ಸುಮಾರು ಸೀರಿಯಲ್‌ಗಳಲ್ಲಿ ಅವಕಾಶ ಮಿಸ್ ಮಾಡಿಕೊಂಡ ಅಮೃತಾ. ಈ ವಯಸ್ಸಿನಲ್ಲಿ ಹೈಟ್ ಬದಲಾಯಿಸಲು ಸಾಧ್ಯವಿಲ್ಲ ಎಂದ ನಟಿ.....

ಕನ್ನಡ ಕಿರುತೆರೆ ಲೋಕದಲ್ಲಿ ಖಡಕ್‌ ವಿಲನ್, ಬಬ್ಲಿ ನಾಯಕಿ ಹಾಗೂ ಮುದ್ದು ಗುಬ್ಬಚ್ಚಿ ರೀತಿಯಲ್ಲಿ ಮಿಂಚಿ ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳನ್ನು ಗಳಿಸಿರುವ ಅಮೃತಾ ರಾಮಮೂರ್ತಿ ಅವರನ್ನು ಸುಮಾರು 15 ಸೀರಿಯಲ್‌ ಆಡಿಷನ್‌ಗಳಿಂದ ರಿಜೆಕ್ಟ್‌ ಮಾಡಿದ್ದಾರಂತೆ. ಹೈಟ್‌ ಅನ್ನೋ ಕಾರಣ ಕೇಳಿ ಪ್ರತಿಯೊಬ್ಬರು ಶಾಕ್ ಆಗಿದ್ದಾರೆ. 

'ನಾನು ಒಂದು ವಿಚಾರಕ್ಕೆ ತುಂಬಾ ರಿಜೆಕ್ಟ್‌ ಆಗಿದ್ದು ಅಂದ್ರೆ ಹೈಟ್‌ಗೆ. ನನ್ನ ಜರ್ನಿ ಆರಂಭವಾಗಿದ್ದು ಸುವರ್ಣ ಮೂಲಕವೇ ಸರಸ್ವತಿ ಲಕ್ಷ್ಮಿ ಪ್ರಿಯೇ ಎಂಬ ಸೀರಿಯಲ್ ವನಿತಾ ವಾಸು ಅವರ ಜೊತೆ ಮೊದಲು ನಟಿಸಿದ್ದು. ಹೀರೋಯಿನ್ ಆಗಿ ಕಾಣಿಸಿಕೊಂಡ ಮೇಲೆ ಸುಮಾರು 15 ಆಡಿಷನ್ ಕೊಟ್ಟಿದ್ದೀನಿ ಅಷ್ಟೂ ರಿಜೆಕ್ಟ್‌ ಮಾಡಿದ್ದು ನನ್ನ ಹೈಟ್‌ಗೆ. ಈ ವಯಸ್ಸಿನಲ್ಲಿ ನನ್ನ ಹೈಟ್ ಬದಲಾಯಿಸಿಕೊಳ್ಳಲು ಸಾಧ್ಯವಿಲ್ಲ ಬೆಳೆಯುವ ವಯಸ್ಸು ನನ್ನದಲ್ಲ. ಹೀಲ್ಸ್‌ ಧರಿಸಿ ನಟಿಸಬಹುದು ಅಷ್ಟೆ ಆದರೆ ನನ್ನ ಕೈ ಮೀರಿ ನಾನು ಏನೂ ಮಾಡಲು ಆಗದು' ಎಂದು ಅಮೃತಾ ಸ್ಟಾರ್ ಸುವರ್ಣ ವಾಹಿನಿಯ ಸುವರ್ಣ ಸೂಪರ್ ಸ್ಟಾರ್ ಕಾರ್ಯಕ್ರಮದಲ್ಲಿ ಅಮೂರ್ತ ಮಾತನಾಡಿದ್ದಾರೆ.

ಕೈಯಲ್ಲಿದ್ದ ಡ್ರಿಪ್ಸ್‌ ಕಿತ್ತು ರಕ್ತ ಬರ್ತಿದ್ದರೂ ಶೂಟಿಂಗ್ ಮಾಡಿದ ಗೀತಾ ;3 ತಿಂಗಳು ಡಿಪ್ರೆಶನ್‌ಗೆ ಜಾರಿದ್ದು ನಿಜವೇ?

'ಈ ರಿಜೆಕ್ಷನ್‌ಗಳಿಂದ ನಟನೆ ಬೇಡ ಬ್ರೇಕ್ ತೆಗೆದುಕೊಳ್ಳಬೇಕು ಎಂದು ತೀರ್ಮಾನ ಮಾಡಿದೆ ಏಕೆಂದರೆ ಚಾನೆಲ್‌ನಲ್ಲಿ ಕೆಲಸ ಮಾಡಬೇಕು ಎಂದು ಬಂದವಳು ನಾನು ...ನಟನೆಗಿಂತ ಜರ್ನಲಿಸ್ಟ್‌ ಆಗಿ ಕೆಲಸ ಮಾಡಬೇಕು ಎಂದು ಆಸೆ ಪಟ್ಟಿರುವೆ. ತೆರೆ ಮುಂದೆಗಿಂತ ತೆರೆ ಹಿಂದೆ ಕೆಲಸ ಮಾಡಬೇಕು ಎಂದು ಆಸೆ ಪಟ್ಟಿದ್ದು ಹೆಚ್ಚು. ದೇವರ ದಯೆ ಒಂದು ಆಫರ್‌ನಿಂದ ನನ್ನ ಜರ್ನಿ ಇಲ್ಲಿವರೆಗೂ ಸಾಗಿದೆ. ನನ್ನ ಸಾಮರ್ಥ್ಯ ಏನೂ ನಾನು ಎಷ್ಟು ಕೆಲಸ ಮಾಡಬಹುದು ಎಂದು ತೋರಿಸಿದ ಮೇಲೂ ರಿಜೆಕ್ಷನ್‌ ಕಾಮನ್ ಆಗಿ ಬಿಟ್ಟಿದೆ' ಎಂದು ಅಮೃತಾ ಹೇಳಿದ್ದಾರೆ

ಕಾಲೇಜ್‌ ದಿನಗಳಲ್ಲಿ ಕ್ವೀನ್ ನಾನು, ಎಷ್ಟು ಜನ ಹುಡುಗರು ಬೀಳುತ್ತಿದ್ದರು ಅಂದ್ರೆ ಅಷ್ಟೂ ರಿಜೆಕ್ಟ್‌ ಮಾಡುತ್ತಿದ್ದೆ ಆದರೆ ಬಣ್ಣದ ಪ್ರಪಂಚಕ್ಕೆ ಕಾಲಿಟ್ಟ ಮೇಲೆ ರಿಜೆಕ್ಷನ್ ಅಂದ್ರೆ ಏನೆಂದು ತಿಳಿಯಿತ್ತು ಎಂದಿದ್ದಾರೆ ಅಮೃತಾ. 

YouTube video player