'ಬ್ರಹ್ಮಗಂಟು' ಸೋಡಾಗ್ಲಾಸ್ ದೀಪಾಳ ಕಲರ್ ದಿನವೂ ಚೇಂಜ್ ಆಗ್ತಿರಲು ಇದೇ ಕಾರಣ ನೋಡಿ! ವಿಡಿಯೋ ವೈರಲ್
ಬ್ರಹ್ಮಗಂಟುವಿನಲ್ಲಿ ಬಾಡಿ ಶೇಮಿಂಗ್ ಅನುಭವಿಸುತ್ತಿರುವ ದೀಪಾ ಶೂಟಿಂಗ್ ಸೆಟ್‌ನಲ್ಲಿ ಹೇಗಿದ್ದಾಳೆ ನೋಡಿ. ಒರಿಜಿನಲ್ ನಟಿ ಹೀಗಿದ್ದಾರೆ!
ಬ್ರಹ್ಮಗಂಟು ಸೀರಿಯಲ್ ನ ಮುಗ್ಧ, ಪೆದ್ದು ಅಂತಿದ್ದ ದೀಪಾ ಈಗ ಇನ್ನೊಂದು ಅವತಾರ ತಾಳಿದ್ದಾಳೆ. ನಾರಿ ಮುನಿದರೆ ಮಾರಿ ಎನ್ನುವಂತೆ, ಗಂಡನ ಅತ್ತಿಗೆ ಸೌಂದರ್ಯಳ ಗರ್ವಭಂಗ ಮಾಡುವ ಪಣತೊಟ್ಟಿದ್ದಾಳೆ. ದೀಪಾಳ ಅಳುಮುಂಜಿ ಪಾತ್ರಕ್ಕೆ ಬೇಸರ ವ್ಯಕ್ತಪಡಿಸಿದ್ದ ವೀಕ್ಷಕರಂತೂ ಈಗ ಫುಲ್ ಖುಷ್. ದೀಪಾ ಸೌಂದರ್ಯಳಿಗೆ ಕಿರಿಕ್ ಮಾಡುವುದನ್ನು ನೋಡುವುದು ಎಂದರೆ ಎಲ್ಲಿಲ್ಲದ ಖುಷಿ ಜನರಿಗೆ. ಆದರೆ ಒಂದೇ ಒಂದು ವ್ಯತ್ಯಾಸ ಜನರ ಗಮನಕ್ಕೆ ಬಂದಿದ್ದು, ಅದರ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಸಕತ್ ಸುದ್ದಿಯಾಗುತ್ತಿದೆ. ಅದೇನೆಂದ್ರೆ ದೀಪಾಳ ಗುಣ ಬದಲಾದಂತೆ ರೂಪ ಕೂಡ ಬದಲಾಗಿದ್ದು. ಸಿಕ್ಕಾಪಟ್ಟೆ ಎಣ್ಣೆ ಮುಖದ, ಕಪ್ಪಗಿದ್ದ ದೀಪಾ ಒಂದೊಂದು ಸಲ ಬೆಳ್ಳಗೆ ಕಾಣಿಸುವುದು ಇದೆ. ಒಂದೊಂದು ಸಲ ಒಂದೊಂದು ರೀತಿ ಕಾಣಿಸುವ ಹಿಂದಿನ ಸೀಕ್ರೇಟ್ ಇಲ್ಲಿದೆ ನೋಡಿ. ಅದರ ವಿಡಿಯೋ ಕೂಡ ವೈರಲ್ ಆಗಿದೆ.
ಈ ವಿಡಿಯೋದಲ್ಲಿ ಇರುವಾಕೆ ದೀಪಾ ಪಾತ್ರಧಾರಿ ಎಂದರೆ ಬಹುಶಃ ಅನೇಕರು ನಂಬಲಿಕ್ಕಿಲ್ಲ. ದೀಪಾ ಎಂದರೆ ಸಾಕು ಸೋಡಾಬುಡ್ಡಿ, ಕಪ್ಪು ವರ್ಣ, ಹಲ್ಲಿಗೆ ಕ್ಲಿಪ್, ಎಣ್ಣೆ ಬಳಿದ ಎರಡು ಜಡೆ, ಅದಕ್ಕೊಂದು ರಿಬ್ಬನ್.... ಹುಡುಗಿ ನೆನಪಾಗುತ್ತಾಳೆ. ತೆಳ್ಳಗೆ, ಬೆಳ್ಳಗೆ ಇದ್ದರಷ್ಟೇ ಸೌಂದರ್ಯ ಎನ್ನುವ ಈ ಕಾಲದಲ್ಲಿ, ಬಾಹ್ಯ ಸೌಂದರ್ಯಕ್ಕೇ ಮನಸೋಲುವವರು ಎಲ್ಲರೂ, ಮನದ ಸೌಂದರ್ಯವನ್ನು ನೋಡುವವರೇ ಇಲ್ಲ ಎನ್ನಬಹುದೇನೋ. ಇದೇ ಕಾರಣಕ್ಕೆ ಈ ಸೀರಿಯಲ್ನಲ್ಲಿ ಕ್ಷಣಕ್ಷಣಕ್ಕೂ ಬಾಡಿಶೇಮಿಂಗ್ ಅನುಭವಿಸುತ್ತಿದ್ದಾಳೆ ದೀಪಾ. ನೋಡಲು ಚೆನ್ನಾಗಿಲ್ಲ ಎನ್ನುವ ಒಂದೇ ಕಾರಣಕ್ಕೆ ಮನೆಯ ಬಹುತೇಕ ಎಲ್ಲರಿಂದಲೂ ತಿರಸ್ಕಾರಕ್ಕೆ ಒಳಗಾಗುತ್ತಿದ್ದಾಳೆ ದೀಪಾ. ಇವಳ ಮೇಲೆ ಸೀರಿಯಲ್ನಲ್ಲಿ ನಡೆಯುತ್ತಿರುವ ಟಾರ್ಚರ್ನಿಂದ ನೆಟ್ಟಿಗರು ಗರಂ ಆಗಿದ್ದೂ ಇದೆ. ಸೌಂದರ್ಯವೇ ಎಲ್ಲವೂ ಎಂದು ತೋರಿಸುತ್ತಿರುವ ಈ ಸೀರಿಯಲ್ ಬಹಿಷ್ಕಾರ ಹಾಕಬೇಕು ಎಂದು ಸೋಷಿಯಲ್ ಮೀಡಿಯಾದಲ್ಲಿ ಹೇಳಲಾಗಿತ್ತು. ಆದರೆ ಈಗ ಸಕತ್ ಎಂಜಾಯ್ ಮಾಡುತ್ತಿದ್ದಾರೆ ವೀಕ್ಷಕರು.
ಶೂಟಿಂಗ್ ಸೆಟ್‌ನಲ್ಲಿ ಶ್ರೇಷ್ಠಾಳನ್ನು ತಾಂಡವ್ ಎತ್ತಿಕೊಳ್ಳುವಾಗ ಏನಾಯ್ತು? ಮೇಕಿಂಗ್ ವಿಡಿಯೋ ವೈರಲ್
ಆದರೆ ಸೀರಿಯಲ್ನಲ್ಲಿ ಈ ರೀತಿ ಕಾಣುವ ದೀಪಾಳ ನಿಜವಾದ ಹೆಸರು ದಿಯಾ ಪಾಲಕ್ಕಲ್ (Diya Palakkal). ಈ ವಿಡಿಯೋದಲ್ಲಿ ಇರುವವರೂ ಅವರೇ. ನೋಡಲು ಸೀರಿಯಲ್ ದೀಪಾಳಂತೆ ಕಾಣದಿದ್ದರೂ ಒರಿಜಿನಲ್ ಆಗಿ ದಿಯಾ ಇರುವುದು ಇದೇ ರೀತಿ. ಶೂಟಿಂಗ್ ಸೆಟ್‌ನ ವಿಡಿಯೋ ಇದಾಗಿದೆ. ಸೀರಿಯಲ್, ಸಿನಿಮಾಗಳಲ್ಲಿ ನಟರನ್ನು ಸುಂದರವಾಗಿ ಕಾಣಿಸುವ ಸಲುವಾಗಿ ಕೆ.ಜಿಗಟ್ಟಲೆ ಮೇಕಪ್ ಮಾಡುವುದು ಇದೆ. ಆದರೆ ಈ ಸೀರಿಯಲ್ನಲ್ಲಿ, ದೀಪಾಳನ್ನು ಈ ಪರಿಯಲ್ಲಿ ಕಾಣುವಂತೆ ಮಾಡಲು ಕೂಡ ಮೇಕಪ್ ಮಾಡಲಾಗಿದೆ. ಅಸಲಿಗೆ ದೀಪಾ ಅಂದರೆ ದಿಯಾ ಸೀರಿಯಲ್ನಲ್ಲಿ ಕಾಣುವ ಹಾಗೆ ರಿಯಲ್ ಲೈಫ್ನಲ್ಲಿ ಇಲ್ಲ. ಆದರೆ ಈಕೆ ನಿಜಕ್ಕೂ ಹೀಗೆಯೇ ಇದ್ದಾಳಾ ಎನ್ನುವಷ್ಟರ ಮಟ್ಟಿಗೆ ಈಕೆಯನ್ನು ಧಾರಾವಾಹಿಯಲ್ಲಿ ತೋರಿಸಲಾಗಿದೆ. ಸೀರಿಯಲ್, ಸಿನಿಮಾಗಳಲ್ಲಿ ಹೀರೋಯಿನ್ ಆಗಲು ಯಾವ್ಯಾವ ರೀತಿಯ ಕ್ವಾಲಿಟಿಗಳು ಇರಬೇಕೋ, ಯಾವ ರೀತಿಯಲ್ಲಿ ಗ್ಲಾಮರಸ್ ಲುಕ್ ಇರಬೇಕೋ ಎಲ್ಲವೂ ರಿಯಲ್ ಲೈಫ್ನಲ್ಲಿ ದಿಯಾ ಅವರಿಗೆ ಇದೆ. ಮಾಡರ್ನ್ ಗರ್ಲ್ ಆಗಿ, ಹಳ್ಳಿಯ ಹುಡುಗಿಯಾಗಿ, ಗ್ಲಾಮರಸ್ ಲುಕ್ನಲ್ಲಿ ಕಾಣಿಸಿಕೊಂಡು ಫೋಟೋಶೂಟ್ ಕೂಡ ಮಾಡಿಸಿದ್ದಾರೆ ದಿಯಾ.
ಅಷ್ಟಕ್ಕೂ ದಿಯಾ, ಕನ್ನಡದ ಹುಡುಗಿ. ಆದರೂ ತಮಿಳು ಸೀರಿಯಲ್ನಲ್ಲಿಯೂ ಗುರುತಿಸಿಕೊಂಡಿದ್ದಾರೆ. ಮೊದಲಿಗೆ ಬಾಲನಟಿಯಾಗಿ ಕನ್ನಡದಲ್ಲಿ ಗುರುತಿಸಿಕೊಂಡವರು. ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ಕಿನ್ನರಿ (Kinnari) ಸೀರಿಯಲ್ನಲ್ಲಿ ಪುಟಾಣಿ ಐಶ್ವರ್ಯಾ ಪಾತ್ರದಲ್ಲಿ ಈಕೆ ನಟಿಸಿದ್ದರು. ಬಳಿಕ ಲಕ್ಷ್ಮೀ ಸ್ಟೋರ್ಸ್ ಎನ್ನುವ ಜನಪ್ರಿಯ ತಮಿಳು ಧಾರಾವಾಹಿಯಲ್ಲಿ ನಟಿ ಖುಷ್ಬು ಜೊತೆಗೂ ನಟಿಸಿದ್ದರು ಇವರು.ಕನ್ನಡದಲ್ಲಿ ಇದೇ ಮೊದಲ ಬಾರಿಗೆ ಬ್ರಹ್ಮಗಂಟುವಿನಲ್ಲಿ ನಾಯಕಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಅವರ ಗೆಟಪ್ಪೇ ಬದಲಾಗಿದೆ. ಅಂದಹಾಗೆ ದಿಯಾ ಅವರು ಸಿನಿಮಾದಲ್ಲಿಯೂ ಗುರುತಿಸಿಕೊಂಡಿದ್ದಾರೆ. 2018ರಲ್ಲಿ ಬಿಡುಗಡೆಯಾದ ಅಮ್ಮಚ್ಚಿಯೆಂಬ ನೆನಪು (Ammacchi emba nenapu) ಸಿನಿಮಾದಲ್ಲಿ ದಿಯಾ ಎನ್ನುವ ಪುಟ್ಟ ಹುಡುಗಿಯ ಪಾತ್ರ ನಿರ್ವಹಿಸಿದ್ದರು. ಈ ಸಿನಿಮಾದಲ್ಲಿ ರಾಜ್ ಬಿಶೆಟ್ಟಿ, ವೈಜಯಂತಿ ಅಡಿಗ ನಟಿಸಿದ್ದರು.
10 ಬಾರಿ ಮದ್ವೆಯಾಗಿ ಸದ್ದು ಮಾಡಿದ್ದ 'ಮದುವೆ ಮನೆ' ನಟಿ ಶ್ರದ್ಧಾ ಈಗ ಅವಳಿ ಮಕ್ಕಳ ತಾಯಿ