Asianet Suvarna News Asianet Suvarna News

ನನ್ನನ್ನು ಸರಿಯಾಗಿ ನಡೆಸಿಕೊಂಡಿಲ್ಲ, ಒಂದು ವಾರ ಕೂಡಾಕಿದ್ರು: ಬಿಗ್ ಬಾಸ್ ವಿರುದ್ಧ ತಿರುಗಿ ಬಿದ್ದ ಆರ್ಯವರ್ಧನ್

ಬಿಗ್ ಬಾಸ್ ರಿಯಾಲಿಟಿ ಶೋ ವಿರುದ್ಧ ಅಸಮಾಧಾನ ಹೊರ ಹಾಕಿದ ಗುರೂಜೀ. ನನ್ನನ್ನು ಸರಿಯಾಗಿ ನಡೆಸಿಕೊಂಡಿಲ್ಲ ಅಂದಿದ್ದು ಯಾಕೆ?

Colors Kannada Bigg Boss Aryavardhan guruji Kirik keerthi talks about reality show vcs
Author
First Published Jan 9, 2024, 3:00 PM IST

ಬಿಗ್ ಬಾಸ್ ಕನ್ನಡ ಓಟಿಟಿ ಸೀಸನ್ 1 ಮತ್ತು ಬಿಗ್ ಬಾಸ್ ಕನ್ನಡ ಸೀಸನ್ 9ರಲ್ಲಿ ಸ್ಪರ್ಧಿಸಿರುವ ಆರ್ಯವರ್ಧನ್ ಗುರೂಜೀ ಪದೇ ಪದೇ ರಿಯಾಲಿಟಿ ಶೋ ವಿರುದ್ಧ ಅಸಮಾಧಾನ ಹೊರ ಹಾಕುತ್ತಿದ್ದಾರೆ. ಇದಕ್ಕೆ ಕಾರಣ ಏನೆಂದು ಕಿರಿಕ್ ಕೀರ್ತಿ ಸಂದರ್ಶನದಲ್ಲಿ ಪ್ರಶ್ನೆ ಮಾಡಿದಾಗ ಕೊಟ್ಟ ಉತ್ತರವಿದು. 

'ಬಿಗ್ ಬಾಸ್‌ ಮೇಲೆ ನನಗೆ ಕೋಪ ಯಾಕೆಂದ್ರೆ....ನಾನು ಬರಲ್ಲ ಬರಲ್ಲ ಅಂತ ಹೇಳುತ್ತಿದ್ದೆ. ನಾನ್ನೊಬ್ಬ ಸ್ಟಾರ್‌ ರೀತಿ ಬದುಕಿರುವುದು ಸ್ಟಾರ್ ತರನೇ ಇರುವುದು. ನನ್ನ ಜಾತಕದ ಮೇಲೆ ಡಿಪೆಂಟ್ ಆಗಿದ್ದೀನಿ. ಈ ನಡುವೆ ನನ್ನನ್ನು ಅಲ್ಲಿಗೆ ಕರೆಸಿಕೊಂಡು ಸರಿಯಾಗಿ ನಡೆಸಿಕೊಂಡಿಲ್ಲ. ಬಿಗ್ ಬಾಸ್ ಓಟಿಟಿ ಸೀಸನ್ 1 ಆದ್ಮೇಲೆ ನಮ್ಮನ್ನು ಕೂಡಾಕಿದ್ರು. ನಾವು ಬ್ಯುಸಿನೆಸ್ ಮ್ಯಾನ್‌ಗಳು ನಮ್ಮನ್ನು ಬಿಟ್ಟು ಬಿಡಿ ಅಂತ ಹೇಳಿದ್ರೂ ಕೇಳಿಲ್ಲ. ಓಟಿಟಿ ಆದ್ಮೇಲೆ ಮನೆಗೆ ಬಿಟ್ಟಿಲ್ಲ ಅಲ್ಲಿ ನನಗೆ ಬೇಸರ ಅಯ್ತು. ಅಲ್ಲಿದ್ದ ಸ್ಪರ್ಧಿಗಳಿಗಿಂತ ನಾನು ಚೆನ್ನಾಗಿ ಅಟವಾಡಿದ್ದೀನಿ...ಪ್ರಪಂಚದಲ್ಲಿ ಏನಾಗುತ್ತದೆ ಎಂದು ಪ್ರಿಡಿಕ್ಟ್‌ ಮಾಡುವವರು ನಾವು...ಹೀಗಿರುವಾಗ ನಮ್ಮನ್ನು ಬಿಗ್ ಬಾಸ್ ಸರಿಯಾಗಿ ಬಳಸಿಕೊಂಡಿಲ್ಲ. ಆ ನೋವು ನನ್ನನ್ನು ಕಾಡುತ್ತಿತ್ತು. ಹೊರಗಡೆ ನಾನು ಹೇಗಿದ್ದೆ ಒಳಗಡೆನೂ ನಾನು ಹಾಗೇ ಇರುವೆ, ಎಲ್ಲರಂತೆ ನಾನು ಬದಲಾಗಿಲ್ಲ. ಅದೆಷ್ಟೋ ಜನ ನೆಗೆಟಿವ್ ಕಾಮೆಂಟ್ ಮಾಡುತ್ತಾರೆ ಕೆಟ್ಟದಾಗಿ ಮೆಸೇಜ್ ಮಾಡುತ್ತಾರೆ ಅದನ್ನು ಓದಬಾರದು ಅಂತ ದೇವರು ಹೀಗೆ ಮಾಡಿದ್ದು. ನನಗೆ ಓದಲು ಬರೆಯಲು ಬರಲ್ಲ. ಅದಕ್ಕೆ ನಾನು ತಲೆ ಕೆಡಿಸಿಕೊಂಡಿಲ್ಲ ನಾನು ಎಬ್ಬೆಟ್ಟು. ಕನ್ನಡದ 55 ಅಕ್ಷರ ಬಿಟ್ಟು ಬೇರೆ ಏನೂ ಗೊತ್ತಿಲ್ಲ. ನಾನು ತೆಂಡುಲ್ಕರ್ ತರ. ನಾನೊಬ್ಬ ಫಾರ್ಮ್‌ನಲ್ಲಿ ಇರುತ್ತೀನಿ ಪ್ಲೇಯರ್ ಆಗಿರುತ್ತೀನಿ' ಎಂದು ಕಿರಿಕ್ ಕೀರ್ತಿ ನಡೆಸಿದ ಸಂದರ್ಶನದಲ್ಲಿ ಆರ್ಯವರ್ಧನ್ ಗುರೂಜಿ ಮಾತನಾಡಿದ್ದಾರೆ. 

ಸುದೀಪ್ ಯಾರಿಗಾದ್ರು ಚಾನ್ಸ್‌ ಕೊಟ್ಟವ್ರಾ? ಮೊನ್ನೆ ಎಲಿಮಿನೇಟ್ ಆದವರಿಗೆ 20 ಸಾವಿರ ಸಿಕ್ಕಿರುವುದು ಹೆಚ್ಚು: ಆರ್ಯವರ್ಧನ್

'ಬಿಗ್ ಬಾಸ್ ಅಗ್ರಿಮೆಂಟ್‌ಗೆ ಸಹಿ ಮಾಡಿದ್ದೀನಿ ಆದರೆ ನನಗೆ ಓದಲು ಬರೆಯಲು ಬರಲ್ಲ. ಬಿಗ್ ಬಾಸ್ ಕಾರ್ಯಕ್ರಮ ನಡೆಸಬೇಕು ಅಂತ ಸುಮಾರು ಸಲ ನನ್ನನ್ನು ಕರೆದಿದ್ದರು. ಹೊರಗೆ ನಾನು ಮಾತನಾಡುತ್ತಿದ್ದೆ ಒಳಗೆ ಹಾಗೆ ಮಾತನಾಡಲಿ ಆಡಿಯನ್ಸ್‌ ಬರುತ್ತಾರೆ ಅನ್ನೋ ಲೆಕ್ಕಚಾರ ಇರಬೇಕು. ನಾವು ಜಮೀನ್ದಾರ್ರು..ಜೀತದ ಪದತ್ತಿ ಬಹಳ ಹಿಂದೆ ಇತ್ತು...ಆ ರೀತಿ ದುಡಿಸಿಕೊಳ್ಳುತ್ತಿದ್ದರು ಬಹಳ ಲೇಟ್ ಆಗಿ ಕೊಡುತ್ತಿದ್ದರು. ಬಿಗ್ ಬಾಸ್ ಮನೆಯಲ್ಲಿ ಪ್ರತಿ ವಾರ ಒಬ್ಬರಿಗೆ ಒಂದೊಂದು ಅವಾರ್ಡ್‌ ಕೊಡಬೇಕು. ಒಬ್ರಿಗೆ ಒಂದು ಲಕ್ಷ ಎರಡು ಲಕ್ಷ ಅಂತ ಆಫರ್ ಕೊಡಬೇಕು. ಅತ್ಯುತ್ತಮ ಕೊಡ್ತಾರೆ ಕಳಪೆ ಕೊಡ್ತಾರೆ ಅದು ಬಿಟ್ಟು ಬೇರೆ ಕೊಡಬೇಕು. ಜನರಿಗೆ ಬಿಗ್ ಬಾಸ್ ಏನು ತೋರಿಸುತ್ತಾರೆ ಅದನ್ನು ಜನರು ನಂಬುತ್ತಾರೆ' ಎಂದು ಅರ್ಯವರ್ಧನ್ ಹೇಳಿದ್ದಾರೆ. 

ಆ ವ್ಯಕ್ತಿನ ಕುಗ್ಗಿಸಲಾಗಿದೆ, ಆದ್ರೂ ಟ್ರೋಫಿ ಗೆಲ್ತಾರೆ: ಭವಿಷ್ಯ ನುಡಿದ ಆರ್ಯವರ್ಧನ್ ಗುರೂಜಿ

'ಬಿಗ್ ಬಾಸ್‌ ಮನೆಯಲ್ಲಿ ನಾನು ಚೆನ್ನಾಗಿ ಅಡುಗೆ ಮಾಡಿ ಕೊಟ್ಟಿದ್ದೀನಿ ಅದಕ್ಕೆ ಅವಾರ್ಡ್ ಕೊಡಿ ಎಂದು ಹೇಳಿದೆ ಕೊಟ್ಟಿಲ್ಲ. ಅವರಿಗೆ ಕೃತ್ಞತೆ ಇಲ್ಲ. ಬಿಗ್ ಬಾಸ್‌ ನಡೆಸುವುದು ಒಂದು ಫಾರಿನ್ ಕಂಪನಿ ಆ ವ್ಯಕ್ತಿಗಳಿಗೆ ಇದು ಹೇಗೆ ಅನ್ನೋ ಐಡಿಯಾ ಇಲ್ಲ. ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಹೆಸರಾಂತ ವ್ಯಕ್ತಿ ನಡೆಸಿಕೊಡುತ್ತಾರೆ ಆಗ ನಾರ್ಮಲ್ ವ್ಯಕ್ತಿ ಬಂದ್ರೆ ದೊಡ್ಡ ಗಲಾಟೆ ಆಗುತ್ತದೆ. ಪ್ರತಿಯೊಬ್ಬರು ಬಿಗ್ ಬಾಸ್‌ಗೆ ಬರುವುದು ದುಡ್ಡಿದೆ...ನಾನು ಹೋಗಿರುವುದು ದುಡ್ಡಿದೆ. ನಾನು ಅಲ್ಲಿ ಸೆಂಟಿಮೆಂಟ್‌ಗೆ ಲಾಕ್‌ ಆಗಿ ವರ್ಕೌಟ್ ಆಗಿಲ್ಲ' ಎಂದಿದ್ದಾರೆ ಆರ್ಯವರ್ಧನ್. 

Follow Us:
Download App:
  • android
  • ios