Asianet Suvarna News Asianet Suvarna News

ಏನಾಯ್ತು ಗಟ್ಟಿಗಿತ್ತಿ ಕುಸುಮಾಗೆ? ಭಾಗ್ಯಾಗೆ ನಿಲ್ಲದ ಸವಾಲುಗಳು ಸರಮಾಲೆ!

Bhagya Lakshmi serial: ಹೋಟೆಲ್‌ನಲ್ಲಿ ಟೀ ಕುಡಿಯುತ್ತಾ ಕುಳಿತಿರುವ ಭಾಗ್ಯಾಗೆ ಈ ವಿಷಯ ಗೊತ್ತಾಗುತ್ತಾ ಅನ್ನೋದು ತೀವ್ರ ಕುತೂಹಲ ಮೂಡಿಸಿದೆ. ಒಂದು ವೇಳೆ ಕೆಲಸ ಮಾಡೋ ವಿಷಯ ಅತ್ತೆ-ಸೊಸೆಗೆ ಗೊತ್ತಾದ್ರೆ ಭಾಗ್ಯಾ ಮತ್ತು ಕುಸುಮಾ ಏನು ಮಾಡ್ತಾರೆ ಅಂತ ಸದ್ಯಕ್ಕೆ ಗೊತ್ತಿಲ್ಲ. 

colors kannada serial bhagya lakshmi serial update kusuma collapsed in hotel mrq
Author
First Published Jun 5, 2024, 7:16 PM IST

ಕರುನಾಡಿನ ಮನೆ ಮನೆಯ ಮಹಿಳೆಯರ ಮನವನ್ನು ತಲುಪಿರೋ ಧಾರಾವಾಹಿಯೇ ಭಾಗ್ಯಲಕ್ಷ್ಮಿ (Bhagya Lakshmi Serial) ಪ್ರತಿದಿನ ಹೊಸ ತಿರುವುಗಳೊಂದಿಗೆ ಪ್ರೇಕ್ಷಕರ ಮುಂದೆ ಧಾರಾವಾಹಿ ಬರುತ್ತಿರೋದರಿಂದ ಸಂಜೆ 7 ಗಂಟೆ ಆಗುತ್ತಿದ್ದಂತೆ ಜನತೆ ಟಿವಿ ಮುಂದೆ ಕುಳಿತುಕೊಳ್ಳುತ್ತಾರೆ. ಅತ್ತೆ-ಸೊಸೆ ಅಂದ್ರೆ ಕುಸುಮಾ ಮತ್ತು ಭಾಗ್ಯಳ (Kusuma And Bhagya) ಹಾಗಿರಬೇಕು ಎಂದು ಮಹಿಳೆಯರು (Woman Talk) ಮಾತನಾಡಿಕೊಳ್ಳುತ್ತಿರುತ್ತಾರೆ. ಸೊಸೆಯ ಪರವಾಗಿ ನಿಂತಿರುವ ಕುಸುಮಾ ಮನೆಯಲ್ಲಿ ಯಾರಿಗೂ ತಿಳಿಯದಂತೆ ಹೋಟೆಲ್ ಕೆಲಸಕ್ಕೆ ಹೊರಟಿದ್ದಾಳೆ. ಮತ್ತೊಂದು ಕಡೆ ಫೈವ್ ಸ್ಟಾರ್ ಹೋಟೆಲ್‌ನಲ್ಲಿ ಭಾಗ್ಯ ಕೆಲಸ ಮಾಡುತ್ತಿದ್ದಾಳೆ. ಇದೀಗ ಕೆಲಸ ಮಾಡುತ್ತಲೇ ಒತ್ತಡದಿಂದ ಕುಸುಮಾ ಕುಸಿದಿದ್ದಾಳೆ. 

ಸಣ್ಣ ಹೋಟೆಲ್‌ನಿಂದ ಒತ್ತು ಶಾವಿಗೆ ಮತ್ತು ರಸಾಯಾನ ತೆಗೆದುಕೊಂಡು ಹೋಗಲು ಭಾಗ್ಯ ಬಂದಿದ್ದಾಳೆ. ಆದ್ರೆ ಒತ್ತು ಶಾವಿಗೆ ಮತ್ತು ರಸಾಯನ ಮಾಡುತ್ತಿರೋದು ತನ್ನ ಅತ್ತೆ ಎಂದು ಭಾಗ್ಯಗೆ ಗೊತ್ತಿಲ್ಲ. ಇದಕ್ಕೂ ಮೊದಲು ಹೋಟೆಲ್‌ಗೆ ಬಂದಿದ್ದ ತಾಂಡವ್‌  ಅಮ್ಮನ ಮೇಲೆ ಕೋಪಗೊಂಡು ಕಿರುಚಾಡಿ ಹೋಗಿದ್ದನು. 

ಕುಸುಮಾಳ ಆರೋಗ್ಯದಲ್ಲಿ ವ್ಯತ್ಯಾಸ 

ಮನೆ ಸಾಲದ ಕಂತು ನೀಡಬೇಕು ಎಂದು ತಾಂಡವ್ ಹೇಳಿದ್ದಾನೆ. ಇತ್ತ ಮನೆ ನಡೆಸೋ ಜವಾಬ್ದಾರಿಯೂ ಭಾಗ್ಯ ಮೇಲಿದೆ. ಈ ಹಿನ್ನೆಲೆ ಕುಸುಮಾ ಈ ವಯಸ್ಸಿನಲ್ಲಿಯೂ ಕೆಲಸ ಮಾಡುತ್ತಿದ್ದಾಳೆ. ಮನೆಯಲ್ಲಿ ದೇವರ ಕೀರ್ತನೆ ಕೇಳಲು ಹೋಗುತ್ತಿರೋದಾಗಿ ಹೇಳಿ ಬಂದಿರುವ ಕುಸುಮಾಳ ಆರೋಗ್ಯದಲ್ಲಿ ವ್ಯತ್ಯಾಸ ಕಂಡು ಬಂದಿದೆ. 

ಅಮೃತಧಾರೆಯಲ್ಲಿ ಹೆಚ್ಚಾಗ್ತಿದೆ ರೊಮ್ಯಾನ್ಸ್ : ಬರ್ತಾ ಬರ್ತಾ ಡೈರೆಕ್ಟರ್ ಪೋಲಿ ಆಗ್ತಿದ್ದಾರೆಂದ ಫ್ಯಾನ್ಸ್!

ಭಾಗ್ಯಾ ಮತ್ತು ಕುಸುಮಾ ಏನು ಮಾಡ್ತಾರೆ?

ಒತ್ತು ಶಾವಿಗೆ ಮಾಡುತ್ತಿರುವ ಸಂದರ್ಭದಲ್ಲಿ ಮನೆಯ ಕಷ್ಟಗಳು, ಪುತ್ರ ತಾಂಡವ್ ಮಾತುಗಳೆಲ್ಲಾ ಕುಸುಮಾ ಕಣ್ಮುಂದೆ ಬಂದಿವೆ. ನೋಡ ನೋಡುತ್ತಿದ್ದಂತೆ ಹೋಟೆಲ್ ಅಡುಗೆ ಕೋಣೆಯಲ್ಲಿ ಕುಸುಮಾ ಕುಸಿದಿದ್ದು, ಮಾಡಿರೋ ಒತ್ತು ಶಾವಿಗೆ ಎಲ್ಲಾ ನೆಲಪಾಲು ಆಗಿದೆ. ಅದೇ ಹೋಟೆಲ್‌ನಲ್ಲಿ ಟೀ ಕುಡಿಯುತ್ತಾ ಕುಳಿತಿರುವ ಭಾಗ್ಯಾಗೆ ಈ ವಿಷಯ ಗೊತ್ತಾಗುತ್ತಾ ಅನ್ನೋದು ತೀವ್ರ ಕುತೂಹಲ ಮೂಡಿಸಿದೆ. ಒಂದು ವೇಳೆ ಕೆಲಸ ಮಾಡೋ ವಿಷಯ ಅತ್ತೆ-ಸೊಸೆಗೆ ಗೊತ್ತಾದ್ರೆ ಭಾಗ್ಯಾ ಮತ್ತು ಕುಸುಮಾ ಏನು ಮಾಡ್ತಾರೆ ಅಂತ ಸದ್ಯಕ್ಕೆ ಗೊತ್ತಿಲ್ಲ. 

ಇನ್ನೊಂದೆಡೆ ಶ್ರೇಷ್ಠಾಗೆ 2 ಲಕ್ಷ ರೂಪಾಯಿ ನೀಡುವ ಹೊಣೆ ಭಾಗ್ಯಳ ಮೇಲಿದೆ. ಮನೆಯಲ್ಲಿ ಮಕ್ಕಳನ್ನು ನೋಡಿಕೊಳ್ಳುವ ಜವಾಬ್ದಾರಿ. ಇದೀಗ ಅತ್ತೆಯ ಅನಾರೋಗ್ಯ. ಹಣ ಹೊಂದಿಸಲು ಪರದಾಡುತ್ತಿರುವ ಭಾಗ್ಯಗೆ ಸಾಲು ಸಾಲು ಸವಾಲುಗಳು ಎದುರಾಗುತ್ತಿವೆ.

ಜಾನು ನೆನಪಲ್ಲಿ ದೇವದಾಸ್ ಆಗಿರೋ ಲಕ್ಷ್ಮೀ ನಿವಾಸ ವಿಶ್ವನ ಕುರಿತು ಇಂಟ್ರೆಸ್ಟಿಂಗ್ ಫ್ಯಾಕ್ಸ್ಟ್

ಪ್ರತಿಯೊಬ್ಬ ಅತ್ತೆ-ಸೊಸೆ ನೋಡಬೇಕಾದ ಧಾರಾವಾಹಿ ಎಂದ ವೀಕ್ಷಕರು

ಮನಸ್ಸಿನಲ್ಲಿ ಒತ್ತಡ ಇದ್ದರೂ ಇದೇ ರೀತಿಯಲ್ಲಿ ಆಗುವುದು. ಆ ಸಮಯದಲ್ಲಿ BP ಮೇಲೆರುತ್ತದೆ. ಮನಸ್ಸನ್ನು ಹದವಾಗಿ ಇಟ್ಟುಕೊಂಡರೆ ಮಾತ್ರ ದೇಹ ಸಮ ಸ್ಥಿತಿಯಲ್ಲಿ ಇರುತ್ತದೆ. ಪಾಪ, ಕುಸುಮಾ.. ರಾಮಾ/ ಕೃಷ್ಣ ಎನ್ನುವ ಕಾಲದಲ್ಲಿ ಈ ಪರಿಸ್ಥಿತಿ. ಆದರೂ, ಎಲ್ಲಾ ಅತ್ತೆ/ ಸೊಸೆಯರು ನೋಡಬೇಕಾದ ಸೀರಿಯಲ್. ಅತ್ತೆಯ ಪಾತ್ರ ಸೂಪರ್ ಎಂದು ಶ್ಯಾಮಲಾ ಸತ್ಯ ಎಂಬವರು ಧಾರಾವಾಹಿಯ ಪ್ರೋಮೋ ವಿಡಿಯೋಗೆ ಕಮೆಂಟ್ ಮಾಡಿದ್ದಾರೆ. ಪಾಪ ಕುಸುಮಾ, ಮಧ್ಯಮ ವರ್ಗದವರು ಜೀವನ ಪ್ರತಿ ದಿನ ಹೇಗಿರುತ್ತೆ ಎಂದಿದ್ದಾರೆ.

Latest Videos
Follow Us:
Download App:
  • android
  • ios