ರಜನಿ ಮೂಲತಃ ಕುಂದಾಪುರದವರು. ಹಳ್ಳಿಯಲ್ಲಿ ಹುಟ್ಟಿ ಬೆಳೆದ ಹುಡುಗಿ. ಬಾಲ್ಯದಿಂದಲೂ ಒಳ್ಳೆ ಟಾಮ್ ಬಾಯ್ ಥರ ಬೆಳೆದ ಇವರು ತರ್ಲೆ ಮಾಡೋದ್ರಲ್ಲಿ No.1. ಇವರ ಕಿತಾಪತಿಗಳನ್ನು ಕಂಡು ಹೆತ್ತವರಂತೂ ಅಯ್ಯೋ ದೇವರೇ! ಹುಡ್ಗೀರು ಈ ಥರನೂ ಇರ್ತಾರಾ ಎಂದು ತಲೆಕೆಡಿಸಿಕೊಳ್ತಿದ್ರಂತೆ!

ರಂಗಭೂಮಿ ಕಲಾವಿದೆ:

ಬಾಲ್ಯದಿಂದಲೂ ಕಪಿಚೇಷ್ಟೆ ಮಾಡ್ತಾ ಇದ್ದ ಇವರು ಒಂದು ಬಾರಿನೂ ಸ್ಟೇಜ್ ಹತ್ತಿದವರಲ್ಲ. ಆದ್ರೆ ಸ್ಪೋಟ್ಸ್ ಅಂದ್ರೆ ಸಿಕ್ಕಾಪಟ್ಟೆ ಕ್ರೇಜ್. ಪಿಯುಸಿ ತನಕ ಸ್ಪೋರ್ಟ್‌ನಲ್ಲಿ ಸಕ್ರಿಯವಾಗಿದ್ದ ಇವರಿಗೆ ರಂಗಭೂಮಿ ಅಂದ್ರೆ ಏನೋ ಒಂದು ರೀತಿಯ ಒಲವಿತ್ತು. ಹಾಗಾಗಿ ಮದುವೆಯ ನಂತರ ರಂಗಭೂಮಿಯನ್ನ ಸೇರಿಕೊಂಡ ಇವರು ಹಲವಾರು ಶೋಗಳನ್ನ ಮಾಡಿದ್ದಾರೆ. ಆ ನಂತರ ಪ್ರಾರಂಭವಾಗಿದ್ದೇ ಇವರ ಬಣ್ಣದ ಲೋಕದ ಪಯಣ.

ಕಾಟ ಕೊಡೋ ವಿಲನ್:

ಸ್ಕ್ರೀನ್ ಮೇಲೆ ಸಿಕ್ಕಾಪಟ್ಟೆ ಕಾಡ್ಸೋ ಇವ್ರು 'ಹರಹರ ಮಹಾದೇವಾ', 'ನಿಹಾರಿಕ', 'ಯುಗಳಗೀತೆ' ಸೇರಿದಂತೆ ಕಿರುತೆರೆ ಹಾಗೂ ಕೆಲವೊಂದು ಸಿನೆಮಾಗಳಲ್ಲಿ ಈಗಾಗಲೇ ನಟಿಸಿದ್ದಾರೆ. ರಂಗನಾಯಕಿ ಧಾರಾವಾಹಿಯಲ್ಲಿ ಇವರು ನಿರ್ವಹಿಸುವ ಪಾತ್ರಕ್ಕೂ ನಿಜ ಜೀವನಕ್ಕೂ ಒಂದಿಷ್ಟು ಹೋಲಿಕೆನೇ ಇಲ್ಲ. ರಿಯಲ್ ಲೈಫ್‍ನಲ್ಲಿ ಬಿಂದಾಸ್ ಆಗಿ ಕಾಮಿಡಿ ಮಾಡ್ತಾ ತನ್ನ ಜೊತೆಗಿರುವವರನ್ನು ನಗಿಸ್ತಾ ಇರುವ ಇವರನ್ನು ರೀಲ್ ನಲ್ಲಿ ಕಂಡವರು ಶಾಕ್ ಆಗಿ ನೀವೇನಾ ಆ ಪಾತ್ರ ಮಾಡ್ತಾ ಇರೋದು ಅಂತ ದಂಗಾಗುತ್ತಾರಂತೆ!

ಕೃಷಿ ಅಂದ್ರೆ ಸಿಕ್ಕಾಪಟ್ಟೆ ಇಷ್ಟ! 

ಇವರ ನಟನೆಯನ್ನು ಕಂಡು ಈಗಾಗಲೇ ಸಾಕಷ್ಟು ಆಫರ್ಸ್ ಗಳು ಇವರನ್ನು ಅರಸಿ ಬಂದಿದೆ. ಒಂದು ಉತ್ತಮ ಕಥೆಯಿರುವ ವಿಭಿನ್ನ ಪಾತ್ರದಲ್ಲಿ ತನ್ನನ್ನು ತಾನು ನೋಡುವ ಆಸೆ ಇದೆಯಂತೆ.   ಇದರ ಜೊತೆಗೆ ಕೃಷಿ, ಗದ್ದೆ, ತೋಟ ಅಂದ್ರೆ ಇವರಿಗೆ ತುಂಬಾ ಇಷ್ಟವಂತೆ. ಮುಂದೆ ತನ್ನ ಜೀವನಲ್ಲಿ ಕೃಷಿ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳಬೇಕೆಂಬ ಆಸಕ್ತಿ ಹೊಂದಿರುವ ಇವರಿಗೆ ಊರಿನಲ್ಲಿ ಒಂದು ತೋಟವನ್ನು ಖರೀದಿಸಬೇಕೆಂಬ ಕನಸಿದೆಯಂತೆ!