ಕಾಮಿಡಿ ಕಿಲಾಡಿ ಶಿವರಾಜ್ ಕೆ.ಆರ್.ಪೇಟೆ ವಿರುದ್ಧ ಕೇಸ್; 'ಯಾವಳೇ ನೀನು ಅಲ್ಲಾಡಿಸ್ಕೊಂಡು' ಅನ್ನೋದಾ?
ಬೆಂಗಳೂರಿನಲ್ಲಿ ಬೈಕ್‌ನಲ್ಲಿ ಹೋಗುವ ಮಹಿಳೆಗೆ ಯಾವಳೇ ನೀನು ಅಲ್ಲಾಡಿಸಿಕೊಂಡು ಎಂದು ಬೈದ ಕಾಮಿಡಿ ಕಿಲಾಡಿಗಳು ಖ್ಯಾತಿಯ ಶಿವರಾಜ್ ಕೆ.ಆರ್. ಪೇಟೆ ವಿರುದ್ಧ ಮಹಿಳೆ ಪೊಲೀಸ್ ಕೇಸ್ ದಾಖಲಿಸಿದ್ದಾಳೆ.
ಬೆಂಗಳೂರು (ಏ.01): ಬೆಂಗಳೂರಿನ ರಸ್ತೆಯಲ್ಲಿ ಮಹಿಳೆ ಸ್ಕೂಟರ್‌ನಲ್ಲಿ ಹೋಗುವಾಗಿ ಹಿಂಬದಿಯಿಂದ ಅಡ್ಡಬಂದು ಕಿಟಕಿ ಗಾಜು ಇಳಿಸಿ 'ಯಾವಳೇ ನೀನು ಅಲ್ಲಾಡಿಸಿಕೊಂಡು' ಎಂದು ಮಹಿಳೆಗೆ ಅವ್ಯಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ. ಇದರಿಂದ ಅವಮಾನಗೊಂಡ ಮಹಿಳೆ ಸುಬ್ರಹ್ಮಣ್ಯ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಪ್ರತಿನಿತ್ಯ ಹೋಗುವಂತೆ ನಾನು ಕಚೇರಿ ಕೆಲಸಕ್ಕೆ ಹೋಗುವಾಗ ಬೆಳಗ್ಗೆ 9.30ರ ಸುಮಾರಿಗೆ ಸ್ಪ್ರೆಕ್ಟ್ರಮ್ ಲ್ಯಾಬ್ ಮುಂಭಾಗದಿಂದಲೂ ಒಂದು ಕಾರು ನನ್ನ ಹಿಂದೆ ಬಂದಿತು. ಮುಂದೆ ರಾಜ್ ಕುಮಾರ್ ರಸ್ತೆಯ 10ನೇ ಕ್ರಾಸ್ ಬಳಿ ಪೆಟ್ರೋಲ್ ಬಂಕ್ ಹತ್ತಿರ ಬಂದಾಗ ಕಾರಿನ ಗಾಜು ಇಳಿಸಿ ಯಾವಳೇ ನೀನು ಅಲ್ಲಾಡಿಸಿಕೊಂಡು ಎಮದು ಬೈದರು. ನಾನು ಯಾರೆಂದು ತಿರುಗಿ ನೋಡಿದಾಗ ಕಾಮಿಡಿ ಕಿಲಾಡಿ ಖ್ಯಾತಿಯ ಶಿವರಾಜ್ ಕೆ.ಆರ್.ಪೇಟೆ ಎಂಬುದು ಗೊತ್ತಾಗಿದೆ. ಅವರು ನನಗೆ ಬೈದು ಸ್ನೇಹಿತರ ಜೊತೆಗೆ ನಗಾಡುತ್ತಾ ಹೋಗಿದ್ದಾರೆ. ಅವ್ಯಾಚ್ಯ ಶಬ್ದಗಳಿಂದ ಬೈದಿದ್ದೂ ಅಲ್ಲದೇ ನನ್ನ ಗಾಡಿಗೆ ಕಾರು ಟಚ್ ಮಾಡಿ ಹೋಗಿದ್ದಾರೆ ಎಂದು ಪೊಲೀಸ್ ಠಾಣೆಯಲ್ಲಿ ಮಹಿಳೆ ದೂರು ದಾಖಲಿಸಿದ್ದಾರೆ.
ಹೌದು, ರಂಗೋಲಿ ಕೆಡಿಸಿದ್ದು ನಾನೇ.. ಉತ್ತರ ಭಾರತೀಯರಿಗೆ ಬೆಂಗಳೂರು ಸೇಫ್ ಇಲ್ವಾ? ಎಂದು ಪ್ರಶ್ನಿಸಿದ ನೇಹಾ..!
ಬೆಂಗಳೂರಿನಲ್ಲಿ ಮಾ.30ರಂದು ನಟ ಶಿವರಾಜ್ ಕೆ.ಆರ್. ಪೇಟೆ ಹಾಗೂ ದೂರುದಾರ ಮಹಿಳೆ ಶಾರದಾ ಬಾಯಿ ಎಂಬುವರ ಮಧ್ಯೆ ಮಾತು ಕತೆ ಆಗಿತ್ತು. ಕಾರು ಟಚ್ ಆಗಿರೋ ವಿಚಾರಕ್ಕೆ ಗಲಾಟೆ ನಡೆದಿತ್ತು. ಈ ವೇಳೆ ನಟ ಶಿವರಾಜ್ ಕೆ.ಆರ್.ಪೇಟೆ ಅವರು ಅವಾಚ್ಯ ಶಬ್ದಗಳಿಂದ ನಿಂದಿಸೋದಾಗಿದ್ದ ಶಾರದಾಬಾಯಿ ದೂರು ನೀಡಿದ್ದರು. ದೂರಿನ ಸಂಬಂಧ ಎನ್ ಸಿಆರ್ ದಾಖಲಿಸಿಕೊಂಡ ಪೊಲೀಸರು ಶಿವರಾಜ್‌ಗೆ ನೊಟೀಸ್ ನೀಡಿದ್ದರು. ಇಂದು ಬೆಳಗ್ಗೆ ಶಿವರಾಜ್ ಕೆ ಆರ್ ಪೇಟೆ ವಿಚಾರಣೆಗೆ ಹಾಜರಾಗಿದ್ದರು. ಇದೇ ವೇಳೆ ಮಹಿಳೆಯನ್ನೂ ಪೊಲೀಸ್ ಠಾಣೆಗೆ ಕರೆಸಿ ಈ ಪ್ರಕರಣವನ್ನು ಬಗೆಹರಿಸಿ ಕಳಿಸಿದ್ದಾರೆ.