70 ಪರ್ಸೆಂಟ್ ಯಶಸ್ವಿನಿ, 30% ಗಗನಾಳನ್ನು ಲವ್ ಮಾಡ್ತೀನಿ ಎಂದ ಗಿಲ್ಲಿ ನಟ: ಆದರೆ ರಕ್ಷಿತಾ ಹೇಳಿದ್ದೇ ಬೇರೆ!

ಜೀ ಕನ್ನಡ ವಾಹಿನಿಯ ಜನಪ್ರಿಯ ರಿಯಾಲಿಟಿ ಶೋ ಡ್ಯಾನ್ಸ್‌ ಕರ್ನಾಟಕ ಡ್ಯಾನ್ಸ್‌ ವೇದಿಕೆಯಲ್ಲಿ ಗಿಲ್ಲಿ ನಟ ಬಂದರೆ ಸಾಕು ಒಂದು ರೀತಿಯ ಎನರ್ಜಿ ಬಂದಂತೆ ಎಂದು ಎಲ್ಲರೂ ಹೇಳುತ್ತಾರೆ. ವಿಶೇಷವಾಗಿ ಗಿಲ್ಲಿ ನಟನಿಗೆ ಅಭಿಮಾನಿಗಳ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ. 

Dance Karnataka Dance Gilli Nata Says 70 Percent Yashaswini and 30 Percent Love Gagana gvd

ಜೀ ಕನ್ನಡ ವಾಹಿನಿಯ ಜನಪ್ರಿಯ ರಿಯಾಲಿಟಿ ಶೋ ಡ್ಯಾನ್ಸ್‌ ಕರ್ನಾಟಕ ಡ್ಯಾನ್ಸ್‌ ವೇದಿಕೆಯಲ್ಲಿ ಗಿಲ್ಲಿ ನಟ ಬಂದರೆ ಸಾಕು ಒಂದು ರೀತಿಯ ಎನರ್ಜಿ ಬಂದಂತೆ ಎಂದು ಎಲ್ಲರೂ ಹೇಳುತ್ತಾರೆ. ವಿಶೇಷವಾಗಿ ಗಿಲ್ಲಿ ನಟನಿಗೆ ಅಭಿಮಾನಿಗಳ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ. ಹೌದು! ಗಿಲ್ಲಿ ನಟ ಯಾವಾಗ ವೇದಿಕೆ ಮೇಲೆ ಬಂದರೂ ಅಂದು ನಗುವಿನ ಔತಣ ಇದೆ ಎಂದೇ ಅರ್ಥ. ಮಹಾನಟಿ ಕಾರ್ಯಕ್ರಮದಲ್ಲಿ 3ನೇ ಸ್ಥಾನ ಗಿಟ್ಟಿಸಿಕೊಂಡು ಕಿರುತೆರೆ ವೀಕ್ಷಕರ ಮನಸ್ಸಿಗೆ ಹತ್ತಿರವಾದ ಸುಂದರಿ ಗಗನಾ ಹಾಗೂ ಡ್ಯಾನ್ಸ್‌ ಕರ್ನಾಟಕ ಡ್ಯಾನ್ಸ್‌ ಸ್ಫರ್ಧಿ ಯಶಸ್ವಿನಿ ಅವರನ್ನು ಯಾವಾಗಲೂ ತಾನು ಪ್ರೀತಿಸುತ್ತೇನೆ ಎಂದು ವೇದಿಕೆಯಲ್ಲಿ ತಮಾಷೆಯಾಗಿ ಪೀಡಿಸುವ ರೀತಿಯಲ್ಲಿ ಏನಾದರೂ ಒಂದು ಹೊಸ ಕಾಮಿಡಿಯನ್ನು ಗಿಲ್ಲಿ ನಟ ಮಾಡುತ್ತಾರೆ. 

ಇದೀಗ ಅಂತದ್ದೇ ತಮಾಷೆಯೊಂದು ಡ್ಯಾನ್ಸ್‌ ಕರ್ನಾಟಕ ಡ್ಯಾನ್ಸ್‌ ವೇದಿಕೆಯಲ್ಲಿ ನಡೆದಿದೆ. ಯಶಸ್ವಿನಿ-ಚೆರ್ರಿ ಜೋಡಿ ಶಿವರಾಜ್ ಕುಮಾರ್ ಅಭಿನಯದ ಕಡ್ಡಿಪುಡಿ ಚಿತ್ರದ ಸೌಂದರ್ಯ ಸಮರ ಹಾಡಿಗೆ ಡ್ಯಾನ್ಸ್ ಮಾಡುತ್ತಾರೆ. ಅನಂತರ ಮಾತನಾಡಿದ ಗಿಲ್ಲಿ ನಟ 100ರಲ್ಲಿ 70 ಪರ್ಸೆಂಟ್ ಯಶಸ್ವಿನಿ, 30 ಪರ್ಸೆಂಟ್ ಗಗನಾರನ್ನು ಲವ್ ಮಾಡ್ತಿರೋದು ಎಂದಾಗ ಡಿಕೆಡಿ ವೇದಿಕೆಯ ಪರದೆಯಲ್ಲಿ ಯಶಸ್ವಿನಿ ಹಾಗೂ ಗಿಲ್ಲಿ ನಟ ಜೊತೆಗಿರುವ ಫೋಟೋಗಳು ಬರುತ್ತದೆ. ಅದನ್ನು ನೋಡಿದ ಗಿಲ್ಲಿ ನಟ ಪ್ರೀ ವೆಡ್ಡಿಂಗ್ ಫೋಟೋಶೂಟ್ ಬೇರೆ ಆಗ್ಬಿಟ್ಟಿದೆ ಅಂತಾರೆ. ಆಗ ರಕ್ಷಿತಾ ಮಾತನಾಡಿ ನೀನು 70... 30 ಪರ್ಸೆಂಟ್ ಲವ್ ಅಂತಿಯಾ. 

ಆದರೆ ಅವರಿಬ್ಬರು ಎರಡೆರೆಡು ಪರ್ಸೆಂಟ್ ಲವ್ ಆದ್ರೂ ಮಾಡ್ತಿಲ್ವಲ್ಲೋ ಎನ್ನುತ್ತಾರೆ. ಆ ಸಮಯದಲ್ಲಿ ಗಿಲ್ಲಿ ನಟ, ಯಶಸ್ವಿನಿ ಬಳಿ ನೀವಿಬ್ಬರು 'ಗಿಲ್ಲಿ ನಟ ಲವರ್ಸ್ ಫ್ಯಾನ್ಸ್ ಪೇಜ್' ಅಂತ ಗ್ರೂಪ್ ಮಾಡ್ಕೊಳ್ಳಿ ಅಂದಾಗ, ಅನುಶ್ರೀ ಆ ಗ್ರೂಪ್‌ನಲ್ಲಿ ಭಾವನರನ್ನು ಆಡ್ ಮಾಡ್ಕೋಳೊ ಅಂತಾರೆ. ಆ ಗ್ರೂಪ್‌ಗೆ ಭಾವನನೇ ಆಡ್ಮಿನ್ ಎಂದು ಗಿಲ್ಲಿ ನಟ ಹೇಳಿದಾಗ ಕಾರ್ಯಕ್ರಮದಲ್ಲಿದ್ದವರೆಲ್ಲಾ ಹೊಟ್ಟೆ ಹುಣ್ಣಾಗುವಷ್ಟು ನಕ್ಕಿದ್ದಾರೆ. ಸದ್ಯ ಈ ತಮಾಷೆಯ ಪ್ರೋಮೋವನ್ನು ಜೀ ಕನ್ನಡ ವಾಹಿನಿ 'ಸೌಂದರ್ಯ ಸಮರ ಸಾರಿದ ಯಶಸ್ವಿನಿ-ಚೆರ್ರಿ; ಗಿಲ್ಲಿನಟ ಮಾಡಿದ ಕಾಮಿಡಿ ಯರ್ರಾಬಿರ್ರಿ' ಎಂದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದೆ. ಇನ್ನು ಈ ಕಾರ್ಯಕ್ರಮ ಇಂದು ರಾತ್ರಿ 7:30ಕ್ಕೆ ಪ್ರಸಾರವಾಗಲಿದೆ.

ಹೊಟ್ಟೆಲಿರೋದು ನಂದೆ ಮಗು ಅಂತ ಕೈ ಎತ್ತಿದ ತ್ರಿವಿಕ್ರಮ್: ಪಕ್ಕದಲ್ಲಿ ಇರೋ ಆ ಕೈ ಯಾಕೆ ಬಿಡ್ತಿಲ್ಲ ಎಂದ ಕಿಚ್ಚ ಸುದೀಪ್

ಇನ್ನು ಗಿಲ್ಲಿ ನಟ ಮೂಲತಃ ಮಂಡ್ಯ ಜಿಲ್ಲೆಯವರು. ಯೂಟ್ಯೂಬ್‌ನಲ್ಲಿ 'ನಲ್ಲಿ ಮೂಳೆ' ಕಂಟೆಂಟ್‌ಯಿಂದ ಫೇಮಸ್‌ ಆದವರು. ಓದು ಮುಗಿಸಿ ನಾನು ಕನ್ನಡ ಚಿತ್ರರಂಗದಲ್ಲಿ ದೊಡ್ಡ ನಿರ್ದೇಶಕ ಆಗಬೇಕು ಎಂದು ಬೆಂಗಳೂರಿಗೆ ಬಂದೆ. ಆದರೆ, ಸ್ನೇಹಿತರ ಸಹಾಯದಿಂದ ಡೈರೆಕ್ಟರ್ ಡಿಪಾರ್ಟ್‌ಮೆಂಟ್‌ನಲ್ಲಿ ಕೆಲಸ ಮಾಡಿದರೂ ಹಣವೂ ಸಿಗಲಿಲ್ಲ, ಡೈರೆಕ್ಷನ್ನೂ ಮಾಡಕ್ಕಾಗಲಿಲ್ಲ. ಇದನ್ನು ಬಿಟ್ಟು ಸೆಟ್ ಡಿಪಾರ್ಟ್‌ಮೆಂಟ್‌ಗೆ ಸೇರಿಕೊಂಡು ದುಡಿಮೆ ಆರಂಭಿಸಿದೆ. ಆಗ ಸಿನಿಮಾ ಹಾಗೂ ಕಾಮಿಡಿ ಸ್ಕಿಟ್ ಬರೆಯುತ್ತಾ ತಾನೂ ಹಾಸ್ಯನಟನಾಗಿ ನಟನೆ ಆರಂಭಿಸಿದೆ. ಜೊತೆಗೆ, ಒಂದೆರೆಡು ಶಾರ್ಟ್‌ ಮೂವಿಗಳನ್ನು ಮಾಡಿ ಸಾಮಾಜಿಕ ಜಾಲತಾಣದಲ್ಲಿ ಭಾರಿ ಪ್ರಸಿದ್ಧಿಯನ್ನೂ ಪಡೆದುಕೊಂಡೆ. ಇದರ ಬೆನ್ನಲ್ಲಿಯೇ ಕಾಮಿಡಿ ಕಿಲಾಡಿಗಳು ವೇದಿಕೆಯಲ್ಲಿ ಕಾಣಿಸಿಕೊಂಡಿ ಸೀಸನ್ 4ರಲ್ಲಿ ರನ್ನರ್ ಅಪ್ ಸ್ಥಾನವನ್ನೂ ಗೆದ್ದೆನು ಎಂದು ಈ ಹಿಂದೆ ಗಿಲ್ಲಿ ನಟ ಹೇಳಿಕೊಂಡಿದ್ದರು.
 

 
 
 
 
 
 
 
 
 
 
 
 
 
 
 

A post shared by Zee Kannada (@zeekannada)

Latest Videos
Follow Us:
Download App:
  • android
  • ios