ಪಕ್ಕಾ ಟಾಂಮ್ ಬಾಯ್:

ಬಾಲ್ಯದಲ್ಲಿ ಓದು ಅಂದ್ರೆ  ಅಷ್ಟಕಷ್ಟೆ. ಪಕ್ಕಾ ಟಾಮ್ ಬಾಯ್‌, ಥರ ಬಾಯ್‌ ಕಟ್ ಮಾಡಿಕೊಂಡು ತರ್ಲೆ ಮಾಡ್ತಾ ಆಡ್ತಾ ಇದ್ರು. ಡ್ರೈವಿಂಗ್, ಕುಕ್ಕಿಂಗ್, ಡ್ಯಾನ್ಸ್ ಮತ್ತು ಸಿಂಗಿಂಗ್ ಅಂದ್ರೆ ಮೊದಲಿನಿಂದಲೂ ಸಿಕ್ಕಾಪಟ್ಟೆ ಇಷ್ಟವಿದ್ದ ಇವರು ಬಣ್ಣದ ಲೋಕಕ್ಕೆ ಬಂದಿದ್ದೆ ಒಂದು ವಿಶೇಷ.

'ಅಗ್ನಿಸಾಕ್ಷಿ'ಯಲ್ಲಿ ಸೈಲೆಂಟ್‌ ತನು ರಿಯಲ್ ಲೈಫಲ್ಲಿ ಇಷ್ಟೊಂದು ವೈಲೆಂಟಾ!?

ಸ್ಕ್ರಿಪ್ಟ್ ರೈಟರ್:

ಚಿಕ್ಕವರಿದ್ದಾಗ ಟಿವಿ ನೋಡ್ತಾ ಡ್ರಾಮಾಗಳಿಗೆ ಸ್ಕ್ರಿಪ್ಟ್ ಬರಿತಿದ್ರು. ಬೆಂಗಳೂರಿನ ವಿದ್ಯಾನಿಕೇತನ್ ಶಾಲೆಯಲ್ಲಿ ಓದುತ್ತಿರುವಾಗ ಪ್ರತಿಭಾ ಕಾರಂಜಿಗಾಗಿ ಇವರು ರಚಿಸಿದ ಡ್ರಾಮಾಗಳು ಜಿಲ್ಲಾ ಮಟ್ಟದಲ್ಲಿ ಪ್ರಶಸ್ತಿಗಳನ್ನು ಪಡೆದಿಕೊಂಡಿತ್ತು. ಇದುವೇ ಇವರನ್ನು ನಟನಾ ಲೋಕಕ್ಕೆ ಬರುವಂತೆ ಮಾಡಿತ್ತು.

ಕಾಲೇಜ್‌ ಟಾಪರ್ ಈಕೆ ನಟನೆಯಲ್ಲೂ ಶಾಪರ್:

ಪಠ್ಯೇತರ ಚಟುವಟಿಕೆಯ ಜೊತೆಗೆ ಓದಿನಲ್ಲೂ ಮುಂದಿದ್ದ ಈಕೆ 10 ನೇ ಹಾಗೂ ಪಿಯುಸಿಯಲ್ಲಿ 95% ಮಾರ್ಕ್ಸ್ ಪಡೆದುಕೊಂಡಿದ್ದರು. ತದ ನಂತರ ಅಪ್ಪ ಅಮ್ಮನ ಸಲಹೆಯಂತೆ ಸಿಎ ಮಾಡಲು ಮುಂದಾದರು. ಈ ಸಂದರ್ಭದಲ್ಲಿ ತಂದೆಯವರ ಸಲಹೆಯ ಮೇರೆಗೆ ಉಷಾ ಭಂಡಾರಿಯವರ ತರಬೇತಿ  ಕೇಂದ್ರವನ್ನು ಸೇರಿಕೊಂಡು ನಟನೆಯ ಸಾರವನ್ನುಅರಿತುಕೊಂಡರು. ಅಲ್ಲಿಂದ ಪ್ರಾರಂಭವಾಗಿದ್ದೆ ಇವರ ನಟನಾ ಜರ್ನಿ. 'ರಂಗನಾಯಕಿ', 'ಮರಳಿ ಬಂದಳು ಸೀತೆ', 'ಭೂಮಿ ತಾಯಾಣೆ' ಸೀರಿಯಲ್‌ಗಳಲ್ಲಿ ನಟಿಸಿರುವ ಇವರು ಕರುನಾಡಿನಾದ್ಯಂತ ಮನೆ ಮಾತಾಗಿ ಕಲರ್ಸ್‌ ಅನುಬಂಧ ಅವಾರ್ಡ್‌ನಲ್ಲಿ 'ರಂಗನಾಯಕಿ' ಧಾರಾವಾಹಿಗಾಗಿ ಬೆಸ್ಟ್ ಸಹೋದರಿ ಅವಾಡ್ಸ್‌ ಅನ್ನು ಪಡೆದುಕೊಂಡಿದ್ದರು.

'Bro-in-Law' ಅಂತ ಹೇಳ್ತಾ 'ಜೊತೆ ಜೊತೆಯಲಿ' ಮಿಂಚುತ್ತಿರುವ ಮಾನ್ಸಿ ಯಾರು ?

ಅಕ್ಕ-ತಂಗಿ ಬಿಂದಾಸ್ ಕಾಂಬಿನೇಷನ್:

ಹೌದು, ಇಂಚರಾ ಅವರ ಅಕ್ಕ ಮಾನ್ಸಿ ಜೋಶಿ. ಸದ್ಯ ಇಬ್ಬರೂ ಬಣ್ಣದ ಲೋಕದಲ್ಲಿ ಬ್ಯುಸಿಯಾಗಿದ್ದಾರೆ.ಇಬ್ಬರೂ ಜೊತೆಗಿದ್ದಾಗ ತುಂಬಾ ಬಿಂದಾಸ್ ಮಾಡೋ ಹುಡುಗಿಯರು. ಆದ್ರೆ ಈಗ ಅಕ್ಕ-ತಂಗಿ ಇಬ್ರೂ ಸೆಲೆಬ್ರಿಟಿಗಳು. ಹಾಗಾಗಿ ಈಗ ಇವರಿಬ್ಬರೂ ಎಲ್ಲೇ ಹೋದ್ರು ಜನ ಗುರುತಿಸೋ ಕಾರಣ ಕೊಂಚ ಮಟ್ಟಿಗೆ ತಮ್ಮ ತುಂಟಾಟಗಳನ್ನು ಕಮ್ಮಿ ಮಾಡಿದ್ದಾರೆ.

ಕೃಷ್ಣ ಭಕ್ತೆ:

ಜೀವನದಲ್ಲಿ ಏನೇ ಆಗಲಿ ನಮ್ಮ ಪ್ರಯತ್ನ ನಾವು ಮಾಡ್ತಾ ಹೋದ್ರೆ ದೇವರು ಒಂದಲ್ಲಾ ಒಂದು ದಿನ ದಯೇ ಪಾಲಿಸ್ತಾನೆ ಎನ್ನುವ ಇವರು ಪಕ್ಕಾ ಕೃಷ್ಣ ಭಕ್ತೆ. ತನ್ನ ಬದುಕಿನಲ್ಲಿ ಅದೇನೆ ಆದರೂ ಅವೆಲ್ಲವನ್ನು ಕೃಷ್ಣನೇ ನೋಡಿಕೊಳ್ಳತ್ತಾನೆ ಅನ್ನುವ ನಂಬಿಕೆ ಇವರದ್ದು.  ಈಗಾಗಲೇ ಸಾಕಷ್ಟು ಸಿನಿಮಾ ಆಫರ್ಸ್‌ಗಳು ಬಂದಿದೆ. ಸದ್ಯ ಉತ್ತಮ ಕಥೆಯ ಬಂದರೆ ಒಂದು ಇಂಟ್ರೆಸ್ಟಿಂಗ್ ರೋಲ್‌ನಲ್ಲಿ ಕಾಣಿಸಿಕೊಳ್ಳಬೇಕು ಎಂಬುದು ಇವರ ಕನಸು.

ಗಟ್ಟಿಮೇಳ 'ಜಗಳ ಗಂಟಿ' ನಿಶಾ ರವಿಕುಮಾರ್ ಗ್ಲಾಮರಸ್ ಫೋಟೋ!