ದಿಢೀರ್ ನಂದಿ ಬೆಟ್ಟದಲ್ಲಿ ಕಪಿಲ್ ಶರ್ಮಾ ಪ್ರತ್ಯಕ್ಷ, ಕುಣಿದು ಕುಪ್ಪಳಿಸಿದ ಕಾಮಿಡಿ ಕಿಂಗ್!
ಕಾಮಿಡಿ ಶೋ ಮೂಲಕ ಪಾಪ್ಯುಲರ್ ಆಗಿರುವ ಕಪಿಲ್ ಶರ್ಮಾ ಇಂದು ದಿಡೀರ್ ಬೆಂಗಳೂರಿನ ಹೊರವಲಯದಲ್ಲಿರುವ ನಂದಿ ಬೆಟ್ಟದಲ್ಲಿ ಪ್ರತ್ಯಕ್ಷರಾಗಿದ್ದಾರೆ. ನಂದಿ ಬೆಟ್ಟದಲ್ಲಿ ಓಡಾಡಿ ಪ್ರಕೃತಿಯ ಸೌಂದರ್ಯ ಆಸ್ವಾದಿಸಿದ್ದಾರೆ. ಈ ವಿಡಿಯೋಗೆ ಹಲವು ಕನ್ನಡಿಗರು ಪ್ರತಿಕ್ರಿಯೆ ನೀಡಿದ್ದಾರೆ.

ಬೆಂಗಳೂರು(ಸೆ.11) ಕಾಮಿಡಿ ಶೋ ಕಿಂಗ್ ಎಂದೇ ಗುರುತಿಸಿಕೊಂಡಿರುವ ಕಪಿಲ್ ಶರ್ಮಾ ಇದೀಗ ಬೆಂಗಳೂರಿನಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ. ಇದರ ನಡುವೆ ಇಂದು ಬೆಳ್ಳಂ ಬೆಳಗ್ಗೆ ನಂದಿ ಬೆಟ್ಟ ಹತ್ತಿ ಪ್ರಕೃತಿಯ ಸೌಂದರ್ಯ ಆಸ್ವಾದಿಸಿದ್ದಾರೆ. ಬಿಡುವಿಲ್ಲದ ಕಾರ್ಯಕ್ರಮಗಳ ಮೂಲಕ ಬ್ಯೂಸಿಯಾಗಿದ್ದ ಕಪಿಲ್ ಶರ್ಮಾ ಇದೀಗ ತಂಡದ ಜೊತೆ 15 ದಿನ ಬೆಂಗಳೂರಿನ ಸುತ್ತ ಮತ್ತ ರಜೆಯ ಮಜಾ ಅನುಭವಿಸುತ್ತಿದ್ದಾರೆ. ಕಪಿಲ್ ಶರ್ಮಾ ಜೊತೆ ಆಪ್ತೆ ಅರ್ಚನಾ ಪೂರನ್ ಸಿಂಗ್ ಸೇರಿದಂತೆ ಇಡೀ ತಂಡ ಬೆಂಗಳೂರಿನಲ್ಲಿ ಬೀಡು ಬಿಟ್ಟಿದೆ.
ಇಂದು ಬೆಳಗ್ಗೆ ಕಪಿಲ್ ಶರ್ಮಾ ಹಾಗೂ ಅವರ ತಂಡ ನಂದಿ ಬೆಟ್ಟ ಟ್ರಕ್ಕಿಂಗ್ ಮಾಡಿದೆ. ಸೂರ್ಯೋದಯವನ್ನು ನಂದಿ ಬೆಟ್ಟದಲ್ಲಿ ನೋಡಿ ಅಸ್ವಾದಿಸಿದ್ದಾರೆ. ಈ ಕುರಿತು ಸ್ವತಃ ಕಪಿಲ್ ಶರ್ಮಾ ವಿಡಿಯೋ ಪೋಸ್ಟ್ ಮಾಡಿದ್ದಾರೆ. ಹಲವು ಕನ್ನಡಿಗರು ಪ್ರತಿಕ್ರಿಯೆ ನೀಡಿದ್ದಾರೆ. ನಮ್ಮ ಬೆಂಗಳೂರಿಗೆ ಆಗಮಿಸಿದ ನಿಮ್ಮ ಇಡೀ ತಂಡಕ್ಕೆ ಸ್ವಾಗತ ಎಂದು ಕಮೆಂಟ್ ಮಾಡಿದ್ದಾರೆ. ಬೆಂಗಳೂರಿಗೆ ಬಂದಿರುವ ಕಪಿಲ್ ಶರ್ಮಾ ಉದ್ಯಾನ ನಗರದಲ್ಲೊಂದು ಕಾರ್ಯಕ್ರಮ ಆಯೋಜಿಸಿ ಎಂದು ಮನವಿ ಮಾಡಿದ್ದಾರೆ. ಮತ್ತೆ ಕೆಲವರು ನಂದಿ ಬೆಟ್ಟ ಹಾಗೂ ಸುತ್ತಲಿನ ಸೌಂದರ್ಯ ಎಂತವರ ಮನಸ್ಸನ್ನು ಶಾಂತಗೊಳಿಸುತ್ತದೆ. ಸೌಂದರ್ಯಕ್ಕೆ ನಾವು ಮನಸೋಲುತ್ತೇವೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ.
ಪತ್ನಿ ಜೊತೆ ಕಪಿಲ್ ಶರ್ಮಾ ಹನಿಮೂನಿಗೆ ಹೋಗುವಾಗ 35 ಮಂದಿ ಇದ್ರಂತೆ!? ಯಾರಪ್ಪಾ ಅದು
ಮಾಸ್ಕ್ ಧರಿಸಿ, ಪುಲ್ ಓವರ್ ಹಾಕಿಕೊಂಡು ಕಪಿಲ್ ಶರ್ಮಾ ನಂದಿ ಬೆಟ್ಟದಲ್ಲಿ ಪ್ರತ್ಯಕ್ಷರಾಗಿದ್ದಾರೆ. ನಂದಿ ಬೆಟ್ಟದ ಸುತ್ತ ಓಡಾಡಿದ್ದಾರೆ. ಇಷ್ಟೇ ಅಲ್ಲ ಅತ್ತ ಸೂರ್ಯೋದಯವಾಗುತ್ತಿದ್ದಂತೆ ಕಪಿಲ್ ಶರ್ಮಾ ಧ್ಯಾನ ಮಾಡಿದ್ದಾರೆ. ನಂದಿ ಬೆಟ್ಟದಲ್ಲಿ ಕುಣಿದು ಕುಪ್ಪಳಿಸಿದ ವಿಡಿಯೋ ಇದೀಗ ಸಂಚಲನ ಸೃಷ್ಟಿಸಿದೆ. ಕಪಿಲ್ ಶರ್ಮಾ ವಿಡಿಯೋಗೆ ಕಮೆಂಟ್ ಮಾಡಿರುವ ಅರ್ಚನಾ ಸಿಂಗ್ ಪೂರನ್, ನಂದಿ ಬೆಟ್ಟದ ಸೌಂದರ್ಯವನ್ನು ವಿಡಿಯೋದಲ್ಲಿ ಕಟ್ಟಿಕೊಡಲಾಗಿದೆ ಎಂದು ಕಮೆಂಟ್ ಮಾಡಿದ್ದಾರೆ.
ಇತ್ತ ಅರ್ಚನಾ ಪೂರನ್ ಕೂಡ ಕೆಲ ವಿಡಿಯೋಗಳನ್ನು ಹಂಚಿಕೊಂಡಿದ್ದಾರೆ. ಆಯುರ್ವೇದಾ ಪುನಶ್ಚೇತನ ಎಂದು ಪ್ರಕೃತಿಯ ಮಡಿಲಲ್ಲಿನ ಸುಂದರ ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ. ಇತ್ತೀಚೆಗಷ್ಟೆ ಯುಕೆ ಪ್ರವಾಸ ಮುಗಿಸಿ ಬಂದ ಕಪಿಲ್ ಶರ್ಮಾ ಸತತ ಶೋಗಳಿಂದ ಬ್ಯೂಸಿಯಾಗಿದ್ದಾರೆ. ಸೆಪ್ಟೆಂಬರ್ 24 ರಿಂದ ಕಪಿಲ್ ಶರ್ಮಾ ದುಬೈ ಪ್ರವಾಸ ಆರಂಭಗೊಳ್ಳಲಿದೆ. ಈ ಪ್ರವಾಸಕ್ಕೂ ಮೊದಲು ಕಪಿಲ್ ಶರ್ಮಾ ರಿಲಾಕ್ಸ್ ಮೂಡ್‌ನಲ್ಲಿದ್ದಾರೆ. ಬೆಂಗಳೂರಿನಲ್ಲಿ ವಿಶ್ರಾಂತಿ ಪಡೆದು ಬಳಿಕ ದುಬೈಗೆ ತೆರಳಲಿದ್ದಾರೆ.
ನೀವು ಒಬ್ರೇ ಅಲ್ಲ ಸೆಲೆಬ್ರಿಟಿಗಳೂ ಬಾಕ್ಸ್ ವಾಪಸ್ ಕೇಳ್ತಾರೆ!