ಕಲರ್ಸ್‌ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಖ್ಯಾತ ರಿಯಾಲಿಟಿ ಶೋ ಬಿಗ್‌ ಬಾಸ್‌ ಸೀಸನ್‌-7, 90 ದಿನಗಳನ್ನು ಪೂರೈಸಿ ಇನ್ನು ಕೆಲವೇ ದಿನಗಳಲ್ಲಿ ಸೆಂಚುರಿ ಬಾರಿಸಲಿದೆ. ಎಂದಿನಂತೆ ಸೋಮವಾರ ನಾಮಿನೇಷನ್‌ ಪ್ರಕ್ರಿಯೆ ನಡೆಯಿತು. ಆದರೆ ಮನೆಯೊಳಗಿದ್ದ ಸ್ಪರ್ಧಿಗಳಿಗೆ ಇದು 'No Elimination week' ಎಂದು ಗೊತ್ತಿರಲಿಲ್ಲ. ಎಲ್ಲರೂ ತಾವು ಸೇಫ್ ಆಗಲು ಮತ್ತೊಬ್ಬರನ್ನು ನಾಮಿನೇಟ್ ಮಾಡುವ ಪ್ರಕ್ರಿಯೆಯನ್ನು ಮುಗಿಸಿಯೇ ಬಿಟ್ಟರು. 

ಅತಿ ಹೆಚ್ಚು ವೋಟ್‌ ಗಿಟ್ಟಿಸಿದ ಚಂದನ್‌ ಆಚಾರ್ ಗೇಮ್‌ ಪ್ಲ್ಯಾನ್‌ಗೆ ಮನಸೋತ ಜನ!

ಶನಿವಾರ ನಡೆಯಬೇಕಿದ್ದ ಎಲಿಮಿನೇಷನ್‌ ಡಿಫರೆಂಟ್‌ ಆಗಿರಲಿ ಎಂಬ ಉದ್ದೇಶದಿಂದ ಈ ಕಾರ್ಯ ಭಾನುವಾರವೇ ನಡೆಯಿತು. ಈ ವಾರ ಅತಿ ಹೆಚ್ಚು ವೋಟ್ ಪಡೆದುಕೊಂಡು, ದೀಪಿಕಾ ಮೊದಲು ಸೇಫ್‌ ಆದರೆ ಚಂದನ್‌ ಆಚಾರ್‌ ಸೇಫ್ ಆದ ಎರಡನೇ ಸ್ಪರ್ಧಿ. ಡಬಲ್‌ ಎಲಿಮಿನೇಷನ್‌ ಎಂದು ಪ್ರಿಯಾಂಕ ಹಾಗೂ ಭೂಮಿ ಶೆಟ್ಟಿ ಅವರನ್ನು ಹೊರ ಬರಲು ಸುದೀಪ್‌ ಹೇಳುತ್ತಾರೆ. ಬಿಗ್ ಬಾಸ್ ಮನೆಯೊಳಗೆ ವಿಟಿ ನೋಡಿದ ಸ್ಪರ್ಧಿಗಳು ಭಾವುಕರಾದರು. ಹೊರಡಲು ಸಿದ್ಧತೆ ಮಾಡಿಕೊಳ್ಳುವಾಗ 'ಇಬ್ಬರಿಗೆ 5 ನಿಮಿಷ ಸಮಯವಿದೆ. ಬೇಗ ಪ್ಯಾಕ್‌ ಮಾಡಿಕೊಂಡು ಅಲ್ಲೆ ಇರಿ, ಮುಂದಿನ ವಾರ ಭೇಟಿ ಆಗುತ್ತೇನೆ' ಎಂದ ಸುದೀಪ್‌ 90 ದಿನದ ಪ್ರಯುಕ್ತ ಬಿಗ್ ಸರ್ಪ್ರೈಸ್‌ ನೀಡಿದ್ದಾರೆ.

BiggBoss7: ಪ್ರಿಯಾಂಕಾಗೆ ಬೈ ಹೇಳಲು ಬಂದಿದ್ದ ಹ್ಯಾಂಡ್ಸಮ್ ಹೀರೋ ಯಾರು ನೋಡಿ!

ಈ ರೀತಿ ಎಲಿಮಿನೇಷನ್‌ ಸರ್ಪ್ರೈಸ್‌ನನ್ನು ಹರೀಶ್‌ ರಾಜ್‌ ಎದುರಿಸಿದ್ದರು. ಮನೆಯಿಂದ ಹೊರ ಬರಲು ಹೇಳಿ, ಕೆಲವು ನಿಮಿಷಗಳ ಕಾಲ ಸ್ಟೋರ್‌ ರೂಮಿನಿಂದ ಹರೀಶ್‌ರನ್ನು ಮತ್ತೆ ಮನೆಯೊಳಗೆ ಬರ ಮಾಡಿಕೊಡಲಾಗಿತ್ತು. 

ತಾವು ಮನೆಯಿಂದ ಹೊರ ಬರಬೇಕೆಂದು ಬಿಗ್ ಬಾಸ್ ಈ ಉಭಯ ಕಿರುತೆರೆ ನಟಿಯರಿಗೆ ಆದೇಶಿಸಿದಾಗ, ಇಬ್ಬರಿಗೂ ಆಕಾಶವೇ ಕಳಚಿ ಬಿದ್ದಂತಾಗಿತ್ತು. ಇಬ್ಬರೂ ಭಾವುಕರಾಗಿ, ಕಣ್ಣೀರಿಟ್ಟಿದ್ದರು. ಅಬ್ಬಾ, ಮುಂದಿನ ವಾರ ಸಿಕ್ತೀನಿ. ಅಲ್ಲೀ ತನಕ ಅಲ್ಲಿಯೇ ಇರಿ, ಎಂದು ಕಿಚ್ಚ ಆದೇಶಿಸಿದಾಗ, ವಾವ್ ಎನ್ನುವ ಫೀಲಿಂಗ್. ಇಬ್ಬರೂ ಫುಲ್ ಖುಷ್. ಆದರೆ. ನೋಡೋಣ ಬರುವ ದಿನಗಳಲ್ಲಿ ಯಾರು ಯಾರು ಮನೆಯಿಂದ ಹೊರ ಬರುತ್ತಾರೆಂದು?

ಚೆನ್ನಾಗಿ ಆಡಿಯೂ ದುನಿಯಾ ರಶ್ಮಿ ಬಿಗ್ ಬಾಸ್‌ನಿಂದ ಔಟ್ ಆಗಿದ್ಯಾಕೆ?