ಸೀರಿಯಲ್ ಲೋಕದ ಜನಪ್ರಿಯ ಧಾರಾವಾಹಿ 'ಲಕ್ಷ್ಮೀ ಬಾರಮ್ಮಾ' ಇನ್ನು ಕೆಲವೇ ದಿನಗಳಲ್ಲಿ ಮುಕ್ತಾಯಗೊಳ್ಳಲಿದೆ. ಆರು ವರ್ಷಗಳ ಕಾಲ ಜನಮನ ಗೆದ್ದಿರುವ ಈ ಸೀರಿಯಲ್ ಕೆಲವೇ ದಿನಗಳಲ್ಲಿ ಅಂತಿಮ ಘಟ್ಟ ತಲುಪಲಿದೆ. 

ಸತತ ಆರು ವರ್ಷಗಳ ಕಾಲ ಪ್ರೇಕ್ಷಕರಿಗೆ ಮನರಂಜನೆ ನೀಡುತ್ತಿದ್ದ ಜನಪ್ರಿಯ ಧಾರಾವಾಹಿ ಮುಕ್ತಾಯ ಹಂತಕ್ಕೆ ಬಂದಿದೆ. ಇನ್ನು ಕೆಲವೇ ದಿನಗಳಲ್ಲಿ ಮುಕ್ತಾಯವಾಗಲಿದೆ ಎನ್ನಲಾಗಿದೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಸತತ ಆರು ವರ್ಷಗಳ ಕಾಲ ಪ್ರೇಕ್ಷಕರ ಅಚ್ಚುಮೆಚ್ಚಿನ ಧಾರಾವಾಹಿ ಇದಾಗಿತ್ತು. 2013, ಮಾರ್ಚ್ 4 ರಂದು ಈ ಸೀರಿಯಲ್ ಶುರುವಾಗಿತ್ತು. ಇದುವರೆಗೂ 2131 ಸಂಚಿಕೆಗಳನ್ನು ಪೂರೈಸಿದೆ. ಈ ಧಾರಾವಾಹಿ ಆರಂಭವಾದಾಗ ಮೊದಲು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದು ಚಂದನ್ ಹಾಗೂ ಕವಿತಾ ಗೌಡ. ಇವರಿಬ್ಬರ ಕಾಂಬಿನೇಶನ್ ಸೂಪರ್ ಹಿಟ್ ಆಗಿತ್ತು. ಚಂದನ್ ಸಿನಿಮಾಗಳಲ್ಲಿ ಬ್ಯುಸಿಯಾದ ನಂತರ 'ಲಕ್ಷ್ಮೀ ಬಾರಮ್ಮಾ' ಸೀರಿಯಲ್‌ಗೆ ಗುಡ್‌ ಬೈ ಹೇಳಿದ್ದರು. ಆ ನಂತರ ಶೈನ್ ಶೆಟ್ಟಿ ಆ ಪಾತ್ರವನ್ನು ನಿರ್ವಹಿಸಿದರು. ಅವರು ಬಿಗ್‌ಬಾಸ್‌ಗೆ ಹೋದ ನಂತರ ಚಂದು ಗೌಡ ಆ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. 

ಧಾರಾವಾಹಿ ಮುಕ್ತಾಯದ ಬಗ್ಗೆ ವಾಹಿನಿ ಯಾವುದೇ ಕನ್ಫರ್ಮ್ ಮಾಡಿಲ್ಲ.