ಬಿಗ್‌ ಬಾಸ್‌‌ನಿಂದ ಹೊರ ಬಂದ ಚಂದನಾ ತೆಗೆದುಕೊಂಡ ದೊಡ್ಡ ನಿರ್ಧಾರವಿದು!

ಬಿಗ್ ಬಾಸ್‌ ಸೀಸನ್‌-7ರ ಸ್ಪರ್ಧಿ ಚಂದನಾ ಅನಂತಕೃಷ್ಣ ತಮ್ಮ ವೃತ್ತಿ ಜೀವನದಲ್ಲಿ ಅತಿ ದೊಡ್ಡ ನಿರ್ಧಾರವೊಂದನ್ನು ತೆಗೆದುಕೊಂಡಿದ್ದಾರೆ. ನಾಯಕಿಯಾಗಿ ನೋಡಿದ ನಿಮಗೆ ಚಂದನಾ ಅವರ ಮತ್ತೊಂದು ಅವತಾರ ನೋಡಬಹುದು...
 

Colors Kannada Bigg boss 7 chandana Ananthakrishna to host Hadu karnataka reality show

ಕಲರ್ಸ್‌ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ರಿಯಾಲಿಟಿ ಶೋ ಬಿಗ್ ಬಾಸ್‌ ಸೀಸನ್‌-7ರಲ್ಲಿ ಚಂದನಾ ಅನಂತಕೃಷ್ಣ ಮುದ್ದು 'ಹುಡುಗಿ'ಯಾಗಿ ಪ್ರೇಕ್ಷಕರ ಪ್ರೀತಿ ಗಿಟ್ಟಿಸಿಕೊಂಡಿದ್ದಾರೆ. ವಾಸುಕಿ ವೈಭವ್ ಹಾಕುತ್ತಿದ್ದ ತಾಳಕ್ಕೆ ಧ್ವನಿಯಾಗಿ ಚಂದನಾ ಗಾಯಕಿಯಾಗಿಯೂ ಗುರುತಿಸಿಕೊಂಡಿದ್ದಾರೆ. 

ಚಂದನಾ ಹೊರಬರಲು ಅಸಲಿ ಕಾರಣ ಹೇಳಿದ ಸುದೀಪ್, ಪಾಪ ಪ್ರಿಯಾಂಕಾ!

'ರಾಜ ರಾಣಿ' ಧಾರಾವಾಹಿ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ಚಂದನಾ ಬಿಗ್ ಬಾಸ್‌ ಸೀಸನ್‌-7ರಲ್ಲಿ ಉತ್ತಮ ಸ್ಪರ್ಧಿಯಾಗಿ ಗುರುತಿಸಿಕೊಂಡಿದ್ದರು. ಅತ್ಯತ್ತಮ ಆಟವಾಡಿ 12ನೇ ವಾರ ಮನೆಯಿಂದ ಹೊರ ಬಂದಿದ್ದಾರೆ. ಅಷ್ಟೇ ಅಲ್ಲದೇ ವಾಸುಕಿ ರಚಿಸಿದ 'ಕಪ್ಪು ಚುಕ್ಕಿ' ಹಾಡಿಗೆ ಧ್ವನಿಯಾದ ಚಂದನಾ ರಾತ್ರೋರಾತ್ರಿ ಡಿಮ್ಯಾಂಡ್‌ ಗಾಯಕಿ ಆದರು.

BB7: ಕಿರುತೆರೆಯ ರಾಣಿ ಚಂದನ ಅನಂತಕೃಷ್ಣಗೆ ನಿಜ್ವಾಗ್ಲೂ ಲವ್‌ ಆಗಿದ್ಯಾ?

ಮನೆಯಿಂದ ಹೊರ ಬಂದ ಮೇಲೇ ಚಂದನಾ ಖಾಸಗಿ ವಾಹಿನಿಗಳಲ್ಲಿ ಸಂದರ್ಶನ ನೀಡುತ್ತಾ ಬ್ಯುಸಿಯಾಗಿದ್ದಾರೆ. ಈ ನಡುವೆ ತಮ್ಮ ವೃತ್ತಿ ಜೀವನದಲ್ಲಿ ಒಂದು ನಿರ್ಧಾರವನ್ನು ತೆಗೆದುಕೊಂಡಿದ್ದಾರೆ. ಇದರ ಬಗ್ಗೆ ಇನ್‌ಸ್ಟಾಗ್ರಾಂನಲ್ಲಿ ಬಹಿರಂಗ ಪಡಿಸಿದ್ದಾರೆ.

ಹೌದು! ಚಂದನಾ ಈಗ ಕಲರ್ಸ್‌ ಕನ್ನಡದಲ್ಲಿ ಪ್ರಸಾರವಾಗಲು ಸಜ್ಜಾಗುತ್ತಿರುವ 'ಹಾಡು ಕರ್ನಾಟಕ' ರಿಯಾಲಿಟಿ ಶೋನಲ್ಲಿ ನಿರೂಪಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ. 'ಇದು ನನ್ನಿಂದ ಅಧಿಕೃತ ಮಾಹಿತಿ. ಇದೊಂದು ದೊಡ್ಡ ಹೊಣೆ. ಮೊದಲ ಬಾರಿಗೆ ನಾನು ನಿರೂಪಕಿಯಾಗಿ ಕಾಣಿಸಿಕೊಳ್ಳುತ್ತಿದ್ದೀನಿ. ನಿಮ್ಮ ಆಶೀರ್ವಾದ ಬೇಕಿದೆ' ಎಂದು ಬರೆದುಕೊಂಡಿದ್ದಾರೆ.

 

Latest Videos
Follow Us:
Download App:
  • android
  • ios