ಪವರ್‌ಸ್ಟಾರ್‌ ಪುನೀತ್‌ ರಾಜ್‌ ಕುಮಾರ್‌, ‘ದೀಪಾವಳಿ..ದೀಪಾವಳಿ’ ಹಾಡಿನ ಕೆಲವು ಸಾಲುಗಳನ್ನು ಹಾಡಿ ಈ ಸಲದ ಹಬ್ಬವನ್ನು ಅರ್ಥಪೂರ್ಣವಾಗಿ, ಪಟಾಕಿ ಹೊಡೆಯದೇ, ಬಡವರಿಗೆ ಸಹಾಯ ಮಾಡಿ ಆಚರಿಸಲು ಕರೆ ಕೊಟ್ಟರು. ಕಿಚ್ಚ ಸುದೀಪ್‌ ‘ಕೋಟಿಗೊಬ್ಬ 3’ ಚಿತ್ರದ ‘ಪಟಾಕಿ ಪೋರಿಯೋ’ ಹಾಡಿನೊಂದಿಗೆ ಹಬ್ಬದ ಖುಷಿ ಹೆಚ್ಚಿಸಿದರು. ಈ ಹಾಡನ್ನು ಲಕ್ಷಾಂತರ ಜನ ವೀಕ್ಷಿಸಿದ್ದು, ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ವೈರಲ್‌ ಆಗಿದೆ. ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ದೀಪಾವಳಿಯ ಶುಭ ಹಾರೈಕೆ ತಿಳಿಸಿದ್ದಾರೆ.

ನಿವೇದಿತಾ-ಚಂದನ್ ಶೆಟ್ಟಿ ಪೋಸ್ಟ್ ವೆಡ್ಡಿಂಗ್, ದೀಪಾವಳಿ ಫೋಟೋ ಶೂಟ್‌ ಹೇಗಿದೆ ನೋಡಿ! 

ನಾನು ಪಟಾಕಿ ಹೊಡೆಯಲ್ಲ. ತಾಯಿ ಭೂಮಿಯನ್ನು ಅಕ್ಕರೆಯಿಂದ ಆರಾಧಿಸುತ್ತೇನೆ. ಈ ಬಾರಿಯ ಹಬ್ಬದಲ್ಲಿ ಹಣತೆ ಹಚ್ಚಿ ಸಂಭ್ರಮಪಟ್ಟೆ. ಮನೆಯಲ್ಲೇ ಹಬ್ಬದ ಆಚರಣೆ ನಡೆಯಿತು. ಅಮ್ಮ ಅಡುಗೆ ಸವಿದೆ.- ವೈಷ್ಣವಿ ಗೌಡ

ಸಖತ್‌ ಕಲರ್‌ಫುಲ್‌ ಆಗಿ ಮಿಂಚಿದ್ದು, ಹಿರಿತೆರೆ, ಕಿರುತೆರೆ ನಟಿಯರು. ನಟಿ ಪ್ರಣೀತಾ ಸುಭಾಷ್‌ ಕ್ಯಾಂಡಲ್‌ ಹಚ್ಚಿ ಶುಭ ಹಾರೈಸಿದರೆ, ಅದಿತಿ ಪ್ರಭುದೇವ ಸಾಂಪ್ರದಾಯಿಕ ಉಡುಗೆಯಲ್ಲಿ ಮಿಂಚಿದರು. ರಚಿತಾ ರಾಮ್‌ ಹೊಸ ಸಿನಿಮಾ ‘ಪಂಕಜ ಕಸ್ತೂರಿ’ ಫಸ್ಟ್‌ ಲುಕ್‌ ಬಿಡುಗಡೆಯ ಸಂಭ್ರಮದಲ್ಲಿದ್ದರು. ಪಟಾಕಿ ಪೋರಿ ಅಶಿಕಾ ರಂಗನಾಥ್‌ ಹಬ್ಬದುಡುಗೆಯಲ್ಲಿ ಖುಷಿ ಹೆಚ್ಚಿಸಿದರು. ಮೇಘನಾ ಗಾಂವ್ಕರ್‌ ಅಮೆರಿಕಾದಿಂದಲೇ ಹಬ್ಬದ ಶುಭಾಶಯ ತಿಳಿಸಿದ್ದು, ಎಲ್ಲರನ್ನೂ ಮಿಸ್‌ ಮಾಡ್ಕೊಳ್ತಿರೋದಾಗಿ ಹೇಳಿದ್ದಾರೆ.

ದೀಪಾವಳಿ ಹಬ್ಬದಂದು ಬಲೀಂದ್ರ ಪೂಜೆಯ ವಿಶೇಷತೆಯೇನು? 

ಈ ಸಲ ಸಿಂಪಲ್‌ ದೀಪಾವಳಿ. ಅಮ್ಮ ನಮಗೆ ಎಣ್ಣೆ ಹಚ್ಚಿ ಚಿರಂಜೀವಿ ಶ್ಲೋಕ ಹೇಳಿದ್ರು. ಎಣ್ಣೆ ಸ್ನಾನ ಮಾಡಿ, ಸಿಹಿ ಸವಿದೆವು. ಸಂಜೆ ದೀಪ ಬೆಳಗೋ ಖುಷಿ. ಈ ಸಲ ಕನ್ನಡತಿ ಶೂಟಿಂಗ್‌ ಇತ್ತು. ಇದು ಮುಗಿಸಿ ಇನ್ನೆರಡು ದಿನ ಬಿಟ್ಟು ಸಿನಿಮಾ ಶೂಟಿಂಗ್‌ಗೆ ಸಿಗಂದೂರು ಸಮೀಪದ ನಿಟ್ಟೂರಿಗೆ ಹೋಗ್ತಿದ್ದೀನಿ.- ರಂಜಿನಿ ರಾಘವನ್‌, ನಟಿ

ಕಿರುತೆರೆ ನಟಿ ಮೇಘಾ ಶೆಟ್ಟಿನಗುವೆಂಬ ಬೆಳಕು ಪ್ರಜ್ವಲಿಸಲಿ ಎಂದಿದ್ದಾರೆ. ನಿಶಾ ಮಿಲನ ದೀಪದ ಹಬ್ಬ ಅಂಧಕಾರ ತೊಲಗಿಸಲಿ ಎಂದಿದ್ದಾರೆ. ಕವಿತಾ ಗೌಡ ಸೇರಿದಂತೆ ಹಲವರು ದೀಪಾವಳಿ ಶುಭಾಶಯ ಕೋರಿದ್ದಾರೆ.