ನಂದಗೋಕುಲ ಸೀರಿಯಲ್ ನಲ್ಲಿ ಮೀನಾ ಹಾಗೂ ಕೇಶವನ ಮದುವೆ ಸದ್ಯದ ಹೈಲೈಟ್. ಕೇಶವ, ಮೀನಾ ಮದುವೆ ಆಗ್ತಾನಾ? ವಲ್ಲಭ ಕೊಟ್ಟ ಮಾತು ಮೀರ್ತಾನಾ? ಎಲ್ಲದಕ್ಕೂ ಸದ್ಯವೇ ಉತ್ತರ ಸಿಗ್ತಿದೆ. 

ಕಲರ್ಸ್ ಕನ್ನಡ (Colors Kannada)ದಲ್ಲಿ ಮೂಡಿ ಬರ್ತಿರುವ ನಂದ ಗೋಕುಲ (Nanda Gokula) ಸೀರಿಯಲ್ ಗೆ ಹೊಸ ಟ್ಟಿಸ್ಟ್ ಸಿಕ್ಕಿದೆ. ಇಷ್ಟು ದಿನ ಅಪ್ಪನಿಗೆ ಹೆದರ್ತಿದ್ದ ಕೇಶವ ಬಹು ಮುಖ್ಯ ನಿರ್ಧಾರ ತೆಗೆದುಕೊಂಡಿದ್ದಾನೆ. ಅಪ್ಪನ ವಿರೋಧದ ಮಧ್ಯೆ ಮೀನಾ ಮದುವೆಯಾಗಲು ಮುಂದಾಗಿದ್ದಾನೆ. ದೇವಸ್ಥಾನದಲ್ಲಿ ಮೀನಾ ಹಾಗೂ ಕೇಶವನ ಮದುವೆಗೆ ಉಸ್ತುವಾರಿ ವಹಿಸಿದ್ದು ವಲ್ಲಭ.

ನಂದ ಗೋಕುಲ ದೊಡ್ಡ ಕುಟುಂಬದ ದೊಡ್ಡ ಕಥೆ. ಶ್ರೀಮಂತರ ಮನೆ ಹುಡುಗಿ ಗಿರಿಜಾ, ಮನೆಯಲ್ಲಿ ಕೆಲ್ಸ ಮಾಡ್ತಿದ್ದ ನಂದನನ್ನು ಪ್ರೀತಿಸಿ ಮದುವೆ ಆಗಿದ್ಲು. ಅಣ್ಣ ಸೂರ್ಯಕಾಂತ್ ತಂಗಿಯನ್ನು ಮನೆಯಿಂದ ಹೊರಗೆ ಹಾಕಿದ್ದ. ಇದನ್ನೇ ಚಾಲೆಂಜ್ ಆಗಿ ಸ್ವೀಕರಿಸಿದ್ದ ನಂದ, ಸೂರ್ಯಕಾಂತ್ ಮನೆ ಮುಂದೆಯೇ ದೊಡ್ಡ ಮನೆ ಕಟ್ಟಿ ಸಂಸಾರ ನಡೆಸ್ತಿದ್ದಾನೆ. ಕಿರಾಣಿ ಅಂಗಡಿ ನಡೆಸುತ್ತಿರುವ ನಂದನ ಕುಟುಂಬಕ್ಕೆ ಗಿರಿಜಾ ತವರಿನವರೇ ದೊಡ್ಡ ವಿಲನ್. ಮೂರು ಗಂಡು ಒಂದು ಹೆಣ್ಣು ಮಗುವಿನ ತಂದೆಯಾಗಿರುವ ನಂದನಿಗೆ ಅನಾಥ ಎನ್ನುವ ಹಣೆಪಟ್ಟಿ ಅಳಿಸಿಲ್ಲ. ಮನಸ್ಸಿನಲ್ಲಿ ಎಷ್ಟೇ ಪ್ರೀತಿ ಇದ್ರೂ ಮಕ್ಕಳ ಮುಂದೆ ಹಿಟ್ಲರ್ ನಂತೆ ವರ್ತಿಸ್ತಾನೆ ನಂದ ಕುಮಾರ್. ಅಪ್ಪನಂತೆ ಮಕ್ಕಳು ಎಂಬ ಹಣೆಪಟ್ಟಿ ಬರ್ಬಾರದು ಎನ್ನುವ ಕಾರಣಕ್ಕೆ ಮಕ್ಕಳು ಪ್ರೀತಿ ಮಾಡೋದನ್ನು ಸಂಪೂರ್ಣ ಬ್ಯಾನ್ ಮಾಡಿದ್ದಾನೆ ನಂದಕುಮಾರ್.

ಯಾರೂ ಪ್ರೀತಿ ಮಾಡಿ ಮದುವೆ ಆಗ್ಬಾರದು ಎನ್ನುವ ಲಕ್ಷ್ಮಣ ರೇಖೆಯನ್ನು ದಾಟಲಾಗ್ದೆ, ಹಳೆ ಹುಡುಗಿಯನ್ನು ಮರೆಯಲಾಗ್ದೆ ಮಾಧವ ಒತ್ತಾಡ್ತಿದ್ದಾನೆ. ಇನ್ನು ಕೇಶವನದ್ದೂ ಇದೇ ಕಥೆ. ಪ್ರೀತಿಸಿದ ಹುಡುಗಿ ಮೀನಾಗೆ ಮದುವೆ ತಯಾರಿ ನಡೆದಿದೆ. ಶ್ರೀಮಂತ ಹುಡುಗನಿಗೆ ಮಗಳನ್ನು ಮದುವೆ ಮಾಡಲು ಮೀನಾ ತಂದೆ ಎಲ್ಲ ತಯಾರಿ ನಡೆಸಿದ್ದಾನೆ. ಕೇಶವ ಹಾಗೂ ವಲ್ಲಭ, ಮೀನಾ ಮನೆಗೆ ಹೋಗಿ ಹೆಣ್ಣು ಕೇಳಿದ್ದಾಗಿದೆ. ನಂದನ ಅಂಗಡಿಗೆ ಬಂದು ಮೀನಾ ತಂದೆ ರಾದ್ಧಾಂತ ಮಾಡಿದ್ದೂ ಆಗಿದೆ. ಇದ್ರಿಂದ ಅವಮಾನಗೊಂಡ ನಂದ, ಯಾವುದೇ ಕಾರಣಕ್ಕೂ ಮದುವೆ ಸಾಧ್ಯವಿಲ್ಲ ಎಂದಿದ್ದಾನೆ. ಕೇಶವನಿಗೆ ಮೀನಾಳನ್ನು ಮರೆಯುವಂತೆ ಹೇಳಿದ್ದಾನೆ. ಅಣ್ಣನ ಪ್ರೀತಿಗೆ ಸಹಾಯ ಮಾಡಲು ಹೋಗಿ ವಲ್ಲಭ ಏಟು ತಿಂದಿದ್ದಾನೆ.

ಏನೇ ಆದ್ರೂ ವಲ್ಲಭ ಸೋಲು ಒಪ್ಪಿಕೊಳ್ಳುವವನಲ್ಲ. ಈಗ ವಲ್ಲಭ ಮಹತ್ತರ ಕೆಲಸಕ್ಕೆ ಕೈ ಹಾಕಿದ್ದಾನೆ. ಕೇಶವ ಹಾಗೂ ಮೀನಾ ಮದುವೆಗೆ ತಯಾರಿ ನಡೆಸಿದ್ದಾನೆ. ಕಲರ್ಸ್ ಕನ್ನಡ ಹೊಸ ಪ್ರೋಮೋ ಬಿಡುಗಡೆ ಮಾಡಿದೆ. ಈ ಪ್ರೋಮೋದಲ್ಲಿ ಕೇಶವ ಹಾಗೂ ಮೀನಾ ಮದುವೆ ಆಗ್ತಿರೋದನ್ನು ನೀವು ಕಾಣ್ಬಹುದು.

ಮೀನಾ ಮನೆಯಲ್ಲಿ ಎಂಗೇಜ್ಮೆಂಟ್ ತಯಾರಿ ನಡೆದಿದೆ. ಉಂಗುರ ಹಾಕಿ ಬೇಸರದಲ್ಲಿರುವ ಮೀನಾ ಎಲ್ಲ ಮುಗಿದು ಹೋಯ್ತು ಅಂತ ಅಳ್ತಿದ್ದಾಳೆ. ಆದ್ರೆ ಅದು ಹೇಗೋ ರೂಮಿಗೆ ಬಂದ ವಲ್ಲಭ, ಮೀನಾಳನ್ನು ಮನೆಯಿಂದ ಓಡಿಸಿಕೊಂಡು ಬಂದಿದ್ದಾನೆ. ದೇವಸ್ಥಾನದಲ್ಲಿ ಪಂಚೆಯುಟ್ಟು ಸಿದ್ಧವಾಗಿ ನಿಂತಿದ್ದ ಕೇಶವನನ್ನು ನೋಡಿ ಖುಷಿಯಾಗುವ ಮೀನಾ, ಮದುವೆಗೆ ಒಪ್ಪಿಕೊಳ್ತಾಳೆ. ದೇವಸ್ಥಾನದಲ್ಲಿಯೇ ಮದುವೆಗೆ ಎಲ್ಲ ಸಿದ್ಧತೆ ನಡೆದಿದ್ದು, ಕೇಶವ ತಾಳಿ ಕಟ್ಟುವ ಸಮಯಕ್ಕೆ ಅಲ್ಲಿಗೆ ನಂದ, ಗಿರಿಜಾ ಹಾಗೂ ಮಾಧವ ಬಂದಿದ್ದಾರೆ.

ನಂದನ ಮುಂದೆಯೇ ತಾಳಿ ಕಟ್ಟುವ ಧೈರ್ಯ ಮಾಡಿದ್ದಾನೆ ಕೇಶವ. ನಂದ ಹಾಗೂ ಮೀನಾಗೆ ಮೊದಲೇ ಭೇಟಿಯಾಗಿದೆ. ಮೀನಾ ಸ್ವಭಾವನನ್ನು ನಂದ ಬಹಿರಂಗವಾಗಿ ವಿರೋಧಿಸಿದ್ದಾನೆ. ಈಗ ತನ್ನ ಮಗನ ಕೈ ಹಿಡಿದಿದ್ದು ಅದೇ ಮೀನಾ ಅಂತ ಗೊತ್ತಾದ್ರೆ ನಂದ ಏನು ಮಾಡ್ತಾನೆ, ಲಕ್ಷ್ಮಣ ರೇಖೆ ದಾಟಿದ ಕೇಶವನಿಗೆ ಶಿಕ್ಷೆಯಾ ಅಥವಾ ವಲ್ಲಭನಿಗಾ ಅನ್ನೋದೇ ಸದ್ಯಕ್ಕಿರುವ ಕುತೂಹಲ.

View post on Instagram