ಇದ್ದಷ್ಟು ದಿನ ಬಿಗ್ ಬಾಸ್ ಮನೆಯಲ್ಲಿ ಸೆಂಟರ್ ಆಫ್ ಅಟ್ರಾಕ್ಷನ್ ಆಗಿದ್ದವರು ರವಿ ಬೆಳಗೆರೆ. ಅನೇಕ ಇಂಟರೆಸ್ಟಿಂಗ್ ಸಂಗತಿಗಳಿಗೆ, ಭೂಗತ ಲೋಕದ ಕಥೆಗಳಿಗೆ ಸಾಕ್ಷಿಯಾಗಿದೆ ಬಿಗ್ ಬಾಸ್ 7!  

ಅನಾರೋಗ್ಯದ ಕಾರಣದಿಂದ ಒಂದು ವಾರಕ್ಕೆ ಬಿಗ್ ಬಾಸ್ ಮನೆಯಿಂದ ಹೊರ ಬಂದಿದ್ದಾರೆ ಬೆಳಗೆರೆ. ಬಿಗ್ ಬಾಸ್ ಮನೆಯಲ್ಲಿ ಅನುಭವಗಳನ್ನು 'ಸುವರ್ಣನ್ಯೂಸ್' ಜೊತೆ ಮಾತನಾಡಿದ್ದಾರೆ. 

BB7: ಸ್ಕ್ರಿಪ್ಟೆಡ್? ಮನೆಯೊಳಗಿನ ಗುಟ್ಟು ರವಿ ಬೆಳಗೆರೆ ಬಾಯಲ್ಲಿ ರಟ್ಟು!

ಬಿಗ್ ಬಾಸ್ ಮನೆಯಲ್ಲಿ ಪ್ರತಿಯೊಂದಕ್ಕೂ ನಿರ್ಬಂಧ ಇದೆ. ಆದರೆ ರವಿ ಬೆಳಗೆರೆಗೆ ಮಾತ್ರ ಆ ನಿರ್ಬಂಧವಿರಲಿಲ್ಲ. ಅವರು ಸುವರ್ಣ ನ್ಯೂಸ್ ಜೊತೆ ಮಾತನಾಡುವಾಗ, ನಾನು ಡಯಾಬಿಟಿಕ್ ಪೇಶೆಂಟ್. ಹಾಗಾಗಿ ಆಚೆ ಫುಡ್ ಗಳು ಒಗ್ಗುತ್ತಿರಲಿಲ್ಲ. ಹಾಗಾಗಿ ನನ್ನ ಪತ್ನಿ ಯಶೋಮತಿ ದಿನಾ ಮುದ್ದೆ, ಸಾರು ಮಾಡಿ ಕಳುಹಿಸುತ್ತಿದ್ದಳು. ಜೊತೆಗೆ ಸ್ವಲ್ಪ ಖಾರವನ್ನೂ ಕಳುಹಿಸುತ್ತಿದ್ದಳು. ಬಿಗ್ ಬಾಸ್ ಮನೆಯ ಹುಡುಗಿಯರೆಲ್ಲಾ ನಮಗೂ ಸ್ವಲ್ಪ ಖಾರ ಕೊಡಿ ಎಂದು ಕೇಳಿ ತಿನ್ನುತ್ತಿದ್ದರು. ನನಗೆ ಊಟ- ತಿಂಡಿಗೆ ತೊಂದರೆಯಾಗಲಿಲ್ಲ. ಒಳ್ಳೆಯ ಊಟ ಸಿಗುತ್ತಿತ್ತು. ಬೆಳಿಗ್ಗೆ ಉಪ್ಪಿಟ್ಟು, ದೋಸೆ ಸಿಗುತ್ತಿತ್ತು. ಮದ್ಯಾಹ್ಯ ಮುದ್ದೆ ಸಾರು, ಮತ್ತೆ ರಾತ್ರಿ ಮುದ್ದೆ ಸೊಪ್ಪನ್ನು ಕಳುಹಿಸುತ್ತಿದ್ದಳು. ಮನೆಯ ಬೇರೆ ಸದಸ್ಯರಿಗೆ ಈ ಸೌಕರ್ಯ ಇರಲಿಲ್ಲ. ಅಲ್ಲಿ ಏನು ಮಾಡಿಕೊಳ್ಳುತ್ತಿದ್ದರೋ ಅದನ್ನೇ ತಿನ್ನಬೇಕಿತ್ತು'ಎಂದು ಹೇಳಿದ್ದಾರೆ.