ಕಿಚ್ಚ ಸುದೀಪ್ ಜತೆ ರಿತ್ವಿಕ್ ಫೋಟೋ; ರಾಮಾಚಾರಿ ಹೀರೋ ಪೋಸ್ಟ್‌ಗೆ ನೆಟ್ಟಿಗರು ಫುಲ್ ಫಿದಾ!
ಸದ್ಯ ರಾಮಾಚಾರಿ ಸೀರಿಯಲ್‌ನಲ್ಲಿ ಚಾರು ತನ್ನ ಮಾವನ ಆರೋಗ್ಯ ಸುಧಾರಿಸಲಿ ಎಂದು ಹರಕೆ ಹೊತ್ತು ಅದನ್ನು ತೀರಿಸಿದ್ದಾಳೆ. ದೇವಸ್ಥಾನದ ಮೆಟ್ಟಿಲನ್ನು ಮಂಡಿಗಾಲಲ್ಲಿ ಹತ್ತಿ, ದೇವರ ಮುಂದೆ ಉರುಳು ಸೇವೆ ಮಾಡುವ ಮೂಲಕ ಚಾರು ರಾಮಾಚಾರಿಯ ಸಹಕಾರ ಪಡೆದು ತನ್ನ ಹರಕೆ ಪೂರೈಸಿದ್ದಾಳೆ.
ಕಲರ್ಸ್ ಕನ್ನಡದಲ್ಲಿ ಪ್ರಸಾರ ಕಾಣುತ್ತಿರುವ 'ರಾಮಾಚಾರಿ' ಸೀರಿಯಲ್ ಹೀರೋ ರಿತ್ವಿಕ್ ಕೃಪಾಕರ್ ಫುಲ್ ಖುಷಿಯಾಗಿದ್ದಾರೆ. ಕಾರಣ, ಅವರು ಸ್ಯಾಂಡಲ್‌ವುಡ್ ಸ್ಟಾರ್ ನಟ ಕಿಚ್ಚ ಸುದೀಪ್ ಅವರನ್ನು ಭೇಟಿಯಾಗಿ ಜತೆಯಲ್ಲಿ ನಿಂತು ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ. ಅದನ್ನು ತಮ್ಮ ಇನ್‌ಸ್ಟಾಗ್ರಾಂ ಪೇಜ್‌ನಲ್ಲಿ ಪೋಸ್ಟ್ ಮಾಡಿಕೊಂಡು ಜನರಿಂದ ಕಾಮೆಂಟ್ ಪಡೆಯುತ್ತಿದ್ದಾರೆ. 'ಇಟ್ ವಾಸ್ ಅ ಪ್ಲೆಸರ್ ಮೀಟಿಂಗ್ ಯೂ ಸರ್' ಎಂಬ ಬರಹವನ್ನು ಹಾಕಿದ್ದಾರೆ ರಿತ್ವಿಕ್ ಕೃಪಾಕರ್.
ಸದ್ಯ ರಾಮಾಚಾರಿ ಸೀರಿಯಲ್‌ನಲ್ಲಿ ನಾಯಕರಾಗಿ ನಟಿಸುತ್ತಿರುವ ನಟ ರಿತ್ವಿಕ್ ಅವರಿಗೆ ಬಹಳಷ್ಟು ಫಾಲೋವರ್ಸ್ ಇದ್ದಾರೆ. ಚಾರು ಮತ್ತು ರಾಮಾಚಾರಿ ಲೀಡ್ ರೋಲ್ ಮೂಲಕ ಭಾರಿ ಗಮನಸೆಳೆಯುತ್ತಿರುವ ರಾಮಾಚಾರಿ ಸೀರಿಯಲ್ ಸದ್ಯ ಟಿಆರ್‌ಪಿ ರೇಸ್‌ನಲ್ಲಿ ಕೂಡ ತನ್ನದೇ ಸ್ಥಾನ ಕಾಯ್ದುಕೊಂಡಿದೆ. ರಾಮಾಚಾರಿ ಮತ್ತು ಚಾರು ಈಗ ಆದರ್ಶ ಗಂಡ-ಹೆಂಡತಿ ಅಗುವತ್ತ ಸಾಗುತ್ತಿದ್ದಾರೆ ಎನ್ನಬಹುದು.
ತುಕಾಲಿ ಸಂತೋಷ್-ವಿನಯ್ ಮಧ್ಯೆ ಕ್ಯಾಪ್ಟನ್ಸಿಗಾಗಿ ಶುರುವಾಯ್ತು ಕಚ್ಚಾಟ; ನಮ್ರತಾಗೆ ಸಿಗುವುದೇ ಪಟ್ಟ?
ಸದ್ಯ ರಾಮಾಚಾರಿ ಸೀರಿಯಲ್‌ನಲ್ಲಿ ಚಾರು ತನ್ನ ಮಾವನ ಆರೋಗ್ಯ ಸುಧಾರಿಸಲಿ ಎಂದು ಹರಕೆ ಹೊತ್ತು ಅದನ್ನು ತೀರಿಸಿದ್ದಾಳೆ. ದೇವಸ್ಥಾನದ ಮೆಟ್ಟಿಲನ್ನು ಮಂಡಿಗಾಲಲ್ಲಿ ಹತ್ತಿ, ದೇವರ ಮುಂದೆ ಉರುಳು ಸೇವೆ ಮಾಡುವ ಮೂಲಕ ಚಾರು ರಾಮಾಚಾರಿಯ ಸಹಕಾರ ಪಡೆದು ತನ್ನ ಹರಕೆ ಪೂರೈಸಿದ್ದಾಳೆ. ಚಾರು ಹರಕೆ ಮುಗಿಯುತ್ತಿದ್ದಂತೆ, ತನ್ನ ದೇಹದ ಯಾವುದೇ ಭಾಗವನ್ನು ಅಲ್ಲಾಡಿಸಲು ಅಸಮರ್ಥನಾಗಿದ್ದ ಮಾವ ತಾನೇ ಕೈಯಿಂದ ನೀರು ತೆಗದುಕೊಂಡು ಕುಡಿದಿದ್ದಾನೆ. ಚಾರು ಹರಕೆ ಫಲಿಸಿದೆ ಎಂದು ಮನೆಯವರೆಲ್ಲ ತುಂಬಾ ಖುಷಿಯಾಗಿದ್ದಾರೆ.
ಭಾರತದಲ್ಲಿ ಮೊದಲ ರೋಲ್ಸ್ ರಾಯ್ಸ್ ಕಾರು ತಂದಿದ್ದು ಶಾರುಖ್ ಖಾನ್, ಅಂಬಾನಿ ಅಲ್ಲ; ಮೌಜ್ ಸಿನಿಮಾ ನಾಯಕಿ!
ಚಾರು ಹಾಗೂ ರಾಮಾಚಾರಿಯ ಮಧ್ಯೆ ದಿನದಿನಕ್ಕೂ ಲವ್ ಜಾಸ್ತಿಯಾಗತೊಡಗಿದೆ. ಮೇಡಮ್ ಮೇಡಮ್ ಎನ್ನುತ್ತ ರಾಮಾಚಾರಿ ಅವಳಿಗೆ ಸಹಾಯ ಮಾಡುವುದನ್ನೇ ತನ್ನ ಜೀವನವನ್ನಾಗಿ ಮಾಡಿಕೊಂಡಿದ್ದಾನೆ, ಇತ್ತ ಚಾರುವೂ ಅಷ್ಟೇ, ರಾಮಾಚಾರಿ ತನ್ನ ಮೈ ಮುಟ್ಟುವ, ಮನಸ್ಸು ತಟ್ಟುವ ಯಾವುದೇ ಅವಕಾಶವನ್ನು ಮಿಸ್ ಮಾಡಿಕೊಳ್ಳದೇ ತನ್ನ ಗಂಡನಿಗೆ ಹತ್ತಿರವಾಗುವತ್ತ ಅವಿರತ ಪ್ರಯತ್ನ ಮಾಡುತ್ತಿದ್ದಾಳೆ. ಒಟ್ಟಿನಲ್ಲಿ, ವೀಕ್ಷಕರಿಗೆ ಇಷ್ಟವಾಗುವಂತ ರಾಮಾಚಾರಿ ಕಥೆ ಸಾಗುತ್ತಿದೆ ಎನ್ನಬಹುದು.