ಕಾಮೆಂಟ್ ಮಾಡೋರು ಮಾಡಿ ನಾನು ಒಂದಲ್ಲ ಒಂದು ದಿನ ನಿಮ್ಮಗೆ ಉತ್ತರ ಕೊಡುತ್ತೀನಿ ಎಂದು ಆಕಾಶ್‌ ಉರ್ಫ್‌ ವರುಣ್ ಆರಾಧ್ಯ. 

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಬೃಂದಾವನಾ ಧಾರಾವಾಹಿಯಲ್ಲಿ ಟಿಕ್ ಟಾಕ್‌- ರೀಲ್ಸ್‌ ಸ್ಟಾರ್ ವರುಣ್ ಆರಾಧ್ಯ ಮಿಂಚುತ್ತಿದ್ದಾರೆ. ಸದ್ಯ ಸೀರಿಯಲ್‌ ನಿಲ್ಲುವ ಹಂತಕ್ಕೆ ಬಂದಿರುವುದು ಕೊಂಚ ಶಾಕಿಂಗ್ ವಿಚಾರ, ಆದರೆ ಇದಕ್ಕೆ ವರುಣ್ ಅದೃಷ್ಟವಲ್ಲ ಎಂದು ನೆಗೆಟಿವ್ ಕಾಮೆಂಟ್ ಮಾಡುತ್ತಿದ್ದಾರೆ. ಸದಾ ನೆಗೆಟಿವ್ ಕಾಮೆಂಟ್ ಮತ್ತು ಟ್ರೋಲ್ ಮಾಡುವವರಿಗೆ ವರುಣ್ ಮತ್ತು ಅವರ ತಾಯಿ ಉತ್ತರ ಕೊಟ್ಟಿದ್ದಾರೆ. 

'ಓವರ್ ಆಕ್ಟಿಂಗ್ ಎಂದು ಅನೇಕರು ಕಾಮೆಂಟ್ ಮಾಡುತ್ತಾರೆ ಆದರೆ ನಾವು ಮನೆಯಲ್ಲಿ ಎಷ್ಟು ನ್ಯಾಚುಲರ್ ಆಗಿ ಇರುತ್ತೀವಿ ಅದೇ ರೀತಿ ಯುಟ್ಯೂಬ್ ಮತ್ತು ರೀಲ್ಸ್‌ಗಳಲ್ಲಿ ಕಾಣಿಸಿಕೊಳ್ಳುತ್ತೀವಿ. ನಮ್ಮನ್ನು ನಿಜವಾಗಲೂ ನೋಡಿ ಗುರುತಿಸಿ ಅರ್ಥ ಮಾಡಿಕೊಂಡು ಸರಿ ಮಾಡಲಿ ಎಂದು ಕಾಮೆಂಟ್ ಮಾಡುವವರನ್ನು ಒಪ್ಪಿಕೊಳ್ಳುತ್ತೀನಿ. ಒಬ್ಬೊಬ್ಬರು ಇದ್ದಾರೆ ಅವರೇ ಮೂರ್ನಾಲ್ಕು ಕಾಮೆಂಟ್ ಮಾಡುತ್ತಾರೆ ಅದು ಬೇಡದೆ ಇರೋದು. ಪ್ರತಿಯೊಬ್ಬರು ತಮ್ಮ ಅಭಿಪ್ರಾಯವನ್ನು ಹೇಳಿಕೊಳ್ಳುವ ಸ್ವಾತಂತ್ರವಿದೆ ...ಪಾಸಿಟಿವ್ ಆರ್‌ ನೆಗೆಟಿವ್ ಒಟ್ಟಿನಲ್ಲಿ ನಾವು ಸದಾ ನಿಮ್ಮ ಬಾಯಲ್ಲಿ ಇರುತ್ತೀನಿ ಅನ್ನೋ ಖುಷಿ ಇದೆ' ಎಂದು ವರುಣ್ ಆರಾಧ್ಯ ತಾಯಿ ಉತ್ತರ ಕೊಟ್ಟಿದ್ದಾರೆ. 

ಮಗಳು ಕಿರುಚಾಡಿದರೂ ನಾನು ಹೊಡೆಯಲ್ಲ, ಬೈಯಲ್ಲ; ಪೇರೆಂಟಿಂಗ್ ಪಾಠ ಮಾಡಿದ ಶ್ರುತಿ ಹರಿಹರನ್

ನಾವು ಓಪರ್ ಆಕ್ಟಿಂಗ್ ಮಾಡುತ್ತಿದ್ದೀವಿ ಅಂತ ಹೇಳ್ತೀರಾ ಅಲ್ವಾ ಹೌದು ಆಕ್ಟಿಂಗ್ ಮಾಡುತ್ತೀವಿ ಏನು ಇವಾಗ? ಅಲ್ಲೊಬ್ಬ ಕೂತ್ಕೊಂಡು ಕಾಮೆಂಟ್ ಮಾಡುತ್ತಾರೆ ಅಷ್ಟೆ. ಹೊಟ್ಟ ಉರಿಯಿಂದ ಕಾಮೆಂಟ್ ಮಾಡಬೇಕು, ಕೆಲವೊಮ್ಮೆ ಸಂಬಂಧಗಳಿಗೆ ಬೆಲೆ ಕೊಟ್ಟು ಕಾಮೆಂಟ್ಸ್‌ನಲ್ಲಿ ಸಂಬಂಧಿಕರನ್ನು ಕರೆಯುತ್ತೀರಾ. ಒಬ್ಬರ ಬಗ್ಗೆ ಮಾತನಾಡುವ ಮುನ್ನ ನೂರು ಸಲ ಯೋಚನೆ ಮಾಡಬೇಕು. ನಾನು ಕೂಡ ಯಾರ ಬಗ್ಗೆನೂ ಕಾಮೆಂಟ್ ಮಾಡುವುದಿಲ್ಲ. ಅಕೌಂಟ್ ಓಪನ್ ಮಾಡಿ ನೋಡಿದರೆ ಎಲ್ಲವೂ ಫೇಕ್ ಐಡಿಯಾಗಿರುತ್ತದೆ. ನನ್ನನ್ನು ಇಷ್ಟ ಪಡದೇ ಇರುವವರು ತುಂಬಾ ಜನರಿದ್ದಾರೆ ಅದಕ್ಕೆ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ ಎಲ್ಲವನ್ನು ಸ್ವೀಕರಿಸುತ್ತೀನಿ ಆದರೆ ನಾನು ಕೂಡ ಮಾತನಾಡುವ ಸಮಯ ಬರುತ್ತದೆ ನನ್ನ ಕೆಲಸಗಳನ್ನು ಮಾಡಿ ತೋರಿಸುವ ಸಮಯ ಬರುತ್ತದೆ. ನಮ್ಮ ಕೆಲಸ ನಾವು ಮಾಡುತ್ತೀವಿ ನಿಮ್ಮ ಕೆಲಸ ಕಾಮೆಂಟ್ ಮಾಡುವುದು ಮಾಡಿ. ನೀವು ಬೈದಿದ ತಕ್ಷಣ ಅದು ನಮಗೆ ತಟ್ಟುವುದಿಲ್ಲ. ಕಾಮೆಂಟ್ ಮಾಡುವವರು ಚೆನ್ನಾಗಿರು ಎಂದು ವರುಣ್ ಅರಾಧ್ಯ ಯುಟ್ಯೂಬ್ ವಿಡಿಯೋದಲ್ಲಿ ಮಾತನಾಡಿದ್ದಾರೆ.