ಕಲರ್ಸ್‌ ಕನ್ನಡದಲ್ಲಿ ಪ್ರಸಾರವಾಗುವ 'ಸೀತಾ ವಲ್ಲಭ' ಧಾರಾವಾಹಿಯ ಮುಖ್ಯ ಪಾತ್ರಧಾರಿ ಗುಬ್ಬಿ ಅಲಿಯಾಸ್ ಸುಪ್ರೀತಾ ತೆಲುಗು ಸೀರಿಯಲ್‌ನಲ್ಲಿ ನಟಿಸುತ್ತಿರುವ ವಿಚಾರದ ಬಗ್ಗೆ ವೆಬ್‌ಸೈಟ್‌ ಸಂದರ್ಶನವೊಂದರಲ್ಲಿ ರಿವೀಲ್‌ ಮಾಡಿದ್ದಾರೆ.

ನಟನೆಗೆ ಭಾಷೆಯ ಹಂಗಿಲ್ಲ ಎಂದು ನಂಬುವ ಸುಪ್ರೀತಾ ದಿನಾ ರಾತ್ರಿ ಪ್ರಸಾರವಾಗಲಿರುವ 'ಸಾಚಿತ್ರಮ್ಮಗಾರಿ ಅಬ್ಬಾಯಿ' ತೆಲುಗು ಧಾರಾವಾಹಿಯಲ್ಲಿ ಕನ್ನಡದ ಬಿಗ್‌ಬಾಸ್ ಚಂದನ್‌ಗೆ ಜೋಡಿಯಾಗಿ ಮಿಂಚಲಿದ್ದಾರೆ. ಇದೊಂದು ಕೌಟುಂಬಿಕ ಹಿನ್ನಲೆ ಇರುವ ಧಾರಾವಾಹಿಯಾಗಿದ್ದು, ನಂದಿನಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

‘ಸೀತಾವಲ್ಲಭ’ ಗುಬ್ಬಿ ಹಿಂದಿದೆ ಇಂಟರೆಸ್ಟಿಂಗ್ ಕಹಾನಿ!

ಟೈಮ್ ಮ್ಯಾನೇಜ್‌ಮೆಂಟ್‌ನಲ್ಲಿ ಸುಪ್ರೀತಾರದ್ದು ಎತ್ತಿದ ಕೈ. ಆದ ಕಾರಣ ತೆಲುಗು ಧಾರಾವಾಹಿಯಾಗಿ ಹೈದರಾಬಾದಿನಲ್ಲಿ ಶೂಟಿಂಗ್ ನಡೆಯುತ್ತಿದ್ದು, ಕನ್ನಡ ಧಾರಾವಾಹಿ ಶೂಟಿಂಗ್ ಬೆಂಗಳೂರಲ್ಲಿ ನಡೆಯುತ್ತಿದೆ. ಕನ್ನಡ, ತೆಲುಗು ಕಿರುತೆರೆಯನ್ನು ಬ್ಯಾಲೆನ್ಸ್‌ ಮಾಡುತ್ತಿದ್ದಾರಂತೆ.