Asianet Suvarna News Asianet Suvarna News

ಮನರಂಜನಾ ಚಾನೆಲ್‌ ಟಿಆರ್‌ಪಿ ರೇಸ್; 42ನೇ ವಾರದಲ್ಲಿ ಯಾವ ಚಾನೆಲ್ ಎಷ್ಟನೇ ಸ್ಥಾನದಲ್ಲಿದೆ?

ಮೊನ್ನೆ (26 ಅಕ್ಟೋಬರ್ 2023) ಟಿಆರ್‌ಪಿ ಲಿಸ್ಟ್ ನೋಡಿ ಕಲರ್ಸ್ ಕನ್ನಡದ ಇಡೀ ಟೀಮ್ ಸಂತಸಗೊಂಡಿದೆ. ನಿನ್ನೆ ಕೇಕ್ ಕಟ್ ಮಾಡಿ ಸಂಭ್ರಮಿಸಿದ ಕಲರ್ಸ್, ಮತ್ತೆ ತಮ್ಮ ಚಾನೆಲ್ ನಂಬರ್ ಒನ್ ಎನಿಸಿಕೊಂಡಿದ್ದಕ್ಕೆ ಹೆಮ್ಮೆ ಅನುಭವಿಸಿದೆ. 

Colors Kannada channel occupies no 1 place in trp race srb
Author
First Published Oct 28, 2023, 6:51 PM IST

ಪ್ರೈಮ್ ಟೈಮ್‌ನಲ್ಲಿ ಕಲರ್ಸ್ ಕನ್ನಡ ಚಾನೆಲ್ ಮತ್ತೆ 'ನಂಬರ್ 1' ಚಾನೆಲ್ ಎನಿಸಿಕೊಂಡಿದೆ. ಟಿಆರ್‌ಪಿ ರೇಸ್‌ನಲ್ಲಿ ಹಲವು ವರ್ಷಗಳು 'ನಂ 2' ಚಾನೆಲ್ ಎನಿಸಿಕೊಂಡಿದ್ದ ಕಲರ್ಸ್ ಕನ್ನಡ ಈ ವಾರ, ಅಂದರೆ 42ನೇ ವಾರದ ಪ್ರೈಮ್ ಟೈಮ್ ಟಿಆರ್‌ಪಿಯಲ್ಲಿ ಮೊದಲ ಸ್ಥಾನಕ್ಕೇ ಏರಿದೆ. ಅರ್ಬನ್ (15+) ಟಿಆರ್‌ಪಿ, ಪ್ರೈಮ್ ಟೈಮ್‌ನಲ್ಲಿ ಟಾಪ್ ಪೊಸಿಶನ್ ಪಡೆದಿರುವ ಕಲರ್ಸ್ ಕನ್ನಡ ಹಲವು ವರ್ಷಗಳ ನಂತರ ಈ ಸಾಧನೆ ಮಾಡಿದೆ.  

ಮೊನ್ನೆ (26 ಅಕ್ಟೋಬರ್ 2023) ಟಿಆರ್‌ಪಿ ಲಿಸ್ಟ್ ನೋಡಿ ಕಲರ್ಸ್ ಕನ್ನಡದ ಇಡೀ ಟೀಮ್ ಸಂತಸಗೊಂಡಿದೆ. ನಿನ್ನೆ ಕೇಕ್ ಕಟ್ ಮಾಡಿ ಸಂಭ್ರಮಿಸಿದ ಕಲರ್ಸ್, ಮತ್ತೆ ತಮ್ಕ ವಾಹಿನಿ ನಂಬರ್ ಒನ್ ಎನಿಸಿಕೊಂಡಿದ್ದಕ್ಕೆ ಹೆಮ್ಮೆ ಅನುಭವಿಸಿದೆ ಎನ್ನಲಾಗಿದೆ. ಪ್ರೈಮ್ ಟೈಮ್ (ಸಂಜೆ 6.00 ಗಂಟೆಯಿಂದ ರಾತ್ರಿ 11.00) ನಲ್ಲಿ ಕಲರ್ಸ್‌ ಕನ್ನಡದಲ್ಲಿ ಹಲವು ಹೊಸ ಸೀರಿಯಲ್‌ಗಳು, ಒಳ್ಳೆಯ ಚಿತ್ರಕಥೆ-ಸಂಭಾಷಣೆ ಹಾಗೂ ಕಲಾವಿದರ ಆಯ್ಕೆಗಳ ಮೂಲಕ ವೀಕ್ಷಕರ ಮನೆಸೂರೆಗೊಳ್ಳುತ್ತಿವೆ ಎನ್ನಬಹುದು.

ರಣರಂಗವಾಯ್ತು ಬಿಗ್ ಬಾಸ್ ಮನೆ, ಡಾಮಿನೇಟ್ ಮಾಡೋಕೆ ಯಾವಳೋ ಅವ್ಳು, ತನಿಶಾ ವಿರುದ್ಧ ಹರಿಹಾಯ್ದ ನಮ್ರತಾ! 

ಕಲರ್ಸ್ ಕನ್ನಡ ನಂಬರ್ ಒನ್ ಆಗುವ ಮೂಲಕ ಈ ಮೊದಲು ಹಲವು ವರ್ಷಗಳ ಕಾಲ ನಂಬರ್ ಒನ್ ಪಟ್ಟದಲ್ಲಿ ರಾರಾಜಿಸುತ್ತಿದ್ದ ಜೀ ಕನ್ನಡ ವಾಹಿನಿಯನ್ನು ಸಹಜವಾಗಿ 'ನಂಬರ್ 2'ಕ್ಕೆ ತಳ್ಳಿದೆ. ಎಂದಿನಂತೆ ಸ್ಟಾರ್ ಸುವರ್ಣ ನಂಬರ್ 3 ಹಾಗೂ ಉದಯ 4ನೇ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿವೆ. ಟಿಆರ್‌ಪಿ ಸ್ಥಾನದಲ್ಲಿ ಇದೀಗ ಎರಡನೇ ಸ್ಥಾನಕ್ಕೆ ಕುಸಿದಿರುವ ಜೀ ಕನ್ನಡದ ಮುಂದಿನ ಹೆಜ್ಜೆ ಏನಿರಬಹುದು ಎಂಬ ಕುತೂಹಲ ಈಗ ಎಲ್ಲರಲ್ಲಿ ಮನೆ ಮಾಡಿದೆ. ಕಾರಣ, ನಂಬರ್ ಒನ್ ಪಟ್ಟವೆಂಬುದು ಯಾರಿಗೂ ಶಾಶ್ವತವಲ್ಲ.

ವೀಕ್ಷಕರು ಕಳಿಸಿದ ಗಿಫ್ಟ್ ಕಂಡು ಕಂಗಾಲಾಗಿ ಕುಳಿತ ಸ್ಪರ್ಧಿಗಳು: ವಿನಯ್‌ಗೆ ಸಲಗ, ನಮ್ರತಾಗೆ ಬಂತು ಚಮಚ!

ಟಿಆರ್‌ಪಿ ಲಿಸ್ಟ್‌ನಲ್ಲಿ ಸ್ಥಾನ ಬದಲಾವಣೆ ಸಹಜ ಎಂಬುದು ಎಲ್ಲರಿಗೂ ಗೊತ್ತು. 'ಬದಲಾವಣೆ ಜಗದ ನಿಯಮ' ಎಂಬ ಮಾತು ಯಾರಿಗೆ ಗೊತ್ತಿಲ್ಲ? ಆದರೆ, ಹಲವು ವರ್ಷಗಳಷ್ಟು ಕಾಲ 'ನಂಬರ್ 2'ದಲ್ಲಿದ್ದ ಕಲರ್ಸ್ ಈಗ ಮೊದಲ ಸ್ಥಾನಕ್ಕೇರಿ, ನಂಬರ್ ಒನ್ ಎನಿಸಿದ್ದ ಜೀ ಕನ್ನಡ ಎರಡನೇ ಸ್ಥಾನಕ್ಕೆ ಜಾರಿದೆ. ಮುಂದಿನ ವಾರ ಬರಲಿರುವ ಟಿಆರ್‌ಪಿ ಬಗ್ಗೆ ಇದೀಗ ಭಾರೀ ಕುತೂಹಲ ಸೃಷ್ಟಿಯಾಗಿದೆ. ಮುಂದಿನ ವಾರದ ಟಿಆರ್‌ಪಿಯಲ್ಲಿ ಯಾರು ಮೊದಲ ಸ್ಥಾನ ಪಡೆಯಬಹುದು?

Follow Us:
Download App:
  • android
  • ios