Asianet Suvarna News Asianet Suvarna News

ಆಕಾಶ್ ತೊದ್ಲುಎಂಬ ಟೀಕೆ; 'ಬೃಂದಾವನ' ವೀಕ್ಷಕರಿಗೆ ವರುಣ್ ಆರಾಧ್ಯ ತಾಯಿ ಹೇಳಿದ್ದೇನು?

ನಟ ವರುಣ್ ಆರಾಧ್ಯ ಅವರಿಗೆ ಡೈಲಾಗ್ ಹೇಳಲು ಕಷ್ಟವಾಗುವಂತ ಸಮಸ್ಯೆ ಇದೆ. ಅದನ್ನು ವೀಕ್ಷಕರು ಸರಿಯಾಗಿಯೇ ಗುರುತಿಸಿದ್ದಾರೆ, ಅದರಲ್ಲೇನೂ ತಪ್ಪಿಲ್ಲ. ಆದರೆ, ಕಾರಣ ಗೊತ್ತಿಲ್ಲದೇ ಅದು ಟೀಕೆಯ ಸ್ವರೂಪಕ್ಕೆ ಹೋಗಿ ತಲುಪಿದೆ. 

Colors Kannada Serial Brundavana actor Varun Aradhya mother clarifies about his stammering problem srb
Author
First Published Jun 2, 2024, 1:52 PM IST

ಕಲರ್ಸ್ ಕನ್ನಡದಲ್ಲಿ ಮೂಡಿ ಬರುತ್ತಿರುವ 'ಬೃಂದಾವನ' ಧಾರಾವಾಹಿಯಲ್ಲಿ ಹೀರೋ ಆಕಾಶ್ ಪಾತ್ರವನ್ನು ನಟ ವರುಣ್ ಆರಾಧ್ಯ ನಿರ್ವಹಿಸುತ್ತಿರುವುದು ಬಹುತೇಕರಿಗೆ ಗೊತ್ತಿದೆ. ವರುಣ್ ಆರಾಧ್ಯ ಸ್ಪಷ್ಟವಾಗಿ ಕನ್ನಡ ಮಾತನಾಡುವುದಿಲ್ಲ ಎಂಬ ಟೀಕೆ ಧಾರಾವಾಹಿ ಶುರುವಾದಾಗಿನಿಂದ್ಲೂ ಕೇಳಿ ಬರುತ್ತಿದೆ. ಆದರೆ ಆ ಟೀಕೆಗಳು ದಿನದಿನಕ್ಕೂ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ನಟ ವರುಣ್ ಆರಾಧ್ಯ ತಾಯಿ ಅದಕ್ಕೆ ಪ್ರತಿಕ್ರಿಯೆ ಕೊಟ್ಟಿದ್ದಾರೆ. ವರುಣ್ ಆರಾಧ್ಯ ಯಾಕೆ ಸ್ಪಷ್ಟವಾಗಿ ಮಾತನಾಡುವುದಿಲ್ಲ? ಅದಕ್ಕೆ ಕಾರಣವೇನು? ಎಂಬುದನ್ನು ನೋಡಿದರೆ ಎಂಥವರಿಗೂ ಕಣ್ಣಿನಲ್ಲಿ ನೀರು ಬರುತ್ತಿದೆ. 

ಹಾಗಿದ್ದರೆ ನಟ ವರುಣ್ ಆರಾಧ್ಯ ಅವರಿಗೆ ಏನಾಗಿದೆ? ಅದಕ್ಕೆ ನಟನ ಪೋಷಕರು ಸ್ಪಷ್ಟ ಉತ್ತರ ಕೊಟ್ಟಿದ್ದಾರೆ. 'ವರುಣ್ ಆರಾಧ್ಯ ಮೈದಾನಲ್ಲಿ ಕಬಡ್ಡಿ ಆಡುವಾಗ ನಾಲಿಗೆ ಅರ್ಧ ಕಟ್ ಆಗಿಹೋಗಿತ್ತು. ಆಸ್ಪತ್ರೆಗೆ ಕರೆದುಕೊಂಡು ಹೋಗಿ ಅವನ ನಾಲಿಗೆಗೆ ಆರಿ ಸ್ಟಿಚ್ ಹಾಕಿಸಲಾಗಿತ್ತು. ಆ ಬಳಿಕ ಅವನಿಗೆ ಸ್ಪಷ್ಟವಾಗಿ ಮಾಡನಾಡಲು ಆಗುವುದಿಲ್ಲ. ಟೀಕೆ ಮಾಡುವ ಕೆಲವರು ಅಂದುಕೊಂಡಂತೆ ಅವನಿಗೆ ಕನ್ನಡವನ್ನು ಸ್ಪಷ್ಟವಾಗಿ ಮಾತನಾಡಲು ಬರುವುದಿಲ್ಲ ಎಂದಲ್ಲ. ಅವನಿಗೆ ಮಾತನಾಡಲಿಕ್ಕೇ ಸರಿಯಾಗಿ ಆಗುವುದಿಲ್ಲ' ಎಂಬ ಸತ್ಯವನ್ನು ಬಿಚ್ಚಿಟ್ಟಿದ್ದಾರೆ. 

ಟ್ರೋಲ್ ಆಗ್ಲಿಲ್ಲ ರಾಕಿಂಗ್ ಸ್ಟಾರ್, ಅನುಪಮಾ ಪ್ರಶ್ನೆಗೆ ಯಶ್ ಕೊಟ್ಟ ಉತ್ತರವೇನು ನೋಡಿ!

'ಕಟ್ ಆಗಿರುವ ನಾಲಿಗೆಯನ್ನು ಹೊಲಿಗೆ ಹಾಕಿ ಜೋಡಿಸಿರುವುದರಿಂದ ವರುಣ್‌ಗೆ ಡೈಲಾಗ್ ಹೇಳುವುದು ಕಷ್ಟವಾಗುತ್ತಿದೆ. ಆದರೂ ಕೂಡ ಅವನ ಪರಿಶ್ರಮ, ಪ್ರತಿಭೆ ಹಾಗೂ ಕಷ್ಟಪಟ್ಟು ಕೆಲಸ ಮಾಡುವ ಗುಣವನ್ನು ಮೆಚ್ಚಿ ಅವನಿಗೆ ಬೃಂದಾವನ ಸೀರಿಯಲ್‌ನಲ್ಲಿ ಅವಕಾಶ ನೀಡಲಾಗಿದೆ. ಅವನು ಬಹಳಷ್ಟು ಕಷ್ಟಪಟ್ಟು ಡೈಲಾಗ್‌ಅನ್ನು ಅರ್ಥವಾಗುವಂತೆ ಹೇಳಲು ಪ್ರಯತ್ನ ಪಡುತ್ತಾನೆ. ದಯವಿಟ್ಟು  ಕ್ಷಮಿಸಿ ಮತ್ತು ಅವನ ಕಷ್ಟವನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿ' ಎಂದು ವರುಣ್ ಆರಾಧ್ಯರ ತಾಯಿ ಬೃಂದಾವನ ಸೀರಿಯಲ್ ವೀಕ್ಷಕರಲ್ಲಿ ಮನವಿ ಮಾಡಿಕೊಂಡಿದ್ದರೆ. 

ನೈಟ್ ಮೆಸೇಜ್ ಮಾಡಿ ಅಂದಿದ್ರಿ ನಂಬರ್ ಕೊಟ್ಟು; ಅನುಶ್ರೀಗೆ ತಗ್ಲಾಕೊಂಡ್ರಾ ಅಚ್ಯುತ್ ಕುಮಾರ್?

ಅಂದರೆ, ನಟ ವರುಣ್ ಆರಾಧ್ಯ ಅವರಿಗೆ ಡೈಲಾಗ್ ಹೇಳಲು ಕಷ್ಟವಾಗುವಂತ ಸಮಸ್ಯೆ ಇದೆ. ಅದನ್ನು ವೀಕ್ಷಕರು ಸರಿಯಾಗಿಯೇ ಗುರುತಿಸಿದ್ದಾರೆ, ಅದರಲ್ಲೇನೂ ತಪ್ಪಿಲ್ಲ. ಆದರೆ, ಕಾರಣ ಗೊತ್ತಿಲ್ಲದೇ ಅದು ಟೀಕೆಯ ಸ್ವರೂಪಕ್ಕೆ ಹೋಗಿ ತಲುಪಿದೆ. ಇದೀಗ ವರುಣ್ ಆರಾಧ್ಯ ತಾಯಿ ಸಮಸ್ಯೆಗೆ ಕಾರಣ ಬಹಿರಂಗ ಗೊಳಿಸುವ ಮೂಲಕ ಈ ಸಮಸ್ಯೆಗೆ ನಿಜವಾದ ಕಾರಣವೇನು ಎಂಬುದನ್ನು ಹೇಳಿದ್ದಾರೆ. ಹೀಗಾಗಿ ಇನ್ಮುಂದೆ ಸೋಷಿಯಲ್ ಮೀಡಿಯಾಗಳಲ್ಲಿ ಬೃಂದಾವನ ಸೀರಿಯಲ್ ನಟ ವರುಣ್ ಆರಾಧ್ಯ ಸಮಸ್ಯೆ ಬಗ್ಗೆ ಗೊತ್ತಿಲ್ಲದೇ ಮಾಡುತ್ತಿರುವ ಟೀಕೆಗಳು ನಿಲ್ಲಬಹುದು. ಆದರೆ, ಅವರ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗಬಹುದೇ ಎಂಬುದೀಗ ನಿಜವಾದ ಪ್ರಶ್ನೆ!

'ಚೈತ್ರದ ಪ್ರೇಮಾಂಜಲಿ' ನಟಿ ಬಾಳಲ್ಲಿ ಘೋರ ದುರಂತ; ಪತಿಗೆ ಏನಾಗಿದೆ, ಎಲ್ಲಿದ್ದಾರೆ ಶ್ವೇತಾ?

Latest Videos
Follow Us:
Download App:
  • android
  • ios