ಕಾಮಿಡಿ ಕಿಲಾಡಿ ಷೋನ ನಟ-ನಟಿಯರು, ತೀರ್ಪುಗಾರರು ಹಾಗೂ ಇತರರಿಗೆ  ಕೈತುತ್ತು ನೀಡಿದ್ದಾರೆ ನಟ ಜಗ್ಗೇಶ್‌: ವಿಡಿಯೋಗೆ ಅಭಿಮಾನಿಗಳಿಂದ ಶ್ಲಾಘನೆ ಮಹಾಪೂರ ಹರಿದುಬಂದಿದೆ.  

ಕರ್ನಾಟಕವನ್ನ ಸತತವಾಗಿ ನಗಿಸುತ್ತಾ ಬಂದಿರುವ ಜೀ ಕನ್ನಡ ವಾಹಿನಿಯ ಜನಮೆಚ್ಚಿದ ರಿಯಾಲಿಟಿ ಶೋ 'ಕಾಮಿಡಿ ಕಿಲಾಡಿಗಳು' ಈ ಬಾರಿ ಹೊಸ ಅವತಾರದಲ್ಲಿ ಪ್ರೇಕ್ಷಕರ ಮುಂದೆ ಬಂದಿದ್ದು, ಕಳೆದ ಕೆಲವು ವಾರಗಳಿಂದ ನಡೆಯುತ್ತಿದೆ. 'ಕಾಮಿಡಿ ಕಿಲಾಡಿಗಳು ಪ್ರೀಮಿಯರ್‌ ಲೀಗ್‌' ಹೆಸರಿನಲ್ಲಿ ವೀಕೆಂಡ್‌ನಲ್ಲಿ ನಗುವಿನ ಟಾನಿಕ್‌ ನೀಡುತ್ತಿದೆ. ಈ ಬಾರಿಯ ವಿಶೇಷತೆ ಏನೆಂದರೆ, ಈ ಬಾರಿ ಆ್ಯಂಕರ್​ಗಳು ತೀರ್ಪುಗಾರರಾಗಿರಲಿದ್ದಾರೆ ಹಾಗೂ ತೀರ್ಪುಗಾರರು ಆ್ಯಂಕರ್​ಗಳಾಗಲಿದ್ದಾರೆ. ಹೌದು! ಕಾಮಿಡಿ ಕಿಲಾಡಿಗಳಲ್ಲಿ ಈ ಬಾರಿ ಸಕತ್​ ಎಂಜಾಯ್​ಮೆಂಟ್​ ಇದೆ. ಅಷ್ಟಕ್ಕೂ ಈ ಹಿಂದಿನ ಸಂಚಿಕೆಗಳಲ್ಲಿ ಕಾಮಿಡಿ ಕಿಲಾಡಿಯಲ್ಲಿ, ನಟ ಜಗ್ಗೇಶ್‌, ರಕ್ಷಿತಾ ಪ್ರೇಮ್‌, ನೆನಪಿರಲಿ ಪ್ರೇಮ್‌ ತೀರ್ಪುಗಾರರಾಗಿದ್ದರು. ಮಾಸ್ಟರ್‌ ಆನಂದ್‌ ನಿರೂಪಕರಾಗಿದ್ದರು. 

ಆದರೆ ಈ ಸಲ ಉಲ್ಟಾ ಪಲ್ಟಾ ಆಗಿದೆ. ಈ ಬಾರಿ ಆರು ಮಂದಿ ತೀರ್ಪುಗಾರರು ಕಾಮಿಡಿ ಷೋನಲ್ಲಿ ಕಾಣಿಸಿಕೊಂಡಿದ್ದಾರೆ. ಆ ಪೈಕಿ ಜೀ ಕನ್ನಡದಲ್ಲಿ ಎಲ್ಲ ರಿಯಾಲಿಟಿ ಶೋಗಳ ನಿರೂಪಕರಾಗಿರುವ ಅನುಶ್ರೀ, ಮಾಸ್ಟರ್‌ ಆನಂದ್‌, ಅಕುಲ್‌ ಬಾಲಾಜಿ, ಕುರಿ ಪ್ರತಾಪ್‌, ಶ್ವೇತಾ ಚಂಗಪ್ಪ ಈ ಸಲದ ಕಾಮಿಡಿ ಕಿಲಾಡಿಗಳು ಶೋನಲ್ಲಿ ನಿರೂಪಣೆ ಮಾಡುವ ಬದಲು ತೀರ್ಪುಗಾರರಾಗಿದ್ದಾರೆ. 

ಇನ್ನೊಬ್ಬರ ಲೈಫ್​ ಹಾಳು ಮಾಡ್ತಾರೆ... ಯಾಕೆ ಹೀಗೆ? ಸಿನಿಮಾ ಸ್ಥಿತಿಗೆ ನಟ ಜಗ್ಗೇಶ್​ ಕಣ್ಣೀರು

ಶೂಟಿಂಗ್‌ ಬಿಡುವಿನ ಸಮಯದಲ್ಲಿ, ಶೂಟಿಂಗ್ ಸೆಟ್‌ನಲ್ಲಿ ಎಲ್ಲರಿಗೂ ಊಟದ ವ್ಯವಸ್ಥೆ ಮಾಡಲಾಗಿದೆ. ಈ ಸಂದರ್ಭದಲ್ಲಿ ಜಗ್ಗೇಶ್‌ ಅವರು ಎಲ್ಲಾ ನಟ-ನಟಿಯರು ಹಾಗೂ ನಿರೂಪಕರು ಮತ್ತು ತೀರ್ಪುಗಾರರಿಗೆ ಕೈತುತ್ತು ನೀಡಿದ್ದಾರೆ. ಇದರ ವಿಡಿಯೋ ಅನ್ನು ಅನುಶ್ರೀ ಅವರು ಶೇರ್‌ ಮಾಡಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ಎಲ್ಲರಿಗೂ ಜಗ್ಗೇಶ್‌ ಅವರು ತುತ್ತು ನೀಡುವುದನ್ನು ನೋಡಬಹುದು. ಅನ್ನು ತುತ್ತು ನೀಡಿರುವ ನಮ್ಮ ಜಗ್ಗಣ್ಣ ಶೀರ್ಷಿಕೆ ಕೊಟ್ಟು ಇದನ್ನು ಅನುಶ್ರೀ ಅವರು ಶೇರ್‌ ಮಾಡಿಕೊಂಡಿದ್ದಾರೆ.

ಇದಕ್ಕೆ ಥಹರೇವಾರಿ ಕಮೆಂಟ್ಸ್‌ ಸುರಿಮಳೆಯಾಗಿದ್ದು, ಹಲವರು ಹಾರ್ಟ್‌ ಇಮೋಜಿ ಹಾಕಿದ್ದಾರೆ. ಜಗ್ಗೇಶ್‌ ಅವರು ಸದಾ ಸಿಂಪಲ್‌ ಆಗಿಯೇ ಇರುವ ವ್ಯಕ್ತಿ ಎಂದು ಹಾಡಿ ಕೊಂಡಾಡಿದ್ದಾರೆ. ಅಂದಹಾಗೆ, ವಿಭಿನ್ನತೆಗೆ ಹೆಸರಾದ ಜೀ ಕನ್ನಡ ವಾಹಿನಿಯ ಜನಪ್ರಿಯ ಕಾರ್ಯಕ್ರಮಗಳಲ್ಲಿ ಕಾಮಿಡಿ ಕಿಲಾಡಿಗಳು ಕೂಡಾ ಒಂದು. ನಿತ್ಯದ ಜಂಜಾಟದಲ್ಲಿ ಒದ್ದಾಡುವ ಅದೆಷ್ಟೋ ಮನಸ್ಸುಗಳಿಗೆ ಹಾಸ್ಯದ ಮೂಲಕ ಸಾಂತ್ವನದ ಕಚಗುಳಿ ಇಡುವ ಉದ್ದೇಶದಿಂದ ಆರಂಭವಾದ ಮಹಾ ವೇದಿಕೆಯೇ ಕಾಮಿಡಿ ಕಿಲಾಡಿಗಳು. "ಸೈಡ್ಗಿಡ್ರಿ ನಿಮ್‌ ಟೆನ್ಶನ್‌ಗಳು, ಮತ್ತೆ ಬಂದಿದ್ದಾರೆ ಕಾಮಿಡಿ ಕಿಲಾಡಿಗಳು" ಎಂಬ ಸ್ಲೋಗನ್‌ ಮೂಲಕ ವಾರಾಂತ್ಯದಲ್ಲಿ ಕರುನಾಡನ್ನೇ ನಗೆಗಡಲಲ್ಲಿ ತೇಲಿಸಿ, ಕನ್ನಡಿಗರ ಹೃದಯದಲ್ಲಿ ಪ್ರೀತಿಯ ಸ್ಥಾನ ಗಳಿಸಿಕೊಂಡ ಕೀರ್ತಿ ಕಾಮಿಡಿ ಕಿಲಾಡಿಗಳು ಕಾರ್ಯಕ್ರಮಕ್ಕೆ ಸಲ್ಲುತ್ತದೆ.

View post on Instagram