ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಬಿಗ್ ಬಾಸ್‌ ಸೀಸನ್‌-7 ರ ಸ್ಪರ್ಧಿ ಶೈನ್ ಶೆಟ್ಟಿ  ದಿನೇ ದಿನೇ ಅದ್ಭುತವಾಗಿ ಆಟವಾಡುತ್ತಾ ವೀಕ್ಷಕರನ್ನು ಮನೋರಂಜಿಸುತ್ತಿದ್ದಾರೆ.  

BB7:ಕಿರುತೆರೆ ನಟ ರಸ್ತೆಯಲ್ಲಿ ದೋಸೆ ಮಾರಿ ಜೀವನ ಮಾಡುತ್ತಿದ್ದಾರೆ!

11 ನೇ ವಾರದ ಟಾಸ್ಕ್‌ನಲ್ಲಿ ಸ್ಪರ್ಧಿಗಳು ವೈಯಕ್ತಿಕವಾಗಿ ಲಕ್ಷುರಿ ಪಾಯಿಂಟ್ಸ್‌ ಗಳಿಸುವ ಅವಕಾಶ ನೀಡಿದ್ದರು. ಈ ವೇಳೆ ಬಲೂನ್‌ ಟಾಸ್ಕ್‌ ಕೊಟ್ಟಿದ್ದರು. ಪ್ರತಿಯೊಬ್ಬ ಸ್ಪರ್ಧಿಯೂ ತಮ್ಮ ಮುಖವಿರುವ ಬಲೂನ್ ಹಿಡಿದು ಹಗ್ಗವನ್ನು ದಾಟಿ ಎದುರಿಗಿರುವ ಪೋಲ್‌ಗೆ ಕಟ್ಟಬೇಕಿತ್ತು. ಈ ಟಾಸ್ಕ್‌ ವೇಳೆ ಶೈನ್‌ ತಲೆಗೆ ಒಂದು ಮಂಕಿ ಟೋಪಿಯನ್ನು ಧರಿಸಿದ್ದರು. ಅದನ್ನು ದೀಪಿಕಾ ಎಳೆದ ಕಾರಣ ಶೈನ್ ಮುಖ ಮುಚ್ಚಿಕೊಂಡಿತ್ತು. ಅದರ ಬಗ್ಗೆ ತಲೆ ಕೆಡಿಸಿಕೊಳ್ಳದೆ ಶೈನ್ ಆಟ ಮುಂದುವರೆಸುತ್ತಾರೆ. ಹಗ್ಗ ದಾಟಿ ಹೋಗುತ್ತಿದ್ದಾರೆ ಎನ್ನುವಷ್ಟರಲ್ಲಿ ಉಲ್ಟಾ ನೆಲಕ್ಕೆ ಬೀಳುತ್ತಾರೆ . ದೇವರ ದಯೆಯಿಂದ ಯಾವ ಅಪಾಯವೂ ಆಗಿಲ್ಲ. ಟಾಸ್ಕ್‌ನಲ್ಲಿ ಜಯಶಾಲಿಯಾದರು.

BB7: 'ಫೋನ್ ಮಾಡ್ಲಿಲ್ಲ, ಆ್ಯಕ್ಸಿಡೆಂಟ್ ಆಯ್ತು' ಪ್ರೇಯಸಿಗೆ ಕ್ಷಮೆ ಕೇಳಿದ ಶೈನ್ ಶೆಟ್ಟಿ!

ಈ ವಿಚಾರದ ಬಗ್ಗೆ ಕಿಚ್ಚ ಸುದೀಪ್ ವಾರದ ಕಥೆ ಕಿಚ್ಚನ ಜೊತೆಯಲ್ಲಿ ಮಾತನಾಡುವ ವೇಳೆ ಶೈನ್‌ಗೆ ಆರೋಗ್ಯದ ಬಗ್ಗೆ ವಾರ್ನಿಂಗ್ ಕೊಡುತ್ತಾರೆ. ಆಟವಾಡುವಾಗ ನೀವು ತುಂಬಾ ಎಚ್ಚರಿಕೆ ವಹಿಸಬೇಕು.  ನಿಮಗಿಂತ ಟಾಸ್ಕ್‌ ಮುಖ್ಯ ಅಲ್ಲ.  ನೀವು ಇದ್ರೇನೆ ಟಾಸ್ಕ್‌ ಹಾಗೂ ಜೀವನ ಎಂದು ಹೇಳುತ್ತಾ ಎಚ್ಚರಿಕೆ ನೀಡುತ್ತಾರೆ.