Asianet Suvarna News Asianet Suvarna News

ಮುಚ್ಕೊಂಡು ನಿನ್ನ ಕೆಲಸ ನೋಡ್ಕೋ, ಕೇಸ್ ಹಾಕ್ತೀನಿ: ಯುಟ್ಯೂಬರ್‌ ವಿರುದ್ಧ ತಿರುಗಿ ಬಿದ್ದ ತನಿಷಾ

ಯುಟ್ಯೂಬರ್ ವಿರುದ್ಧ ತಿರುಗಿ ಬಿದ್ದ ತನಿಷಾ. ಯಾರಿಂಗ ಯಾರಿಗೂ ಅವಕಾಶ ಸಿಕ್ಕಿಲ್ಲ ಎಂದ ನಟಿ.

Colors Kannada Bigg boss Tanisha warns Youtuber about fake video vcs
Author
First Published Jan 27, 2024, 2:36 PM IST

ಬಿಗ್ ಬಾಸ್ ಸೀಸನ್ 10ರಲ್ಲಿ ಮಿಂಚಿರುವ ತನಿಷಾ ಕುಪ್ಪಂಡ ಹತ್ತು ಹಲವು ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದಾರೆ. ಕಿರುತೆರೆ ನಟಿಯಾಗಿ ಹೆಚ್ಚು ಜನಪ್ರಿಯತೆ ಪಡೆದಿರುವ ತನಿಷಾ ಬಿಬಿ ಮನೆಗೆ ಕಾಲಿಡುವ ಮುನ್ನ ಯುಟ್ಯೂಬರ್‌ ಜೊತೆ ಕಿರಿಕ್ ಮಾಡಿಕೊಂಡಿದ್ದರು. ಹೀಗಾಗಿ ನನ್ನಿಂದ ತನಿಷಾ ಬಿಗ್ ಬಾಸ್ ಆಫರ್ ಪಡೆದುಕೊಂಡ್ಡು, ತನಿಷಾ ಬದಲಾಗಿ ನಾನು ಬಿಗ್ ಬಾಸ್‌ಗೆ ಹೋಬೇಕು ಅಂತ ಸುಮಾರು ವಿಡಿಯೋಗಳಲ್ಲಿ ಚರ್ಚೆ ಮಾಡುತ್ತಾರೆ. ಈ ವಿಡಿಯೋಗಳಿಂದ ತನಿಷಾಗೆ ನೆಗೆಟಿವ್ ಆಗಿದ್ದಕ್ಕಿಂತ ಪಾಸಿಟಿವ್ ಆಗಿದ್ದೇ ಹೆಚ್ಚು. ಈ ವಿಚಾರವಾಗಿ ತನಿಷಾ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. 

'ಆರಂಭದಲ್ಲಿ ನನಗೆ ಒಂದಿಷ್ಟು ನೆಗೆಟಿವ್ ಅಂತ ಬಂದಾಗ ಅದನ್ನು ಒಪ್ಪಿಕೊಳ್ಳಲು ರೆಡಿಯಾಗಿ ಇರಲಿಲ್ಲ ಅದು ನನಗೆ ಅಫೆಕ್ಟ್‌ ಆಗಲಿಲ್ಲ ಏಕೆಂದರೆ ನಾನು ತುಂಬಾನೇ ಪಾಸಿಟಿವ್ ವ್ಯಕ್ತಿ. ನೀವು ಸಾವಿರ ಮಾತನಾಡಬಹುದು ಅದರಿಂದ ನನಗೆ ಏನೂ ಎಫೆಕ್ಟ್‌ ಆಗಲ್ಲ. ಜನರು ಕಾಮೆಂಟ್ ಮಾಡುತ್ತಾರೆ ಅಂದ್ರೆ ನನಗೆ ಅಫೆಕ್ಟ್‌ ಆಗಲ್ಲ, ಯೋಚನೆ ಮಾಡಲು ಶುರು ಮಾಡಿದರೆ ನಿದ್ರೆ ಬರಲ್ಲ. ನಾನು ಖುಷಿಯಾಗಿಲ್ಲ ಅಂದ್ರೆ ಮತ್ತೊಬ್ಬರನ್ನು ಹೇಗೆ ಖುಷಿಯಾಗಿ ಇಡಲಿ? ನನ್ನ ಲೈಫ್‌ ಪಾಲಿಸಿ ಕೇವಲ ಖುಷಿಯಾಗಿರುವುದು. ಬಿಗ್ ಬಾಸ್ ಮನೆಯಲ್ಲಿದ್ದು ನನಗೆ ತುಂಬಾನೇ ಖುಷಿ ಇದೆ ಅಲ್ಲದೆ ನನಗೆ ಸಖತ್ ಪಾಸಿಟಿವ್ ತಿರುವುದು ನೀಡಿದೆ, ಹೀಗಾಗಿ ಅದನ್ನು ಇನ್ನು ಹೆಚ್ಚು ಪಾಸಿಟಿವ್ ಮಾಡಿಕೊಳ್ಳಬೇಕು. ಅದೆಷ್ಟೋ ಕನ್ನಡಿಗರ ಮನೆ ಮಗಳಾಗಿದ್ದೀನಿ' ಎಂದು ಖಾಸಗಿ ವಿಡಿಯೋ ಸಂದರ್ಶನದಲ್ಲಿ ತನಿಷಾ ಮಾತನಾಡಿದ್ದಾರೆ. 

ಇದ್ದಕ್ಕಿದ್ದಂತೆ ಬಿಗ್ ಬಾಸ್‌ ಮನೆಯಿಂದ ಹೊರ ಬಂದ ತನಿಷಾ; ಶಾಕಿಂಗ್ ಎಲಿಮಿನೇಷನ್?

ನನ್ನ ಹೆಸರು ಬಳಸಿಕೊಂಡು ಪಬ್ಲಿಸಿಟಿ ಪಡೆಯುತ್ತಿರುವ ಯುಟ್ಯೂಬರ್‌ಗೆ ನಾನು ಬೈಯಬೇಕು. ಯಾವ ಕೆಟ್ಟ ಬಳಸಿದರೆ ಬೀಪ್‌ ಬಳಸುವುದಿಲ್ಲ ಹೇಳಿ? ಆ ಯುಟ್ಯೂಬರ್‌ ಹೆಸರು ಸುಶಾಂತ್ ಶೆಟ್ಟಿ ಅಂತ, ನೋಡಪ್ಪ ನೀನು ಇನ್ನೂ ನನ್ನ ಹೆಸರು ಬಳಸಿಕೊಂಡು ಏನಾದರೂ ವಿಡಿಯೋ ಮಾಡಿದರೆ, ನನ್ನಿಂದ ಬೆಳೆದಿದ್ದಾರೆ ನನ್ನಿಂದ ಹೆಸರು ಹಣ ಮಾಡುತ್ತಿದ್ದಾಳೆ ಅಂದು ಹೇಳಿಕೊಂಡು ಓಡಾಡುತ್ತಿದ್ದರೆ ಒಂದು ನಾನು ಎಲ್ಲಿ ಹೊಡೆಯುತ್ತೀನಿ ಎಂದು ಗೊತ್ತಿಲ್ಲ. ಲೀಗಲ್‌ ಆಗಿ ನಾನು ಯಾವ ರೀತಿ ಆಕ್ಷನ್ ತೆಗೆದುಕೊಳ್ಳಬೇಕು ಅದನ್ನು ತೆಗೆದುಕೊಳ್ಳುತ್ತೀನಿ, ಅವತ್ತು ನಿನ್ನನ್ನು ಸುಮ್ಮೆ ಬಿಟ್ಟು ಜೀವನದ ಭಿಕ್ಷೆ ಕೊಟ್ಟಿರುವೆ, ಅದರಿಂದ ನೀನು ಖುಷಿ ಪಡಬೇಕು. ಮುಚ್ಕೊಂಡು ನೀನು ನಿನ್ನ ಕೆಲಸ ಅಂತ ಸುಮ್ಮನೆ ಇದ್ರೆ ಖುಷಿಯಾಗಿ ಇರ್ತೀಯಾ ಇಲ್ಲ ಲೀಗಲ್ ಆಗಿ ನಾನು ಕೇಸ್‌ ಹಾಕುವೆ, ನಿನ್ನ ಮುಖನೂ ಯಾರಿಗೂ ನೆನಪು ಬರಲ್ಲ ಹಾಗೆ ಮಾಡುತ್ತೀನಿ ಎಂದು ತನಿಷಾ ಹೇಳಿದ್ದಾರೆ. 

Follow Us:
Download App:
  • android
  • ios