ನನ್ನ ಲಿಪ್‌ಸ್ಟಿಕ್‌ ನನ್ನ ಒಡವೆ ನನ್ನ ಗಂಡ ಅಂತಾರೆ: ಹೆಂಡತಿ ಪೊಸೆಸಿವ್‌ನೆಸ್‌ ಬಗ್ಗೆ ಸತ್ಯ ಬಿಚ್ಚಿಟ್ಟ ಸುಂದರ್

ಶೂಟಿಂಗ್‌ ಅಂತ ಎಷ್ಟೇ ಬ್ಯುಸಿಯಾಗಿದ್ದರೂ ಫ್ಯಾಮಿಲಿಗೆ ಟೈಮ್ ಕೊಡಬೇಕು ಅನ್ನೋದು ವೀಣಾ ಸುಂದರ್ ಸಲಹೆ...

Colors Kannada Brindavana Veena Sundar talks about family and time vcs

ಕಲರ್ ಕನ್ನಡ ವಾಹಿನಿಯಲ್ಲಿ ಬೃಂದಾವನ ಧಾರಾವಾಹಿ ಆರಂಭವಾಗುತ್ತಿದೆ. ಈ ತುಂಬಿದ ಕುಟುಂಬದಲ್ಲಿ ವೀಣಾ ಮತ್ತು ಸುಂದರ್ ದಂಪತಿ ನಟಿಸುತ್ತಿದ್ದಾರೆ. ರಿಯಲ್ ಲೈಫ್‌ನಲ್ಲಿ ಗಂಡ ಹೆಂಡತಿ ಆಗಿರುವ ಈ ಜೋಡಿ ಆನ್‌ ಸ್ಕ್ರೀನ್‌ನಲ್ಲೂ ಕಮಾಲ್ ಮಾಡಲು ರೆಡಿಯಾಗಿದ್ದಾರೆ. ಈ ನಡುವೆ ಜೀವನದಲ್ಲಿ ಒಬ್ಬರ ಕೆಲಸ ಮತ್ತೊಬ್ಬರು ಗೌರವಿಸುವುದು ಎಷ್ಟು ಮುಖ್ಯ, ಟೈಮ್ ಕೊಡುವುದು ಎಷ್ಟು ಮುಖ್ಯ ಹಾಗೂ ಪೊಸೆಸಿವ್‌ನೆಸ್‌ ಎಷ್ಟಿದೆ ಎಂದು ಮಾತನಾಡಿದ್ದಾರೆ. 

'ನಿಜ ಜೀವನದಲ್ಲಿ ನಾವು ಎಲ್ಲರಂತೆ ಬದುಕುತ್ತೀವಿ. ಎಲ್ಲರಂತೆ ಜಗಳ ಮಾಡುತ್ತೀವಿ ಪ್ರೀತಿ ತೋರಿಸುತ್ತೀವಿ ನಮ್ಮ ಕೆಲಸಗಳ ಬಗ್ಗೆ ಗೌರವ ಇದೆ ಹಾಗೂ ಸಂಪೂರ್ಣ ಬೆಂಬಲ ಇದೆ. ಸಿನಿಮಾ ಶೂಟಿಂಗ್ ಅಂತ ಬ್ಯುಸಿಯಾಗಿದ್ದರೂ ಫ್ಯಾಮಿಲಿಗೆ ಟೈಮ್ ಕೊಡಬೇಕು. ಕೆಲಸ ಮುಗಿಸಿಕೊಂಡು ಮನೆಗೆ ಹೋದ ಮೇಲೆ ಎಲ್ಲರು ಇರುತ್ತಾರೆ ಹಾಗೇ ನಾವು ಇರುತ್ತೀವಿ. ಇಬ್ಬರಿಗೂ ಟೈಮ್ ಸಿಗುತ್ತದೆ. ಮಕ್ಕಳಿಗೋಸ್ಕರ ನಾನು ಪ್ಲ್ಯಾನ್ ಮಾಡಿಕೊಂಡು ಡೇಟ್ಸ್‌ ಕೊಡುತ್ತಿದ್ವಿ. ಸುಂದರ್ ಮನೆಯಲ್ಲಿದ್ದಾಗ ನಾನು ಶೂಟಿಂಗ್ ಮಾಡುತ್ತಿದ್ದೆ, ನಾನು ಶೂಟಿಂಗ್ ಮಾಡುವಾಗ ಸುಂದರ್ ಮನೆಯಲ್ಲಿರುತ್ತಿದ್ದರು. ಇಬ್ಬರಲ್ಲಿ ಒಬ್ಬರಾದರೂ ಮನೆಯಲ್ಲಿರಬೇಕು ಅನ್ನೋದು ನಮ್ಮ ಪ್ಲ್ಯಾನ್. ಬೃಂದಾವನ ಧಾರಾವಾಹಿ ಪ್ರಾಜೆಕ್ಟ್‌ ಒಪ್ಪಿಕೊಳ್ಳಲು ನಾವು ಯೋಚನೆ ಮಾಡಿದ್ದೀವಿ, ನಾವಿಬ್ಬರೂ ಒಟ್ಟಿಗೆ ಇದ್ದರೂ ಮಕ್ಕಳು ಮಿಸ್ ಮಾಡಿಕೊಳ್ಳುತ್ತಾರೆ. ಒಂದೇ ವೃತ್ತಿಯಲ್ಲಿ ಗಂಡ ಹೆಂಡತಿ ಇರುವ ಕಾರಣ ನಮ್ಮ ಕೆಲಸದ ಬಗ್ಗೆ ಅರ್ಥ ಮಾಡಿಸುವ ಅಗತ್ಯವಿಲ್ಲ' ಎಂದು ವೀಣಾ ಸುಂದರ್ ಮಾತನಾಡಿದ್ದಾರೆ. 

ಕೂದಲು ಕಲರ್ ಹಾಕಿಸಿ ಎಡವಟ್ಟು ಮಾಡಿಕೊಂಡ ನಟಿ; ಮುಖ ನೋಡಿ ಹೆದರಿಕೊಳ್ಳಬೇಡಿ, ವಿಡಿಯೋ ವೈರಲ್

ನಾವಿಬ್ಬರೂ possessive ಆಗಿಲ್ಲ. ಸುಂದರ್ ಇಲ್ಲ ಅನ್ನಬಹುದು ಅದರೆ ನಾನು ಪೋಸೆಸಿವ್ ಆಗಿರುವೆ ಎಂದು ವೀಣಾ ಹೇಳುತ್ತಾರೆ. ಹೆಣ್ಣು ಮಕ್ಕಳಿಗೆ ಲಿಪ್ಟ್‌ ಸ್ಟಿಕ್‌ ಒಡವೆ ಎಲ್ಲವೂ ನನ್ನದು ಎನ್ನುತ್ತಾರೆ ಹಾಗೆ ಅವರಿಗೆ ಗಂಡನೂ ನನ್ನವನು ಎನ್ನುವ ರೀತಿಯಲ್ಲಿ ಹೇಳುತ್ತಾರೆ ಎಂದು ಸುಂದರ್ ತಮಾಷೆ ಮಾಡಿದ್ದಾರೆ. ನಾನು ನನ್ನ ಗಾಡಿ ಜೊತೆ..ಅಡುಗೆ ಮನೆಯಲ್ಲಿರುವ ಪಾತ್ರೆಗಳ ಜೊತೆ ಮಾತನಾಡುತ್ತೀನಿ ಅಂದ್ಮೇಲೆ ಲೈಫ್ ಲಾಂಗ್ ಜೊತೆಗಿರುವ ವ್ಯಕ್ತಿಗೆ ನಾನು ಪ್ರಮುಖ್ಯತೆ ನೀಡಲ್ವಾ?' ಎಂದು ವೀಣಾ ಹೇಳಿದ್ದಾರೆ. 

Latest Videos
Follow Us:
Download App:
  • android
  • ios