CJ Roy Death Reason: ಐಟಿ ದಾಳಿಗೆ ಹೆದರಿ, ಕಾನ್ಫಿಡೆಂಟ್ ಗ್ರುಪ್ ಮಾಲೀಕ ಸಿಜೆ ರಾಯ್ ಅವರು ಗನ್‌ನಿಂದ ಶೂಟ್ ಮಾಡಿಕೊಂಡು ನಿಧನರಾಗಿದ್ದಾರೆ. ಶ್ರೀಮಂತರು ಈ ರೀತಿ ಮಾಡುವುದು ಯಾಕೆ? ಇದಕ್ಕೆ ಕಾರಣ ಏನಿರಬಹುದು?
ಕಾನ್ಫಿಡೆಂಟ್ ಗ್ರುಪ್ ಮಾಲೀಕ ಸಿಜೆ ರಾಯ್ ಅವರು ( CJ Roy ) ಶೂಟ್ ಮಾಡಿಕೊಂಡು ನಿಧನರಾಗಿದ್ದಾರೆ. ನೂರಾರು ಕೋಟಿ ರೂಪಾಯಿ ಇದ್ದವರು ಈ ರೀತಿ ಸಾ*ವನ್ನಪ್ಪುತ್ತಾರೆ ಎಂದು ಅನೇಕರಿಗೆ ಆಶ್ಚರ್ಯ ಆಗಬಹುದು, ಇದಕ್ಕೆಲ್ಲ ಕಾರಣ ಏನು?
ವೀರಕಪುತ್ರ ಶ್ರೀನಿವಾಸ್ ಪೋಸ್ಟ್ ಹೀಗಿದೆ
ವೀರಕಪುತ್ರ ಶ್ರೀನಿವಾಸ್ ಅವರು, ಸಿಜೆ ರಾಯ್ ಸಾವಿನ ಕುರಿತಾಗಿ ಸೋಶಿಯಲ್ ಮೀಡಿಯಾ ಪೋಸ್ಟ್ ಹಂಚಿಕೊಂಡಿದ್ದು, “ನೂರಾರು ಕೋಟಿ ಒಡೆಯನೂ ಆತ್ಮಹತ್ಯೆ ಮಾಡಿಕೊಳ್ಳಬೇಕಾಗುತ್ತದೆ ಎಂದರೆ ಪರಿಸ್ಥಿತಿಗಳು ಯಾವ ಮಟ್ಟದಲ್ಲಿರಬಹುದು? ಉದ್ಯಮಿಯಾಗುವುದು ಸುಲಭವಲ್ಲ” ಎಂದಿದ್ದಾರೆ.
“ಡಾ. ಸಿ.ಜೆ. ರಾಯ್ ಅವರು ಕಾನ್ಫಿಡೆಂಟ್ ಗ್ರೂಪ್‌ನ ಸ್ಥಾಪಕರಾಗಿದ್ದು, ಅದು ರಿಯಲ್ ಎಸ್ಟೇಟ್, ಶಿಕ್ಷಣ, ಹಾಸ್ಪಿಟಾಲಿಟಿ, ಮನರಂಜನೆ ಮತ್ತು ಕ್ರೀಡೆಗಳಲ್ಲಿ ವ್ಯವಹಾರಗಳನ್ನು ಹೊಂದಿರುವಂತಹ ಅಂತರರಾಷ್ಟ್ರೀಯ ಕಂಪನಿ. ಕೇರಳ ಮೂಲದ ಅವರು ಬೆಂಗಳೂರಿನಲ್ಲಿ ಬೆಳೆದು, ಯೂರೋಪ್‌ನಲ್ಲಿ ಉನ್ನತ ಶಿಕ್ಷಣ ಪಡೆದು, ಹೆವ್ಲೆಟ್-ಪ್ಯಾಕರ್ಡ್ (HP)ನಲ್ಲಿ ಕೆಲಸ ಮಾಡಿದ ನಂತರ ಉದ್ಯಮ ಪ್ರಾರಂಭಿಸಿದವರು. ಕಾನ್ಫಿಡೆಂಟ್ ಗ್ರೂಪ್ ಭಾರತ ಮತ್ತು ವಿದೇಶಗಳಲ್ಲಿ ಯಶಸ್ವಿ ಯೋಜನೆಗಳನ್ನು ಮಾಡಿ ಮುಗಿಸಿದೆ. ಇದುವರೆಗೆ ಸಾವಿರಾರು ಎಕರೆ ಪ್ರಾಪರ್ಟಿಗಳನ್ನು ಗ್ರಾಹಕರಿಗೆ ಹೇಳಿದ ಸಮಯಕ್ಕೆ ಕೊಟ್ಟಿರುವ ಖ್ಯಾತಿ ಅವರದ್ದು” ಎಂದು ಹೇಳಿದ್ದಾರೆ.
“ರಂಗಪ್ಪ ಹೋಗ್ಬುಟ್ನಾ ತರಹದ ಕನ್ನಡ ಸಿನಿಮಾಗಳನ್ನೂ ಆ ಗ್ರೂಪ್ ಮೂಲಕ ನಿರ್ಮಿಸಿದ್ದಾರೆ. ಕಾರಿನ ವ್ಯಾಮೋಹಿಯಾಗಿದ್ದ ಅವರು ಹಲವಾರು ದುಬಾರಿ ಕಾರುಗಳನ್ನು ಹೊಂದಿದ್ದರೂ, ತನ್ನ ಮೊದಲನೇ ಮಾರುತಿ 800 ಕಾರ್ ಅನ್ನು ಪುನಃ ಖರೀದಿಸಿದ್ದರಂತೆ. ಕೋಟ್ಯಾಂತರ ರೂಗಳನ್ನು ವಿದ್ಯಾರ್ಥಿಗಳ ಶಿಕ್ಷಣಕ್ಕಾಗಿ ಖರ್ಚು ಮಾಡುತ್ತಿದ್ದರಂತೆ. ಅನೇಕ ಸಲ ಬಿಗ್ ಬಾಸ್ ವೇದಿಕೆ ಮೇಲೆ ನಿಂತು, ವಿಜೇತರಿಗೆ ಬಹುಮಾನಗಳನ್ನೂ ಕೊಟ್ಟಿದ್ದೂ ಇದೆ. ಇಷ್ಟೆಲ್ಲದರ ನಂತರವೂ ಆತ ಪ್ರಭಾವಿಯಾಗಿರಲಿಲ್ಲ. ಆಗಿದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುತ್ತಿರಲಿಲ್ಲ” ಎಂದಿದ್ದಾರೆ.
ಶ್ರೀಮಂತರ ಆತ್ಮ*ಹತ್ಯೆಗೆ ಕಾರಣಗಳು
ಸಾಲ
ಮಾರುಕಟ್ಟೆಯಲ್ಲಿನ ಹಠಾತ್ ಕುಸಿತ ಅಥವಾ ದೊಡ್ಡ ಮಟ್ಟದ ನಷ್ಟದಿಂದಾಗಿ, ನಾವು ಮಾಡಿದ ಸಾಲವನ್ನು ತೀರಿಸಲಾಗದ ಸ್ಥಿತಿ ಬಂದಾಗ, ಸಮಾಜದಲ್ಲಿ ನಮ್ಮ ಗೌರವಕ್ಕೆ ಧಕ್ಕೆ ಉಂಟಾಗುತ್ತದೆ ಎಂಬ ಭಯ ಕಾಡುವುದು.
ಪ್ರತಿಷ್ಠೆಯ ಹೊರೆ
"ಯಶಸ್ವಿ ವ್ಯಕ್ತಿ" ಎಂಬ ಹಣೆಪಟ್ಟಿಯನ್ನು ಉಳಿಸಿಕೊಳ್ಳಬೇಕೆಂಬ ಒತ್ತಡ ಕೂಡ ಇರುವುದು. ಹೀಗಾಗಿ ಯಾವುದೇ ಸೋಲನ್ನು ಒಪ್ಪಿಕೊಳ್ಳಲು ಸಹಜವಾಗಿ ಬಿಡುವುದಿಲ್ಲ. ಈ ಸೋಲಿನ ಭಯವು ಮಾನಸಿಕವಾಗಿ ಕುಗ್ಗಿಸುತ್ತದೆ.
ಏಕಾಂಗಿತನ, ವೈಯಕ್ತಿಕ ಸಮಸ್ಯೆ
ಎಷ್ಟೇ ಜನರಿರಲಿ, ಸುತ್ತ ಮುತ್ತ ವ್ಯಕ್ತಿಗಳಿದ್ದರೂ ಕೂಡ ಉನ್ನತ ಮಟ್ಟದ ಉದ್ಯಮಿಗಳು ತಮ್ಮ ನೋವನ್ನು ಹಂಚಿಕೊಳ್ಳಲು ನಂಬಿಕಸ್ತ ವ್ಯಕ್ತಿಗಳು ಇಲ್ಲದೆ ಒಂಟಿತನ ಅನುಭವಿಸುತ್ತಾರೆ.
ತೀವ್ರ ಖಿನ್ನತೆ
ನಿರಂತರ ಕೆಲಸದ ಒತ್ತಡ, ನಿದ್ರೆಯಿಲ್ಲದ ರಾತ್ರಿಗಳು, ಸವಾಲುಗಳು ದೊಡ್ಡದಾಗಿ, ಚಿಕ್ಕ ಸಮಸ್ಯೆಗಳೂ ಕೂಡ ದೊಡ್ಡದಾಗಿ ಕಾಣತೊಡಗುತ್ತವೆ.
ಅಂತಿಮವಾಗಿ, ಸಮಸ್ಯೆಗೆ ಸಾವು ಪರಿಹಾರವಲ್ಲ. ಸರಿಯಾದ ಸಮಯದಲ್ಲಿ ಆಪ್ತ ಸಮಾಲೋಚನೆ ಮತ್ತು ಕುಟುಂಬದ ಬೆಂಬಲ ಸಿಕ್ಕರೆ ಇಂತಹ ದುಡುಕಿನ ನಿರ್ಧಾರಗಳನ್ನು ತಡೆಯಬಹುದು.
ವಿಶೇಷ ಸೂಚನೆ
ಜಗತ್ತಿನಲ್ಲಿ ಪರಿಹಾರವಿಲ್ಲದ ಸಮಸ್ಯೆಗಳಿಲ್ಲ. ದುಡುಕಿನಿಂದ ಆ8ಹತ್ಯೆಯ ನಿರ್ಧಾರ ತೆಗೆದುಕೊಳ್ಳುವುದರಿಂದ ಸಮಸ್ಯೆಗೆ ಯಾವುದೇ ಪರಿಹಾರ ಸಿಗಲ್ಲ. ನೀವು ಅಥವಾ ನಿಮಗೆ ಪರಿಚಿತರಾದ ಯಾರಾದರೂ ಸ್ವಯಂಹಾನಿ ಮಾಡಿಕೊಳ್ಳುವ ಯೋಚನೆ/ಮನೋವ್ಯಥೆ ಅನುಭವಿಸುತ್ತಿದ್ದರೆ ಅಥವಾ ಸಂಕಷ್ಟದ ಸ್ಥಿತಿಯಲ್ಲಿದ್ದರೆ, ದಯವಿಟ್ಟು ಯಾರೊಂದಿಗಾದರೂ ಮಾತನಾಡಿ, ಅದರಿಂದ ಸಮಸ್ಯೆಗಳಿಗೆ ಪರಿಹಾರ ಸಿಗುವುದು. ಕರ್ನಾಟಕದಲ್ಲಿ ಸಹಾಯ ಮತ್ತು ಸಮಾಲೋಚನೆಗಾಗಿ ಕೆಳಗಿನ ಸೇವೆಗಳು ಲಭ್ಯವಿವೆ: 24×7 ಮಾನಸಿಕ ಆರೋಗ್ಯ ಸಹಾಯವಾಣಿ ಟೆಲಿ-ಮಾನಸ್ (Tele-MANAS): 14416 ಅಥವಾ 1800-89-14416 (ರಾಷ್ಟ್ರೀಯ ಟೆಲಿ-ಮಾನಸಿಕ ಆರೋಗ್ಯ ಸೇವೆ).


