ಸೆ.30ಕ್ಕೆ ಆರಂಭವಾಗಲಿದ್ಯಂತೆ ಕನ್ನಡ ಬಿಗ್‌ಬಾಸ್, ಸಂಭಾವ್ಯ ಸ್ಪರ್ಧಿಗಳ ಪಟ್ಟಿ ವೈರಲ್
ಕನ್ನಡ ಬಿಗ್‌ಬಾಸ್ ಸೀಸನ್ 10 ಕ್ಕೆ ಕ್ಷಣಗಣನೆ ಆರಂಭವಾಗಿದೆ. ಇದಕ್ಕಾಗಿ ಭರ್ಜರಿ ತಯಾರಿ ನಡೆಯುತ್ತಿದೆ. ಸೆ.30ಕ್ಕೆ ಓಟಿಟಿ ಸೀಸನ್-2 ಆರಂಭವಾಗಲಿದೆಯಂತೆ, ಸಂಭಾವ್ಯ ಸ್ಪರ್ಧಿಗಳ ಪಟ್ಟಿ ವೈರಲ್ ಆಗಿದೆ.

ಬೆಂಗಳೂರು (ಆ.15): ಕನ್ನಡ ಬಿಗ್‌ಬಾಸ್ ಸೀಸನ್ 10 ಕ್ಕೆ ಕ್ಷಣಗಣನೆ ಆರಂಭವಾಗಿದೆ. ಇದಕ್ಕಾಗಿ ಭರ್ಜರಿ ತಯಾರಿ ನಡೆಯುತ್ತಿದೆ. ಕನ್ನಡಿಗರು ಕೂಡ ಶೋ ಆರಂಭವಾಗುವುದನ್ನೇ ಎದುರು ನೋಡುತ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಪೋಸ್ಟ್ಗಳು ವೈರಲ್ ಆಗುತ್ತಿದೆ. ಈ ಬಾರಿ ಕೂಡ ಮೊದಲು ಓಟಿಟಿ ಸೀಸನ್ ಬಳಿಕವೇ 10 ನೇ ಸೀಸನ್ ಆರಂಭಿಸಲಾಗುತ್ತದೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಗುಲ್ಲೆದ್ದಿದೆ. ಆ ಪ್ರಕಾರ ಸೆ.30ಕ್ಕೆ ಓಟಿಟಿ ಸೀಸನ್-2 ಆರಂಭವಾಗಲಿದೆ ಎಂದು ಹೇಳಲಾಗುತ್ತಿದೆ.
ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ನಡೆಸಿ ಕೊಡುತ್ತಿರುವ ಜನಪ್ರಿಯ ರಿಯಾಲಿಟಿ ಶೋ ಬಿಗ್‌ಬಾಸ್ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತದೆ. 'ಬಿಗ್ ಬಾಸ್' ಶೋ ಆಯೋಜಕರು ಕಳೆದ ಸೀಸನ್ ನಿಂದ 'ಬಿಗ್ ಬಾಸ್ ಓಟಿಟಿ" ಶೋವನ್ನೂ ಆರಂಭಿಸಿದ್ದರು. ಬಳಿಕ ಸೀಸನ್ 9 ಆರಂಭವಾಗಿತ್ತು. ಹೀಗಾಗಿ ಈ ಬಾರಿ ಕೂಡ ಓಟಿಟಿ ಸೀಸನ್ 2 ನಡೆದ ಬಳಿಕವೇ ಬಿಗ್‌ಬಾಸ್ ಸೀಸನ್ 10 (bigg boss kannada season 10) ನಡೆಯಲಿದೆ.
ಲಕ್ಷ್ಮಿ ಬಾರಮ್ಮ ಸೀರಿಯಲ್ ನಾಯಕಿಗೆ ಹುಟ್ಟುಹಬ್ಬದ ಸಂಭ್ರಮ, ಫ್ಯಾನ್ಸ್ ಪ್ರೀತಿಯ ವಿಶ್
ಕಲರ್ಸ್ ಕನ್ನಡದಲ್ಲಿ ಸದ್ಯ ಅನುಬಂಧ ಅವಾರ್ಡ್ ಗೆ ತಯಾರಿ ನಡೆಯುತ್ತಿದೆ. ಸೆಪ್ಟೆಂಬರ್ ಮೊದಲ ವಾರ ಅನುಬಂಧ ಅವಾರ್ಡ್ ಶೂಟಿಂಗ್ ನಡೆಯಲಿದ್ದು, ಸೆಪ್ಟೆಂಬರ್ ಮೂರನೇ ವಾರದಲ್ಲಿ ಶೋ ಟೆಲಿಕಾಸ್ಟ್ ಮಾಡಲು ಕಲರ್ಸ್ ಕನ್ನಡ ಯೋಚಿಸಿದೆ. ಇದಾದ ಬಳಿಕ ಬಿಗ್ ಬಾಸ್ ಸೆಪ್ಟೆಂಬರ್ ಅಂತ್ಯಕ್ಕೆ ಆರಂಭವಾಗಲಿದೆ ಎನ್ನಲಾಗಿದೆ.
ಬಿಗ್‌ಬಾಸ್ ಓಟಿಟಿ ಎರಡನೇ ಸೀಸನ್‌ಗೆ ತಯಾರಿ ನಡೆಸುತ್ತಿರುವ ವಾಹಿನಿ ಮತ್ತು ಶೋ ತಂಡ ಸದ್ಯ ಸ್ಪರ್ಧಿಗಳ ಹುಡುಕಾಟ ನಡೆಸುತ್ತಿದೆಯಂತೆ. ಅದರ ಜೊತೆಗೆ ಬಿಗ್‌ಬಾಸ್ ಸೀಸನ್ 10 ಕ್ಕೂ ಸ್ಪರ್ಧಿಗಳ ಹುಡುಕಾಟ ನಡೆಸುತ್ತಿದೆ ಎಂದು ಹೇಳಲಾಗಿದೆ. ಈ ಬಗ್ಗೆ ಶೋ ಫ್ಯಾನ್ಸ್ ಅಪ್ಡೇಟ್ ಹಾಕಿಕೊಂಡಿದ್ದಾರೆ.
ಎಂದಿನಂತೆ ಬಿಡದಿ ಬಳಿ ಇರುವ ಇನ್ನೋವೇಟಿವ್ ಫಿಲಂ ಸಿಟಿಯಲ್ಲಿ (Innovative Film City) ಶೋಗೆ ದೊಡ್ಡ ಸೆಟ್ ಹಾಕಲಾಗಿದೆ. ಇನ್ನು ಈ ಬಾರಿ ಕಿರುತೆರೆ ನಟಿ ನಮ್ರತಾ ಗೌಡ, ಹುಚ್ಚ ಸಿನೆಮಾದ ನಟಿ ರೇಖಾ, ನಟಿ ಆಶಾ ಭಟ್, ರೀಲ್ಸ್ ನಲ್ಲಿ ಫೇಮಸ್ ಆಗಿರುವ ಭೂಮಿಕಾ ಬಸವರಾಜ್ ಅವರು ಸ್ಪರ್ಧಿಗಳಾಗಲಿದ್ದಾರೆ ಎಂದು ಸುದ್ದಿ ಹಬ್ಬಿದೆ. ಏನೇ ಆದರೂ ಆಡಿಶನ್ ನಡೆದು ಶೋ ಆರಂಭವಾದ ಬಳಿಕ ದೊಡ್ಮನೆಗೆ ಯಾರೆಲ್ಲ ಎಂಟ್ರಿ ಕೊಡುತ್ತಾರೆ ಎಂಬ ಬಗ್ಗೆ ಸ್ಪಷ್ಟ ಚಿತ್ರಣ ಸಿಗಲಿದೆ.
ಮಲ್ಕೊಂಡಿದ್ರು ಲಿಪ್‌ಸ್ಟಿಕ್ ಬೇಕು, ಮಾತಾಡೋಕೆ ಹುಡುಗನೂ ಇಲ್ಲ: ವಿಚಿತ್ರ ಫ್ಯಾಕ್ಟ್ ಬಿಚ್ಚಿಟ್ಟ ನಮ್ರತಾ
ಹಿಂದಿ ಓಟಿಟಿ ಸೀಸನ್ 2 ಗೆದ್ದ ಎಲ್ವಿಶ್
ನಿನ್ನೆಯಷ್ಟೇ ಸಲ್ಮಾನ್ ಖಾನ್ ನಡೆಸಿಕೊಡುವ ಹಿಂದಿ ಬಿಗ್‌ಬಾಸ್ ಓಟಿಟಿ ಸೀಸನ್ 2 ಮುಗಿದಿದ್ದು, ಎಲ್ವಿಶ್ ಯಾದವ್ ಅವರು ಗೆದ್ದು ಬಿಗ್ ಬಾಸ್ ಟ್ರೋಫಿಯೊಂದಿಗೆ ಗೆಲುವಿನ ನಗೆ ಬೀರಿದ್ದಾರೆ. ಆ.14ರಂದು ನಡೆದ ಬಿಗ್ ಬಾಸ್ ಓಟಿಟಿ ಸೀಸನ್ 2ರ ಫಿನಾಲೆಗೆ ಒಟ್ಟು ಐದು ಮಂದಿ ಆಯ್ಕೆಯಾಗಿದ್ದರು. ಎಲ್ವಿಶ್ ಯಾದವ್, ಅಭಿಷೇಕ್ ಮಲ್ಹಾನ್, ಬೇಬಿಕಾ ಧುರ್ವೆ, ಮನಿಷಾ ರಾಣಿ, ಪೂಜಾ ಭಟ್ ಇದ್ದರು. ಇವರಲ್ಲಿ ಎಲ್ವಿಶ್ ಯಾದವ್‌ಗೆ ಗೆಲುವಿನ ಪಟ್ಟ ದಕ್ಕಿದೆ. ಅಭಿಷೇಕ್ ಮಲ್ಹಾನ್ ಅವರು ಮೊದಲ ರನ್ನರ್ ಅಪ್ ಆಗಿದ್ದಾರೆ. ಎಲ್ವಿಶ್ ಯಾದವ್‌ಗೆ 25 ಲಕ್ಷ ರೂಪಾಯಿ ನಗದು ಬಹುಮಾನ ಮತ್ತು ಒಂದು ಆಕರ್ಷಕ ಟ್ರೋಫಿ ಸಿಕ್ಕಿದೆ.