ಖಾಸಗಿ ವಾಹಿನಿಯಲ್ಲಿ ಪ್ರಸಾರ ಆಗುತ್ತಲಿರುವ ʼಭಾಗ್ಯಲಕ್ಷ್ಮೀʼ, ʼಲಕ್ಷ್ಮೀ ಬಾರಮ್ಮʼ ಧಾರಾವಾಹಿ ಬಗ್ಗೆ ವೀಕ್ಷಕರಿಗೆ ಒಂದು ಮನವಿ ಇತ್ತು. ಈ ಮನವಿ ಈಗ ಈಡೇರಿದೆ.
ಹಲವು ದಿನಗಳಿಂದ ‘ಭಾಗ್ಯಲಕ್ಷ್ಮೀ’ ಹಾಗೂ ʼಲಕ್ಷ್ಮೀ ಬಾರಮ್ಮʼ ಧಾರಾವಾಹಿ ವೀಕ್ಷಕರು ಒಂದು ಡಿಮ್ಯಾಂಡ್ ಮಾಡುತ್ತಿದ್ದರು. ಈಗ ಅವರ ಡಿಮ್ಯಾಂಡ್ ಈಡೇರಿದೆ. ಆರಂಭದಲ್ಲಿ ಈ ಎರಡೂ ಸೀರಿಯಲ್ ಒಟ್ಟಿಗೆ ನಿತ್ಯ ಒಂದು ಗಂಟೆಗಳ ಕಾಲ ಪ್ರಸಾರ ಆಗುತ್ತಿತ್ತು. ಆಮೇಲೆ ಸೀರಿಯಲ್ ವಿಭಾಗ ಆಯ್ತು. ಈಗ ಎರಡೂ ಧಾರಾವಾಹಿ ಕಡೆಯಿಂದ ಗುಡ್‌ನ್ಯೂಸ್ ಸಿಕ್ಕಿದೆ.
ಸಂಬಂಧನೇ ಇಲ್ಲ ಅನ್ನೋ ಥರ ಇದ್ರು!
ʼಭಾಗ್ಯಲಕ್ಷ್ಮೀʼ ಧಾರಾವಾಹಿ ಭಾಗ್ಯ, ʼಲಕ್ಷ್ಮೀ ಬಾರಮ್ಮʼ ಧಾರಾವಾಹಿ ಲಕ್ಷ್ಮೀ ಇಬ್ಬರೈ ಅಕ್ಕ-ತಂಗಿಯರು. ಪರಸ್ಪರ ಇವರಿಬ್ಬರು ತುಂಬ ಪ್ರೀತಿ ಮಾಡ್ತಾರೆ, ಕಷ್ಟಗಳಿಗೆ ನೆರವಾಗ್ತಾರೆ. ಇಷ್ಟುದಿನಗಳ ಕಾಲ ಲಕ್ಷ್ಮೀ ಜೀವನದಲ್ಲಿ ಏನೆಲ್ಲ ಆದರೂ ಕೂಡ, ಅಲ್ಲಿಗೆ ಭಾಗ್ಯ ಎಂಟ್ರಿ ಆಗಲಿಲ್ಲ. ಭಾಗ್ಯ ಜೀವನದಲ್ಲಿ ಸಮಸ್ಯೆ ಆಗಿ, ಅವಳ ಗಂಡ ಎರಡನೇ ಮದುವೆ ಆದರೂ ಕೂಡ ಲಕ್ಷ್ಮೀ ಆಗಮನ ಆಗಿರಲಿಲ್ಲ.
ಮದ್ವೆ ಸೀನ್ ಮಾಡಲ್ಲ ಎಂದು ಭಾಗ್ಯಲಕ್ಷ್ಮಿ ಶೂಟಿಂಗ್ ಸೆಟ್ನಲ್ಲೇ ಶ್ರೇಷ್ಠಾ ಕಣ್ಣೀರು! ಅಷ್ಟಕ್ಕೂ ಆಗಿದ್ದೇನು?
ಒಟ್ಟಿಗೆ ಸೇರಿದ ಅಕ್ಕ-ತಂಗಿ
ಭಾಗ್ಯ ಮನೆಗೆ ಲಕ್ಷ್ಮೀ ಬರ್ತಿಲ್ಲ, ಲಕ್ಷ್ಮೀ ಮನೆಗೆ ಭಾಗ್ಯ ಬರ್ತಿಲ್ಲ ಎಂದು ವೀಕ್ಷಕರು ದೂರುತ್ತಿದ್ದರು, ಈಗ ಭಾಗ್ಯ ಹಾಗೂ ಲಕ್ಷ್ಮೀ ಒಟ್ಟಿಗೆ ಸೇರಿದ್ದಾರೆ. ಅಕ್ಕಮ್ಮನ ನಿರ್ಧಾರಕ್ಕೆ ಲಕ್ಷ್ಮೀ ಖುಷಿ ಆಗಿದ್ದಾಳೆ. ಈಗ ಈ ಜೋಡಿ ಪರಸ್ಪರ ಕಷ್ಟ-ಸುಖಗಳನ್ನು ಹಂಚಿಕೊಂಡು ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು.
ಪತ್ನಿಯರ ಮೇಲೆ ನಂಬಿಕೆ ಇಲ್ಲ
ಭಾಗ್ಯ ಗಂಡ ತಾಂಡವ್ ಇನ್ನೊಂದು ಮದುವೆ ಆಗಿದ್ದಾನೆ, ಅತ್ತ ಲಕ್ಷ್ಮೀ ಗಂಡ ಮತ್ತೊಂದು ಮದುವೆ ಆಗೋಕೆ ರೆಡಿ ಆಗಿದ್ದಾನೆ. ಇವರಿಬ್ಬರಿಗೂ ಹೆಂಡ್ತಿ ಮೇಲೆ ನಂಬಿಕೆ ಇಲ್ಲ. ಇದನ್ನೆಲ್ಲ ನೋಡಿ ವೀಕ್ಷಕರು ಸೋಶಿಯಲ್ ಮೀಡಿಯಾದಲ್ಲಿ ಕಾಮೆಂಟ್ ಮಾಡುತ್ತಿದ್ದಾರೆ.
ವೀಕ್ಷಕರು ಏನು ಹೇಳುತ್ತಿದ್ದಾರೆ?
“ಎರಡು ಕಥೆಯಲ್ಲೂ ಗಂಡ ಹೆಂಡತಿ ಅತ್ತೆ ಪ್ರಮುಖ ಪಾತ್ರ. ಒಂದು ಕಥೆ ಗಂಡ ಹೆಂಡತಿ ದೂರ ಆಗ್ತಿವಿ ಅಂದರೆ ಅತ್ತೆ ಬಿಡ್ತಾ ಇಲ್ಲ. ಇನೊಂದು ಕಥೆ ಗಂಡ ಹೆಂಡತಿ ಜೊತೆಯಾಗಿ ಇರ್ತೀವಿ ಅಂದರೆ ಅತ್ತೆ ಬಿಡ್ತಿಲ್ಲ” ಎಂದು ನೆಟ್ಟಿಗರೊಬ್ಬರು ಕಾಮೆಂಟ್ ಮಾಡಿದ್ದಾರೆ.
“ಹೀಗೆ ಇರಬೇಕು ಅಕ್ಕ ತಂಗಿಯರು. ಅಂದ್ರೆ ಕಷ್ಟಕ್ಕೆ ಇಬ್ಬರೂ ಜೊತೆ ಆಗಿರುತ್ತಾರೆ. ಮೊದಲು ನಿನ್ನ ಸಂಸಾರ ನೋಡ್ಕೋ ಆಮೇಲೆ ಬಾಕಿಯದು ನೋಡುವಂತೆ. ಯಾರು ಕೈ ಬಿಟ್ರು ಯಾವಾಗ್ಲೂ ನಿನ್ನ ಜೊತೆ ಇರ್ತೀನಿ ಅಂತ ಅಕ್ಕ ಹೇಳುತ್ತಾಳೆ. ಮನುಷ್ಯನಿಗೆ ಕಷ್ಷಬರುತ್ತೆ ಸರಿ ಆದರೆ ಅಕ್ಕ ತಂಗಿಯರಿಗೆ ಒಂದೇತರಹ ಕಷ್ಷ ಕೊಡೋದಾ? ಅಕ್ಕಂದು ಒಂಥರ ಜೀವನ, ತಂಗಿಯದು ಒಂಥರ ಪಾವನ, ಲಕ್ಷ್ಮೀ ನೀನು ಕೂಡ ವೈಷ್ಣವ್ ಬಿಟ್ಟು ಈ ರೀತಿ ನಿರ್ಧಾರ ತಗೋ” ಎಂದು ನೆಟ್ಟಿಗರೊಬ್ಬರು ಕಾಮೆಂಟ್ ಮಾಡಿದ್ದಾರೆ.
ಪಾತ್ರಧಾರಿಗಳು
ಭಾಗ್ಯ-ಸುಷ್ಮಾ ರಾವ್
ಲಕ್ಷ್ಮೀ-ಭೂಮಿಕಾ ರಮೇಶ್
ತಾಂಡವ್ -ಸುದರ್ಶನ್ ರಂಗಪ್ರಸಾದ್
ವೈಷ್ಣವ್-ಶಮಂತ್ ಬ್ರೊ ಗೌಡ
ಈ ಸೀರಿಯಲ್‌ಗೆ ಒಟ್ಟಾರೆಯಾಗಿ ಒಳ್ಳೆಯ ಪ್ರತಿಕ್ರಿಯೆ ಸಿಗುತ್ತಿದೆ ಎಂದು ಹೇಳಬಹುದು.
