ಬಿಗ್‌ಬಾಸ್ ನಾಮಿನೇಷನ್ಗೆ ಲೂಡೋ ಗೇಮ್: ಹೊರಗೆ ಹೋಗ್ತಿರೋ ಲಿಸ್ಟ್ನಲ್ಲಿದ್ದಾರೆ ಈ ಸ್ಪರ್ಧಿಗಳು!
ಈ ವಾರ ಬಿಗ್‌ಬಾಸ್10ರ ಮನೆಯಿಂದ ಹೊರಗೆ ಹೋಗಲು ಎಲಿಮಿನೇಟ್ ಆಗಿರುವ ಸ್ಪರ್ಧಿಗಳು ಇವರೇ ನೋಡಿ...

ಬಿಗ್‌ಬಾಸ್ ಶುರುವಾಗಿ ಒಂದೂವರೆ ತಿಂಗಳಾಗಿದೆ. ಇದೀಗ ಕುತೂಹಲದ ಘಟಕ್ಕೆ ಬಿಗ್‌ಬಾಸ್ ಕಾಲಿಟ್ಟಿದೆ. ಮನೆಯಲ್ಲಿ ಗ್ರೂಪಿಸಂ ಹೆಚ್ಚಾಗುತ್ತದೆ ಎನ್ನುವ ಮಾತು ಬಲವಾಗಿ ಕೇಳಿಬರುತ್ತಿದೆ. ಇದೇ ವೇಳೆ ದೊಡ್ಮನೆಯಿಂದ ಹೊರಕ್ಕೆ ಹೋಗುವವರ ಪಟ್ಟಿಯ ಬಗ್ಗೆ ಸಕತ್ ಚರ್ಚೆಯಾಗುತ್ತಿದೆ. ಒಂದೆಡೆ ವರ್ತೂರು ಸಂತೋಷ್ ಹುಲಿಯುಗುರು ಕೇಸ್ನಲ್ಲಿ ಜಾಮೀನು ಪಡೆದು ಬಿಗ್‌ಬಾಸ್ ಮನೆಯೊಳಕ್ಕೆ ಕಾಲಿಟ್ಟಿದ್ದರೆ, ಇನ್ನೋರ್ವ ಸ್ಪರ್ಧಿ ತನಿಷಾ ವಿರುದ್ಧ ಈಗ ಎಫ್ಐಆರ್ ದಾಖಲಾಗಿದೆ. ತನಿಷಾ ನೀಡಿದ ಹೇಳಿಕೆಯೊಂದರಿಂದ ಅಟ್ರಾಸಿಟಿ ಕೇಸ್ ದಾಖಲಾಗಿದೆ. ಅತಿ ಹೆಚ್ಚು ಅಂಕ ಪಡೆದಿದ್ದರೂ ತಾವು ಮನೆಯಿಂದ ಹೊರಕ್ಕೆ ಹೋಗುವುದಾಗಿ ಹೇಳಿ ವರ್ತೂರು ಸಂತೋಷ್ ಇದಾಗಲೇ ಹೈಡ್ರಾಮಾ ಮಾಡಿರುವ ಘಟನೆಯೂ ನಡೆದಿದೆ. ಇವೆಲ್ಲವುಗಳ ಮಧ್ಯೆ ಈ ವಾರ ನಾಮಿನೇಟ್ ಆಗುವವರು ಯಾರು? ಅವರಲ್ಲಿ ನಿಜವಾಗಿಯೂ ಹೊರಕ್ಕೆ ಹೋಗುವವರು ಯಾರು ಎಂಬ ಬಗ್ಗೆ ಸಕತ್ ಚರ್ಚೆಯಾಗುತ್ತಿದೆ.
ಈ ವಾರ ನಾಮಿನೇಷನ್ಗೆ ಕುತೂಹಲ ಎನ್ನುವ ಗೇಮ್ ಷೋ ಆಯೋಜಿಸಲಾಗಿತ್ತು. ಅದೇ ಲೂಡೋ ಆಟ ನಡೆಸಲಾಗಿತ್ತು. ಈ ಲೂಡೋ ಆಟದಲ್ಲಿ ಕೆಲವು ಸ್ಪರ್ಧಿಗಳು ಸೋತು ನಾಮಿನೇಟ್ ಲಿಸ್ಟ್‌ಗೆ ಸೇರಿದ್ದಾರೆ. ಈ ಪೈಕಿ ಎಂಟು ಆಟಗಾರರ ಮೇಲೆ ನಾಮಿನೇಷನ್ನ ತೂಗುಗತ್ತಿ ತೇಲಾಡುತ್ತಾ ಇದೆ. ವರ್ತೂರು ಸಂತೋಷ್, ಡ್ರೋನ್ ಪ್ರತಾಪ್, ತುಕಾಲಿ ಸಂತು ಹಾಗೂ ನೀತು ಕೂಡ ಗ್ರೂಪ್ ಮಾಡಿಕೊಂಡಿದ್ದು ಗ್ರೂಪಿಸಂ ಶುರುವಾಗಿದೆ ಎನ್ನುವ ಗಂಭೀರ ಆರೋಪದ ಮಧ್ಯೆಯೇ, ಲೂಡೋ ಆಟ ಇಂಟೆರೆಸ್ಟಿಂಗ್ ಘಟ್ಟ ತಲುಪಿತ್ತು. ಆದ್ದರಿಂದ ಮತ ಚಲಾಯಿಸುವ ಮೂಲಕ ನಾಮಿನೇಷನ್ ಮಾಡಿದರೆ ಚೆನ್ನಾಗಿ ಇರುವುದಿಲ್ಲ ಲೂಡೋ ಗೇಮ್ ಆಯೋಜಿಸಲಾಗಿತ್ತು.
ಏನ್ ನಾಟ್ಕ ಗುರೂ... ಸುದೀಪ್ಗಿಂತ್ಲೂ ಬೆಸ್ಟ್ ಆ್ಯಕ್ಟ್ ಮಾಡ್ತಿರಾ ಬಿಡಿ... ವರ್ತೂರ್ ಸಂತೋಷ್ ಸಕತ್ ಟ್ರೋಲ್!
ಬಿಗ್‌ಬಾಸ್ ಮನೆಯಿಂದ ಹೊರಕ್ಕೆ ಹೋಗಲು ಎಂಟು ಜನರು ನಾಮನಿರ್ದೇಶನಗೊಂಡಿದ್ದು, ಅವರ ತಲೆಯ ಮೇಲೆ ಆತಂಕದ ತೂಗುಕತ್ತಿ ನೇತಾಡುತ್ತಿದೆ. ಲೂಡೋ ಗೇಮ್ ಅನುಸಾರ, ಈ ವಾರ ‘ಬಿಗ್ ಬಾಸ್’ ಮನೆಯಿಂದ ಹೊರಗೆ ಹೋಗಲು 8 ಮಂದಿ ನಾಮಿನೇಟ್ ಆಗಿದ್ದಾರೆ. ಟಾಸ್ಕ್‌ನಿಂದಾಗಿ ವಿನಯ್ ಗೌಡ, ಇಶಾನಿ, ನಮ್ರತಾ ಗೌಡ, ತನಿಷಾ ಕುಪ್ಪಂಡ, ತುಕಾಲಿ ಸಂತು, ಕಾರ್ತಿಕ್ ಮಹೇಶ್ ಹಾಗೂ ನೀತು ನಾಮಿನೇಟ್ ಆದರು. ಕ್ಯಾಪ್ಟನ್ ಮೈಕಲ್ ಅವರ ನೇರ ನಾಮಿನೇಷನ್‌ನಿಂದಾಗಿ ಭಾಗ್ಯಶ್ರೀ ಈ ವಾರ ಡೇಂಜರ್ ಝೋನ್‌ಗೆ ಬಂದಿದ್ದಾರೆ. ಬಿಗ್‌ಬಾಸ್ ಮನೆಯ ಕ್ಯಾಪ್ಟನ್ ಆಗಿರುವ ಮೈಕಲ್ ಅವರಿಗೆ ನೇರವಾಗಿ ಸ್ಪರ್ಧಿಯೊಬ್ಬರನ್ನು ನಾಮಿನೇಟ್ ಮಾಡುವ ಅವಕಾಶ ನೀಡಲಾಗಿತ್ತು. ಅವರು ಭಾಗ್ಯಶ್ರೀಯನ್ನು ಸೂಚಿಸಿದ್ದಾರೆ.
ಮೊದಲಿನಂದಲೂ ಭಾಗ್ಯಶ್ರೀ ಅವರನ್ನ ವಿನಯ್ ಗೌಡ ಗ್ರೂಪ್ ಟಾರ್ಗೆಟ್ ಮಾಡುತ್ತಿದೆ. ಭಾಗ್ಯಶ್ರೀ ನಾಮಿನೇಟ್ ಆಗದಿದ್ದಾಗ, ಸ್ನೇಹಿತ್ ಅವರನ್ನ ಭಾಗ್ಯಶ್ರೀ ನಾಮಿನೇಟ್ ಮಾಡಿದಾಗ ವಿನಯ್ ಗೌಡ ಓಪನ್ ಆಗಿಯೇ ಅಸಮಾಧಾನವನ್ನ ಹೊರಹಾಕಿದ್ದರು.