Asianet Suvarna News Asianet Suvarna News

ಬಿಕಿನಿ ಸೋನು ಒಪ್ಕೊಂಡಿದ್ದೀರಾ ಅಂದ್ಮೇಲೆ ಪ್ರತಾಪ್‌ಗೆ ಒಂದು ಚಾನ್ಸ್‌ ಕೊಡ್ರೋ:ಡ್ರೋನ್ ಪರ ನೆಟ್ಟಿಗರು!

ಬಿಬಿ ಮನೆಯಲ್ಲಿ ಉಳಿದುಕೊಳ್ಳಲು ಡ್ರೋನ್ ಪ್ರತಾಪ್‌ಗೆ ಅವಕಾಶ ಕೊಡಬೇಕು ಎಂದು ಬೆಂಬಲ ಕೊಟ್ಟ ಟ್ರೋಲ್‌ ಪೇಜ್‌ಗಳು.... 

Colors Kannada Bigg boss BBK10 netizens stand for Drone Prathap vcs
Author
First Published Oct 12, 2023, 3:37 PM IST

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರತಿ ವರ್ಷವೂ ಬಿಗ್ ಬಾಸ್ ರಿಯಾಲಿಟಿ ಶೋ ಆರಂಭವಾಗುತ್ತದೆ. ಕಳೆದೆ ಎರಡು ಸೀಸನ್‌ಗಳಿಂದ ಡ್ರೋನ್ ಪ್ರತಾಪ್ ಬರಲಿದ್ದಾರೆ ಅನ್ನೋ ಸುದ್ದಿ ಕೇಳಿ ಬರುತ್ತಿತ್ತು....ಹೀಗಾಗಿ ಸೀಸನ್ 10ರಲ್ಲಿ ಅತಿ ಕಡಿಮೆ ಜನರ ವೋಟಿಂಗ್ ಪಡೆದು ಬಿಬಿ ಮನೆಯೊಳಗೆ ಪ್ರತಾಪ್ ಎಂಟ್ರಿ ಕೊಟ್ಟಿದ್ದಾರೆ.  ಒಂದೆರಡು ದಿನ ತುಂಬಾ ಸೈಲೆಂಟ್ ಆಗಿದ್ದ ಪ್ರಸಾಪ್ ಯಾರೊಟ್ಟಿಗೂ ಮಾತನಾಡುತ್ತಿರಲಿಲ್ಲ ಆದರೆ ಮೊದಲ ವಾರ ನಾಮಿನೇಷನ್ ಸಮಯದಲ್ಲಿ ಮಾತನಾಡುತ್ತಿಲ್ಲ ಜನರ ಜೊತೆ ಇರುವುದಿಲ್ಲ ಅನ್ನೋ ಕಾರಣ ಕೊಟ್ಟು ನಾಮಿನೇಟ್ ಮಾಡಿರುವ ಕಾರಣ ಪ್ರತಾಪ್ ಈಗ ಬದಲಾಗುತ್ತಿದ್ದಾರೆ. 

ನಾಮಿನೇಟ್ ಆಗಿದ್ದೇ ಆಗಿದ್ದು ನೆಕ್ಸಟ್‌ ಕ್ಷಣವೇ ಪ್ರತಾಪ್ ಪ್ರತಿಯೊಬ್ಬ ಸ್ಪರ್ಧಿ ಜೊತೆಗೂ ಮಾತನಾಡುತ್ತಿದ್ದರು. ಮನೆ ಕೆಲಸದಲ್ಲಿ ಭಾಗಿಯಾಗುತ್ತಾರೆ ಹಾಗೂ ಇದ್ದಬದ್ದ ಹುಡುಗಿಯರನ್ನು ದೀದಿ ದೀದಿ ಎನ್ನುತ್ತಾರೆ. ಕಾಮಿಡಿ ಕಲಾವಿದ ಸಂತು ಜೊತೆ ಸೇರಿಕೊಂಡು ಆಗಾಗ ಪಂಚ್ ಡೈಲಾಗ್ ಹೇಳ್ಕೊಂಡು ಒಟ್ಟಾರೆ ಎಂಜಾಯ್ ಮಾಡುತ್ತಿದ್ದಾರೆ. ಎಂಟ್ರಿ ಕೊಡುತ್ತಿದ್ದರಂತೆ ಒಂದೆರಡು ವಾರ ಇರುವುದಕ್ಕೆ ಇಷ್ಟ ಪಡ್ತೀನಿ ಎನ್ನುತ್ತಿದ್ದ ಪ್ರತಾಪ್‌ನ ಹೊರ ಹಾಕಬೇಕು ಎಂದು ನಾಮಿನೇಟ್ ಮಾಡುತ್ತಿದ್ದರು ಅಂತ ಬೇಸರ ಮಾಡಿಕೊಂಡಿದ್ದರು. 

'ಕಟ್ಟಿರುವ ಎರಡು ತಾಳಿ ತುಂಡು ಬಿಟ್ಟರೆ ಏನೂ ಕೊಟ್ಟಿಲ್ಲ'; ನಟಿ ಸುನೇತ್ರಾರ ಪಾದಪೂಜೆ ಮಾಡಿದ ಪತಿ ರಮೇಶ್

ಅಲ್ಲದೆ ಸಂತೋಷ್ ಮತ್ತು ಸ್ನೇಹಿತ್ ಸೇರಿಕೊಂಡು ಪ್ರತಾಪ್ ವೃತ್ತಿ ಬಗ್ಗೆ ಹಾಸ್ಯ ಮಾಡಿದ್ದಾರೆ. ಹೊರ ಜನರನ್ನು ಡೋಂಗಿ ಮಾಡುತ್ತಾನೆ ಎಂದು ಹಾಸ್ಯ ಮಾಡಿದ ಸ್ನೇಹಿತ್‌ ಬಗ್ಗೆ ನೆಟ್ಟಿಗರು ಆಕ್ರೋಶ ವ್ಯಕ್ತ ಪಡಿಸುತ್ತಿದ್ದಾರೆ. 'ನಿಮ್ಮ ಫೀಲ್ಡ್‌ನಲ್ಲಿ ನೀವು ಹೇಗೆ ಹೆಸರು ಮಾಡಿದ್ದೀರಾ ನನ್ನ ಫೀಲ್ಡ್‌ನಲ್ಲಿ ನಾನು ಹೆಸರು ಮಾಡಿರುವೆ' ಎಂದು ಪ್ರತಾಪ್ ಹೇಳುತ್ತಿದ್ದರೂ ಪ್ರತಿಯೊಬ್ಬರು ಬೇಕೆಂದು ಕಾಲೆಳೆಯುತ್ತಿದ್ದಾರೆ. ಹೊರಗೆ ಮಾಡಿರುವ ತಪ್ಪು ಅರ್ಥ ಮಾಡಿಕೊಂಡು ಒಪ್ಪಿಕೊಂಡು ಜನರಿಗೆ ತಮ್ಮ ಮೇಲಿರುವ ಅಭಿಪ್ರಾಯವನ್ನು ಬದಲಾಯಿಸಬೇಕು ಎಂದು ಪ್ರತಾಪ್ ಕಷ್ಟ ಪಡುತ್ತಿದ್ದಾರೆ. ಹೀಗಾಗಿ ಸೋಷಿಯಲ್ ಮೀಡಿಯಾದಲ್ಲಿ ಪ್ರತಾಪ್‌ಗೆ ಮತ್ತೊಂದು ಚಾನ್ಸ್ ಕೊಡಬೇಕು ಎಂದು ನೆಟ್ಟಿಗರು ಸಪೋರ್ಟ್ ಮಾಡುತ್ತಿದ್ದಾರೆ. 

ಬಿಗ್ ಬಾಸ್‌ನಲ್ಲಿ ಇದ್ದಿದ್ದು ಇದ್ದಂಗೆ ಹೇಳೋ ಇಶಾನಿ ಇವ್ರೆ; ಹಾಟ್ ಹುಡುಗಿಯ ಮೇಲೆ ಪಡ್ಡೆ ಹುಡುಗರ ಕಣ್ಣು!

ಬಟ್ಟೆ ಬಿಚ್ಕೊಂಡು ಹೆಂಗಂದ್ರೆ ಹಂಗೆ ಮಾತನಾಡುವ ಜನರಿಗೆ ಅವಕಾಶ ಸಿಗುತ್ತದೆ, ಸೋನು ಗೌಡನೇ ಒಪ್ಪಿಕೊಂಡಿದ್ದೀರಾ ಯಾಕೆ ಪ್ರತಾಪ್‌ಗೆ ಒಂದು ಅವಕಾಶ ಕೊಡಬಾರದು ಎಂದು ಟ್ರೋಲ್‌ ಪೇಜ್‌ಗಳು ಸಪೋರ್ಟ್ ಮಾಡಲು ಮುಂದಾಗಿದ್ದಾರೆ. 

Follow Us:
Download App:
  • android
  • ios