Comedy Gangs: ಇಂದಿನಿಂದ ಸ್ಟಾರ್ ಸುವರ್ಣ ವಾಹಿನಿಯಲ್ಲಿ 'ಕಾಮಿಡಿ ಗ್ಯಾಂಗ್ಸ್'
ಹಿರಿಯ ಕಲಾವಿದ ಮುಖ್ಯಮಂತ್ರಿ ಚಂದ್ರು ನೇತೃತ್ವದಲ್ಲಿ ಸ್ಟಾರ್ ಸುವರ್ಣ ವಾಹಿನಿಯಲ್ಲಿ ‘ಕಾಮಿಡಿ ಗ್ಯಾಂಗ್ಸ್’ ಎಂಬ ಕಾಮಿಡಿ ಶೋ ಇಂದಿನಿಂದ (ಏ.16) ಆರಂಭವಾಗುತ್ತಿದೆ. ಇನ್ನು ಪ್ರತೀ ವೀಕೆಂಡ್‌ನಲ್ಲಿ ಅಂದರೆ ಶನಿವಾರ ಹಾಗೂ ಭಾನುವಾರ ರಾತ್ರಿ 9 ಗಂಟೆಗೆ ಈ ಶೋ ಪ್ರಸಾರವಾಗಲಿದೆ.
ಹಿರಿಯ ಕಲಾವಿದ ಮುಖ್ಯಮಂತ್ರಿ ಚಂದ್ರು (Mukhyamantri Chandru) ನೇತೃತ್ವದಲ್ಲಿ ಸ್ಟಾರ್ ಸುವರ್ಣ ವಾಹಿನಿಯಲ್ಲಿ (Star Suvarna Channel) ‘ಕಾಮಿಡಿ ಗ್ಯಾಂಗ್ಸ್’ (Comedy Gangs) ಎಂಬ ಕಾಮಿಡಿ ಶೋ ಇಂದಿನಿಂದ (ಏ.16) ಆರಂಭವಾಗುತ್ತಿದೆ. ಇನ್ನು ಪ್ರತೀ ವೀಕೆಂಡ್‌ನಲ್ಲಿ ಅಂದರೆ ಶನಿವಾರ ಹಾಗೂ ಭಾನುವಾರ ರಾತ್ರಿ 9 ಗಂಟೆಗೆ ಈ ಶೋ ಪ್ರಸಾರವಾಗಲಿದೆ.
‘ಇಷ್ಟು ದಿನ ಮಾಸ್ಕ್ ಹಿಂದೆ ಅಡಗಿದ್ದ ನಗು ಇನ್ಮುಂದೆ ಅನ್-ಲಿಮಿಟೆಡ್ ಆಗಿ ಈ ಶೋನಲ್ಲಿ ಹೊರಬರಲಿದೆ’ ಎಂದು ವಾಹಿನಿ ಹೇಳಿದೆ. ಸ್ಟೇಜ್‌ನಲ್ಲೂ ಕಾಮಿಡಿ, ಸೆಟ್‌ನಲ್ಲೂ ಕಾಮಿಡಿ, ತೀರ್ಪುಗಾರರ ಮಾತುಗಳಲ್ಲೂ ಕಾಮಿಡಿ, ನಿರೂಪಕರ ಮಾತೂ ಫುಲ್ ಕಾಮಿಡಿಯಾಗಿರುತ್ತದೆ. ರಾಜ್ಯದ ವಿವಿಧೆಡೆಗಳಿಂದ ಸ್ಪರ್ಧಿಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಅವರಿಗೆ ಪ್ರಹಸನ ಬರೆದು ಕೊಡುವವರು, ಕಾಮಿಡಿಯ ಕಾಗುಣಿತ ತಿದ್ದುವ ಮೆಂಟರ್ಸ್ ಮತ್ತು ಇಡೀ ಕಾರ್ಯಕ್ರಮದ ಹೊಣೆಗಾರಿಕೆ ಹೊತ್ತುಕೊಂಡಿರುವ ಕ್ಯಾಪ್ಟನ್ಸ್- ಇವರುಗಳಿಂದ ಕಾಮಿಡಿ ಗ್ಯಾಂಗ್ಸ್‌ನಲ್ಲಿ ಹಾಸ್ಯದ ಹಬ್ಬ ಇರಲಿದೆ ಎಂದು ವಾಹಿನಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ನೋ ಎಲಿಮಿನೇಶನ್: 6 ತಂಡಗಳು ಪ್ರತಿ ಶನಿವಾರ ಮತ್ತು ಭಾನುವಾರ ಒಂದಿಕ್ಕಿಂತ ಒಂದು ವಿಭಿನ್ನ ಮತ್ತು ವಿಶೇಷವಾದ ವಿಡಂಬನೆಗಳ ಮೂಲಕ, ನಗು ಹಂಚಲಿದ್ದಾರೆ. ‘ಕಾಮಿಡಿ ಗ್ಯಾಂಗ್ಸ್’ನಲ್ಲಿ ಎಲಿಮಿನೇಷನ್ ಇರುವುದಿಲ್ಲ. ಆದರೆ ಸ್ಪರ್ಧಿಗಳ ಸ್ಕಿಟ್‌ಗಳಿಗೆ ಸ್ಕೋರ್ ನೀಡಲಾಗುತ್ತದೆ. ಅಂತಿಮವಾಗಿ ಅಧಿಕ ಅಂಕಗಳನ್ನು ಪಡೆವ ಗ್ಯಾಂಗ್‌ಗೆ ಗೆಲುವು ಸಿಗಲಿದೆ.
ರಾಘವೇಂದ್ರ ರಾಜ್‌ಕುಮಾರ್-ಶ್ರುತಿ ನಟನೆಯ ಹೊಸ ಸಿನಿಮಾ '13'
ಮುಖ್ಯಮಂತ್ರಿ ಚಂದ್ರು ನೇತೃತ್ವ: ಹಿರಿಯ ಕಲಾವಿದ ಮುಖ್ಯಮಂತ್ರಿ ಚಂದ್ರು ‘ಕಾಮಿಡಿ ಗ್ಯಾಂಗ್ಸ್’ ಕಾರ್ಯಕ್ರಮದ ತೀರ್ಪುಗಾರರಲ್ಲಿ ಒಬ್ಬರು. ‘ನಗುವು ಸಹಜದ ಧರ್ಮ; ನಗಿಸುವುದು ಪರಧರ್ಮ, ನಗುವ ಕೇಳುತ ನಗುವುದತಿಶಯದ ಧರ್ಮ, ನಗುವ ನಗಿಸುವ ನಗಿಸಿ ನಗುತ ಬಾಳುವ ವರವ, ಮಿಗೆ ನೀನು ಬೇಡಿಕೊಳೊ- ಮಂಕುತಿಮ್ಮ ; ಎಂದು ಡಿವಿಜಿಯವರು ಹೇಳಿದ ಹಾಗೆ ನಗು ಹಂಚುವ ಕೆಲಸ ಸ್ಟಾರ್ ಸುವರ್ಣ ಮಾಡ್ತಿದೆ. ನಾನು ಈ ಕಾರ್ಯಕ್ರಮದ ಭಾಗವಾಗಿರೋದು ಖುಷಿಯ ವಿಚಾರ. ‘ಕಾಮಿಡಿ ಗ್ಯಾಂಗ್ಸ್’ ಮೇಲೆ ಬಹಳ ಭರವಸೆಯಿದ್ದು, ಜನರಿಗೆ ಖಂಡಿತ ಇಷ್ಟವಾಗುತ್ತೆ’ ಅಂತಾರೆ ಮುಖ್ಯಮಂತ್ರಿ ಚಂದ್ರು.
ಕಾರ್ಯಕ್ರಮದ ಮತ್ತೊಬ್ಬ ಜಡ್ಜ್ ಶ್ರುತಿ ಹರಿಹರನ್ ಇದೇ ಮೊದಲ ಬಾರಿಗೆ ಕಾಮಿಡಿ ಕಾರ್ಯಕ್ರಮವೊಂದರ ತೀರ್ಪುಗಾರರಾಗಿದ್ದಾರೆ. 'ಕಾಮಿಡಿ ಗ್ಯಾಂಗ್ಸ್' ಅಂದ್ರೆ ಬರೀ ಮನರಂಜನೆ ಮಾತ್ರವಲ್ಲ, ಗಂಭೀರ ವಿಷಯಗಳನ್ನೂ ಹಾಸ್ಯದ ಮೂಲಕ ವೀಕ್ಷಕರಿಗೆ ತಲುಪಿಸುವ ಕಾರ್ಯಕ್ರಮವಿದು’ ಅನ್ನೋದು ಶ್ರುತಿ ಹರಿಹರನ್ ಅಭಿಪ್ರಾಯ.
ಇಷ್ಟು ದಿನ ತಮ್ಮ ಕಾಮಿಡಿಯಿಂದ, ವೀಕ್ಷಕರ ಹೃದಯಕ್ಕೆ ಕಚಗುಳಿಯಿಟ್ಟಿದ್ದ ಕುರಿ ಪ್ರತಾಪ್ ಮೊದಲ ಬಾರಿಗೆ ತೀರ್ಪುಗಾರರಾಗಿದ್ದಾರೆ. ‘ಜಡ್ಜ್ ಅನ್ನೋದಕ್ಕಿಂತ, ನಾನು ಶೋ ಎಂಜಾಯ್ ಮಾಡೋಕೆ ಬಂದಿದ್ದೀನಿ. ಮೊದಲ ಎಪಿಸೋಡ್ ಅದ್ಭುತವಾಗಿ ಮೂಡಿಬಂದಿದೆ. ಸ್ಟೇಜ್ ಮೇಲೆ ಸ್ಪರ್ಧಿಯಾಗಿದ್ರೂ, ಸ್ಟೇಜ್ ಎದುರಿಗೆ ಕೂತ ತೀರ್ಪುಗಾರನಾಗಿದ್ರೂ ಜನರನ್ನ ನಗಿಸಬೇಕು, ನಗಿಸೋರನ್ನ ಗೌರವಿಸಬೇಕು ಅನ್ನೋದಷ್ಟೆ ನನ್ನ ನಂಬಿಕೆ’ ಎಂದು ಹೇಳಿದ್ದಾರೆ ಕುರಿ ಪ್ರತಾಪ್.
ಈ ಕಾರ್ಯಕ್ರಮದ ಮೂಲಕ ಶಿವರಾಜ್ ಕೆ.ಆರ್. ಪೇಟೆ ಮೊದಲ ಬಾರಿಗೆ ಕಿರುತೆರೆಯ ಹೋಸ್ಟ್ ಆಗಿದ್ದಾರೆ. ನಗುವೆ ನನ್ನ ಜೀವನ, ನಗಿಸೋದೇ ನನ್ನ ಕಾಯಕ, ಇಷ್ಟುದಿನ ಕಂಟೆಸ್ಟೆಂಟಾಗಿ ವೀಕ್ಷಕರನ್ನು ನಗಿಸುತ್ತಿದ್ದೆ. ಈಗ ಬದಲಾವಣೆಯ ಹಂತ. ಸ್ಟಾರ್ ಸುವರ್ಣ ವಾಹಿನಿಯ ‘ಕಾಮಿಡಿ ಗ್ಯಾಂಗ್ಸ್’ ಮೂಲಕ ನಿರೂಪಣೆಯ ಅವಕಾಶ ಸಿಕ್ಕಿದೆ, ಈ ಅನುಭವ ನನಗೆ ಬಹಳ ಖುಷಿ ಕೊಟ್ಟಿದೆ. ಅದ್ಭುತವಾಗಿ ಮೂಡಿ ಬಂದಿರುವ ಲಾಂಚ್ ಎಪಿಸೋಡ್ ನೋಡೋಕೆ ನಾನು ಕಾಯ್ತಾ ಇದ್ದೀನಿ’ ಅಂತಾರೆ ಶಿವರಾಜ್ ಕೆ.ಆರ್. ಪೇಟೆ.
Rishab Shetty: ತುಳುನಾಡ ಸಂಸ್ಕೃತಿಯ 'ಕಾಂತಾರ' ಟೀಸರ್ 15 ಲಕ್ಷ ವೀಕ್ಷಣೆ
ನಗಿಸುವ ಕನಸುಳ್ಳವರಿಗೆ ಕಾಮಿಡಿ ಗ್ಯಾಂಗ್ಸ್ ಉತ್ತಮ ವೇದಿಕೆ: ಮನುಷ್ಯನಾಗಿ ಹುಟ್ಟಿದ ಮೇಲೆ ಪ್ರತಿಯೊಬ್ಬರಲ್ಲೂ ನಾನಾ ಪ್ರತಿಭೆಗಳು ಅಡಕವಾಗಿರುತ್ತವೆ. ಅದರಲ್ಲಿ ನಗಿಸುವ ಕನಸ್ಸನ್ನು ಕಟ್ಟಿಕೊಂಡವರಿಗೆ ಕಾಮಿಡಿ ಗ್ಯಾಂಗ್ ಉತ್ತಮ ವೇದಿಕೆ ಕಲ್ಪಿಸುತ್ತಿದೆ ಎಂದು ಹಾಸನದ ಪ್ರತಿಭೆ ಹಾಸ್ಯ ನಟರಾದ ಮಡೆನೂರು ಮನು ಮತ್ತು ಸೂರ್ಯ ತಿಳಿಸಿದರು. ನಗರದ ಸಾಲಗಾಮೆ ರಸ್ತೆ ಬಳಿ ಇರುವ ಹಾಸನ ಪಬ್ಲಿಕ್ ಶಾಲೆಯಲ್ಲಿ ಸ್ಟಾರ್ ಸುವರ್ಣ ಅರ್ಪಿಸುವ ಕಾಮಿಡಿ ಗ್ಯಾಂಗ್ಸ್ ಆಡಿಷನ್‌ನಲ್ಲಿ ತೀರ್ಪುಗಾರರಾಗಿ ಭಾಗವಹಿಸಿದ್ದರು. ಮಾಧ್ಯಮದೊಂದಿಗೆ ಮಾತನಾಡಿ, ಎಲ್ಲಾ ಜಿಲ್ಲೆಯಲ್ಲಿ ಆಡಿಷನ್ ನಡೆಸಿ ಉತ್ತಮವಾಗಿ ನಗಿಸುವ ಹಾಸ್ಯ ಕಲಾವಿದರನ್ನು ಹೊರ ತರಲಾಗುತ್ತಿದೆ.
ನಟನೆ ಎಂಬುದರ ಕಲಿಕೆ ನಿರಂತರವಾಗಿದ್ದು, ನಾವು ಮಾಡುವ ಹಾಸ್ಯದ ನಟನೆ ಜೊತೆಗೆ ಮತ್ತೊಬ್ಬರನ್ನು ನೋಡಿ ಕಲಿಯಬೇಕಾಗಿರುವುದು ಬಹಳಷ್ಟಿದೆ. ಅದರಲ್ಲೂ ಹಾಸನ ವಿವಿಧ ಕ್ಷೇತ್ರಗಳಲ್ಲಿ ತನ್ನದೆಯಾದ ಹೆಸರು ಮಾಡಿದೆ. ಅದರಲ್ಲೂ ದೇಶಕ್ಕೆ ಪ್ರಧಾನಿ ನೀಡಿದ ಜಿಲ್ಲೆ, ಕಲೆಗಳ ತವರೂರು. ಹೆಚ್ಚಿನ ಕಲಾವಿದರು ಕೂಡ ಇದ್ದಾರೆ. ಇಲ್ಲಿನ ಪ್ರತಿಭೆಗಳು ಕೇವಲ ನಾಲ್ಕು ಗೋಡೆಗಳಲ್ಲೇ ತಮ್ಮ ಕಲೆ ಪ್ರದರ್ಶಿಸದೇ ಇಡೀ ರಾಜ್ಯ, ದೇಶದಲ್ಲಿ ಪ್ರಜ್ವಲಿಸಬೇಕು ಎಂಬುದು ಕಾಮಿಡಿ ಗ್ಯಾಂಗ್ಸ್ ನ ಉದ್ದೇಶವಾಗಿದೆ ಎಂದು ಹೇಳಿದರು. ಕಾಮಿಡಿ ಗ್ಯಾಂಗ್ ನಲ್ಲಿ ಭಾಗವಹಿಸಲು ಹಾಸನ ಜಿಲ್ಲೆಯ ಕಲಾವಿದರ ಜೊತೆ ವಿವಿಧ ಜಿಲ್ಲೆಗಳಿಂದಲೂ ಆಗಮಿಸಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿ ಗಮನ ಸೆಳೆದರು.