Asianet Suvarna News Asianet Suvarna News

ಕನ್ನಡ ಬಿಗ್ ಬಾಸ್ ವಿರುದ್ಧ ಪೊಲೀಸ್‌ ದೂರು ದಾಖಲು, ಶೋನಿಂದ ಹೊರಬರುವಂತೆ ಕಿಚ್ಚನಿಗೆ ಮನವಿ

ಕಲರ್ಸ್ ಕನ್ನಡ ಚಾನೆಲ್ ನಲ್ಲಿ ಮೂಡಿ ಬರುತ್ತಿರುವ ಬಿಗ್ ಬಾಸ್ ಕಾರ್ಯಕ್ರಮದ ವಿರುದ್ಧ ಜನಾಕ್ರೋಶ ವ್ಯಕ್ತವಾಗಿದೆ. ರಿಯಾಲಿಟಿ ಶೋ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು  ವಕೀಲರಾದ ಕೆವಿ ಪ್ರವೀಣ ಎಂಬುವವರು  ದೂರು ದಾಖಲಿಸಿದ್ದಾರೆ.

Complaint registered against bigg boss kannada season 10 gow
Author
First Published Dec 10, 2023, 12:57 PM IST

ಕಲರ್ಸ್ ಕನ್ನಡ ಚಾನೆಲ್ ನಲ್ಲಿ ಮೂಡಿ ಬರುತ್ತಿರುವ ಬಿಗ್ ಬಾಸ್ ಕಾರ್ಯಕ್ರಮದ ವಿರುದ್ಧ ಜನಾಕ್ರೋಶ ವ್ಯಕ್ತವಾಗಿದೆ. ರಿಯಾಲಿಟಿ ಶೋ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ವೀಕ್ಷಕರು ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದರು. ಇದೀಗ ಶೋ ನಡೆಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಶಿವಮೊಗ್ಗ ಜಿಲ್ಲೆಯ ಸಾಗರದ ವಕೀಲರಾದ ಕೆವಿ ಪ್ರವೀಣ ಎಂಬುವವರು  ದೂರು ದಾಖಲಿಸಿದ್ದಾರೆ. ಕರ್ನಾಟಕ ರಾಜ್ಯ ಪೊಲೀಸ್ ಮಹಾ ನಿರ್ದೇಶಕರು ಮತ್ತು ಭಾರತೀಯ ಮಾಧ್ಯಮ ನಿಯಂತ್ರಣ ಪ್ರಾಧಿಕಾರಕ್ಕೆ ಇಮೇಲ್ ಹಾಗೂ ಅಂಚೆ ಮೂಲಕ ದೂರು ನೀಡಲಾಗಿದೆ.

ಈ ಕಾರ್ಯಕ್ರಮವು ತೀರ ನೈತಿಕ ಗುಣಮಟ್ಟವನ್ನು ಕಳೆದುಕೊಂಡಿದೆ. ಅಶ್ಲೀಲ ಪದ ಮತ್ತು ಚಪ್ಪಲಿಯಿಂದ ಹೊಡೆದಾಡುವ ದೃಶ್ಯಗಳು, ಬೆದರಿಕೆ ಹಾಕುತ್ತಿರುವುದು ಸ್ಪರ್ಧಿಗಳ ನಡುವೆ ಬಿತ್ತರಗೊಳ್ಳುತ್ತಿವೆ. ಇದು ಕೌಟುಂಬಿಕ ಮತ್ತು ಸಮಾಜದ ಮೇಲೆ ಕೆಟ್ಟ ಪರಿಣಾಮವನ್ನು ಬೀರುತ್ತದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಕಪ್ಪುಕನ್ನಡಕ ಧರಿಸಿ ಸಂಗೀತಾ, ಪ್ರತಾಪ್‌ ರೀ ಎಂಟ್ರಿ, 'ಇದೇ ನನ್ನ ಕೊನೇ ಬಿಗ್‌ಬಾಸ್‌' ಮುನ್ಸೂಚನೆ ಕೊಟ್ರಾ ಸುದೀಪ್‌?

ಇನ್ನೊಂದೆಡೆ ವ ಬಿಗ್ ಬಾಸ್ ಸ್ವರ್ಧಿಗಳ ವರ್ತನೆ ವಿರುದ್ಧ ಜನಾಕ್ರೋಶ ವ್ಯಕ್ತವಾಗಿದೆ. ಕೆಲ ಸ್ಫರ್ಧಿ‌ಗಳ ಅತಿರೇಕದ ವರ್ತನೆ ವಿರುದ್ಧ ಕ್ರಮಕ್ಕೆ ಆಗ್ರಹಿಸಲಾಗಿದೆ. ಹಲವು ಮಂದಿ ಟ್ವಿಟರ್(X)ನಲ್ಲಿ ಬೆಂಗಳೂರು ಪೊಲೀಸರಿಗೆ ಟ್ಯಾಗ್ ಮಾಡಿದ್ದಾರೆ.

ಟಾಸ್ಕ್ ವೇಳೆ ಪ್ರತಾಪ್ ಹಾಗೂ ಸಂಗೀತಾ ಕಣ್ಣಿಗೆ ಹಾನಿಯಾಗಿದೆ. ಈ ವರ್ತನೆ ವಿರುದ್ಧ ಕ್ರಮ ಕೈಗೊಳ್ಳಿ ಅಂತ ಜನ ಆಗ್ರಹಿಸಿದ್ದಾರೆ. ಇದರ ಜೊತೆಗೆ ಬಿಗ್ ಬಾಸ್ ಸ್ವರ್ಧಿ ವಿನಯ್ ಗೌಡ ಇತರೆ ಸ್ವರ್ಧಿಗಳಿಗೆ ನೇರವಾಗಿ ಬೆದರಿಕೆ ಹಾಕ್ತಿದ್ದಾರೆ. ಸೆಕ್ಷನ್ 506 ಪ್ರಕಾರ ಸುಮೋಟೊ ಕೇಸ್ ಹಾಕುವಂತೆ ಟ್ವಿಟ್ ಮೂಲಕ‌ ಮನವಿ ಮಾಡಲಾಗುತ್ತಿದೆ. ಇನ್ನೂ ಕೆಲವು ಸ್ಪರ್ಧಿಗಳಿಂದ ವೈಲೆನ್ಸ್ ಆಗ್ತಿದೆ ಅಂತಲೂ ಕಿಡಿಕಾರಲಾಗಿದೆ.

ಇತರ ಸ್ವರ್ಧಿಗಳ ಮುಖಕ್ಕೆ ಡಿಟರ್ಜೆಂಟ್‌ ಮಿಶ್ರಿತ ನೀರು ಹಾಕಲಾಗಿದೆ. ಕಾರ್ಯಕ್ರಮದ ಮೂಲ ಆಶಯ ಹಾಳಾಗದಿರಲಿ. ಸ್ಪರ್ಧಿಗಳ ವ್ಯಕ್ತಿತ್ವ ಸಂರಕ್ಷಣೆ ಆಗಲಿ. ಎಲ್ಲೆ ಮೀರಿದ ವರ್ತನೆಯಿಂದ ಬಿಗ್ ಬಾಸ್ ಮುಂದುವರೆಯುತ್ತಿದೆ. ಜೀವ ಬೆದರಿಕೆ ದಮ್ಕಿ ಸೇರಿ ವಿವಿಧ ರೀತಿ ಹಲ್ಲೆ ನಡೆಯುವ ಯತ್ನ ಆಗ್ತಿದೆ. ದಯವಿಟ್ಟು ಕಣ್ಣಿಡಿ ಅಂತ ಪೊಲೀಸರಿಗೆ ಟ್ಯಾಗ್ ಮಾಡಿ ಪೋಸ್ಟ್ ಮಾಡಲಾಗುತ್ತಿದೆ.

ಈ ಕೆಟ್ಟ ಶೋ ನಿಂದ  ಸುದೀಪ್ ಸರ್ ಹೊರ ಬನ್ನಿ. ನಿಮ್ಮ ವ್ಯಕ್ತಿತ್ವಕ್ಕೆ ದಕ್ಕೆಯಾಗುತ್ತಿದೆ. ಇಂತಹ ಶೋ ನಡೆಸಿಕೊಡಬೇಡಿ ಅಂತ ಸಾರ್ವಜನಿಕರು. ಅಭಿಮಾನಿಗಳು  ಕಿಚ್ಚನಿಗೆ ಮನವಿ ಮಾಡುತ್ತಿದ್ದಾರೆ. ಕಿಚ್ಚನ ವ್ಯಕ್ತಿತ್ವಕ್ಕೆ ಯಾವುದೇ ಕಾರಣಕ್ಕೆ ಧಕ್ಕೆಯಾಗದಿರಲಿ ಎಂದು ಹಲವರು ಪ್ರಾರ್ಥಿಸುತ್ತಿದ್ದಾರೆ.

ನಾನು ಮತ್ತೆ ಹೇಳ್ತಿದ್ದೀನಿ ದಯವಿಟ್ಟು ಮನೆಗಳಲ್ಲಿ ಸಣ್ಣ ಮಕ್ಕಳು ಇದ್ದರೆ ಈ ಬಿಗ್ ಬಾಸ್ ನೋಡಲೇಬೇಡಿ. ಈ ಹಿಂದಿನ ಸೀಸನ್ ಗಳು ಅದ್ಭುತ, ಇದೊಂದು ಸೀಸನ್ ಹಲವರ ಮನಸ್ಥಿತಿ ಹಾಳು ಮಾಡ್ತಿದೆ. ಬಿಗ್ ಬಾಸ್ ವೇದಿಕೆ ಎಷ್ಟೋ ಜನರ ಕನಸು. ಆದ್ರೆ ಎಲ್ಲೆ ಮೀರಿದ ವರ್ತನೆ ಇದು. ಅಬ್ಬಬ್ಬಾ ಅದೇನು ಜೀವ ಬೆದರಿಕೆ, @BlrCityPolice ಕಣ್ಣಿಡಿ ಎಂದು ಚೇತನ ಸೂರ್ಯ ಎಂಬುವವರು ಟ್ವೀಟ್ ಮಾಡಿದ್ದಾರೆ.

ಸುಮೋಟೊ ಕೇಸ್ ಹಾಕಿ. ವಿನಯ ಕಾರ್ತಿಕ್ ಗೆ ಹೊರಗೆ ಬಾ ನೋಡ್ಕೋತಿನಿ ಅಂತ ಹೇಳಿದ್ದಾರೆ. ನಿಂಗೆ ಹೊಡೆದೆ ಹೊಡಿತ್ತೀನಿ ಅಂತೆಲ್ಲಾ ಬೆದರಿಕೆ ಹಾಕಿದ್ದಾರೆ. ನಾನು ಬೆಂಗಳೂರು ನಗರ ಪೊಲೀಸರಿಗೆ ಮನವಿ ಮಾಡ್ತಿದ್ದೇನೆ. ಸೆಕ್ಷನ್ 506 ಪ್ರಕಾರ ಸುಮೋಟೊ ಕೇಸ್ ಹಾಕಿ ಕ್ರಮಕೈಗೊಳ್ಳಿ
- ದೀಪ್ ಕುಮಾರ್ ರಿಂದ ಟ್ವಿಟ್

@ಬೆಂಗಳೂರು ಸಿಟಿ ಪೊಲೀಸ್ ವಿನಯ್ ಸಹ ಸ್ವರ್ಧಿ ಮೇಲೆ ನೇರ ಬೆದರಿಕೆ ಹಾಕಿದ್ದಾರೆ. ವಿಡಿಯೋ ನೋಡಿ ಕಲರ್ಸ್ ಕನ್ನಡ ಚಾನಲ್ ಗೆ ನೋಡಿ ಕಳಿಸಿ.- ಜ್ಞಾನ ಭಾರತ ಎಂಬುವವರಿಂದ ಟ್ವಿಟ್

ಗೂಂಡಗಳನ್ನ ಕಳುಹಿಸಿದ್ದೀರಾ @ಕಲರ್ಸ್ ಕನ್ನಡ ನೀವು ಬಿಗ್ ಬಾಸ್ ಒಳಗೆ ಗೂಂಡಗಳನ್ನ  ಕಳುಹಿಸಿದ್ದೀರಾ, ಇದು ಪ್ಯಾಮಿಲಿ ಶೋ ಅಂತ ತೋರ್ಸ್ತಿದ್ದೀರಾ, ಏನಿದೆ. ಬೆಂಗಳೂರು ನಗರ ಪೊಲೀಸರು ನೀವು ಕ್ರಮ ತೆಗೆದುಕೊಳ್ಳಿ, ಟಾಸ್ಕ್ ಹೆಸರಿನಲ್ಲಿ ನಾನ್ ಸೆನ್ಸ್ ತೊರಿಸಲಾಗ್ತಿದೆ. ಇದು ರೌಡಿಸಂ 
- ತೇಜಸ್ವಿ ಎಂಬುವವರಿಂದ ಟ್ವೀಟ್

ಕೆಲ ಸ್ಪರ್ಧಿಗಳಿಂದ ಅತಿರೇಕದ ವರ್ತನೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. @ಬೆಂಗಳೂರು ನಗರ ಪೊಲೀಸ್, ನೀವು ದಯವಿಟ್ಟು ಮಧ್ಯ ಪ್ರವೇಶಿಸಿ
- ಆದಿತ್ಯಾ ಎಂಬುವವರಿಂದ ಟ್ವಿಟ್

 

Follow Us:
Download App:
  • android
  • ios