ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಸ್ಟಾರ್‌ ನಟ, ಅವಳಿ ಅಕ್ಕ-ತಂಗಿ ಕಥೆಗೆ ಈಗ ಶಾಶ್ವತವಾಗಿ ಬ್ರೇಕ್‌ ಹಾಕಲಾಗುತ್ತಿದೆ ಎನ್ನಲಾಗಿದೆ. ಆದರೆ ಇದೇ ಸಮಯಕ್ಕೆ ಮತ್ತೊಂದು ಹೊಸ ಧಾರಾವಾಹಿ ಪ್ರಸಾರ ಮಾಡುವ ಮೂಲಕ ವೀಕ್ಷಕರಿಗೆ ಮನೋರಂಜನೆಗೇನೂ ಮೋಸವಾಗದಂತೆ ನೋಡಿ ಕೊಳ್ಳುತ್ತಿದೆ ವಾಹಿನಿ. 

'ಮೂರುಗಂಟು' ಜ್ಯೋತಿ ರೈ- ಪರದೆ ಮೇಲೆ ಸ್ವಾರ್ಥಿ, ನಿಜದಲ್ಲಿ ತ್ಯಾಗಮೂರ್ತಿ! 

ಹೌದು ಲಾಕ್‌ಡೌನ್‌ ಸಮಯದಲ್ಲಿ ಅನೇಕ ಧಾರಾವಾಹಿಗಳು ಅಂತ್ಯ ಕಂಡವು. ಟಿಆರ್‌ಪಿ ಕಾರಣಕ್ಕೆ ಹಿಂದಿ ಧಾರಾವಾಹಿಗಳನ್ನು ಕನ್ನಡಕ್ಕೆ ಡಬ್ ಮಾಡಲಾಗಿತ್ತು. ಮನೆಯಲ್ಲಿದ್ದ ವೀಕ್ಷಕರು ಎಲ್ಲಾ ರೀತಿಯ ಕಥೆಗೆ ಹೊಂದಿಕೊಂಡರು. ಅಲ್ಲದೇ ಇದರಿಂದ ಅನೇಕ ಧಾರಾವಾಹಿಗಳ ಟಿಆರ್‌ಪಿಯೂ ಜಾಸ್ತಿ ಆಯ್ತು. ಇದೀಗ ಲಾಕ್‌ಡೌನ್‌ ತೆರವಾಗಿದೆ. ಬೇರೆ ಯಾವುದೇ ಸಮಸ್ಯೆ ಇಲ್ಲ ಎಂದುಕೊಳ್ಳುತ್ತಿರುವಾಗಲೇ ಮತ್ತೊಂದು ಜನಪ್ರಿಯ ಧಾರಾವಾಹಿಗೆ ಬ್ರೇಕ್ ಬೇಳುತ್ತಿದೆ.

 

ಶ್ರಾವಣಿ- ವಿಕ್ರಮ್ 'ಮೂರುಗಂಟು' ಕಥೆ ಪ್ರಸಾರ ಮುಕ್ತಾಯವಾಗುತ್ತಿದೆ. ನಿಖರವಾದ ಕಾರಣ ಗೊತ್ತಿಲ್ಲವಾದರೂ ಟಿಆರ್‌ಪಿಯೂ ಒಂದು ಕಾರಣ ಎನ್ನಲಾಗಿದೆ. ಪ್ರಾರಂಭದಲ್ಲಿ ಧಾರಾವಾಹಿ ಸಾಕಷ್ಟು ಮೆಚ್ಚುಗೆ ಪಡೆದುಕೊಂಡಿತ್ತು. ನಂತರದ ದಿನಗಳಲ್ಲಿ ಕಥೆಯನ್ನು ನಿಧಾನವಾಗಿ ಎಳೆದು ಪ್ರಸಾರ ಮಾಡಲಾಗುತ್ತಿತ್ತು. ಆದರೀಗ ಬೇಗ ಬೇಗ ಅಂತ್ಯ ಮಾಡುತ್ತಿರುವುದನ್ನು ವೀಕ್ಷಕರು ಗಮನಿಸಿದ್ದಾರೆ. ಕೆಲವು ಮೂಲಗಳ ಪ್ರಕಾರ ನವೆಂಬರ್ 15ವರೆಗೂ ಧಾರಾವಾಹಿ ಪ್ರಸಾರವಾಗಲಿದೆ.

ರಚಿತಾ ರಾಮ್‌ ಖಜಾನೆ 2 ವರ್ಷದಿಂದ ತುಂಬುತ್ತಿರುವುದಕ್ಕೆ ಕಾರಣ ಈ ಬ್ಯಾಗ್?

ಮೂರುಗಂಟು ಪ್ರಸಾರವಾಗುತ್ತಿದ್ದ 9 ಗಂಟೆಗೆ 'ಹೂ ಮಳೆ' ಧಾರಾವಾಹಿ ಪ್ರಸಾರವಾಗಲಿದೆ. ಬಿಗ್ ಬಾಸ್ ಖ್ಯಾತಿಯ ಚಂದನಾ ಅನಂತಕೃಷ್ಣ ಹಾಗೂ ಯಶವಂತ್ ಜೋಡಿಯಾಗಿ ಈ ಧಾರಾವಾಹಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ.