ಕಲರ್ಸ್‌ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಟಾಪ್‌ ರೇಟೆಡ್‌ ರಿಯಾಲಿಟಿ ಶೋ ಬಿಗ್‌ ಬಾಸ್‌ ಕೊನೆ ಹಂತ ತಲುಪುತ್ತಿದೆ. ಈಗಾಗಲೇ ಫಿನಾಲೆ ವಾರಕ್ಕೆ ಸುಲಭವಾಗಿ ಸ್ಪರ್ಧಿಗಳು ಕಾಲಿಡುವುದಕ್ಕೆ ವಾರವಿಡೀ ಟಾಸ್ಕ್‌ ನೀಡಿದ್ದರು. 

ಬಿಗ್‌ ಬಾಸ್‌‌ನಿಂದ ಹೊರ ಬಂದ ಚಂದನಾ ತೆಗೆದುಕೊಂಡ ದೊಡ್ಡ ನಿರ್ಧಾರವಿದು!

ಪ್ರತಿ ದಿನ 2-3 ಟಾಸ್ಕ್‌ ನಡೆಯುತ್ತಿದ್ದು, ಯಾರು ಅತಿ ಹೆಚ್ಚು ವೋಟ್‌ ಪಡೆಯುತ್ತಾರೋ, ಅವರು ನೇರವಾಗಿ ಬಿಗ್ ಬಾಸ್‌ ಫಿನಾಲೆ ವಾರ ತಲುಪುತ್ತಾರೆ. ಅತಿ ಹೆಚ್ಚು ಚಿನ್ನದ ಪದಕ ಪಡೆದ ವಾಸುಕಿ ವೈಭವ್‌ ಫಿನಾಲೆ ಮುಟ್ಟಿದ ಮೊದಲ ಸ್ಪರ್ಧಿಯಾಗಿದ್ದಾರೆ. ಇನ್ನುಳಿದ ಸ್ಪರ್ಧಿಗಳು ನೇರವಾಗಿ ನಾಮಿನೇಟ್‌ ಆಗಿದ್ದಾರೆ. ದೀಪಿಕಾ ದಾಸ್‌, ಭೂಮಿ ಶೆಟ್ಟಿ, ಹರೀಶ್‌ ರಾಜ್‌, ಪ್ರಿಯಾಂಕ, ಕುರಿ ಪ್ರತಾಪ್‌ ಹಾಗೂ ಶೈನ್‌ ಶೆಟ್ಟಿ, ಇವರಲ್ಲಿ ಕೇವಲ 5 ಸ್ಪರ್ಧಿಗಳು ಮಾತ್ರ ಸೇಫ್‌ ಆಗಿರುತ್ತಾರೆ. 

ಕ್ರಿಕೆಟರ್‌ ಅಯ್ಯಪ್ಪ - ಕಿರುತೆರೆ ನಟಿ ಅನು ಪೋವಮ್ಮ ಪೇಮ ಕಥೆ ರಿವೀಲ್‌! ಇಲ್ಲಿದೆ ನೋಡಿ

ಕೆಲವು ದಿನಗಳ ಹಿಂದೆ ವಾಸುಕಿ ತಾಯಿ ಬಿಗ್ ಬಾಸ್ ಮನೆಗೆ ಬಂದಾಗಿ, 'ನೀನು ಗೆದ್ದು ಬಾ, ಬೆಳಗ್ಗೆ ಬರುವ ಹಾಡಿಗೆ ಹೆಜ್ಜೆ ಹಾಕು...'  ಎಂದು ಹೇಳಿದ್ದರು. ತಾಯಿ ಮಾತನ್ನು ಸೀರಿಯಸ್‌ ಆಗಿ ತೆಗೆದುಕೊಂಡ ವಾಸುಕಿ ದಿನ ಬೆಳಗ್ಗೆ ಡ್ಯಾನ್ಸ್‌ ಮಾಡಲು ಶುರು ಮಾಡಿದ್ದರು. ಫಿನಾಲೆ ಮುಟ್ಟಿ ತಾಯಿಯ ಮಾತುಗಳನ್ನು ಪಾಲಿಸಿದ್ದಾರೆ. 

ಕಳೆದ ವಾರ ಡಬಲ್ ಎಲಿಮಿನೇಷ್‌ ಅಗಿ ಡ್ಯಾನ್ಸರ್‌ ಕಿಶನ್‌ ಹಾಗೂ ಚಂದನ್ ಆಚಾರ್‌ ಹೊರ ಬಂದರು.