ಟಿವಿ ಒಡೆದು ಬಿಗ್ ರಿಸ್ಕ್‌ಗೆ ಕೈ ಹಾಕಿದ 'ಸೀತಾವಲ್ಲಭ' ಅಧಿತಿ?
ನೋಡಲು ಮುದ್ದು ಮುದ್ದಾಗಿ ಗೊಂಬೆ ಥರ ಇರೋ ಬೆಡಗಿ. ಬಾಯಿ ತೆರೆದ್ರೆ ಸಾಕು ಅರಳು ಹುರಿದಂತೆ ಪಟಪಟನೆ ಮಾತಾಡೋ ಚಾಲಾಕಿ. ಇನ್ನೂ ಈಕೆಯ ನಟನೆ ಅಂದ್ರೆ ಕೇಳ್ಬೇಕಾ? ತನ್ನ ಸಹಜ ಮತ್ತು ನೇರ ಮಾತುಗಳಿಂದ ಎಲ್ಲರ ಗಮನ ಸೆಳೆದ ಈಕೆ ಆಧಿತಿ ಅಲಿಯಾಸ್ ಕಾವ್ಯಾ ರಮೇಶ್.
ಪಕ್ಕಾ ಹಳ್ಳಿ ಹುಡುಗಿ:
ಎಸ್. ಕಾವ್ಯಾ ಪಕ್ಕಾ ಹಳ್ಳಿ ಹುಡುಗಿ ಅಂದ್ರೆ ನೀವು ನಂಬಲೇಬೇಕು. ಬಳ್ಳಾರಿ ಸಮೀಪದ ಹರಪ್ಪನ ಹಳ್ಳಿಯ ಸುಂದರಾಂಗಿ ಈಕೆ. ಬಾಲ್ಯದಿಂದಲೂ ತಾನು ಎಲ್ಲಾ ಕ್ಷೇತ್ರದಲ್ಲೂ ಗುರುತಿಸಿಕೊಳ್ಳಬೇಕೆಂಬ ಆಸೆ. ಹಾಗಾಗಿ ಶಾಲೆಯಲ್ಲಿರುವಾಗ ಕೆಲವು ಸ್ಪರ್ಧೆಗಳ ಕುರಿತು ಏನೂ ತಿಳಿದಿಲ್ಲದಿದ್ದರೂ ನನ್ನ ಹೆಸರು ಅಲ್ಲಿ ಇರಬೇಕೆಂದು ಹೋಗಿ ಹೆಸರು ಕೊಟ್ಟು ಭಾಗವಹಿಸುತ್ತಿದ್ದರಂತೆ. ಈ ಮೂಲಕ ಎಲ್ಲಾ ಕಡೆಯು ತನ್ನನ್ನು ತಾನು ಗುರುತಿಸಿಕೊಳ್ಳುತ್ತಿದ್ದರು.
ಅರಸನಕೋಟೆ ಅಖಿಲಾಂಡೇಶ್ವರಿ ಬಗ್ಗೆ ತಿಳಿದಿರದ ವಿಚಾರಗಳಿವು!
ಟಿವಿ ಒಡೆಯುತ್ತೇನೆ!
ಕಾವ್ಯಾ ಹೆತ್ತವರ ಮುದ್ದಿನ ಮಗಳು. ಬಾಲ್ಯದಿಂದಲೂ ಟಿವಿಯಲ್ಲಿ ಬರುತ್ತಿದ್ದ ಕಲಾವಿದರನ್ನು ಕಂಡಾಗ ಅವರೇಕೆ ಟಿವಿ ಒಳಗಡೆ ಇದ್ದಾರೆ? ನಾನು ಟಿವಿ ಒಡೆದು ಅವರನ್ನು ಮಾತಾಡಿಸಿಕೊಂಡು ಬರುತ್ತೇನಮ್ಮಾ ಎಂದು ಹೇಳುತ್ತಿದ್ದರಂತೆ. ಹಾಗಾಗಿ ಅಮ್ಮನಿಗೆ ಟೆನ್ಷನ್. ಮಗಳು ಎಲ್ಲಿ ಟಿವಿ ಒಡೆದು ಬಿಡುತ್ತಾಳೋ ಎಂದು. ಬಾಲ್ಯದಿಂದಲೂ ಸಖತ್ ಮಾತಾಡ್ತಾ ತರಲೆ ಆಗಿದ್ದ ಇವರು ನಂತರ ವಿದ್ಯಾಭ್ಯಾಸದಲ್ಲಿ ತೊಡಗಿಸಿಕೊಳ್ಳುತ್ತಾ ಸೈಲೆಂಟ್ ಆಗ್ತಾ ಹೋದ್ರಂತೆ. ಸದ್ಯ ಬಿಎಸ್ಸಿ ವಿದ್ಯಾರ್ಜನೆ ಮಾಡುತ್ತಾ ಕಿರುತೆರೆಯಲ್ಲೂ ನಟಿಸುತ್ತಿದ್ದಾರೆ.
'ಪಾರು'ಗೆ ಕಾಟ ಕೊಡುವ ಈ ವಿಲನ್ ಹಿಂದೆ ಇದೆ ಒಳ್ಳೆಯ ಮುಖ!
ಆಡಿಶನ್ ಅಂದ್ರೆ ಹೆಂಗಿರುತ್ತೆ?
ನಟನೆಯ ಬಗ್ಗೆ ಗಂಧಗಾಳಿಯೂ ಈಕೆಗೆ ತಿಳಿದಿರಲಿಲ್ಲ. ಬೆಂಗಳೂರಿನ ಸಂಬಂಧಿಕರ ಮನೆಯಲ್ಲಿ ಕಾಲಕಳೆಯುತ್ತಿರುವ ಸಂದರ್ಭದಲ್ಲಿ ಕಲರ್ಸ್ ಚಾನೆಲ್ ನಲ್ಲಿ ಆಡಿಶನ್ ಜಾಹಿರಾತನ್ನು ನೋಡಿದರಂತೆ. ಇದರಿಂದ ಕುತೂಹಲಗೊಂಡ ಇವರು ಆಂಟಿ ಒಂದು ಆಡಿಶನ್ ಟ್ರಯಲ್ ಕೊಡು ಎಂದು ಸೂಚಿಸಿದ್ದರಂತೆ. ಮೊದಲೇ ಏನು ತಿಳಿದಿರದ ಇವರು ಅವರ ಮಾತನ್ನು ನಿರಾಕರಿಸಿದ್ದರು. ನಂತರ ಅಮ್ಮ ಮತ್ತು ಆಂಟಿ ತುಂಬಾ ಒತ್ತಾಯ ಮಾಡಿದ ಕಾರಣ ಇರ್ಲಿ ನೋಡೋಣ ಎಂದು ಆಡಿಶನ್ ಕೊಡಲು ಹೋಗಿದ್ದರು. ಆಯ್ಕೆ ಆಗುವ ಚಾಲ್ಸ್ ಇಲ್ಲ ಎಂದು ತಿಳಿದಿದ್ದ ಇವರಿಗೆ ಒಂದು ವಾರದ ನಂತರ ಶಾಕ್ ಕಾದಿತ್ತು. ಅದುವೇ ಅವರು ನೀಡಿದ ಆಡಿಶನ್ ನಲ್ಲಿ ಸೆಲೆಕ್ಟ್ ಆಗಿದ್ದರು. ಆದರೂ ಮನೆಯವರಿಗೆ ತಿಳಿಸದೇ ಸುಮ್ಮದಿದ್ದ ಇವರು ಮೂರು ದಿನಗಳ ನಂತರ ಅಮ್ಮನಿಗೆ ತಿಳಿಸಿದರು. ದೊರೆತ ಅವಕಾಶವನ್ನು ಕೈ ಚೆಲ್ಲ ಬೇಡ ಎಂದು ತಾಯಿ ಸೂಚಿಸಿದ್ದ ಕಾರಣ ಬೆಂಗಳೂರಿನಲ್ಲಿ ಇವರ ಕಿರುತೆರೆಯ ಜರ್ನಿ ಪ್ರಾರಂಭವಾಗಿತ್ತು.
'ರಾಧಾ ಕಲ್ಯಾಣ' ರಾಧೆಗೆ ಕಂಕಣ ಭಾಗ್ಯ; ಮನಸೋತ ಕೃಷ್ಣಯಾರು?
ಅವಕಾಶಗಳ ಸುರಿಮಳೆ:
ಮೊದಮೊದಲು ಬಣ್ಣದ ಲೋಕದ ಕುರಿತು ಆಸಕ್ತಿ ಇರದ ಇವರು ನಂತರದ ದಿನಗಳಲ್ಲಿ ಅದನ್ನು ಪ್ರೀತಿಸಲು ಪ್ರಾರಂಭಿಸಿದರು.ಇವರು ಮೊದಲು ಬಣ್ಣ ಹಚ್ಚಿದ್ದು 'ಮಾಂಗಲ್ಯಂ ತಂತುನಾನೆನಾ' ಧಾರಾವಾಹಿಯಲ್ಲಿ. ಅಲ್ಲಿ ರಘು ಚರಣ್ ಅವರ ಮೂಲಕ ಕಿರುತೆರೆಯನ್ನು ಪ್ರವೇಶಿಸಿದರು. ಮೊದ ಮೊದಲು ಯಾವ ರೀತಿಯಲ್ಲಿ ಟೈಂ ಮ್ಯಾನೆಜ್ ಮಡಬೇಕೆಂದು ಅವರಿಗೆ ಗೊತ್ತಾಗುತ್ತಿರಲಿಲ್ಲವಂತೆ. ಇದರ ಜೊತೆಗೆ ಸಾಕಷ್ಟು ಆಫರ್ಸ್‌ಗಳು ಕೂಡಾ ಇವರನ್ನು ಅರಸಿ ಬರುತ್ತಿತ್ತು. ಆಗ ದೊರೆತ ಧಾರವಾಹಿಯೇ ಸೀತಾವಲ್ಲಭ. ಹಾಗಾಗಿ ಕೆಲವೊಂದು ಗೊಂದಲಗಳ ಮಡುವಿನಲ್ಲಿದ್ದ ಕಾವ್ಯಾ ಮಾಂಗಲ್ಯಂ ತಂತುನಾನೇನಾ ಧಾರವಾಹಿಯನ್ನು ಬಿಡಬೇಕಾಗಿ ಬಂತು.
ಪ್ರಸ್ತುತ ಕಲ್ಲರ್ಸ್ ಕನ್ನಡದಲ್ಲಿ ಪ್ರಸಾರವಾಗಿತ್ತಿರುವ ಸೀತಾವಲ್ಲಭ ಧಾರಾವಾಹಿಯಲ್ಲಿ ಅಧಿತಿ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಇದರ ಜೊತೆಗೆ ಪರಭಾಷೆಗಳಿಂದಲೂ ಆಫರ್ಸ್‌ಗಳು ಬಂದಿದೆ. ಸದ್ಯ ಎರಡು ಸಿನಿಮಾಗಳಲ್ಲಿಯೂ ನಟಿಸುತ್ತಿರುವ ಇವರಿಗೆ ಲೀಡ್ ರೋಲ್ನಲ್ಲೂ ಕಾಣಿಸಿಕೊಳ್ಳುವಂತಹ ಅವಕಾಶಗಳು ಬಂದಿವೆ. ಶ್ರೀದೇವಿ ಇವರ ನಟನಾ ಲೋಕದ ರೋಲ್ ಮಾಡೆಲ್ ಅಂತೆ. ಹಾಗಾಗಿ ಅವರ ಜೀವನದ ಕುರಿತಾದ ಸಾಕಷ್ಟು ವಿಚಾರಗಳನ್ನು ಇವರು ಪಾಲಿಸುತ್ತಾರಂತೆ.
ಸುಷ್ಮಾ ಸದಾಶಿವ್
ವಿವೇಕಾನಂದ ಕಾಲೇಜು, ಪುತ್ತೂರು