ಯಾಂಟ್​ ನಡುವೆ ಹರಿದೇ ಹೋಯ್ತು! ದೀಪಿಕಾ ಮಾಡಿದ್ದೇನು?

 

Latest Videos
Follow Us:
Download App:
  • android
  • ios