ಕಲರ್ಸ್‌ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಕನ್ನಡತಿ ಧಾರಾವಾಹಿಯ ನಟ ಹರ್ಷ ಅಲಿಯಾಸ್ ಕಿರಣ್‌ ರಾಜ್‌ ಬಿಗ್‌ಬಾಸ್‌ ಮನೆಯೊಳಗೆ ಹೋಗಬೇಕು ಎಂಬುವುದು ಪ್ರತಿಯೊಬ್ಬ ಕಿರುತೆರೆ ವೀಕ್ಷಕರ ಆಸೆ. ಸೀಸನ್‌ 7ರಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಮಾಹಿತಿ ಇತ್ತು. ಆದರೆ ಅಂದು ಭಾಗಿಯಾಗಲಿಲ್ಲ, ಇದೀಗ ಸೀಸನ್‌ 8ರಲ್ಲಿ ಪಕ್ಕಾ ಇರುತ್ತಾರೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಈ ವಿಚಾರದ ಬಗ್ಗೆ ಸ್ವತಃ ಕಿರಣ್ ಸ್ಪಷ್ಟನೆ ನೀಡಿದ್ದಾರೆ.

ಕನ್ನಡತಿ ನಟನಿಗೆ ಬಂತು ರಿಯಲ್ ಅಮ್ಮನ ಪತ್ರ: ಕಣ್ಣೀರಾದ ಹರ್ಷ..! 

ಇಂದು ಸಂಜೆ 6 ಗಂಟೆಗೆ  ಬಿಗ್‌ಬಾಸ್‌ ಸೀಸನ್ 8 ಅದ್ಧೂರಿಯಾಗಿ ಆರಂಭವಾಗಲಿದದೆ. ಕಿಚ್ಚ ಸುದೀಪ್ ಪ್ರತಿಯೊಬ್ಬ ಸ್ಪರ್ಧಿಯನ್ನೂ ಪರಿಚಯಿಸಿಕೊಡುತ್ತಾರೆ. ಈ ಸೀಸನ್‌ನಲ್ಲಿ ಕಿರಣ್‌ ರಾಜ್‌ ಇರುವುದಿಲ್ಲವಂತೆ. 

'ಸಿನಿಮಾ ಶೂಟಿಂಗ್‌ನಲ್ಲಿ ಬ್ಯುಸಿಯಾಗಿರುವೆ. ಆದರೆ ಕನ್ನಡತಿ ಧಾರಾವಾಹಿಯನ್ನು ಬಿಟ್ಟಿಲ್ಲ. ಕನ್ನಡತಿ ಬಿಡುವ ಮಾತೇ ಇಲ್ಲ. ಬಿಗ್ ಬಾಸ್‌ಗೆ ನಾನು ಹೋಗುತ್ತಿಲ್ಲ. ಸಿನಿಮಾ ಶೂಟಿಂಗ್ ಇರುವ ಕಾರಣಕ್ಕೆ ನಾನು ಕಾಣಿಸಿಕೊಳ್ಳುತ್ತಿಲ್ಲ. ನನ್ನನ್ನು ಪ್ರೀತಿಸುವ ಪ್ರತಿಯೊಬ್ಬ ಕನ್ನಡತಿ ಅಭಿಮಾನಿಗಳೂ ನನಗೆ ಮುಖ್ಯ.  ಕನ್ನಡತಿ ನನಗೆ ಎಲ್ಲವನ್ನೂ ನೀಡಿದೆ. ದಯವಿಟ್ಟು ಯಾರೂ ಗಾಸಿಪ್‌ಗಳನ್ನು ನಂಬಬೇಡಿ,' ಎಂದು ಕಿರಣ್ ಹೇಳಿದ್ದಾರೆ.

ಬಿಗ್ ಬಾಸ್‌ಗೆ ಎಂಟ್ರಿ ಕೊಟ್ಟ ಸರಿಗಮಪ ಹನುಮಂತು; ಗಾಯಕ ಬೇಕಲ್ವಾ? 

'ಜೀವನವೇ ನಾಟಕ ಸ್ವಾಮಿ', 'ಬಡ್ಡೀಸ್', 'ಚತುಷ್ಪಥ, ನುವ್ವೆ ನಾ ಪ್ರಾಣಂ' ಸೇರಿದಂತೆ ಇನ್ನೂ ಎರಡು ಚಿತ್ರಗಳಲ್ಲಿ ಕಿರಣ್ ಅಭಿನಯಿಸುತ್ತಿದ್ದಾರೆ. ಕಿನ್ನರಿ ಧಾರಾವಾಹಿ ನಂತರ ಕಿರಣ್ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ ಹಾಗೂ ಅಷ್ಟೇ ಫ್ಯಾನ್ ಫಾಲೋವರ್ಸ್‌ ಹೊಂದಿದ್ದಾರೆ.