ಕಲರ್ಸ್‌ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ನನ್ನರಸಿ ರಾಧೆ' ಧಾರಾವಾಹಿ ದಿನೆ ದಿನೇ ಊಹಿಸಲಾಗದ ತಿರುವು ಪಡೆದುಕೊಳ್ಳುತ್ತಿದೆ. ತಾಯಿಗಾಗಿ ಮೌನವಾಗಿದ್ದ ಇಂಚರಾ ಇಂಥ ದೊಡ್ಡು ನಿರ್ಧಾರ ಕೈಕೊಂಡ ಕಾರಣ ಏನು? ಹೆದರಿ ಮನೆ ಬಿಟ್ಟು ಬಂದ ಇಂಚರಾಗೆ ಅತ್ತೆ ಮನೆಯಲ್ಲಿ ಮತ್ತೆ ನಡೆಯಿತು ಶಾಸ್ತ್ರ ಸಂಪ್ರದಾಯ...

‘ಕನ್ನಡತಿ’ ಕಿರಣ್‌ ರಾಜ್‌ ಕೈಲಿ ಆರು ಸಿನಿಮಾ; 'ಎಷ್ಟೇ ಬರಲಿ, ಕಿರುತೆರೆ ಬಿಡಲ್ಲ'! 

ತಾಯಿಯ ಮಾತಿಗೆ ಒಪ್ಪಿ ಇಂಚರಾ ರಿಷಬ್‌ನನ್ನು ಮದುವೆಯಾಗಲು ಒಪ್ಪಿಕೊಳ್ಳುತ್ತಾಳೆ ಆದರೆ ಮದುವೆ ಮಂಟಪದಲ್ಲಿ ಅಗಸ್ತ್ಯ ಬಂದು ತಾಳಿ ಕಟ್ಟುತ್ತಾನೆ. ಒಂದು ವಾರ ಅವಧಿ ನಂತರ ಇಂಚರಾ ಅಗಸ್ತ್ಯನ ಜೊತೆಗಿರಬೇಕೆಂದು ನಿರ್ಧರಿಸಿ ಅವರ ಮನೆಗೆ ಹೋಗುತ್ತಾಳೆ. ಸರಿಯಾದ ಶಾಸ್ತ್ರ ಸಂಪ್ರದಾಯದಲ್ಲಿ ಮದುವೆ ಕಾರ್ಯಕ್ರಮ ನಡೆಯಲಿಲ್ಲ ಎಂದು ಅಗಸ್ತ್ಯನ ಮನೆಯಲ್ಲಿ ಮತ್ತೊಮ್ಮೆ ಮದುವೆ ಮಾಡಿಸುತ್ತಾರೆ.  ಮದುವೆ ನಂತರ ಶಾಸ್ತ್ರವನ್ನು ಒಂದು ಎಪಿಸೋಡ್ ರೀತಿಯಲ್ಲಿ ತೋರಿಸಲಾಗಿತ್ತು.

ಸದಾ ಮಾತನಾಡುತ್ತಾ ಜಗಳವಾಡುತ್ತಿದ್ದ ಇಂಚರಾ ಹಾಗೂ ಅಗಸ್ತ್ಯನನ್ನು ಮತ್ತೆ ಸ್ನೇಹಿತರಂತೆ ಮಾತನಾಡಲು ಶುರು ಮಾಡುತ್ತಾರೆ. ಬೆಳಗಾಗುವುದರಲ್ಲಿ ಇಬ್ಬರು ಒಟ್ಟಿಗೆ ನಿದ್ದೆ ಮಾಡಿರುತ್ತಾರೆ. ಆಗ ಅಗಸ್ತ್ಯನ ಕೈ ಇಂಚರಾಳ ಮೇಲಿರುತ್ತಾ, ಬಿಡಿಸಿಕೊಳ್ಳಲು ಇಂಚರಾ ಪರದಾಡುತ್ತಾಳೆ. ಈ ಎಪಿಸೋಡ್‌ನನ್ನು ವೀಕ್ಷಕರು ಎಂಜಾಯ್ ಮಾಡಿದ್ದಾರೆ.

ರಾಧಕ್ಕ, ಸೋನು ಗೌಡ, ಡ್ರೋನ್ ಪ್ರತಾಪ್; ಬಿಗ್ ಬಾಸ್ ಮನೆಗೆ ಹೋಗೋರು ಯಾರು? 

ಮದುವೆ ನಿಶ್ಚಯವಾದಾಗಿನಿಂದಲ್ಲೂ ತುಂಬಾನೇ ಬೇಸರದಲ್ಲಿದ್ದ ಇಂಚರಾಳ ನಗು ಮುಖ ನೋಡಿ ವೀಕ್ಷಕರು ಸಂತಸ ವ್ಯಕ್ತಪಡಿಸಿದ್ದಾರೆ. ಇವರಿಬ್ಬರು ಮೊದಲಿನಂತೆ ಒಂದಾಗಬೇಕೆಂಬುದು ವೀಕ್ಷಕರ ಆಸೆ.