Asianet Suvarna News Asianet Suvarna News

ಪಾಪ-ಮಮ್ಮ ಅನ್ಕೊಂಡು ಬಿಗ್ ಬಾಸ್‌ ಮನೆಯಿಂದ ಹೊರ ನಡೆದ ಅಮೂಲ್ಯ ಗೌಡ

ಫಿನಾಲೆ ವಾರದ ಬಾಗಿಲು ತಟ್ಟಿ ಹೊರ ಬಂದ ಅಮೂಲ್ಯ ಗೌಡ. ಪ್ರತಿ ವಾರವೂ ಎಲಿಮಿನೇಟ್ ಆಗಲು ರೆಡಿಯಾಗಿದ್ದರಂತೆ...

Amulya gowda eliminated from bigg boss 9 colors kannada vcs
Author
First Published Dec 25, 2022, 9:36 AM IST

ಕಮಲಿ ಧಾರಾವಾಹಿ ಮೂಲಕ ಕನ್ನಡ ಕಿರುತೆರೆ ಕಾಲಿಟ್ಟ ಮಾಡಲ್ ಅಮೂಲ್ಯ ಗೌಡ ಈಗ ಕಲರ್ಸ್‌ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಸೀಸನ್ 9 ಬಿಗ್ ಬಾಸ್‌ ಕನ್ನಡದಲ್ಲಿ ಸ್ಪರ್ಧಿಸಿದ್ದರು. ಆರಂಭದಿಂದಲ್ಲೂ ಟಫ್‌ ಫೈಟ್‌  ಕೊಟ್ಟು ಗೆದ್ದು ಬಂದಿರುವ ಅಮೂಲ್ಯ ಎಲಿಮಿನೇಟ್ ಆಗಿದ್ದಾರೆ. ಫಿನಾಲೆ ದಿನಕ್ಕೆ ಕೇವಲ ಒಂದು ವಾರವಿತ್ತು ಫುಲ್ ಮಜಾ ಮಾಡಬೇಕು ಅಂದುಕೊಳ್ಳುವಷ್ಟರಲ್ಲಿ ಅಮೂಲ್ಯ ಹೊರ ಬಂದಿದ್ದಾರೆ. ಎಲ್ಲಿ ತಪ್ಪು ಮಾಡಿದ್ದರು? 

ಆರಂಭದಲ್ಲಿ ಮನೆ ಮಂದಿಗೆ ಹೊಂದಿಕೊಳ್ಳಲು ಸಮಯ ತೆಗೆದುಕೊಂಡ ಅಮೂಲ್ಯ ಅನುಪಮಾ ಗೌಡ, ದಿವ್ಯಾ ಉರುಡುಗ ಮತ್ತು ರಾಕೇಶ್ ಅಡಿಗ ಜೊತೆ ಗುಂಪು ಕಟ್ಟಿಕೊಳ್ಳುತ್ತಾರೆ. ಕಡಿಮೆ ಅವಧಿಯಲ್ಲಿ ಸ್ನೇಹಿತರಾಗಿ ಸಖತ್ ಎಂಜಾಯ್ ಮಾಡುತ್ತಾರೆ. ಅದರಲ್ಲೂ ರಾಕೇಶ್ ಮತ್ತು ಅಮೂಲ್ಯ ಕಾಂಬಿನೇಷನ್‌ ಸೂಪರ್ ಡೂಪರ್ ಆಗಿತ್ತು. ಚೆನ್ನಾಗಿ ಆಟವಾಡುತ್ತಿದ್ದ ಅಮೂಲ್ಯ 13ನೇ ವಾರ ಸ್ಲೋ ಆಗಿದಕ್ಕೆ ಹೊರ ಬಂದ್ರಾ? ಎಂದು ಸುದೀಪ್ ಪ್ರಶ್ನೆ ಮಾಡುತ್ತಾರೆ. 'ಇಲ್ಲ ಸರ್ ಪ್ರತಿ ಸಲ ಗೇಮ್ ಆರಂಭಿಸಿದ್ದಾಗ ನನ್ನ 100% ಶ್ರಮ ಹಾಕಬೇಕು ಎಂದು ಹೇಳಿಕೊಂಡು ಮಾಡುವುದು. ಈ ವಾರ ಯಾಕೆ ಹೊರ ಬಂದಿರುವ ಗೊತ್ತಿಲ್ಲ ಇರೋಷ್ಟು ದಿನ ಬಿಗ್ ಬಾಸ್ ಮನೆಯಲ್ಲಿ ಇರಬೇಕು ಎಂದುಕೊಂಡು ಹೋದವಳು ನಾನು, ವಾರ ವಾರ ನಾಮಿನೇಟ್ ಆದಾಗ ಹೊರ ನಡೆಯುವುದು ನಾನೇ ಅನ್ನೋ ಮೈಂಡ್‌ನಲ್ಲಿ ಫಿಕ್ಸ್‌ ಆಗಿರುತ್ತಿದ್ದೆ ಆದರೆ ಇಷ್ಟು ದೂರ ಬಂದಿರುವುದಕ್ಕೆ ಖುಷಿ ಇದೆ' ಎಂದು ಅಮೂಲ್ಯ ಮಾತನಾಡಿದ್ದಾರೆ.

Amulya gowda eliminated from bigg boss 9 colors kannada vcs

ಪ್ರತಿ ವಾರವೂ ಭಾನುವಾರ ಎಲಿಮಿನೇಷನ್‌ ಆಗುತ್ತಿತ್ತು ಆದರೆ ಈ ವಾರ ಶನಿವಾರವೇ ಎಲಿಮಿನೇಷನ್‌ ಆಗಿರುವ ಕಾರಣ ಭಾನುವಾರವೂ ಎಲಿಮಿನೇಷನ್‌ ಇರಲಿದೆ ಎಂದು ನೆಟ್ಟಿಗರು ಗೆಸ್ ಮಾಡುತ್ತಿದ್ದಾರೆ. ಅಲ್ಲದೆ ಭಾನುವಾರ ಅರುಣ್ ಸಾಗರ್ ಹೊರ ಬರಬಹುದು ಎಂದು ಸೋಷಿಯಲ್ ಮೀಡಿಯಾದಲ್ಲಿ ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ. ಇರಲಿ. ಫಿನಾಲೆ ವಾರಕ್ಕೆ ಎಂಟ್ರಿ ಪಡೆದಿರುವವರು ರಾಕೇಶ್ ಅಡಿಗ, ರೂಪೇಶ್ ಶೆಟ್ಟಿ, ಆರ್ಯವರ್ಧನ್, ಅರುಣ್ ಸಾಗರ್, ರೂಪೇಶ್ ರಾಜಣ್ಣ, ದೀಪಿಕಾ ದಾಸ್ ಹಾಗೂ ದಿವ್ಯಾ ಉರುಡುಗ. ಡಿಸೆಂಬರ್ 30 ಹಾಗೂ 31 ಬಿಗ್ ಬಾಸ್‌ ಫಿನಾಲೆ ನಡೆಯಲಿದ್ದು ನೇರ ಪ್ರಸಾರವಾಗಲಿದೆ....

BBK9 ಅಮೂಲ್ಯ ಗೌಡ ಕೈಯಲ್ಲಿದೆ 3 ಇರುವೆ ಟ್ಯಾಟೂ; ರೂಪೇಶ್ ಶೆಟ್ಟಿ ಶಾಕಿಂಗ್ ರಿಯಾಕ್ಷನ್

ಅಮೂಲ್ಯ ಅಮ್ಮ ಅಂದ್ರೆ ಪ್ರಾಣ:

'ನನ್ನ ತಾಯಿ ಬಗ್ಗೆ ಹೇಳಬೇಕು ಅಂದ್ರೆ ನನ್ನ ತಾಯಿ ನನ್ನ ಬೆಸ್ಟ್‌ ಫ್ರೆಂಡ್. ಸ್ಕೂಲ್ ಹಾಲಿಡೇ ಅಂತ ಬಂತಾಗ ಎಲ್ಲಾ ಮಕ್ಕಳು ಫ್ರೆಂಡ್‌ ಅಂತ ಹೋಗ್ತಾರೆ ಅಥವಾ ಅಜ್ಜಿ ಮನೆಗೆ ಹೋಗುತ್ತಾರೆ ಆದರೆ ನಾನು ಅಮ್ಮನ ಜೊತೆ ಇರುತ್ತಿದ್ದೆ ಅದಿಕ್ಕೆ ಎಲ್ಲರೂ ಅಮ್ಮನ ಸೆರಗು ಎಂದು ಕರೆಯುತ್ತಿದ್ದರು. ಮದುವೆ ಆದ್ಮೇಲೆ ನೀನು ಗಂಡನ ಮನೆಗೆ ಅಮ್ಮನ ಕರ್ಕೊಂಡು ಹೋಗ್ತೀಯಾ ಎಂದು ರೇಗಿಸುತ್ತಿದ್ದರು. ಜೀವನ ಚೆನ್ನಾಗಿರುವಾಗ ಒಂದು ದಿನ ತಿಳಿಯುತ್ತದೆ ನನ್ನ ತಾಯಿಗೆ ಕಿಡ್ನಿ ಫೇಲ್ ಆಗಿರುತ್ತದೆ ಎಂದು. ನಮ್ಮಲ್ಲಿ ಯಾರಿಗೂ ಈ ವಿಚಾರ ಗೊತ್ತಿರಿವುದಿಲ್ಲ ಒಂದು ದಿನ ತಿಳಿಯುತ್ತದೆ, ಅವತ್ತಿನಿಂದ ಲೈಫ್ ಹೇಗಿರುತ್ತೆ ಅಂದ್ರೆ ನನ್ನ ತಾಯಿ ಎಷ್ಟು ದಿನ ಬೇಕಿದ್ದರೂ ಇರಬಹುದು ಯಾವತ್ತಾದರೂ ಹೋಗಬಹುದು' ಎಂದು ಅಳುತ್ತಲೇ ಅಮೂಲ್ಯ ಹೇಳಿದ್ದಾರೆ.

BBK9 ಮನೆಯಲ್ಲಿ ಕಳ್ಳತನ ಮಾಡುತ್ತಿದ್ದ ಅಮೂಲ್ಯ ಗೌಡ; ಜೇಬ್‌ ಕತ್ತರಿಸಿ 6 ಸಾವಿರ ಕದ್ದ ಸ್ಟೋರಿ ಲೀಕ್!

'ಒಂದು ವಾರ ಐಸಿಯುನಲ್ಲಿ ಇರುತ್ತಾರೆ ಅದು ಅಮ್ಮ ಸಾಯುವ ಕೊನೆ ಕ್ಷಣ. ಅವರಿಗೆ ಗೊತ್ತಿರುತ್ತೆ ಅವರು ಇರೋಲ್ಲ ಅಂತ ಈ ವಿಚಾರ ಅಣ್ಣ ಅಪ್ಪಂಗೂ ಗೊತ್ತಿರುತ್ತೆ ಆದರೆ ನನಗೆ ಮಾತ್ರ ಗೊತ್ತಿರುವುದಿಲ್ಲ. ನನ್ನ ತಾಯಿಗೂ ತುಂಬಾನೇ ಅಟ್ಯಾಚ್ ಆಗಿದ್ದೆ ಈ ಸತ್ಯವನ್ನು ಒಪ್ಪಿಕೊಳ್ಳುವುದಿಲ್ಲ ಈ ವಿಚಾರವನ್ನು ಹೇಗೆ ತೆಗೆದುಕೊಳ್ಳುತ್ತೀನಿ ಅನ್ನೋ ಭಯದಲ್ಲಿ ಹೇಳಿರಲಿಲ್ಲ. ಪ್ರತಿ ದಿನ ನಾನು ಐಸಿಯುನಲ್ಲಿ ಅವರ ಜೊತೆ ಕುಳಿತುಕೊಂಡು ಮಾತನಾಡುವಾಗ ನಗು ನಗುತ್ತ ಮಾತನಾಡುತ್ತಿದ್ದರು. ನನ್ನ ತಾಯಿ ಜೊತೆ ನನಗಿರುವ ಕೊನೆ ನೆನಪು ಏನೆಂದರೆ  ಆಸ್ಪತ್ರೆಯಲ್ಲಿ ಕೊಡುತ್ತಿದ್ದ ಚಪಾತಿನ ರೋಲ್ ಮಾಡಿ ಅವರಿಗೆ ತಿನ್ನಲು ಕೊಡುತ್ತಿದ್ದೆ, ಈ ಸಮಯದಲ್ಲಿ ನನ್ನ ದಿನ ಹೇಗಿತ್ತು ಫ್ರೆಂಡ್ಸ್‌ ಜೊತೆ ಏನೆಲ್ಲಾ ಮಾಡಿದ ದಿನ ಹೇಗೆ ಕಳೆದು ಎಂದು ಚರ್ಚೆ ಮಾಡುತ್ತಿದ್ದೆ. ಯಾವತ್ತೂ ಯಾವ ಕ್ಷಣದಲ್ಲೂ ಅವರ ಪ್ರಾಣ ಹೋಗುತ್ತದೆ ಎಂದು ತೋರಿಸಿಕೊಂಡಿರಲಿಲ್ಲ' ಎಂದಿದ್ದಾರೆ ಅಮೂಲ್ಯ.

Follow Us:
Download App:
  • android
  • ios