ಸೀರಿಯಲ್ ಪ್ರೋಮೋದಲ್ಲಿ ಶ್ರುತಿ, ಸಪ್ತಮಿ ಗೌಡ - ರೀಲ್ಸ್ ರಾಣಿ ಮಧು ಭೈರಪ್ಪ ನೋಡ್ತಿದ್ದಂತೆ ವೀಕ್ಷಕರು ಕೆಂಡಾಮಂಡಲ
ಕಲರ್ಸ್ ಕನ್ನಡದಲ್ಲಿ ಹೊಸ ಸೀರಿಯಲ್ ಬರ್ತಿದೆ. ಅದ್ರ ಪ್ರೋಮೋ ಈಗಾಗಲೇ ಔಟ್ ಆಗಿದೆ. ಧಾರಾವಾಹಿ ಕಥೆ ಹೇಳಲು ನಟಿ ಶ್ರುತಿ ಹಾಗೂ ಸಪ್ತಮಿ ಗೌಡ ಬಂದಿದ್ದು, ಅದ್ರ ಸಂಪೂರ್ಣ ವಿವರ ಇಲ್ಲಿದೆ.
ಕಲರ್ಸ್ ಕನ್ನಡ (Colors Kannada )ದಲ್ಲಿ ಪ್ರಸಾರವಾಗ್ತಿರುವ ಬಿಗ್ ಬಾಸ್ ಸೀಸನ್ 11 (Bigg Boss Season 11) ಮುಗಿಯುವ ಹಂತಕ್ಕೆ ಬಂದಿದೆ. ಗ್ರ್ಯಾಂಡ್ ಫಿನಾಲೆ ಯಾವಾಗ ಅನ್ನೋದನ್ನು ಚಾನೆಲ್ ಇನ್ನು ಅನೌನ್ಸ್ ಮಾಡಿಲ್ಲ. ಆದ್ರೆ ಇನ್ನು ಕೇವಲ ಮೂರು ವಾರ ಬಿಗ್ ಬಾಸ್ ನಡೆಯಲಿದೆ ಎಂದು ಕಿಚ್ಚ ಸುದೀಪ್ ಹೇಳಿದ್ದಾರೆ. ಅಂದ್ರೆ ಜನವರಿ 25 -26ರಂದು ಬಿಗ್ ಬಾಸ್ ಫಿನಾಲೆ ನಡೆಯುವ ಸಾಧ್ಯತೆ ಇದೆ ಎಂದು ಊಹಿಸಲಾಗ್ತಿದೆ. ರಾತ್ರಿ 9.30ರಿಂದ 11 ಗಂಟೆಯವರೆಗೆ ಪ್ರತಿ ದಿನ ಪ್ರಸಾರವಾಗ್ತಿದ್ದ ಬಿಗ್ ಬಾಸ್ ಮುಗಿದ ಮೇಲೆ ಏನು ಎನ್ನುವ ಪ್ರಶ್ನೆ ವೀಕ್ಷಕರನ್ನು ಕಾಡೋದು ಸಹಜ. ವೀಕ್ಷಕರಿಗೆ ಸೀರಿಯಲ್ ರಸದೌತಣ ನೀಡಲು ಚಾನೆಲ್ ಸಿದ್ಧವಾಗಿದೆ. ಒಂದೊಂದೇ ಸೀರಿಯಲ್ ಪ್ರೋಮೋ ಹೊರಗೆ ಬರ್ತಿದೆ. ಈಗಾಗಲೇ ವಧು ಸೀರಿಯಲ್ ಪ್ರೋಮೋ ಔಟ್ ಆಗಿದ್ದು ಈಗ ಚಾನೆಲ್ ಯಜಮಾನ (Yajamana) ಎಂಬ ಸೀರಿಯಲ್ ಪ್ರೋಮೋ ಪ್ರಸಾರ ಮಾಡ್ತಿದೆ.
ಯಜಮಾನ ಸೀರಿಯಲ್ ಪ್ರೋಮೋದಲ್ಲಿ ಕಥೆಯನ್ನು ಸ್ವಲ್ಪ ಭಿನ್ನವಾಗಿ ಹೇಳಿದೆ. ಈ ಬಾರಿ ಕಥೆ ಹೇಳೋಕೆ ನಟಿ ಶ್ರುತಿ (Actress Shruti) ಹಾಗೂ ಸಪ್ತಮಿ ಗೌಡ (Sapthami Gowda) ಬಂದಿದ್ದಾರೆ. ಸುಂದರವಾಗಿ ರೆಡಿಯಾಗಿರುವ ಶ್ರುತಿ ಅರ್ಧ ಹಾರ್ಟ್ ಚಿತ್ರವನ್ನು ಬಿಡಿಸಿ, ಈ ಕೆಂಪು ಪ್ರೀತಿನೂ ಹೌದು, ಅಪಾಯವೂ ಹೌದು ಎನ್ನುತ್ತ ಮಾತು ಶುರು ಮಾಡ್ತಾರೆ. ಬಣ್ಣ ಒಂದೇ ಆದ್ರೆ ತದ್ವಿರುದ್ಧ ಭಾವ ಎನ್ನುವ ಅವರನ್ನು ನಟಿ ಸಪ್ತಮಿ ಗೌಡ ಸೇರಿಕೊಳ್ತಾರೆ. ಹಾರ್ಟ್ ಚಿತ್ರವನ್ನು ಪೂರ್ತಿ ಮಾಡುವ ಅವರು, ಯಜಮಾನ ಸೀರಿಯಲ್ ಹೀರೋಯಿನ್ ಝಾನ್ಸಿ ರಾಣಿ ಲಕ್ಷ್ಮಿಭಾಯಿ ಅಲಿಯಾಸ್ ಜಾನು ಸ್ವಭಾವನ್ನು ವರ್ಣಿಸ್ತಾರೆ. ಇನ್ನು ಶ್ರುತಿ, ಹಿರೋ ರಾಘವೇಂದ್ರನ ಸ್ವಭಾವ, ಆತನ ಮನೆಯ ಬಗ್ಗೆ ಹೇಳ್ತಾರೆ. ಇಬ್ಬರೂ ಸೇರಿ ಯಜಮಾನ ಸೀರಿಯಲ್ ಹೇಗಿರುತ್ತೆ ಎಂಬ ಸಣ್ಣ ಹಿಂಟ್ಸ್ ಪ್ರೋಮೋದಲ್ಲಿ ನೀಡಿದ್ದಾರೆ.
ಆಂಟಿ ಅಂಕಲ್ ಕಥೆ ಅಂತ ಜನ ಬೈಯ್ಯುತ್ತಿದ್ದ ಅಮೃತಧಾರೆ ನಂಬರ್ 1 ಆಗಿದ್ದು ಹೇಗೆ? ಇದು ಅಮ್ಮಮ್ಮನ ಕೊಡುಗೆಯಾ?
ಪ್ರೋಮೋದಲ್ಲಿ ಶ್ರುತಿ ಹಾಗೂ ಸಪ್ತಮಿ ಗೌಡ ತುಂಬ ಸುಂದರವಾಗಿ ಕಾಣ್ತಿರೋದ್ರಲ್ಲಿ ಡೌಟೇ ಇಲ್ಲ. ಆದ್ರೆ ವೀಕ್ಷಕರಿಗೆ ಮಾತ್ರ ಯಜಮಾನ ಸೀರಿಯಲ್ ಶುರುವಾಗುವ ಮುನ್ನವೇ ನಿರಾಸೆ ಮೂಡಿಸಿದೆ. ಇದು ರಾಮಾಚಾರಿ 2 ಅಂತ ವೀಕ್ಷಕರು ಹೇಳ್ತಿದ್ದಾರೆ. ಇದೇನು ಹೊಸ ಕಥೆಯಲ್ಲ, ಇಂಥ ಕಥೆ ಎಷ್ಟು ಬಂದಿಲ್ಲ. ಸೊಕ್ಕಿನ ಹುಡುಗಿ, ಬಡ ಹುಡುಗನ ಕಥೆ ಸೀರಿಯಲ್, ಸಿನಿಮಾ ಆಗಿದೆ. ಈಗ ಮತ್ತದೆ ಕಥೆಯನ್ನು ನೀವು ನಮ್ಮ ಮುಂದಿಡ್ತಿದ್ದೀರಿ ಎಂದು ವೀಕ್ಷಕರು ನಿರಾಸೆ ವ್ಯಕ್ತಪಡಿಸಿದ್ದಾರೆ.
ಚೈತ್ರಾ ಕುಂದಾಪುರ ಬಿಗ್ ಬಾಸ್ ಮನೆಯಿಂದ ಎಲಿಮಿನೇಟ್; ಕೊನೆಯ ಮಾತುಗಳು ಏನಾಗಿತ್ತು
ರೀಲ್ಸ್ ಮೂಲಕ ಹೆಚ್ಚು ಪ್ರಸಿದ್ಧಿ ಪಡೆದಿರುವ ಮಧು ಭೈರಪ್ಪ ಈಗ ಯಜಮಾನ ಮೂಲಕ ಕಿರುತೆರೆಗೆ ಎಂಟ್ರಿ ಆಗ್ತಿದ್ದಾರೆ. ಪ್ರೋಮೋ ನೋಡಿದ ವೀಕ್ಷಕರಿಗೆ ಮಧು ಭೈರಪ್ಪ (Madhu Bhyrappa) ಆಯ್ಕೆ ಇಷ್ಟವಾಗಿಲ್ಲ. ಕಿರುತೆರೆಯಲ್ಲಿ ಸಾಕಷ್ಟು ಅದ್ಭುತ ಕಲಾವಿದರಿದ್ದಾರೆ. ರಂಗ ಭೂಮಿಯಲ್ಲಿ ಕಲಾವಿದರ ಸಂಖ್ಯೆ ಸಾಕಷ್ಟಿದೆ. ವರಿಗೆ ಅವಕಾಶ ನೀಡಬೇಕು. ಅದನ್ನು ಬಿಟ್ಟು ರೀಲ್ಸ್ ನಟಿಯರನ್ನು ಯಾಕೆ ಆಯ್ಕೆ ಮಾಡ್ಕೊಳ್ತಿದ್ದೀರಿ, ಇದು ಕಲಾವಿದರಿಗೆ ಮಾಡುವ ಅವಮಾನ ಎಂದು ವೀಕ್ಷಕರು ತಮ್ಮ ಕೋಪ ವ್ಯಕ್ತಪಡಿಸಿದ್ದಾರೆ. ರಾಮ್ ಜೀ ರೀಲ್ಸ್ ಹಿರೋಯಿನ್ ಗಳಿಗೆ ಅವಕಾಶ ನೀಡ್ತಿದ್ದಾರೆ. ಗೀತಾ ಸೀರಿಯಲ್, ಬೃಂದಾವನ ಆಯ್ತು ಈಗ ಯಜಮಾನ ಸರದಿ ಎಂದು ವೀಕ್ಷಕರು ಕಮೆಂಟ್ ಮಾಡಿದ್ದಾರೆ. ಅಷ್ಟೇ ಅಲ್ಲ ಸೀರಿಯಲ್ ಯಾವಾಗ ಪ್ರಸಾರ ಆಗ್ಬೇಕು, ಕಥೆ ಹೇಗಿರಬೇಕು ಎಂದೆಲ್ಲ ವೀಕ್ಷಕರೇ ನಿರ್ದೇಶಕರಿಗೆ ಸಲಹೆ ನೀಡಿದ್ದಾರೆ.