35 ಕಂಪನಿ ಇಲ್ವೇ ಇಲ್ಲ, ಹಣ ತಗೊಂಡು ಮೋಸ ಮಾಡಿಲ್ಲ: ವಿನಯ್ ಪತ್ನಿ ಸ್ಪಷ್ಟನೆ

ವಿನಯ್ ಹೆಸರಿನಲ್ಲಿರುವ 35 ಕಂಪನಿಗಳು ಯಾವುದು? ಟ್ರೋಲ್‌ಗಳಿಗೆ ಸ್ಪಷ್ಟನೆ ಕೊಟ್ಟ ಪತ್ನಿ ಅಕ್ಷತಾ....

Colors Kannada bigg boss Vinay Gowda wife clarifies about 35 company vcs

ಕಲರ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಬಿಗ್ ಬಾಸ್ ಸೀಸನ್ 10ರ ರಿಯಾಲಿಟಿ ಶೋನಲ್ಲಿ ಸ್ಪರ್ಧಿಗಳಾದ ವಿನಯ್ ಗೌಡ, ಸಂಗೀತಾ ಶೃಂಗೇರಿ ಮತ್ತು ಡ್ರೋನ್ ಪ್ರತಾಪ್ ನಡುವೆ ಜಗಳ ಆಗುತ್ತಿರುತ್ತದೆ. ಅದರಲ್ಲೂ ನಾಮಿನೇಷನ್‌ ಸಮಯದಲ್ಲಿ ವಿನಯ್ ನೀಡುವ ಹೇಳಿಕೆಗಳು, ಜಗಳ ಮಾಡುವಾಗ ಬಳಸುವ ಪದಗಳು ಸ್ಪರ್ಧಿಗಳಿಗೆ ಮಾತ್ರವಲ್ಲ ನೋಡುವ ವೀಕ್ಷಕರಿಗೂ ಬೇಸರವಾಗುತ್ತದೆ. ಈ ವಿಚಾರದ ಬಗ್ಗೆ ವಿನಯ್ ಪತ್ನಿ ಸ್ಪಷ್ಟನೆ ಕೊಟ್ಟಿದ್ದಾರೆ. ನಿಜಕ್ಕೂ 35 ಕಂಪನಿ ಇದ್ಯಾ?

'ಇಲ್ಲ ಇಲ್ಲ ವಿನಯ್ ಅವರದ್ದು 35 ಕಂಪನಿ ಇಲ್ಲ...ನೀವು ಸರಿಯಾಗಿ ಕೇಳಿಸಿಕೊಂಡಿಲ್ಲ. ಸರಿಯಾಗಿ ಕೇಳಿಸಿಕೊಂಡಿದ್ದರೆ ಗೊತ್ತಾಗುತ್ತಿತ್ತು. ಕಂಪನಿ ಕಂಪನಿ ಅಂತ ಪ್ರಮೋಷನ್ ಮಾಡಲು ಬಂದಿಲ್ಲ ಆದರೂ ಪ್ರಮೋಷನ್ ಮಾಡುತ್ತಿರುವ ವಿಚಾರಕ್ಕೆ ವಿನಯ್ ಮಾತನಾಡಿರುವುದು. ನಾಲ್ಕಿ ಗೋಡೆ ನಡುವೆ ಆಗುವ ಕೆಲಸಗಳನ್ನು ಮಾತ್ರ ಡ್ರೋನ್ ಪ್ರತಾಪ್ ಮಾತನಾಡಬೇಕು ಹೊರಗಿನ ಕೆಲಸಗಳ ಬಗ್ಗೆ ಅಲ್ಲ. ಅದಿಕ್ಕೆ ವಿನಯ್ ಏನು ಹೇಳಿದ್ದು ಅಂದ್ರೆ ನಂದು 35 ಕಂಪನಿ ಇದೆ ಅಂತ ಅಂದುಕೊಳ್ಳೋ ಅಂತ ಏನೋ something ಹೇಳುತ್ತಾರೆ ಅವರು ಮಾತುಗಳನ್ನು ಕಟ್ ಮಾಡಿದ್ದಾರೆ. ನಂದೂ ಕಂಪನಿ ಇದೆ ಎಂತ ವಿನಯ್ ಹೇಳಿಲ್ಲ. ಜನರು ಮತ್ತೊಮ್ಮೆ ಆ ವಿಡಿಯೋ ನೋಡಿ ಖಂಡಿತಾ ವಿನಯ್ ಆ ರೀತಿ ಮಾತನಾಡಿಲ್' ಎಂದು ಖಾಸಗಿ ಯುಟ್ಯೂಬ್ ಸಂದರ್ಶನದಲ್ಲಿ ಮಾತನಾಡಿದ್ದಾರೆ. 

ವಿನಯ್ ವ್ಯಕ್ತಿತ್ವ ಡ್ಯಾಮೇಜ್ ಅಗುತ್ತಿದೆ, ಅವ್ರ ಸಾಧನೆಗೆ ಕೆಟ್ಟ ಹೆಸರು ತರುತ್ತಿದ್ದಾರೆ: ನಾದಿನಿ ಭಾವುಕ

'ವಿನಯ್ ಜೀವನದಲ್ಲಿ ತುಂಬಾ ಒಳ್ಳೆ ಕೆಲಸಗಳನ್ನು ಮಾಡುತ್ತಿದ್ದಾರೆ. ಇಂಡಸ್ಟ್ರಿಗೆ ತುಂಬಾ ಬೆಲೆ ಕೊಡುತ್ತಾರೆ. ಯಾವ ಫ್ರಾಡ್‌ಗಳ ರೀತಿ ನಡೆದುಕೊಂಡಿಲ್ಲ ಬೇರೆ ಅವರ ರೀತಿ ಹಣ ಪಡೆದುಕೊಂಡು ಮೋಸ ಮಾಡಿಲ್ಲ. ನ್ಯಾಯವಾಗಿದ್ದಾರೆ ಅಂದ್ಮೇಲೆ ಗೆಲ್ಲಬೇಕು. ವಿನಯ್‌ಗೆ ತಾಳ್ಮೆ ತುಂಬಾ ಇದೆ ಆದರೆ ಟಿವಿಯಲ್ಲಿ ತಾಳ್ಮೆ ಇಲ್ಲ ಅನ್ನೋ ರೀತಿಯಲ್ಲಿ ತೋರಿಸುತ್ತಿದ್ದಾರೆ. ಒಮ್ಮೆ ವಿನಯ್ ಅವರನ್ನು ವೈಯಕ್ತಿಕವಾಗಿ ಭೇಟಿ ಮಾಡಿದರೆ ಮಾತ್ರ ಸತ್ಯ ತಿಳಿಯುತ್ತದೆ. ವಿನಯ್‌ರನ್ನು ತಪ್ಪಾಗಿ ತೋರಿಸುತ್ತಿದ್ದಾರೆ' ಎಂದು ವಿನಯ್ ಯಾಕೆ ಗೆಲ್ಲಬೇಕು ಎಂದು ಪತ್ನಿ ಹೇಳಿದ್ದಾರೆ. 

Latest Videos
Follow Us:
Download App:
  • android
  • ios