Asianet Suvarna News Asianet Suvarna News

ವಿನಯ್ ವ್ಯಕ್ತಿತ್ವ ಡ್ಯಾಮೇಜ್ ಅಗುತ್ತಿದೆ, ಅವ್ರ ಸಾಧನೆಗೆ ಕೆಟ್ಟ ಹೆಸರು ತರುತ್ತಿದ್ದಾರೆ: ನಾದಿನಿ ಭಾವುಕ

ಟಿವಿಯಲ್ಲಿ ವಿನಯ್‌ ನೋಡಲು ಬೇಸರ ಆಗುತ್ತಿದೆ. ಅವರ ವ್ಯಕ್ತಿತ್ವಕ್ಕೆ ಡ್ಯಾಮೇಜ್ ತರುತ್ತಿದ್ದಾರೆ ಎಂದು ನಾದಿನಿ ಬೇಸರ ಮಾಡಿಕೊಂಡಿದ್ದಾರೆ.

Colors Kannada Vinay Gowda sister in law talks about character damage vcs
Author
First Published Nov 3, 2023, 1:28 PM IST

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಬಿಗ್ ಬಾಸ್ ಸೀಸನ್ 10ರಲ್ಲಿ ಸ್ಪರ್ಧಿಸುತ್ತಿರುವ ವಿನಯ್ ಗೌಡರನ್ನು ಟಾರ್ಗೆಟ್ ಮಾಡಲಾಗುತ್ತಿದೆ ಎಂದು ಕುಟುಂಬಸ್ಥರು ಬೇಸರ ಮಾಡಿಕೊಂಡಿದ್ದಾರೆ. ವಿನಯ್ ಒಳ್ಳೆಯ ವ್ಯಕ್ತಿ ಎಂದು ನಾದಿನಿ ಮಾತನಾಡಿದ್ದಾರೆ. 

'ವಿನಯ್ ಬಿಗ್ ಬಾಸ್‌ಗೆ ಹೋಗಿರುವುದು ಖುಷಿ ಆದರೆ ದಿನದಿಂದ ದಿನಕ್ಕೆ ತೋರಿಸುತ್ತಿರುವ ರೀತಿಗೆ ಭಯ ಆಗುತ್ತಿದೆ. ಆ ವ್ಯಕ್ತಿ ಇಲ್ಲದೇ ಇರುವ ರೀತಿಯಲ್ಲಿ ತೋರಿಸುತ್ತಿದ್ದಾರೆ. ಭಾವ ಎನ್ನುವ ಕಾರಣಕ್ಕೆ ಹೇಳುತ್ತಿಲ್ಲ ಚಿಕ್ಕ ವಯಸ್ಸಿನಿಂದ ನಾವು ಆಟ ಆಡಿಕೊಂಡು ಬೆಳೆದಿರುವುದು, ವಿನಯ್ ತುಂಬಾ ಸ್ವೀಟ್ ಮತ್ತು ಸದಾ ಖುಷಿಯಾಗಿರುವ ವ್ಯಕ್ತಿ. ವಿನಯ್ ಸದಾ ಜೋಕ್ ಮಾಡಿಕೊಂಡು ಪ್ರತಿಯೊಬ್ಬರನ್ನು ಖುಷಿಯಾಗಿಟ್ಟಿಕೊಳ್ಳುತ್ತಾರೆ ಆದರೆ ಯಾಕೆ ಈ ಶೋನಲ್ಲಿ ವಿನಯ್‌ನ ಈ ರೀತಿ ತೋರಿಸುತ್ತಿದ್ದಾರೆ ಎಂದು ಗೊತ್ತಿಲ್ಲ. ಯಾವುದೇ ಮನುಷ್ಯನಿಗೆ ಚುಚ್ಚಿ ಚುಚ್ಚಿ ಹೇಳುತ್ತಿದ್ದರೆ ಬೇಸರ ಅಗುತ್ತದೆ. ವಿನಯ್‌ ತಮ್ಮ ಭಾವನೆಗಳನ್ನು ಹಂಚಿಕೊಳ್ಳಲು ಯಾರೂ ಇಲ್ಲ. ಕೆಲವರು ಬಳಸಿರುವ ಪದಗಳು ನಿಂತಿಲ್ಲ ಅದು ಮುಂದುವರೆಯುತ್ತಿದೆ. ವಿನಯ್ ಒಳ್ಳೆ ಗುಣಗಳು ತೋರಿಸುವ ರೀತಿಯ ವಾತಾವರಣ ಕಾಣಿಸುತ್ತಿಲ್ಲ. ನಗುನೇ ವಿನಯ್ ಮುಖಕ್ಕೆ ಚಾರ್ಮ್‌ ಆದರೆ ಟಿವಿಯಲ್ಲಿ ವಿನಯ್‌ನ ಈ ಪರಿಸ್ಥಿತಿಯಲ್ಲಿ ನೋಡಲು ಕಷ್ಟ ಆಗುತ್ತದೆ. ವಿನಯ್‌ ನನಗೆ ಭಾವ ಆಗಿ ಮಾತ್ರವಲ್ಲ ಸೋದರ ಮಾವನ ಮಗ ಆಗುತ್ತಾನೆ. ವಿನಯ್ ತುಂಬಾ ಒಳ್ಳೆಯ ವ್ಯಕ್ತಿ' ಎಂದು ವಿನಯ್ ನಾದಿನಿ ಅರ್ಪಿತಾ ಖಾಸಗಿ ಟಿವಿ ಸಂದರ್ಶನದಲ್ಲಿ ಮಾತನಾಡಿದ್ದಾರೆ. 

ಸೀರಿಯಲ್ ಒಂದೇ ಅನ್ನ ಹಾಕಿಲ್ಲ; ವಿನಯ್ ಗೌಡ ದುರಹಂಕಾರಕ್ಕೆ ಬ್ರೇಕ್ ಹಾಕುವಂತೆ ನೆಟ್ಟಿಗರಿಂದ ಒತ್ತಾಯ!

ಬಿಗ್ ಬಾಸ್ ಫಾಲೋವರ್ಸ್ ನಾವು ಈಗ ವಿನಯ್‌ಗೆ ಅವಕಾಶ ಸಿಕ್ಕಿದ್ದು ಖುಷಿ ಅದರಲೂ ಸುದೀಪ್ ಸರ್ ಆನೆ ರೀತಿ ಅನ್ನೋದು ಹೇಳಿದ್ದು ಖುಷಿ. ಕೆಲವರು ಮೋಟಿವೇಷನ್ ಅಗಿ ಸ್ವೀಕರಿಸುತ್ತಿದ್ದಾರೆ ಅದರೆ ಕೆಲವರು ಟಾರ್ಗೆಟ್ ಮಾಡುತ್ತಿದ್ದಾರೆ. ವಿನಯ್‌ಗೆ ಆನೆ ಬಂದಿರುವುದು ಗಿಫ್ಟ್‌ ಅನ್ನೋದಕ್ಕಿಂತ ಶಾಪದ ರೀತಿಯಲ್ಲಿ ನೋಡುತ್ತಿದ್ದಾರೆ. ಕಾರ್ತಿಕ್ ಮತ್ತು ವಿನಯ್ ತುಂಬಾ ಒಳ್ಳೆಯ ಸ್ನೇಹಿತರು ಅವರಿಬ್ಬರನ್ನು ಒಟ್ಟಿಗೆ ನೋಡಿ ಖುಷಿ ಇದೆ ಆದರೆ ಟಿವಿಯಲ್ಲಿ ನಡೆಯುತ್ತಿರುವುದನ್ನು ನೋಡಿ ಶಾಕ್ ಆಗುತ್ತಿದೆ. ಕಾರ್ತಿಕ್ ಎಲ್ಲೇ ತಪ್ಪು ಮಾಡಿದ್ದರೂ ವಿನಯ್ ಸಪೋರ್ಟ್ ಮಾಡುತ್ತಿದ್ದಾರೆ ಆದರೆ ಕಾರ್ತಿಕ್ ಕೆಲವು ದಿನಗಳಿಂದ ನೆಗೆಟಿವ್ ಪ್ರಭಾವ ಬೀರಿ ತಪ್ಪಾಗಿ ವರ್ತಿಸುತ್ತಿದ್ದಾರೆ ಎಂದು ಅರ್ಪಿತಾ ಹೇಳಿದ್ದಾರೆ. 

ನನ್ನ ಪತಿ ಕೆಟ್ಟವರಲ್ಲ: ಬಿಗ್‌ಬಾಸ್‌ ಸ್ಪರ್ಧಿ ವಿನಯ್ ಪತ್ನಿ ಕಣ್ಣೀರು

ಪ್ರತಿ ಸ್ಪರ್ಧಿಗಳು ಬಳಸುತ್ತಿರುವ ಪದಗಳನ್ನು ವಿನಯ್ ವ್ಯಕ್ತಿತ್ವವನ್ನು ಡ್ಯಾಮೇಜ್ ಮಾಡುತ್ತಿದ್ದಾರೆ ಅವರು ಇಷ್ಟು ವರ್ಷದ ಸಾಧನೆಗೆ ಕೆಟ್ಟ ಹೆಸರು ತರುತ್ತಿದ್ದಾರೆ. ಎಲ್ಲರೂ ಕಷ್ಟ ಪಟ್ಟ ಜೀವನ ಕಟ್ಟಿಕೊಂಡು ಹೆಸರು ಮಾಡಿರುವ ವ್ಯಕ್ತಿಗಳು ಅಲ್ಲಿರುವುದು ಆದರೆ ಈ ರೀತಿ ಕೆಟ್ಟದಾಗಿ ಮಾತನಾಡಬಾರದು ಎಂದಿದ್ದಾರೆ ಅರ್ಪಿತಾ. 
 

Follow Us:
Download App:
  • android
  • ios